ಲೇಖಕರು:
ಸಿ.ಎಚ್. ಹನುಮಂತರಾಯ ವಕೀಲರು
ಸಾಹುಕಾರ್ ಎನ್ನುವ ಸೆಷನ್ಸ್ ಜಡ್ಜ್ ರ ಮುಂದೆ ಕೇಸ್ ನಡೆಯುತ್ತಿತ್ತು.
ಮೊಕದ್ದಮೆಯ ಮೂವರು ಡಿಫೆನ್ಸ್ ವಿಟ್ನೆಸ್ ಗಳ ಸಾಕ್ಷಿ ಹೇಳಿಕೆ ಇತ್ತು. ವಿಟ್ನೆಸ್ ಬಾಕ್ಸ್ ನಲ್ಲಿ ನಿಂತಿದ್ದ ಮೂವರ ಪೈಕಿ ಒಬ್ಬರಿಗೆ ಸಾಕ್ಷಿ ಹೇಳಿಕೆ ನೀಡುವುದಕ್ಕೆ ಪೂರ್ವದಲ್ಲಿ ದೇವರ ಹೆಸರಲ್ಲಿ ಪ್ರಮಾಣ ಮಾಡುವಂತೆ ಕೋರ್ಟ್ ಆಫೀಸರ್ ಹೇಳಿದ. ಮೂವರಲ್ಲಿ ಮುಂದೆ ನಿಂತಿದ್ದ ತಿಮ್ಮಪ್ಪಯ್ಯ ಎನ್ನುವ ಸಾಕ್ಷಿ “ಕೋರ್ಟ್ ಆಫೀಸರ್ ಮೂಲಕ ನಾನು ಪ್ರಮಾಣ ಮಾಡುವುದಿಲ್ಲ” ಅಂದ. ಜಡ್ಜ್ ಕ್ಷಣಕಾಲ ಮುಗುಳ್ನಕ್ಕು, “ಇದು ಕೋರ್ಟ್, ತಮಾಷೆಗೆ ಅವಕಾಶವಿಲ್ಲ” ಎಂದರು. “ನಾನು ತಮಾಷೆ ಮಾಡುತ್ತಿಲ್ಲ ಸಾರ್. ಗಂಭೀರವಾಗಿಯೇ ಹೇಳುತ್ತಿದ್ದೇನೆ” ಎಂದ. “ಆಯಿತು ಕೋರ್ಟ್ ಆಫೀಸರ್ ಬೇಡದಿದ್ದರೆ ನಾನೇ ಮಾಡಿಸುವೆ. ಹೂ ಹೇಳಿ ನಾನು ಹೇಳಿದಂತೆ ಎಂದು, ‘I do swear in the name of god that what I shall state shall be the truth, the whole truth and nothing but the truth’ ಎಂದು ಹೇಳಿದರು. ಆಗ ಸಾಕ್ಷಿ “ನೀವು ಹೇಳಿದ ರೀತಿಯಲ್ಲಿ ಪ್ರಮಾಣ ಮಾಡಿ ಸಾಕ್ಷಿ ಹೇಳಿಕೆ ನೀಡುವ ಅಗತ್ಯವಿಲ್ಲ” ಎಂದ.
0 Comments
ಲಖನೌ:
2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಉತ್ತರಪ್ರದೇಶದ ಗೋರಕ್ ಪುರದ ಗೀತಾ ಪ್ರೆಸ್, ಪ್ರಶಸ್ತಿಯ ಭಾಗವಾಗಿರುವ ರೂ. 1 ಕೋಟಿ ನಗದನ್ನು ಸ್ವೀಕರಿಸಲು ನಿರಾಕರಿಸಿದೆ. ಗೋರಕ್ ಪುರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಗೀತಾ ಪ್ರೆಸ್ ನ ವ್ಯವಸ್ಥಾಪಕ ಡಾ. ಲಾಲ್ ಮಣಿ ತಿವಾರಿ ಅವರು. ‘ಗೀತಾ ಪ್ರೆಸ್ ತನಗೆ ನೀಡಿದ ಯಾವುದೇ ಗೌರವ ಅಥವಾ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ಅಂತೆಯೇ ರೂ. 1 ಕೋಟಿ ಮೊತ್ತವು ‘ದೇಣಿಗೆ’ ಆಗಿರುವುದರಿಂದ ಹಣವನ್ನು ಸ್ವೀಕರಿಸಲಾಗದು. ಆದರೆ, ನಗದು ಹೊರತು ಪಡಿಸಿ ಗೀತಾ ಪ್ರೆಸ್ ನ ಟ್ರಸ್ಟಿಗಳು ಗಾಂಧಿ ಶಾಂತಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲು ನಿರ್ಧರಿಸಿದ್ದಾರೆ’ ಎಂದು ತಿಳಿಸಿದ್ದಾರೆ. ‘ನಾವು ಗೌರವವನ್ನು ಸ್ವೀಕರಿಸುತ್ತೇವೆ. ಆದರೆ, ನಗದು ಪ್ರಶಸ್ತಿಯನ್ನಲ್ಲ’ ಎಂದು ತಿವಾರಿ ಪುನರುಚ್ಚರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://udayaprabha.com/geetha-press-denied-rs/?fbclid=IwAR2M13UaY5DHXdVKul1CKf00vgKx4CB5IWGkffi-26Z4HgV9lZ8sna5tIc4 ಕೃಪೆ: ಉದಯಪ್ರಭ 20-06-2023
ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು ವತಿಯಿಂದ ಡಾ.ಸಿ.ಆರ್.ಗೋಪಾಲ್ ಅವರ ಇತ್ತೀಚಿನ ಪುಸ್ತಕವಾದ 'ಸಾಮಾಜಿಕ ಕ್ರಿಯಾಚರಣೆ' (ನಿರುತ ಪಬ್ಲಿಕೇಷನ್ಸ್‌ನಿಂದ ಪ್ರಕಟಿತ) ಯನ್ನು 'ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯದತ್ತಿ ಪ್ರಶಸ್ತಿ 2021’ಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12, 2023 ರಂದು ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯದಲ್ಲಿ ಸಮಾಜಕಾರ್ಯ ಪುಸ್ತಕಕ್ಕೆ ದೊರೆತ ಮೊದಲ ಸಾಹಿತ್ಯ ಪ್ರಶಸ್ತಿ ಇದಾಗಿದೆ. ಡಾ.ಸಿ.ಆರ್.ಗೋಪಾಲ್ ಅವರನ್ನು ಅಭಿನಂದಿಸುವಲ್ಲಿ ಒಂದಾಗೋಣ.
ಇಕಿಗಾಯ್ ಪುಸ್ತಕದಲ್ಲಿ ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ ರವರು ಪ್ರಸ್ತಾವನೆಯಲ್ಲಿ ಈ ಕೆಳಕಂಡಂತೆ ಹೇಳುತ್ತಾರೆ:-
ಪ್ರಪಂಚದಲ್ಲಿನ ಬೇರೆಲ್ಲರಿಗಿಂತ ದಕ್ಷಿಣ ಜಪಾನಿನ ಒಕಿನಾವಾ ದ್ವೀಪ ನಿವಾಸಿಗಳು ಹೆಚ್ಚು ದಿನಗಳ ಕಾಲ ಬದುಕುತ್ತಾರೆ. ಅವರು ಹೀಗೆ ಬದುಕಲು ಹಲವು ಕಾರಣಗಳನ್ನು ಇಕಿಗಾಯ್ ಪುಸ್ತಕದಲ್ಲಿ ಲೇಖಕರು ನೀಡುತ್ತಾರೆ. ಒಕಿನಾವಿಗಳು ‘ಇಚರಿಬ ಚೊಡೆ’ ಎಂಬ ತತ್ವಕ್ಕೆ ಬದ್ಧರಾಗಿ ಬದುಕುವುದು ಒಂದು ಕಾರಣ. ‘ಇಚರಿಬ ಚೊಡೆ’ ಅದೊಂದು ಸ್ಥಳೀಯವಾಗಿ ಬಳಕೆಯಲ್ಲಿರುವ ಒಂದು ಶಬ್ದ “ಅವನನ್ನು ನೀನು ಮೊದಲು ಒಮ್ಮೆಯೂ ಸಂಧಿಸಿಲ್ಲದಿದ್ದರೂ ಕೂಡ, ಪ್ರತಿಯೊಬ್ಬನನ್ನು ನಿನ್ನ ಸೋದರನಂತೆ ಸತ್ಕರಿಸು” ಎಂದು. ದೀರ್ಘಕಾಲ ಬದುಕಿ, ಜೀವನದಲ್ಲಿ ಅರ್ಥ ಕಂಡುಕೊಳ್ಳಬೇಕೆಂದರೆ ಸ್ನೇಹ-ಗೆಳೆತನವನ್ನು ಪೋಷಿಸುವುದು ಅತ್ಯಂತ ಪ್ರಮುಖ ಅಗತ್ಯ. ಯಾರೋ ಅಪರಿಚಿತರನ್ನು ನಮ್ಮ ಸೋದರನಂತೆ ಸತ್ಕರಿಸು ಎಂದು ಇಕಿಗಾಯ್ ಪುಸ್ತಕದ ಲೇಖಕರು ಹೇಳುತ್ತಾರೆ. ಹಾಗಾದರೆ ನಮ್ಮ ಸ್ನೇಹಿತರನ್ನು ನಾವು ಇನ್ನು ಹೆಚ್ಚಿನ ಮಟ್ಟದಲ್ಲಿ ಸತ್ಕರಿಸಿ, ಗೆಳೆತನವನ್ನು ಹಾಗೂ ಸ್ನೇಹವನ್ನು ಪೋಷಿಸಬೇಕು ಅಲ್ಲವೆ? ರಮೇಶ ಎಂ.ಎಚ್. ನಿರಾತಂಕ www.mhrspl.com www.niratanka.org ಇತ್ತೀಚೆಗೆ ಪ್ರೊ. ವೆಂಕಟ್ ಪುಲ್ಲಾ ಭಾರತದಲ್ಲಿ ಸಮಾಜಕಾರ್ಯ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಆಸ್ಟ್ರೇಲಿಯಾದಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ (ಸುಮಾರು 90ರ ದಶಕದಲ್ಲಿ) TISS (Tata Institute of Social Science) ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಒಬ್ಬ ಅರ್ಹ ವಿದ್ಯಾರ್ಥಿಗೆ 500/- ಗಳ ಸಹಾಯವನ್ನು ನೀಡಿದ್ದರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಗೂ ಬರುತ್ತಿದ್ದ ಸಂಬಳ ಐದಾರು ಸಾವಿರವಿದ್ದಿರಬಹುದು. ಆ 500/- ರೂ.ಗಳು ಸಹಾಯ ಪಡೆದ ವಿದ್ಯಾರ್ಥಿ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಪಡೆದ ನಂತರ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಪಡೆದ ಸಹಾಯಧನವನ್ನು ಹಿಂತಿರುಗಿಸಲು ಭೇಟಿಯಾದರು. ಆಗ ಪ್ರೊ. ವೆಂಕಟ್ ಪುಲ್ಲಾ ರವರು ನಾನು ನಿನಗೆ ಸಹಾಯ ಮಾಡಿದಂತೆ ನೀನು ಒಬ್ಬ ಅರ್ಹ ವಿದ್ಯಾರ್ಥಿಯನ್ನು ಹುಡುಕಿ ಅವನಿಗೆ ನಿನ್ನ ಕೈಲಾದ ಮಟ್ಟಿಗೆ ಸಹಾಯ ಮಾಡು ಎಂದು ಸಲಹೆ ಇತ್ತರಂತೆ. ಈ ರೀತಿಯಾಗಿ ಸಹಾಯ ಪಡೆದವರು ಇಂದು ವಿಶ್ವದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಂದ ಮೊದಲು ಸಹಾಯ ಪಡೆದ ವ್ಯಕ್ತಿ ತಾನು ಸಹಾಯ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿ ಅದೇ ರೀತಿ ಒಬ್ಬರಿಂದ ಒಬ್ಬರು ಮಾತನಾಡಿಕೊಂಡು ಎಲ್ಲರೂ ಇತ್ತೀಚಿಗೊಮ್ಮೆ ಪ್ರೊ. ವೆಂಕಟ್ ಪುಲ್ಲಾ ರವರನ್ನು ಆಹ್ವಾನಿಸಿದರಂತೆ. ಆಗ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಸಹಾಯ ನೀಡಿದ ತನ್ನ ಶಿಷ್ಯ ಮಾತ್ರ ಗೊತ್ತಿತ್ತು. ಅದೇ ರೀತಿ ಅಲ್ಲಿದ್ದ ಎಲ್ಲರಿಗೂ ಅವರವರು ಸಹಾಯ ನೀಡಿದ ವ್ಯಕ್ತಿಗಳು ಮಾತ್ರ ಗೊತ್ತಿತ್ತು. ಆದರೆ ಅಲ್ಲಿ ಒಟ್ಟಿಗೆ ಸೇರಿದ್ದು 300 ಕ್ಕೂ ಹೆಚ್ಚು ಜನರು ಇದ್ದರು. ಪ್ರೊ. ವೆಂಕಟ್ ಪುಲ್ಲಾ ರವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರಂತೆ. ಒಂದು ಪುಟ್ಟ ಸಹಾಯ ಯಾವ ರೀತಿ ಇತರರ ಬದುಕನ್ನು ಬದಲಾಯಿಸಬಲ್ಲದು ಎಂಬುದು ಇದಕ್ಕೆ ನಿದರ್ಶನವಾಗಿದೆ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಒಂದು ಪುಟ್ಟ ಸಹಾಯದಿಂದ ಸುಮಾರು 400 ಕ್ಕೂ ಹೆಚ್ಚು ಜನರು ಪ್ರೊ. ವೆಂಕಟ್ ಪುಲ್ಲಾ ರವರ ವ್ಯಕ್ತಿತ್ವಕ್ಕೆ ಮಾರುಹೋದರು. ಹಾಗೆಯೇ ಇಂದು ಪ್ರೊ. ವೆಂಕಟ್ ಪುಲ್ಲಾ ರವರು ಸಮಾಜಕಾರ್ಯ ವಿಶ್ವವಿದ್ಯಾಲಯ ಮಾಡಬೇಕೆಂದು ಹೊರಟರೆ ಇಂತಹ ಮಹತ್ವದ ಕೆಲಸಕ್ಕೆ 400 ಜನರು ಪ್ರೊ. ವೆಂಕಟ್ ಪುಲ್ಲಾ ರವರ ಬೆಂಬಲಕ್ಕೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲವಲ್ಲ.
ರಮೇಶ ಎಂ.ಎಚ್. ನಿರಾತಂಕ www.mhrspl.com www.nirutapublications.org Dear sir/madam,
The following survey aims at capturing the impact of Covid-19 lockdown on families. I invite you to kindly fill the online questionnaire. Also, I request you to forward the link to whomever you think will be interested in participating in the survey. Your participation will be helpful in generating valuable information to understand families better. https://forms.gle/5uTM2CdW4aeNFo1u8 P.S: Pl note that the survey will close by 18 May 2020 midnight. B. Devi Prasad Former Professor of Social Work, TISS, Mumbai., Andhra University, Visakhapatnam, A.P., India Mob:9702871115 [email protected] (use this mail ID only) Hi all, SA-MUDRA FOUNDATION Bangalore, an NGO working for youth wellness & Empowerment (with a core commitment to prevent suicides) calls for members to its Governing Board (Honorary) Interested persons ( preferably from Bangalore) please mail profile to [email protected]
ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು.
ಕೊರೊನಾ-2 ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ವೈರಾಣು ಸೂಕ್ತ ವೈಜ್ಞಾನಿಕ ಪುರಾವೆಯಂತೆ ವೇಗವಾಗಿ ರೋಗಗ್ರಸ್ಥ ಮಾನವನಿಂದ ಇನ್ನೊಬ್ಬ ಮಾನವನಿಗೆ ಹರಡುವುದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಪ್ರತೇಕ ವಾಸ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಇದರ ಅಪಾಯವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಆಯಾ ದೇಶದ ಸರ್ಕಾರಗಳು ಮುಂದಾಗಿವೆ. ನಮ್ಮ ದೇಶವು ಬಲವಂತದ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದೆ. ಅದರ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡ ಜನರಿಗೆ ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇತರೆ ಸಾಂಕ್ರಮಿಕ ರೋಗಗಳಂತೆ ಇದು ಸಂಪೂರ್ಣ ನಿರ್ಮೂಲನೆವಾಗುವಂತದ್ದೇ ಅಥವಾ ಸರ್ವನಾಶ ಮಾಡುವಂತದೇ? ಇದು ಮುಂದುವರೆದರೆ ತುತ್ತಿನ ಚೀಲ ತುಂಬಿಕೊಳ್ಳುವುದು ದುಸ್ಥರ. ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತಿದ್ದಾರೆ, ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ, ಆಕಾರಣ ಭಯ, ಆತಂಕ, ಖಿನ್ನತೆ, ದುಃಸ್ವಪ್ನಗಳು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಹಳಬರು, ಹೊಸಬರೆನ್ನದೇ ದೇವರು, ಧರ್ಮವೆನ್ನದೇ ಎಲ್ಲ ಜನತೆಯನ್ನು ಕಾಡತೊಡಗಿವೆ. ಸೋಂಕಿತರ ತಕ್ಷಣದ ಚಿಕಿತ್ಸೆಗಾಗಿ ಸ್ಥಳಾಂತರ, ವಲಸಿಗರು ತಮ್ಮ ಮೂಲ ನೆಲೆಗಳಿಗೆ ಇಲ್ಲವೇ ಆಶ್ರಯವೇ ಇಲ್ಲದ ನಿರಾಶ್ರಿತರಿಗೆ ತಾತ್ಕಾಲಿಕ ತಾಣಗಳಲ್ಲಿನ ಸಮಸ್ಯೆಗಳು. ಈಗಾಗಲೇ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಆರೈಕೆದಾರರ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಇವೆಲ್ಲವುಗಳ ಮಧ್ಯೆ ಸಾಮಾಜಿಕ ಅಂತರ ಮತ್ತು ಶುಚಿತ್ವದ ಕಟ್ಟುಪಾಡು.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |