|
ಲಖನೌ:
2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಉತ್ತರಪ್ರದೇಶದ ಗೋರಕ್ ಪುರದ ಗೀತಾ ಪ್ರೆಸ್, ಪ್ರಶಸ್ತಿಯ ಭಾಗವಾಗಿರುವ ರೂ. 1 ಕೋಟಿ ನಗದನ್ನು ಸ್ವೀಕರಿಸಲು ನಿರಾಕರಿಸಿದೆ. ಗೋರಕ್ ಪುರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಗೀತಾ ಪ್ರೆಸ್ ನ ವ್ಯವಸ್ಥಾಪಕ ಡಾ. ಲಾಲ್ ಮಣಿ ತಿವಾರಿ ಅವರು. ‘ಗೀತಾ ಪ್ರೆಸ್ ತನಗೆ ನೀಡಿದ ಯಾವುದೇ ಗೌರವ ಅಥವಾ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ಅಂತೆಯೇ ರೂ. 1 ಕೋಟಿ ಮೊತ್ತವು ‘ದೇಣಿಗೆ’ ಆಗಿರುವುದರಿಂದ ಹಣವನ್ನು ಸ್ವೀಕರಿಸಲಾಗದು. ಆದರೆ, ನಗದು ಹೊರತು ಪಡಿಸಿ ಗೀತಾ ಪ್ರೆಸ್ ನ ಟ್ರಸ್ಟಿಗಳು ಗಾಂಧಿ ಶಾಂತಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲು ನಿರ್ಧರಿಸಿದ್ದಾರೆ’ ಎಂದು ತಿಳಿಸಿದ್ದಾರೆ. ‘ನಾವು ಗೌರವವನ್ನು ಸ್ವೀಕರಿಸುತ್ತೇವೆ. ಆದರೆ, ನಗದು ಪ್ರಶಸ್ತಿಯನ್ನಲ್ಲ’ ಎಂದು ತಿವಾರಿ ಪುನರುಚ್ಚರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://udayaprabha.com/geetha-press-denied-rs/?fbclid=IwAR2M13UaY5DHXdVKul1CKf00vgKx4CB5IWGkffi-26Z4HgV9lZ8sna5tIc4 ಕೃಪೆ: ಉದಯಪ್ರಭ 20-06-2023
0 Comments
Your comment will be posted after it is approved.
Leave a Reply. |
Categories
All
HR BooksSocial Work BooksMHR LEARNING ACADEMYGet it on Google Play store
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed