ಲೇಖಕರು: ಎಚ್.ಎನ್. ಯಾದವಾಡ ಪುಟಗಳು: 144
ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು. “ಸಾಹಿತ್ಯ ಸಮಾಜದ ಕನ್ನಡಿ”, ಶಿಕ್ಷಣ, ಕಲಿಕೆ ಹಾಗೂ ಪ್ರಗತಿಗಳು ಮಾನವ ಇತಿಹಾಸದ ನಿರಂತರ ಪ್ರಕ್ರಿಯೆ. ನಿಂತ ನೀರು ಕೊಳಚೆಯಾದರೆ ನಿರಂತರವಾಗಿ ಹರಿಯುವುದು ಪವಿತ್ರಗಂಗೆಯಾಗುತ್ತದೆ. ಸಾವಿರ-ಸಾವಿರ ವರ್ಷಗಳಿಂದ ಮನುಷ್ಯ ಕಲಿಯುತ್ತ-ಕಲಿಸುತ್ತ ಬಂದಿರುವುದು ಪ್ರಗತಿಯ ಸಂಕೇತವೆನ್ನಿಸಿದರೂ ಈ ಸಂಕೇತ ನೈತಿಕ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದೆಯೆ ಎಂದು ಸಿಂಹಾವಲೋಕನ ಮಾಡಬೇಕು. ಈ ಪುನೀತ ಕಾರ್ಯದಲ್ಲಿ ಶಿಕ್ಷಕರೊಂದಿಗೆ ಪಾಲಕರೂ ಕೈಜೋಡಿಸಬೇಕು. ನೀತಿ ಶಿಕ್ಷಣವೆಂಬ ಪಾವನ ಗಂಗೆಯಲ್ಲಿ ಮಿಂದ ಮಾನವ ಸಮಾಜ ಭಾವೀ ಭವಿಷತ್ತಿನ ಪೀಳಿಗೆಗೆ ಮಾದರಿಯಾಗಬೇಕೆಂಬುದೇ ಈ ಕಿರು ಹೊತ್ತಿಗೆಯ ಸಾರ. “ಇಂದಿನ ಬಾಲಕ ನಾಳಿನ ನಾಡಿನ ನಾಗರಿಕ” ಬೆಳೆಯ ಸಿರಿಯನ್ನು ಮೊಳಕೆಯಲ್ಲಿಯೇ ಪೋಷಿಸಿ ಮೇಲು ಗೊಬ್ಬರ ಹಾಕಿ ಬೆಳೆಸುವ ಕೆಲಸ ಪಾಲಕರಿಂದಾಗಬೇಕು. ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಪಾಲಕರ ಪಾತ್ರ ಹಿರಿದು. ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಸುಸ್ಥಿತಿಯೇ ಮನುಷ್ಯನ ಸಂಪೂರ್ಣ ಆರೋಗ್ಯವೇ ವಿನಹ ಕಾಯಿಲೆ ಇಲ್ಲದ ದುರ್ಬಲವಲ್ಲದ ಶರೀರ ಹೊಂದಿರುವುದು ಆರೋಗ್ಯವಲ್ಲವೆಂಬ ವಿಷಯವನ್ನು ಕೇಂದ್ರವಾಗಿರಿಸಿಕೊಂಡು “ಶಿಕ್ಷಣ ರಥ ನೀತಿ ಪಥ” ಕಿರು ಹೊತ್ತಿಗೆಯನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಲಾಗಿದೆ. - ಎಚ್.ಎನ್. ಯಾದವಾಡ ಪರಿವಿಡಿ ೧. ಮನೆಯೇ ಮೊದಲ ಪಾಠಶಾಲೆ
೨. ಅನುಕರಣೆ ಮಕ್ಕಳ ಹುಟ್ಟು ಗುಣ ೩. ಶಾಲೆಯೊಂದಿಗೆ ಸಮನ್ವಯ ೪. ಬೇವು ಬಿತ್ತಿ ಮಾವು ಬೆಳೆಯಲಾಗದು ೫. ಶಿಸ್ತು ಹಾಗೂ ಸಂಯಮ ೬. ಶಿಕ್ಷಣ ರಥ ನೀತಿ ಪಥ ೭. ಹೋಲಿಕೆ ಮಾಡುವುದು ಬೇಡ ೮. ಸಕಾರಾತ್ಮಕ ಭಾವನೆ ಇರಲಿ ೯. ಭಾಗ್ಯವಂತರಾಗಲಿ ಮಕ್ಕಳು ೧೦. ಮೃದು ವಚನದ ಸಂಸ್ಕಾರವಿರಲಿ
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|