ಲೇಖಕರು:
ಸಿ.ಎಚ್. ಹನುಮಂತರಾಯ ವಕೀಲರು
ಸಾಹುಕಾರ್ ಎನ್ನುವ ಸೆಷನ್ಸ್ ಜಡ್ಜ್ ರ ಮುಂದೆ ಕೇಸ್ ನಡೆಯುತ್ತಿತ್ತು.
ಮೊಕದ್ದಮೆಯ ಮೂವರು ಡಿಫೆನ್ಸ್ ವಿಟ್ನೆಸ್ ಗಳ ಸಾಕ್ಷಿ ಹೇಳಿಕೆ ಇತ್ತು. ವಿಟ್ನೆಸ್ ಬಾಕ್ಸ್ ನಲ್ಲಿ ನಿಂತಿದ್ದ ಮೂವರ ಪೈಕಿ ಒಬ್ಬರಿಗೆ ಸಾಕ್ಷಿ ಹೇಳಿಕೆ ನೀಡುವುದಕ್ಕೆ ಪೂರ್ವದಲ್ಲಿ ದೇವರ ಹೆಸರಲ್ಲಿ ಪ್ರಮಾಣ ಮಾಡುವಂತೆ ಕೋರ್ಟ್ ಆಫೀಸರ್ ಹೇಳಿದ. ಮೂವರಲ್ಲಿ ಮುಂದೆ ನಿಂತಿದ್ದ ತಿಮ್ಮಪ್ಪಯ್ಯ ಎನ್ನುವ ಸಾಕ್ಷಿ “ಕೋರ್ಟ್ ಆಫೀಸರ್ ಮೂಲಕ ನಾನು ಪ್ರಮಾಣ ಮಾಡುವುದಿಲ್ಲ” ಅಂದ. ಜಡ್ಜ್ ಕ್ಷಣಕಾಲ ಮುಗುಳ್ನಕ್ಕು, “ಇದು ಕೋರ್ಟ್, ತಮಾಷೆಗೆ ಅವಕಾಶವಿಲ್ಲ” ಎಂದರು. “ನಾನು ತಮಾಷೆ ಮಾಡುತ್ತಿಲ್ಲ ಸಾರ್. ಗಂಭೀರವಾಗಿಯೇ ಹೇಳುತ್ತಿದ್ದೇನೆ” ಎಂದ. “ಆಯಿತು ಕೋರ್ಟ್ ಆಫೀಸರ್ ಬೇಡದಿದ್ದರೆ ನಾನೇ ಮಾಡಿಸುವೆ. ಹೂ ಹೇಳಿ ನಾನು ಹೇಳಿದಂತೆ ಎಂದು, ‘I do swear in the name of god that what I shall state shall be the truth, the whole truth and nothing but the truth’ ಎಂದು ಹೇಳಿದರು. ಆಗ ಸಾಕ್ಷಿ “ನೀವು ಹೇಳಿದ ರೀತಿಯಲ್ಲಿ ಪ್ರಮಾಣ ಮಾಡಿ ಸಾಕ್ಷಿ ಹೇಳಿಕೆ ನೀಡುವ ಅಗತ್ಯವಿಲ್ಲ” ಎಂದ.
0 Comments
ಲೇಖಕರು:
ಸಿ.ಎಚ್. ಹನುಮಂತರಾಯ ವಕೀಲರು
ನಾನು ಅದು ಹೇಗೆ ಬಿಜೆಪಿ ವಿರೋಧಿಯಾದೆನೋ ತಿಳಿಯದು. ಅದರಲ್ಲೂ ರಾಮಮಂದಿರ ನಿರ್ಮಾಣ, ಇಟ್ಟಿಗೆ ಪೂಜೆ, ಬಾಬ್ರಿ ಮಸೀದಿ ಧ್ವಂಸ ಇವೆಲ್ಲ ಸಂಗತಿಗಳು ಆ ಪಕ್ಷದ ಬಗ್ಗೆ ನನ್ನಲ್ಲಿರುವ ತಿರಸ್ಕಾರವನ್ನು ದ್ವಿಗುಣಗೊಳಿಸಿದವು. ಬಿ.ಜೆ.ಪಿ.ಯ ಟ್ರೇಡ್ ಯೂನಿಯನ್ ವಿರುದ್ಧದ ಅನೇಕ ಕ್ರಿಮಿನಲ್ ಪ್ರಕರಣದಲ್ಲಿ ನಾನು ಶ್ರಮಿಸಿದ್ದೆ. ಅದರ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿದ್ದೆ. ಆದರೆ ಅವರ ಇಟ್ಟಿಗೆ ಪೂಜೆ ಮಾತ್ರ ನನ್ನಲ್ಲಿ ಹೇಸಿಗೆ ಭಾವನೆಯನ್ನು ಹುಟ್ಟಿಸಿತು. ನನ್ನಲ್ಲಿ ಇಂಥ ಭಾವನೆಗಳು ಹುಟ್ಟುವುದಕ್ಕೆ ಲಂಕೇಶರ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆಯೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತೆ.
ನನಗೆ ತೀರಾ ಆಘಾತಕಾರಿಯಾಗಿ ಕಂಡ ವಿಷಯವೆಂದರೆ, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ನಡೆಸಿದ ರಾಮಮಂದಿರ ನಿರ್ಮಾಣ ಚಳವಳಿಗೆ ಡಾ. ಶಿವರಾಮ ಕಾರಂತರು ಬೆಂಬಲ ನೀಡಿದ್ದು. ವಿಎಚ್ಪಿಯವರು ರಾಮಮಂದಿರ ನಿರ್ಮಾಣದ ಸಂಬಂಧದಲ್ಲಿ ಸಹಿ ಸಂಗ್ರಹ ಮಾಡಿದಾಗ ಕಾರಂತರು ಸಹಿ ಮಾಡಿ ಮಂದಿರ ನಿರ್ಮಾಣವನ್ನು ಬೆಂಬಲಿಸಿದರು.
ನಿರಾತಂಕ ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಡಾ. ಸಿ.ಆರ್. ಗೋಪಾಲ್ ರವರು ರಚಿಸಿರುವ ‘ಸಾಮಾಜಿಕ ಕ್ರಿಯಾಚರಣೆ’ ಪುಸ್ತಕಕ್ಕೆ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ವತಿಯಿಂದ ವರ್ಷದ ಶ್ರೇ಼ಷ್ಠ ಕೃತಿ ರತ್ನ ಪ್ರಶಸ್ತಿಯನ್ನು ಅರ್ಪಿಸಿ ಗೌರವಿಸಲಾಗಿದೆ.
ಶ್ರೀಯುತರು ಹಿರಿಯ ಸಮಾಜಕಾರ್ಯ ಹಾಗೂ ಮಾನವ ಸಂಪನ್ಮೂಲ ವೃತ್ತಿನಿರತರಾಗಿದ್ದಾರೆ ಹಾಗೂ ಲೇಖಕರೂ ಸಹ ಆಗಿದ್ದು, ಅನೇಕ ಅತ್ಯುನ್ನತ ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ‘ವೃಂದಗತ ಸಮಾಜಕಾರ್ಯ', ‘ಭಾಷಣ ಕೈಪಿಡಿ', ‘ಸಮುದಾಯ ಸಂಘಟನೆ' ‘ಸಾಮಾಜಿಕ ಕ್ರಿಯಾಚರಣೆ’ ಹಾಗೂ ‘ಸನ್ಮಾರ್ಗ' ಎಂಬ ಅತ್ಯುನ್ನತ ಪುಸ್ತಕಗಳು ನಮ್ಮ ನಿರುತ ಪಬ್ಲಿಕೇಷನ್ಸ್ ವತಿಯಿಂದ ಪ್ರಕಟಗೊಂಡಿರುತ್ತದೆ. ಶ್ರೀಯುತರಿಗೆ ನಿರುತ ಪಬ್ಲಿಕೇಷನ್ಸ್ ಹಾಗೂ ನಿರಾತಂಕ ತಂಡದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ರಮೇಶ ಎಂ.ಎಚ್ ಪ್ರಕಾಶಕರು-ನಿರುತ ಪಬ್ಲಿಕೇಷನ್ಸ್ ಸಂಸ್ಥಾಪಕರು-ನಿರಾತಂಕ ಸ್ವಯಂ ಸೇವಾ ಸಂಸ್ಥೆ ಹೆಚ್ಚಿನ ಮಾಹಿತಿಗಾಗಿ: www.nirutapublications.org
Follow Niruta Publications WhatsApp Channel for more updates by clicking the below link:
https://www.whatsapp.com/channel/0029Va9e9FJ7z4kZ46EkYR43 ಲಖನೌ:
2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಉತ್ತರಪ್ರದೇಶದ ಗೋರಕ್ ಪುರದ ಗೀತಾ ಪ್ರೆಸ್, ಪ್ರಶಸ್ತಿಯ ಭಾಗವಾಗಿರುವ ರೂ. 1 ಕೋಟಿ ನಗದನ್ನು ಸ್ವೀಕರಿಸಲು ನಿರಾಕರಿಸಿದೆ. ಗೋರಕ್ ಪುರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಗೀತಾ ಪ್ರೆಸ್ ನ ವ್ಯವಸ್ಥಾಪಕ ಡಾ. ಲಾಲ್ ಮಣಿ ತಿವಾರಿ ಅವರು. ‘ಗೀತಾ ಪ್ರೆಸ್ ತನಗೆ ನೀಡಿದ ಯಾವುದೇ ಗೌರವ ಅಥವಾ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ಅಂತೆಯೇ ರೂ. 1 ಕೋಟಿ ಮೊತ್ತವು ‘ದೇಣಿಗೆ’ ಆಗಿರುವುದರಿಂದ ಹಣವನ್ನು ಸ್ವೀಕರಿಸಲಾಗದು. ಆದರೆ, ನಗದು ಹೊರತು ಪಡಿಸಿ ಗೀತಾ ಪ್ರೆಸ್ ನ ಟ್ರಸ್ಟಿಗಳು ಗಾಂಧಿ ಶಾಂತಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲು ನಿರ್ಧರಿಸಿದ್ದಾರೆ’ ಎಂದು ತಿಳಿಸಿದ್ದಾರೆ. ‘ನಾವು ಗೌರವವನ್ನು ಸ್ವೀಕರಿಸುತ್ತೇವೆ. ಆದರೆ, ನಗದು ಪ್ರಶಸ್ತಿಯನ್ನಲ್ಲ’ ಎಂದು ತಿವಾರಿ ಪುನರುಚ್ಚರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://udayaprabha.com/geetha-press-denied-rs/?fbclid=IwAR2M13UaY5DHXdVKul1CKf00vgKx4CB5IWGkffi-26Z4HgV9lZ8sna5tIc4 ಕೃಪೆ: ಉದಯಪ್ರಭ 20-06-2023
It is our pleasure to state that the National Annual Conference of the Indian Society of Professional Social Work will be held on the 23rd, 24th, and 25th of February 2023. The Conference is being hosted by the Department of Studies and Research in Social Work, Tumkur University, Tumakuru. The theme of the Conference is "Social Work in Education". The related subtopics include Social Work and NEP-2020, School Social work, Parent Counseling, Social work with students having learning disabilities, Counseling and guidance in education, etc. We expect around 1000 delegates from national and international student bodies, academics, practitioners, researchers, and NGO staff participating in the Conference.
ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು ವತಿಯಿಂದ ಡಾ.ಸಿ.ಆರ್.ಗೋಪಾಲ್ ಅವರ ಇತ್ತೀಚಿನ ಪುಸ್ತಕವಾದ 'ಸಾಮಾಜಿಕ ಕ್ರಿಯಾಚರಣೆ' (ನಿರುತ ಪಬ್ಲಿಕೇಷನ್ಸ್‌ನಿಂದ ಪ್ರಕಟಿತ) ಯನ್ನು 'ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯದತ್ತಿ ಪ್ರಶಸ್ತಿ 2021’ಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12, 2023 ರಂದು ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯದಲ್ಲಿ ಸಮಾಜಕಾರ್ಯ ಪುಸ್ತಕಕ್ಕೆ ದೊರೆತ ಮೊದಲ ಸಾಹಿತ್ಯ ಪ್ರಶಸ್ತಿ ಇದಾಗಿದೆ. ಡಾ.ಸಿ.ಆರ್.ಗೋಪಾಲ್ ಅವರನ್ನು ಅಭಿನಂದಿಸುವಲ್ಲಿ ಒಂದಾಗೋಣ.
Author: Shekhar Ganagaluru
The book is a treasure trove of 365 quotes. This book is not for fun; the book is with a purpose. The purpose is to inspire the readers to bring out the best individuals within them and introduce them to society to make people's lives beautiful. We are not here to waste our lives; we are born and living with ambition. To fulfil that ambition, we must become positive and self-motivated. In this direction, the quotes in the book will be daily motivational capsules.
This book is the right choice for gifting your loved ones. Authors: Beena Krishnamurthy and Meena Jain
This Book emphasizes the need for designing a technically strong skill training program for individuals who aspire to become Job Coaches. Young adults with Intellectual Developmental Disability (IDD) need appropriate training to make them industry ready. There is a requirement for qualified and quality trained professionals who will become Job Coaches to enable these adults achieve gainful employment and a meaningful livelihood.
ಲೇಖಕರು: ಜಿ.ಎಸ್. ಲಕ್ಷ್ಮೀಪ್ರಸಾದ್
ನಮ್ಮ ಯೋಚನಾ ಲಹರಿ, ಜ್ಞಾನ ಸಂಪತ್ತು, ಸಜ್ಜನರ ಸಹವಾಸ, ಇವೆಲ್ಲವೂ ನಮ್ಮನ್ನು ಮಾನಸಿಕವಾಗಿ ಬೆಳೆಸುತ್ತವೆ.
ಆತ್ಮೀಯತೆ, ಸುರಕ್ಷತೆ, ಅನುಕಂಪ, ಪ್ರೀತಿ ವಾತ್ಸಲ್ಯ, ಇಂಥ ಮಾನವ ಸಂವೇದನೆಗಳ ಕೊಂಡಿಗಳೇ ಭಾವನಾತ್ಮಕ ಸಂಬಂಧ ಬೆಳಸಲು ಸಹಕಾರಿಯಾಗುತ್ತವೆ. ಬೌದ್ಧಿಕವಾಗಿ ಬೆಳೆಯಬೇಕಾದರೆ ಸಮತೋಲನ... ಅಂದ್ರೆ ಸಾಂದರ್ಭಿಕ ಸಮತೋಲನ, "ನುಡಿದಂತೆ ನಡೆ" ಇಂಥ ನುಡಿಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕಾಗುತ್ತೆ. ಇನ್ನು ಆಧ್ಯಾತ್ಮ. ಪರಮೋಚ್ಛ ಸ್ಥಾಯಿಯಲ್ಲಿ ನಮ್ಮ ತನು, ಮನ, ಆತ್ಮ, ಅಹಂ, ಭಕ್ತಿ, ಬದ್ಧತೆ, ಮೌಲ್ಯಗಳು, ಧ್ಯಾನ, ಇವೆಲ್ಲದರ ಅರಿವು ನಮ್ಮಲ್ಲಿ ಉಂಟಾಗಿ ನಮಗೆ ಬೇಕೆನ್ನಿಸಿದ ದಿಕ್ಕಿನಲ್ಲಿ ಸಕಾರಾತ್ಮಕವಾಗಿ ಬದಲಿಸುವ ಶಕ್ತಿ ದೊರೆಯುತ್ತದೆ. ಇದನ್ನೆಲ್ಲ ಆಧ್ಯಾತ್ಮಿಕವಾಗಿ ಕಲಿಯಬೇಕು, ಬೆಳೆಯಬೇಕು. Dr. N. Sandhya Dr. A.M. Suresh
In this book, the authors have covered rights of women from ancient to modern India. The authors cover medieval age too. They have also covered rights of Vedic women, Women in Jainism, Women in Islam and women in Christianity. The awakening created on rights of women has eradicated many social evils like Sati practices. The authors clearly highlight as how Domestic violence Act decreased the crime on women in a big way. The Rules pertaining to Acid attacks on women has sent right signals against the heinous crime. The authors have covered Public, personal and professional life of women. Property rights is one economic tool which helped daughters to get rightful share in the parents’ property. This has revolutionized the economic rights of women by many folds.
ಲೇಖಕರು: ಡಾ. ಸುಜಾತ ಎಂ ಮತ್ತು ಡಾ. ಕುಮುದಿನಿ ಅಚ್ಚಿ
ಸಮಾಜಕಾರ್ಯ ಶಿಕ್ಷಣ ಕ್ಷೇತ್ರವು ತನ್ನದೇ ಆದ ರೀತಿಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಖ್ಯೆ ಹೇರಳವಾಗಿದ್ದು, ಇವರಿಗೆ ಆಂಗ್ಲ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಿರುವುದಿಲ್ಲ. ಇದನ್ನರಿತ ನಾವು ಪ್ರಾಂತೀಯ ಭಾಷೆಗಳಲ್ಲಿ ಪುಸ್ತಕಗಳು ಹೊರಹೊಮ್ಮಿದೆ. ಆದಲ್ಲಿ ಸರಳವಾಗಿ ವಿಷಯವನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಅದರ ಪ್ರತಿಫಲವೇ ಈ “ಸಮಾಜಕಾರ್ಯ ಸಂಶೋಧನೆ” ಎಂಬ ಹೊತ್ತಿಗೆ. ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪ್ರಕಟಣೆಯಾಗಲಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ.
ಲೇಖಕರು : ಎಂ. ಬಸವಣ್ಣ ಪುಟ : XII+56
ವಿಶ್ವದಲ್ಲಿ ದೇವರಿಲ್ಲದ ನಾಡಿಲ್ಲ, ದೇವರನ್ನು ಪೂಜಿಸದ ಜನರು ಅಪರೂಪ. ಭಾರತದಲ್ಲಂತೂ ದೇವರಿಲ್ಲದ ಊರೇ ಇಲ್ಲವೆಂದರೂ ಆಶ್ಚರ್ಯವಿಲ್ಲ. ನಮ್ಮ ದೇಶ ಗುಡಿಗೋಪುರಗಳಿಂದ ತುಂಬಿಹೋಗಿದೆ. ಜಗತ್ತಿನಲ್ಲಿ ದೇವರಲ್ಲಿ ನಂಬಿಕೆ ಇಲ್ಲದವರು ಬಹಳ ಕಡಮೆ. ದೇವರಿದ್ದಾನೆ, ಅವನೇ ನಮ್ಮನ್ನೆಲ್ಲಾ ಸೃಷ್ಟಿಸಿರುವವನು, ಪಾಲಿಸುವವನು ಎಂಬುದು ಆಸ್ತಿಕರೆಲ್ಲರ ನಂಬಿಕೆ. ಆದರೂ, ನಮ್ಮ ದೇವಾಲಯಗಳನ್ನೆಲ್ಲಾ ಕಟ್ಟಿದವರು, ಅವುಗಳಲ್ಲಿರುವ ವಿಗ್ರಹಗಳನ್ನೆಲ್ಲಾ ಕೊರೆದವರು ಮನುಷ್ಯರೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ದೇವರು ಮನುಷ್ಯನನ್ನು ಸೃಷ್ಟಿಸಿದನೋ, ಮನುಷ್ಯ ದೇವರನ್ನು ಸೃಷ್ಟಿಸಿದನೋ ಎಂಬುದು ಬಗೆಹರಿಯದ ವಿವಾದ. ಅದರ ವಿಚಾರವಾಗಿ ಬರೆಯುವುದು ಈ ಲೇಖನದ ಉದ್ದೇಶವಲ್ಲ. ಆದರೂ ದೇವಸ್ಥಾನಗಳನ್ನು ನಿರ್ಮಿಸಿ, ಅಲ್ಲಿ ವಿಗ್ರಹಗಳನ್ನು ಸ್ಥಾಪಿಸಿದವರು ಮನುಷ್ಯರೆಂಬುದನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ.
K. Vittala Rao Legal & Management Consultant
PREFACE It is very natural and expected that any professional in any area of specialisation gets some sudden doubt or needs clarification on any issue. More particularly in the area of legal compliance or even while seeking or providing clarification to anyone, including colleagues and superiors. We continue to live in an era of the plethora of labour legislations, that too varied interpretations under judicial pronouncements. And many times, we need fast and quick inputs. And it is our experience that when we get or know the clarifying answer assertively, most problems get solved in a matter of seconds. Whenever I conduct sessions on Labour Laws, I conclude with a set of objective tests to evaluate and or to further clarify the doubts which have shown positive indications. In teaching in Management Schools, MBA, MSW, and Law, the faculty must be equipped with precise answers and even administering tests and evaluations.
B.C. Prabhakar's Message “The speed of the boss is the speed of the team.”
In this quote, the famous American automobile executive, Lee Lacocca, points out the importance of a leader. The success of families, societies, organizations and enterprises rests on the vision of a few key people. Some of these people create the future and set a model example for the future with remarkable feats. Today, society, industry, and nation are witnessing a lot of strategic-developmental changes, and these changes are the creations of visionaries. Visionaries are change agents, and they are the LEADERS. Knowing about them and understanding their thoughts is paramount for strengthening the foundation of a developmental society. In turn, knowledge sharing will motivate and inspire the present and future generations to become strong leaders. K. Vittala Rao Pages : 456
PREFACE Labour Reforms, a buzz word is most popular amongst Central and State Governments, the Ministries, Industrialists, Economists, Trade Unions, Workers , Students and Faculty of Management Schools, Law Schools, Research Foundations, and General Public.
It is well known that Labour Reforms are aimed at industrial and economic growth, up-liftment of the living standards of all, in particular, industrial employees, generation of employment and the like. India, being highly conscious in developing the Country to the level in Global Market, deep involvement in uplifting the Employees, welfare of families, foresighted targets of employment to the members of the Families, Three Labour Commissions at the National Level were constituted chaired by eminent personalities, highly qualified and experienced, from 1931. ಗಂಗಾಧರ ರೆಡ್ಡಿ ಎನ್. ಡಾ. ಲೋಕೇಶ್ ಎಂ.ಯು.
ಲೇಖಕರು: ಡಾ. ಸಿ.ಆರ್. ಗೋಪಾಲ್ ಪುಟಗಳು: 440
ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು. ಲೇಖಕರು: ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. ಪುಟಗಳು: 200
20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
ಇಂದು ಸಮಾಜಕಾರ್ಯ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಈ ಹಿಂದೆ ಸಮಾಜಕಾರ್ಯ ವೃತ್ತಿಪರರ ಸೇವೆಗಳು ಸಮುದಾಯ ಆಧಾರಿತ ಕಾರ್ಯಕ್ರಮಗಳು ತರಬೇತಿ, ಅನುಷ್ಠಾನ, ಆಪ್ತ ಸಮಾಲೋಚನೆ, ಸಮಾಜಕಾರ್ಯದ ವಿವಿಧ ವಿಧಾನಗಳು/ತಂತ್ರಗಳ ಬಳಕೆ ಹಾಗೂ ಸಂಶೋಧನೆಗಳಿಗೆ ಸೀಮಿತವಾಗಿದ್ದವು. ಪ್ರಸ್ತುತ ಇವರ ಸೇವೆಗಳು ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಮನೋ-ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಬಹುತಜ್ಞರ ಚಿಕಿತ್ಸಾ ತಂಡದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವಾದುದಾಗಿದೆ. ಬಹುಮುಖ್ಯವಾಗಿ ಮಾನಸಿಕ ಆರೋಗ್ಯ ಉತ್ತೇಜಕ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಚಿಕಿತ್ಸಕ ಮಧ್ಯಸ್ಥಿಕೆಗಳು, ಪುನರ್ವಸತಿ ಸೇವೆಗಳು ಮತ್ತು ಮಾನಸಿಕ ರೋಗಿಗಳನ್ನು ಕುಟುಂಬಕ್ಕೆ ಮರುಜೋಡಿಸುವಲ್ಲಿ ಹಾಗೂ ಸಮುದಾಯದ ಮುಖ್ಯವಾಹಿನಿಗೆ ತರುವಲ್ಲಿ ವೃತ್ತಿಪರ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಕೊಡುಗೆ ಗಣನೀಯವಾದುದು. ಲೇಖಕರು: ಎಚ್.ಎನ್. ಯಾದವಾಡ ಪುಟಗಳು: 144
ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು.
ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟಗಳು : 336
ಪರಿವಿಡಿ ಮುನ್ನುಡಿ
ಪ್ರಕಾಶಕರ ಪ್ರಸ್ತಾವನೆ-ಕೃತಜ್ಞತೆ ಲೇಖಕರ ಪರಿಚಯ ಅಧ್ಯಾಯ - ಒಂದು ಪೀಠಿಕೆ:- ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳು. ಅಧ್ಯಾಯ - ಎರಡು ವೃಂದಗಳ ಅರ್ಥಗ್ರಹಿಕೆ:- ವ್ಯಾಖ್ಯೆಗಳು, ಜಮಾವಣೆ, ಸಮಷ್ಟಿತನ ಮತ್ತು ವೃಂದಗಳ ವ್ಯತ್ಯಾಸ, ವೃಂದದ ಅಂಶಗಳು, ವೃಂದದ ಪ್ರಕಾರಗಳು, ಅಧ್ಯಾಯ - ಮೂರು ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು:- ವ್ಯಾಖ್ಯೆಗಳು, ವಿಸ್ತೃತ ವ್ಯಾಖ್ಯೆ, ಸ್ವಯಂಪ್ರೇರಣೆ ಅಥವಾ ಕಾರ್ಯಕರ್ತನ ಪ್ರೇರಣೆ, ವೃಂದದ ಸದಸ್ಯರ ಸಂಖ್ಯೆ, ಕಾರ್ಯಕರ್ತನ ಮಾರ್ಗದರ್ಶನ, ಅಂತರಕ್ರಿಯೆ-ಪಾರಸ್ಪರಿಕ ಕ್ರಿಯೆ, ಸಂಪರ್ಕ, ಹೊಂದಾಣಿಕೆ, ಗುಂಪಿನ ವಾತಾವರಣ, ಚಟುವಟಿಕೆಗಳು, ಅನುಭವ, ನಿಶ್ಚಿತ ಯೋಜನೆಗಳು, ಕಾರ್ಯಕ್ರಮಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೃಂದಗತ ಸಮಾಜಕಾರ್ಯದ ಗ್ರಹಿಕೆಗಳು, ವೃಂದಗತ ಸಮಾಜಕಾರ್ಯದ ಲಕ್ಷಣಗಳು, ವೃಂದಗತ ಸಮಾಜಕಾರ್ಯದ ಧ್ಯೇಯೋದ್ದೇಶಗಳು, ಉದ್ದೇಶಗಳ ಪ್ರಕಾರಗಳು, ಸೇವಾಸಂಸ್ಥೆಯ ಉದ್ದೇಶಗಳು, ಗುಂಪಿನ ಸಹವಾಸದಿಂದ ಆಗುವ ಅನುಕೂಲಗಳು. Author : T.K. Nair Pages : 146
Contents Preface
Acknowledgement Contributors
ಸಂಪಾದಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪುಟ : 104
ಬಹಳ ವರ್ಷಗಳ ಹಿಂದೆ ಆಂಗ್ಲ ಭಾಷೆಯಲ್ಲಿದ್ದ ಸಮಾಜ ವಿಜ್ಞಾನ, ಸಮಾಜಕಾರ್ಯ ಸಾಹಿತ್ಯವನ್ನು ಓದುತ್ತಿದ್ದಾಗ ಕೆಲವು ಶಬ್ದಗಳ ಸರಿಯಾದ ಅರ್ಥ ಆಗಲಿಲ್ಲ. ಅಂಥ ಶಬ್ದಗಳನ್ನು ಪಟ್ಟಿ ಮಾಡುತ್ತಾ ಅವುಗಳಿಗೆ ಸೂಕ್ತವಾದ ಕನ್ನಡ ಶಬ್ದಗಳು ಯಾವುವು ಎಂಬುದನ್ನು ಆಂಗ್ಲ-ಕನ್ನಡ ನಿಘಂಟುಗಳಲ್ಲಿ ದೊರೆಯುವ ಸಮಾನ ಅರ್ಥಗಳ ಪಟ್ಟಿಯನ್ನು ಮಾಡತೊಡಗಿದೆ. ಈ ಕೆಲಸದ ಮೂಲಕ ನನ್ನ ತಿಳಿವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬುದೇ ಆರಂಭದ ಉದ್ದೇಶವಾಗಿತ್ತು. ಆದರೆ, ಆ ಶಬ್ದಗಳು ಇತರರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಬೇಕಾಗುತ್ತವೆ ಎಂದು ಒಂದು ಕಿರು ಶಬ್ದಕೋಶವನ್ನು ಸಿದ್ಧ ಮಾಡತೊಡಗಿದೆ. ಈ ನನ್ನ ಕೆಲಸವನ್ನು ನನ್ನ ಸಹೋದ್ಯೋಗಿಗಳ ಮುಂದಿರಿಸಿ, ಅವರ ಸಹಕಾರವನ್ನೂ ಪಡೆದುಕೊಳ್ಳತೊಡಗಿದೆ. ಇಂಥ ಶಬ್ದಕೋಶವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಕಾರ್ಯಕರ್ತರಿಗೂ ತುಂಬಾ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯವು ಅವರದೂ ಆಗಿತ್ತು. ಅವರು ನನಗೆ ನೆರವಾಗಲು ಮುಂದಾದರು. ಹೀಗೆ ಈ ಪುಸ್ತಿಕೆಯು ಸಿದ್ಧವಾಯಿತು.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |