|
ಲೇಖಕರು: ಡಾ. ಸುಜಾತ ಎಂ ಮತ್ತು ಡಾ. ಕುಮುದಿನಿ ಅಚ್ಚಿ
ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯ ಶಿಕ್ಷಣವು ಹುಲಸಾಗಿ ಬೆಳೆದು ಬಂದಿದೆ. ಎಂಬತ್ತರ ದಶಕದಲ್ಲಿ ಬೆರಳೆಣಿಕೆಯಷ್ಟು ಇದ್ದ ಸಮಾಜಕಾರ್ಯ ಶಿಕ್ಷಣದ ಸಂಸ್ಥೆಗಳು ಇಂದು ಸಾವಿರದ ಅಂಕಿಮೀರಿ ಬೆಳೆದಿವೆ. ವೃತ್ತಿನಿರತ ಸಮಾಜಕಾರ್ಯಕರ್ತರಿಗೆ ಹೊಸ ಹೊಸ ಕ್ಷೇತ್ರಗಳು ಸ್ವೀಕರಿಸುತ್ತಿವೆ. ವೃತ್ತಿಪರ ಸಮಾಜಕಾರ್ಯದ ಸೇವೆಯನ್ನು ಜನರು, ಸಮುದಾಯಗಳು ಗುರುತಿಸುತ್ತಿವೆ. ಆದರೆ ಪಾಶ್ಚಿಮಾತ್ಯ ಪ್ರಭಾವದಲ್ಲಿ ಬೆಳೆದ ಭಾರತೀಯ ಸಮಾಜಕಾರ್ಯ ಶಿಕ್ಷಣವು ಹಲವು ತೊಂದರೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಪ್ರಾಂತಿಯ ಭಾಷೆಯಲ್ಲಿ ಬರಹಗಳು, ಸಾಹಿತ್ಯಗಳು, ಪ್ರಕಟನೆಗಳು ಬರದೇ ಇರುವುದು. ಕನ್ನಡದ ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲೀಷನ್ನು ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವುದಿಲ್ಲ. ಹೀಗಾಗಿ ಅವರು ವಿಷಯದಲ್ಲಿ ಪ್ರಭುತ್ವವನ್ನು ಸಾಧಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಪ್ರಾಂತೀಯ ಭಾಷೆಯಲ್ಲಿ ಪುಸ್ತಕಗಳು, ಬರಹಗಳು ಬಂದಿದ್ದಾದರೆ ವಿದ್ಯಾರ್ಥಿಗಳು ಸಹಜ ಸರಳವಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ನಮ್ಮ ಬಹುತೇಕ ಬರಹಗಳು, ಲೇಖನಗಳು ಇಂಗ್ಲೀಷಿನಲ್ಲಿ ಬರುತ್ತಿವೆ. ಇದನ್ನು ಅರಿತುಕೊಂಡ ಡಾ. ಎಂ. ಸುಜಾತ ಅವರು ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಕನ್ನಡದಲ್ಲಿ ಸಮಾಜಕಾರ್ಯ ಸಂಶೋಧನೆ ಎಂಬ ಗ್ರಂಥವನ್ನು ಹೊರತರುತ್ತಿರುವುದು ತುಂಬಾ ಸಂತೋಷದ ವಿಷಯ.
ಸಮಾಜಕಾರ್ಯ ಶಿಕ್ಷಣವು ಇನ್ನುಳಿದ ಅಧ್ಯಯನಗಳಿಗಿಂತ ವಿಭಿನ್ನವಾಗಿದೆ. ಸಮಾಜದಲ್ಲಿಯ ಸಮಸ್ಯೆಗಳನ್ನು ಸಂಶೋಧನೆಗಳ ಮುಖಾಂತರ ಅರಿತುಕೊಂಡು, ಅದನ್ನು ಅರಗಿಸಿಕೊಂಡು, ಆ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹಿಡಿದು, ಅದನ್ನು ಆಚರಣೆಯಲ್ಲಿ ತಂದು, ವ್ಯಕ್ತಿಗಳಿಗೆ, ವೃಂದಗಳಿಗೆ, ಸಮುದಾಯಗಳಿಗೆ ಸಹಾಯವನ್ನು ಮಾಡತಕ್ಕಂತಹ ವೃತ್ತಿ ಇದಾಗಿದೆ. ಸಮಾಜಕಾರ್ಯ ಸಂಶೋಧನೆಯು ಸಮಾಜದಲ್ಲಿಯ ನಿರುದ್ಯೋಗ ಸಮಸ್ಯೆ, ಬಡತನ ಸಮಸ್ಯೆ, ಜಾತಿ-ವರ್ಗ ಬೇಧಗಳ ಸಮಸ್ಯೆ, ಬುಡಕಟ್ಟು ಜನಾಂಗಗಳ ಸಮಸ್ಯೆ, ಊನಶಕ್ತರ- ದೀನದಲಿತರ ಸಮಸ್ಯೆ, ಆರ್ಥಿಕ ಸಂಸ್ಥೆಗಳ ಸಮಸ್ಯೆ, ರಾಜಕೀಯ ಸಮಸ್ಯೆ ಇಂತಹ ಹಲವಾರು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರಗಳನ್ನು ಸೂಚಿಸುತ್ತದೆ ಹಾಗೂ ವೃತ್ತಿಪರವಾದ ಮಧ್ಯಸ್ಥಿಕೆಯನ್ನು ಕೂಡ ಮಾಡುತ್ತದೆ. ಆದುದರಿಂದ ಸಮಾಜಕಾರ್ಯ ಸಂಶೋಧನೆಗೆ ಸಮಾಜಕಾರ್ಯ ಶಿಕ್ಷಣದಲ್ಲಿ ಅತ್ಯಂತ ಮಹತ್ತರವಾದ ಸ್ಥಾನವಿದೆ. ಈ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಡಾ. ಎಂ. ಸುಜಾತ ಅವರು ಹೊರತರುತ್ತಿರುವ "ಸಮಾಜಕಾರ್ಯ ಸಂಶೋಧನೆ" ಹೊತ್ತಿಗೆ ವೃತ್ತಿಪರ ಸಮಾಜಕಾರ್ಯಕರ್ತರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಇತರ ಸಂಬಂಧಿತ ವ್ಯಕ್ತಿಗಳಿಗೆ ಒಂದು ದಾರಿದೀಪವಾಗಲಿದೆ.
ಕರ್ನಾಟಕದಲ್ಲಿಯ ವಿವಿಧ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಆಧಾರವಾಗಿಟ್ಟುಕೊಂಡು, ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಕೇಂದ್ರ ಬಿಂದುವಾಗಿರಿಸಿಕೊಂಡು ಸಿದ್ಧಪಡಿಸಿದ ಈ ಕೃತಿ ಸಂಖ್ಯಾಶಾಸ್ತ್ರದ ಮೂಲಪರಿಕಲ್ಪನೆಗಳ ಜೊತೆಗೆ ಸಮಾಜಕಾರ್ಯ ಸಂಶೋಧನೆಯ ಎಲ್ಲಾ ಘಟಕಗಳನ್ನು ಒಳಗೊಂಡಿದೆ. ಐದು ಅಧ್ಯಾಯಗಳಲ್ಲಿ ವಿಭಾಗಿಸಿದ ಈ ಕೃತಿಯು ಮೂಲಭೂತ ಸಂಶೋಧನೆಯ ಪರಿಕಲ್ಪನೆಗಳು, ಸಂಶೋಧನಾ ಸಮಸ್ಯೆಯ ಸೂತ್ರೀಕರಣ, ಸಮಾಜಕಾರ್ಯ ಸಂಶೋಧನಾ ವಿನ್ಯಾಸಗಳು, ನಮೂನೇ ಅಥವಾ ಮಾದರಿ ಮತ್ತು ಮಾಹಿತಿ ಸಂಗ್ರಹಣೆ ಸಮಾಜಕಾರ್ಯಕರ್ತರಿಗಾಗಿ ಸಂಖ್ಯಾಶಾಸ್ತ್ರ ಈ ವಿಷಯಗಳನ್ನು ಒಳಗೊಂಡಿದೆ. ಡಾ. ಬಿ.ಟಿ. ಲಾವಣಿ ನಿರ್ದೇಶಕರು, ಜೆ.ಎಸ್.ಎಫ್. ರಿಸರ್ಚ್ ಸೆಂಟರ್, ಪುಣೆ
ಪರಿವಿಡಿ
ಅಧ್ಯಾಯ – 1 - ಮೂಲಭೂತ ಸಂಶೋಧನಾ ಪರಿಕಲ್ಪನೆಗಳು
ಅಧ್ಯಾಯ – 2 - ಸಂಶೋಧನಾ ಸಮಸ್ಯೆಯ ಸೂತ್ರೀಕರಣ ಅಧ್ಯಾಯ – 3 - ಸಂಶೋಧನಾ ವಿನ್ಯಾಸಗಳು ಅಧ್ಯಾಯ – 4 - ನಮೂನೆ ಮತ್ತು ಮಾಹಿತಿ ಸಂಗ್ರಹಣೆ ಅಧ್ಯಾಯ – 5 - ಸಮಾಜಕಾರ್ಯ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರ ಮತ್ತು ಗಣಕಯಂತ್ರದ ಅನ್ವಯಿಕತೆ
0 Comments
Your comment will be posted after it is approved.
Leave a Reply. |
Categories
All
HR BooksSocial Work BooksMHR LEARNING ACADEMYGet it on Google Play store
|
|||||||||||||||
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |

RSS Feed