ಲೇಖಕರು: ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. ಪುಟಗಳು: 200
20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ. ಇಂದು ಸಮಾಜಕಾರ್ಯ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಈ ಹಿಂದೆ ಸಮಾಜಕಾರ್ಯ ವೃತ್ತಿಪರರ ಸೇವೆಗಳು ಸಮುದಾಯ ಆಧಾರಿತ ಕಾರ್ಯಕ್ರಮಗಳು ತರಬೇತಿ, ಅನುಷ್ಠಾನ, ಆಪ್ತ ಸಮಾಲೋಚನೆ, ಸಮಾಜಕಾರ್ಯದ ವಿವಿಧ ವಿಧಾನಗಳು/ತಂತ್ರಗಳ ಬಳಕೆ ಹಾಗೂ ಸಂಶೋಧನೆಗಳಿಗೆ ಸೀಮಿತವಾಗಿದ್ದವು. ಪ್ರಸ್ತುತ ಇವರ ಸೇವೆಗಳು ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಮನೋ-ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಬಹುತಜ್ಞರ ಚಿಕಿತ್ಸಾ ತಂಡದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವಾದುದಾಗಿದೆ. ಬಹುಮುಖ್ಯವಾಗಿ ಮಾನಸಿಕ ಆರೋಗ್ಯ ಉತ್ತೇಜಕ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಚಿಕಿತ್ಸಕ ಮಧ್ಯಸ್ಥಿಕೆಗಳು, ಪುನರ್ವಸತಿ ಸೇವೆಗಳು ಮತ್ತು ಮಾನಸಿಕ ರೋಗಿಗಳನ್ನು ಕುಟುಂಬಕ್ಕೆ ಮರುಜೋಡಿಸುವಲ್ಲಿ ಹಾಗೂ ಸಮುದಾಯದ ಮುಖ್ಯವಾಹಿನಿಗೆ ತರುವಲ್ಲಿ ವೃತ್ತಿಪರ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಕೊಡುಗೆ ಗಣನೀಯವಾದುದು. ಇಂತಹ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿರುವ ಮನೋ-ವೈದ್ಯಕೀಯ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸ್ಥಳೀಯ ಸಾಹಿತ್ಯದ ಕೊರತೆಯನ್ನು ಮನಗಂಡು ಸಮಾಜಕಾರ್ಯ ವಿದ್ಯಾರ್ಥಿಗಳು ಮನೋ-ವೈದ್ಯಕೀಯ ಸಮಾಜಕಾರ್ಯತತ್ಪರರು, ಸಮಾಜಕಾರ್ಯ ಪ್ರಶಿಕ್ಷಕರು ಹಾಗೂ ಕಲ್ಯಾಣ ಅಭಿವೃದ್ಧಿ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸಂಬಂಧಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಈ ಕಿರುಹೊತ್ತಿಗೆಯಲ್ಲಿ ವ್ಯವಸ್ಥಿತವಾಗಿ ಪರಿಕಲ್ಪಿಸಲಾಗಿದೆ ಹಾಗೂ ಪ್ರಸ್ತುತಪಡಿಸಲಾಗಿದೆ. ಸದರಿ ಪುಸ್ತಕದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯದ ಮೂಲ ಪರಿಕಲ್ಪನೆಗಳು, ಮಾನಸಿಕ ಆರೋಗ್ಯದ ಪರಿಕಲ್ಪನೆ, ಮಹತ್ವ, ವಿವಿಧ ರೀತಿಯ ಮಾನಸಿಕ ರೋಗಗಳ ಬಗ್ಗೆ ಸರಳವಾಗಿ ಹಾಗೂ ವಿಸ್ತಾರವಾಗಿ ಕಲಿಕಾರ್ಥಿಗಳಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾಧ್ಯಮದ ಹಿನ್ನೆಲೆಯನ್ನು ಹೊಂದಿರುವವರಿಗೆ ಅರ್ಥೈಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಅಧ್ಯಾಯಗಳಲ್ಲಿ ವಸ್ತುನಿಷ್ಠ ನಿಖರ ಹಾಗೂ ಸರಳ ಬರವಣಿಗೆಯನ್ನು ಹೊಂದಿರುವ ಈ ಹೆಜ್ಜೆಯು ಮನೋ-ವೈದ್ಯಕೀಯ ಸಮಾಜಕಾರ್ಯ ವಿಷಯದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ/ಜ್ಞಾನ ಭಂಡಾರಕ್ಕೆ ಉತ್ತಮ ಸೇರ್ಪಡೆಯಾಗಲಿದ್ದು, ಆಸಕ್ತರಿಗೆ ಪ್ರಮುಖವಾದ ಆಕರ ಮತ್ತು ಪರಮಾರ್ಶನ ಗ್ರಂಥವಾಗವಾಗುವುದರಲ್ಲಿ ಸಂದೇಹವಿಲ್ಲ. ಡಾ. ಲೋಕೇಶ್ ಎಂ.ಯು. ಪವಿತ್ರ ಎ.ವಿ. ಪರಿವಿಡಿ ಅಧ್ಯಾಯ 1 - ಮಾನಸಿಕ ಆರೋಗ್ಯ
ಅಧ್ಯಾಯ 2 - ಮನೋ-ವೈದ್ಯಕೀಯ ಸಮಾಜಕಾರ್ಯ ಅಧ್ಯಾಯ 3 - ಮಾನಸಿಕ ಆರೋಗ್ಯ ಮತ್ತು ಮನೋ-ವೈದ್ಯಕೀಯ ಸಮಾಜಕಾರ್ಯ ಅಧ್ಯಾಯ 4 - ಮನೋ-ವೈದ್ಯಕೀಯ ಸಮಾಜಕಾರ್ಯದ ಕ್ಷೇತ್ರಗಳು ಅಧ್ಯಾಯ 5 - ಮಾನಸಿಕ ಆರೋಗ್ಯ ಸೇವೆಗಳು ಹಾಗೂ ಮನೋ-ವೈದ್ಯಕೀಯ ಸಮಾಜಕಾರ್ಯ ಅಧ್ಯಾಯ 6 - ಮನೋ-ವೈದ್ಯಕೀಯ ಸಮಾಜಕಾರ್ಯದ ಸವಾಲುಗಳು ಮತ್ತು ಅವಕಾಶಗಳು ಅನುಬಂಧ-1 - ಮನೋ-ವೈದ್ಯಕೀಯ ಪ್ರಕರಣ ವಿವರಗಳ ದಾಖಲಾತಿಯ ನಮೂನೆ ಅನುಬಂಧ-2 - ಆಕರಗ್ರಂಥಗಳು
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.