ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು. ನಿಧಿ ಸಂಗ್ರಹಣೆಗಾಗಿ ವಿಸ್ತೃತವಾದ ವರದಿಯನ್ನು ಹಲವರು ಸಂಘ ಸಂಸ್ಥೆಗಳಿಗೆ ಕೊಟ್ಟು ದೇಣಿಗೆ ಕೇಳುವ ಬದಲು ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ಒಂದು Envelope ಗೆ ಹಾಕಿ ಒಂದು ಕಾಗದದಲ್ಲಿ ಈ ರೀತಿ ಬರೆಯಲಾಗಿತ್ತು. "ಮಾನ್ಯರೇ, ಈ ಪ್ಲಾಸ್ಟಿಕ್ ಕಾಗದದ ಹಾಳೆ ತೆಗೆದುಕೊಂಡು ನಿಮ್ಮ ಕಣ್ಣಿನ ಮುಂದೆ ಇರಿಸಿಕೊಳ್ಳಿ. ನಿಮಗೆ ನಿಮ್ಮ ಮುಂದಿರುವ ವ್ಯಕ್ತಿ ವಸ್ತುಗಳನ್ನು ನೋಡಲು ಪ್ರಯತ್ನಿಸಿ. ಖಂಡಿತವಾಗಿ ನಿಮ್ಮ ಮುಂದಿರುವ ವ್ಯಕ್ತಿ ಅಥವಾ ವಸ್ತುಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಅತ್ಯಂತ ಅಸ್ಪಷ್ಟವಾಗಿ ಹಾಗೂ ಮಂಜು ಮುಸುಕಿದಂತೆ ಕಾಣಿಸುತ್ತವೆ. ಅಕಸ್ಮಾತ್ ನಿಮ್ಮ ಮುಂದೆ ದೊಡ್ಡದಾಗಿ ಏನಾದರೂ ಅಕ್ಷರಗಳಲ್ಲಿ ಬರೆದಿದ್ದರೆ ಓದಲು ಕಷ್ಟವಾಗಬಹುದು ಅಲ್ಲವೇ? ಹಾಗಾದರೆ ಭಾರತದಲ್ಲಿ ಲಕ್ಷಾಂತರ ಜನರು ಈ ರೀತಿ ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಈ ಲಕ್ಷಾಂತರ ಜನರನ್ನು ಮುಕ್ತಿಗೊಳಿಸಲು ನೀವು ಕೊಡುವ 2500 /- ರೂ.ಗಳ ದೇಣಿಗೆ ಉಪಯುಕ್ತಕರವಾಗಿರುತ್ತದೆ. ಒಬ್ಬರಿಗೆ 2500/- ರೂ. ಇಂದ ಶಸ್ತ್ರ ಚಿಕಿತ್ಸೆ ಮಾಡಿ ಅವರು ಮೊದಲಿನಂತೆ ಸ್ಪಷ್ಟವಾಗಿ ವಸ್ತುಗಳನ್ನು ನೋಡುವಂತೆ ಮಾಡಬಹುದು. ಹಾಗಾಗಿ ನೀವು ಕೊಡುವ ದೇಣಿಗೆ ಒಂದು ಮಹೋನ್ನತ ಕಾರ್ಯಕ್ಕೆ ಸದ್ಬಳಕೆಯಾಗುವುದು. ನಿಮ್ಮ ಸಹಕಾರ ಈ ಸಮಸ್ಯೆಯನ್ನು ಹೋಗಲಾಡಿಸಲು ಅತ್ಯಂತ ಉಪಯುಕ್ತವಾಗುತ್ತದೆ" ಎಂದು ಬರೆಯಲಾಗಿತ್ತು. ಹೀಗೆ ಬರೆಯಲಾಗಿದ್ದ Envelope ಹಾಗೂ ಪ್ಲಾಸ್ಟಿಕ್ ಹಾಳೆಯನ್ನು ಹಲವಾರು ಜನರಿಗೆ ಕಳುಹಿಸಿಕೊಡಲಾಯಿತು. ಕಳುಹಿಸಿಕೊಟ್ಟ ಕೆಲವೇ ದಿನಗಳಲ್ಲಿ ದೇಣಿಗೆ ಸಂಗ್ರಹಣೆ ಅತ್ಯಂತ ಯಶಸ್ವಿಯಾಗಿ ಪ್ರಾರಂಭವಾಯಿತು ಹಾಗೂ ಲಕ್ಷಾಂತರ ಜನರಿಗೆ ಕಣ್ಣಿನ ಪೊರೆಯಿಂದ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. ಈ ಮೇಲ್ಕಂಡ ಉದಾಹರಣೆಯಿಂದ ಹತ್ತು ಹಲವು ಪಾಠಗಳನ್ನು ನಾವು ಕಲಿಯಬಹುದು.
ವಿಸ್ತೃತವಾಗಿ ಪುಟಗಟ್ಟಲೆ ವರದಿ ಬರೆದಾಕ್ಷಣ ದೇಣಿಗೆ ಸಂಗ್ರಹವಾಗುವುದಿಲ್ಲ. ಹೇಳಬೇಕಾಗಿದ್ದನ್ನು ಅತ್ಯಂತ ವಿನೂತನವಾಗಿ ಹೇಳಬೇಕಾಗುತ್ತದೆ. ಯಾವುದೇ ಒಂದು ಸಮಸ್ಯೆ ಹೋಗಲಾಡಿಸಲು ಕೋಟ್ಯಾಂತರ ರೂ.ಗಳ ಹಣವನ್ನು ದೇಣಿಗೆಯಾಗಿ ಸಂಗ್ರಹಿಸಲು ಸಾರ್ವಜನಿಕವಾಗಿ ಕೋರಿಕೆ ಇಟ್ಟಾಕ್ಷಣ ಅಷ್ಟೊಂದು ದೊಡ್ಡ ಮಟ್ಟದ ಹಣ ನೋಡಿದಾಕ್ಷಣ ನಾವು ಕೊಡುವ ಚಿಕ್ಕ ದೇಣಿಗೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜನರು ದೇಣಿಗೆ ಕೊಡಲು ಸಾಮಾನ್ಯವಾಗಿ ಮುಂದೆ ಬರುವುದಿಲ್ಲ. ದೇಣಿಗೆ ಕೊಡುವ ಹಣ ನೇರವಾಗಿ ಯಾರೋ ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಉಪಯುಕ್ತ ಎಂಬುದನ್ನು ಅರಿತರೆ ನಮ್ಮ ಹಣ ಸದ್ವಿನಿಯೋಗವಾಗುತ್ತದೆ ಎಂಬುದನ್ನು ಅರಿತರೆ ದೇಣಿಗೆ ನೀಡುವವರು ಸಂತೋಷದಿಂದ ದೇಣಿಗೆ ನೀಡಲು ಮುಂದೆ ಬರುತ್ತಾರೆ. ಈ ಮೇಲ್ಕಂಡ ಉದಾಹರಣೆಯಿಂದ ಇನ್ನು ಹತ್ತು ಹಲವು ವಿಭಿನ್ನ ಆಯಾಮಗಳನ್ನು ನಾವು ಕಲಿಯಬಹುದಾಗಿದೆ. ನಾವು ನಿಧಿ ಸಂಗ್ರಹಣೆ ಮಾಡುವುದಕ್ಕೆ ಉಪಯೋಗಿಸಿದ ವಿನೂತನ ಪ್ರಯೋಗಗಳನ್ನು ದಿನನಿತ್ಯದ ಕೆಲಸಗಳಲ್ಲಿ ನಾವು ತೋರಬೇಕಾಗುತ್ತದೆ. ಯಾವುದೇ ವಿನೂತನ ಆಲೋಚನೆ ಅರಿವಿನೊಂದಿಗೆ ಕೆಲಸ ನಿರ್ವಹಿಸಿದರೆ ಯಾಂತ್ರಿಕ ರೀತಿಯಲ್ಲಿ ಪ್ರತಿನಿತ್ಯದ ಕೆಲಸವನ್ನು ಮಾಡುತ್ತಿದ್ದರೆ ಯಾವುದೇ ರೀತಿಯ ಉನ್ನತ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಮೇಲ್ಕಂಡ ಲೇಖನದ ಕುರಿತಾಗಿ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ Comment Box ನಲ್ಲಿ ತಿಳಿಸಿ ಹಾಗೂ ನಿಮ್ಮ ಇದೇ ರೀತಿಯಾದಂತಹ ಅನುಭವಗಳಾಗಿದ್ದಲ್ಲಿ ಅವುಗಳನ್ನು ಬರೆದು ಕಳುಹಿಸಿಕೊಡಿ. ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಪ್ರಕಟಿಸುವುದರಿಂದ ಸಾವಿರಾರು ಜನಕ್ಕೆ ಈ ಲೇಖನವು Whatsapp ಹಾಗೂ ಅಂತರ್ಜಾಲ ತಾಣದಲ್ಲಿ ತಲುಪಿ ಹಲವರಿಗೆ ಉಪಯುಕ್ತವಾಗಬಹುದು. ರಮೇಶ ಎಂ.ಎಚ್. ನಿರಾತಂಕ
0 Comments
Your comment will be posted after it is approved.
Leave a Reply. |
Categories
All
Social Work Learning AcademyInviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |