Blog |
1. ಮನೋನಿಗ್ರಹವಿಲ್ಲದೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ವ್ಯಕ್ತಿಯ ಉದ್ಧಾರ, ಸಮಾಜದ ಉದ್ಧಾರ ಮನೋನಿಗ್ರಹದಿಂದ.
2. ಮನಸ್ಸಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಿ. 3. ತಂತ್ರಗಳನ್ನು ತಿಳಿದುಕೊಂಡು ಬಳಸುವುದನ್ನು ಕಲಿಯಿರಿ.
0 Comments
ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ.
ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು. ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್!ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ. ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು. ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್! https://www.prajavani.net/columns/nataraj-huliyar-column-new-book-for-the-new-year-897910.html?fbclid=IwAR1RxdFkBzf2nfvk3p8bwlpnWlLkZNNZZuSGI9ZbL5-uTjFYAxNnUcfbX9A
ಮುನ್ನುಡಿ
ಗೆದ್ದೇ ಬಿಡೋಣ... ಸೋತು ಸುಮ್ಮನಿರಲು ನಾವು ಈ ಜಗತ್ತಿನಲ್ಲಿ ಹುಟ್ಟಿಲ್ಲ! ನೆನಪಿರಲಿ, ಗೆಲುವುಗಳು ರಾತ್ರೋರಾತ್ರಿ ನಮ್ಮ ಮನೆ ಬಾಗಿಲು ಬಡಿಯುವುದಿಲ್ಲ. ಗೆಲುವುಗಳು ಅವಿರತ ಪರಿಶ್ರಮ, ಸಮರ್ಪಣೆ ಮತ್ತು ಛಲದ ಪ್ರತಿಫಲಗಳು. ಪ್ರತಿಯೊಬ್ಬರೂ ಗೆಲುವುಗಳನ್ನು ಬೆನ್ನಟ್ಟಲು ಪ್ರಯತ್ನಿಸುತ್ತಾರೆ ಆದರೆ ಗೆಲುವುಗಳು ಮಾತ್ರ ಗೆಲ್ಲುವ ಛಲವಿರುವ ವ್ಯಕ್ತಿಗಳನ್ನು ಬಿಡದೆ ಬೆನ್ನಟ್ಟುತ್ತವೆ.
ಅಂಬಿಕಾ ತಮಿಳುನಾಡಿನ ದಿಂಡಿಗಲ್ ಮೂಲದ ಹದಿನಾಲ್ಕು ವರ್ಷದ ಹುಡುಗಿ. ತನ್ನ ಹದಿನಾಲ್ಕನೆಯ ವರ್ಷಕ್ಕೆ ಪೊಲೀಸ್ ಪೇದೆಯನ್ನು ಮದುವೆಯಾಗಿ, ಹದಿನೆಂಟು ವರ್ಷಕ್ಕೆ ಇಬ್ಬರು ಮಕ್ಕಳ ತಾಯಿಯಾದಳು. ತನ್ನ ಮಕ್ಕಳು ಮತ್ತು ಪ್ರೀತಿಯ ಗಂಡನೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಳು. ಇದುವೇ, ತನ್ನ ಜೀವನದ ಬಹುಮುಖ್ಯ ಗೆಲುವೆಂದು ಭಾವಿಸಿದ್ದಳು. ಆ ಒಂದು ದಿನ ಪೊಲೀಸ್ ಪೆರೇಡ್ ನಡೆಯುತ್ತಿತ್ತು. ಗಂಡ ಎಂದಿನಂತೆ ಊಟಕ್ಕೆ ಮನೆಗೆ ಬರಲಿಲ್ಲ. ಆತಂಕಗೊಂಡ ಅಂಬಿಕಾ ತನ್ನ ಮಕ್ಕಳೊಂದಿಗೆ ಆ ಪೆರೇಡ್ ನಡೆಯುತ್ತಿದ್ದ ಸ್ಥಳಕ್ಕೆ ಬಂದಳು. ಪೆರೇಡ್ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಂಭೀರ್ಯದಿಂದ ನಿಂತಿದ್ದರು. ನೂರಾರು ಪೊಲೀಸರು ಸಾಲಿನಲ್ಲಿ ಅವರಿಗೆ ಶಿಸ್ತಿನಿಂದ ಸೆಲ್ಯೂಟ್ ಹೊಡೆದು ಗೌರವ ತೋರಿಸುತ್ತಾ ಮುಂದಕ್ಕೆ ಸಾಗುತಿದ್ದರು. ಗಂಡ ಕೂಡ ಅದೇ ಸಾಲಿನಲ್ಲಿ ನಿಂತು ಆ ವ್ಯಕ್ತಿಗೆ ಸೆಲ್ಯೂಟ್ ಮಾಡಿದ್ದನ್ನು ಅಂಬಿಕಾ ದೂರದಿಂದಲೇ ಗಮನಿಸಿದಳು. ಇದೆಲ್ಲಾವನ್ನು ನೋಡಿದ ಅಂಬಿಕಾಳಿಗೆ “ಆ ಸೆಲ್ಯೂಟ್ ಸ್ವೀಕರಿಸುತ್ತಿರುವ ವ್ಯಕ್ತಿ ಯಾರಿರಬಹುದು?” ಎಂಬ ಪ್ರಶ್ನೆ ಮೂಡಿತು. ಗಂಡ ಮನೆಗೆ ಬಂದ ತಕ್ಷಣ ಆಕೆ ಈ ಪ್ರಶ್ನೆಯನ್ನು ಅವನಲ್ಲಿ ಕೂತಹಲದಿಂದ ಕೇಳಿದಳು. ಅದಕ್ಕೆ ಗಂಡ, “ಅವರು ನಮ್ಮ ರಾಜ್ಯದ ಪೋಲಿಸ್ ಮುಖ್ಯಸ್ಥರು, ಐಪಿಎಸ್ ಅಧಿಕಾರಿ” ಎಂದು ತಿಳಿಸಿದರು. ಇದನ್ನು ತಿಳಿದ ಆಕೆಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಆತ್ಮವಿಶ್ವಾಸದಿಂದ ಗಂಡನಿಗೆ “ನಾನು ಐಪಿಎಸ್ ಅಧಿಕಾರಿಯಾಗಲು ಬಯಸುತ್ತೇನೆ” ಎಂದು ತಿಳಿಸಿದಳು. ಎಸ್‌ಎಸ್‌ಎಲ್‌ಸಿ ಓದದ ಪತ್ನಿಯ ಮಾತುಗಳಿಂದ ಆಶ್ಚರ್ಯಗೊಂಡ ಗಂಡ, ಅವಳ ಆಲೋಚನೆಯಲ್ಲಿನ ಸ್ಪಷ್ಟತೆಯನ್ನು ಗಮನಿಸಿ, ಆಕೆಯ ನಿರ್ಧಾರಕ್ಕೆ ಸಹಕರಿಸಿ, ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುಲು ಮುಂದಾದನು. ತನ್ನ ಗುರಿಯ ಗಮ್ಯಸ್ಥಾನವನ್ನು ನಿರ್ಧರಿಸಿದ ಅಂಬಿಕಾ, ತನ್ನ ಪದವಿ ಮತ್ತು ಪದವಿ ಪೂರ್ವದ ಎಲ್ಲಾ ಕೋರ್ಸ್‌ಗಳನ್ನು ದೂರ ಶಿಕ್ಷಣದ ಮೂಲಕ ತಮ್ಮ ಮಾತೃಭಾಷೆಯಾದ ತಮಿಳು ಮಾಧ್ಯಮದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದಳು. ತದನಂತರ, ಯುಪಿಎಸ್‌ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಚೆನ್ನೈಗೆ ಗೆಲ್ಲುವ ಮನೋಭಾವದೊಂದಿಗೆ ಕನಸು ಹೊತ್ತು ಹೊರಟಳು. ಆತ್ಮೀಯರೆ…ಓಡುತ್ತಿರುವ ಈ ಕಾಲದಲ್ಲಿ ಕಾಡುತ್ತಿರುವ ಸಮಸ್ಯೆಗಳ ಸಂಖ್ಯೆಯೇ ಹೆಚ್ಚು. ಜವಾಬ್ದಾರಿಗಳ ಮೂಟೆ ಹೊತ್ತು ಕಂಡ ಕನಸ್ಸುಗಳನ್ನು ನನಸಾಗಿಸಲು ಮನುಷ್ಯ ಸೆಣಸುತ್ತಾನೆ. ಜೀವನದಲ್ಲಿ ಉದ್ಭವಿಸಿದ ಭಾಧೆಗಳನ್ನು ಬದಿಗೊತ್ತಿ ಜೀವನ ನಿರ್ವಹಣೆಯ ಉದ್ದೇಶದಿಂದ ಕೈಗೆ ಸಿಕ್ಕ ಉದ್ಯೋಗವನ್ನು ಮಾಡುತ್ತಾ ಜೀವನ ಸಾಗಿಸುವಂತಹ ಜನಸಾಮಾನ್ಯರ ಜೀವನದಲ್ಲಿ ಎಂದೂ ಕಾಣದ ಕೇಳದ ಕೊರೋನಾ ವೈರಸ್ ಎಂಬ ಮಹಾಮಾರಿ ದುತ್ ಎಂದು ಉದ್ಬವಿಸಿ ಕಂಡ ಕನಸುಗಳನ್ನ ದಿಕ್ಕಾಪಾಲಾಗಿಸಿ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿರುವುದು ಎಲ್ಲರೂ ತಿಳಿದಿರುವ ಸತ್ಯಸಂಗತಿ ಅದು ಅವರವರ ಅನುಭವಕ್ಕೆ ಬಂದಿರುತ್ತದೆ.
|
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
MHR LEARNING ACADEMY
|
Receive email updates on the new books & offers
for the subjects of interest to you. |