ಲೇಖಕರು: ಜಿ.ಎಸ್. ಲಕ್ಷ್ಮೀಪ್ರಸಾದ್
ನಮ್ಮ ಯೋಚನಾ ಲಹರಿ, ಜ್ಞಾನ ಸಂಪತ್ತು, ಸಜ್ಜನರ ಸಹವಾಸ, ಇವೆಲ್ಲವೂ ನಮ್ಮನ್ನು ಮಾನಸಿಕವಾಗಿ ಬೆಳೆಸುತ್ತವೆ. ಆತ್ಮೀಯತೆ, ಸುರಕ್ಷತೆ, ಅನುಕಂಪ, ಪ್ರೀತಿ ವಾತ್ಸಲ್ಯ, ಇಂಥ ಮಾನವ ಸಂವೇದನೆಗಳ ಕೊಂಡಿಗಳೇ ಭಾವನಾತ್ಮಕ ಸಂಬಂಧ ಬೆಳಸಲು ಸಹಕಾರಿಯಾಗುತ್ತವೆ. ಬೌದ್ಧಿಕವಾಗಿ ಬೆಳೆಯಬೇಕಾದರೆ ಸಮತೋಲನ... ಅಂದ್ರೆ ಸಾಂದರ್ಭಿಕ ಸಮತೋಲನ, "ನುಡಿದಂತೆ ನಡೆ" ಇಂಥ ನುಡಿಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕಾಗುತ್ತೆ. ಇನ್ನು ಆಧ್ಯಾತ್ಮ. ಪರಮೋಚ್ಛ ಸ್ಥಾಯಿಯಲ್ಲಿ ನಮ್ಮ ತನು, ಮನ, ಆತ್ಮ, ಅಹಂ, ಭಕ್ತಿ, ಬದ್ಧತೆ, ಮೌಲ್ಯಗಳು, ಧ್ಯಾನ, ಇವೆಲ್ಲದರ ಅರಿವು ನಮ್ಮಲ್ಲಿ ಉಂಟಾಗಿ ನಮಗೆ ಬೇಕೆನ್ನಿಸಿದ ದಿಕ್ಕಿನಲ್ಲಿ ಸಕಾರಾತ್ಮಕವಾಗಿ ಬದಲಿಸುವ ಶಕ್ತಿ ದೊರೆಯುತ್ತದೆ. ಇದನ್ನೆಲ್ಲ ಆಧ್ಯಾತ್ಮಿಕವಾಗಿ ಕಲಿಯಬೇಕು, ಬೆಳೆಯಬೇಕು. ಆದರೆ ನಾನು ಪೂರ್ಣವಾಗಿ ಈ ವಿಚಾರಗಳ ಬಗ್ಗೆಯೇ ಹೇಳುತ್ತಿಲ್ಲ. ಹೇಳುವಷ್ಟು ದೊಡ್ಡವನೂ ನಾನಲ್ಲ. ನಾನೊಬ್ಬ ಸಹೃದಯ ಮಾನವನಾಗಿ... ಅಂದ್ರೆ ಎಲ್ಲರಲ್ಲಿಯೂ ಜೀವಿಸುವಂತಹ, ಹೊಂದಿಕೊಳ್ಳುವಂತಹ, ಒಬ್ಬ ವಿನಯಶೀಲ ಮಾನವ, ಆನಂದವನ್ನು ಗಳಿಸುವುದರಲ್ಲಿಯೂ, ಪಡೆಯುವುದರಲ್ಲಿಯೂ, ಕೊಡುವುದರಲ್ಲಿಯೂ, ಹೇಗೆ ನಮ್ಮ ಈ ಕೌಶಲ್ಯವನ್ನು ವೃದ್ಧಿ ಪಡಿಸಿಕೊಳ್ಳಬೇಕು ಎಂಬ ಕಲೆಯನ್ನು ರವಷ್ಟಾದರೂ... ಅಂದ್ರೆ ರವೆಯ ಒಂದು ತುಣಕನ್ನಷ್ಟನ್ನಾದರೂ... ನಿಮಗೆ ಪರಿಚಯ ಮಾಡಲೆಂದೇ ಬರೆದಿರುವಂತ ಪುಸ್ತಕ ಇದು - ಬದುಕಿನಾನಂದ ಕಲೆ. ವಿಷಯ ಸೂಚಿ ಭಾಗ 1 - ನಾವೇಕೆ ಕೆಲಸ ಮಾಡಬೇಕು
ನಾವೇಕೆ ಕೆಲಸ ಮಾಡಬೇಕು...? (ಸುಮ್ನಿರಬಹುದಲ್ವೇ...?) ಆಗಲ್ಲ. ಅದಕ್ಕೆ ಇದನ್ನು ತಿಳಿಯಬೇಕು ಎನ್ನುವುದು. ಅಂದರೆ... ನಮ್ಮ ಮೂಲಭೂತವಾದ ಆರು ಭಯಗಳನ್ನು ಹೊಡೆದೋಡಿಸಲು ನಾವು ಕೆಲಸವನ್ನು ಮಾಡಬೇಕು. ಅದರ ಬಗ್ಗೆ ಚರ್ಚೆ. I. ಸಮಯ II. ಬಡತನ III. ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು IV. ಟೀಕೆ V. ವೃದ್ಧಾಪ್ಯ VI. ಮೃತ್ಯು / ಮರಣ ಭಾಗ 2 - ನಮ್ಮ ಶತ್ರುಗಳು ಆರು ಶತ್ರುಗಳನ್ನು ನಮ್ಮ ಜೀವನದಲ್ಲಿ ನಿಭಾಯಿಸುವುದು. ಗೊತ್ತಾಯ್ತಲ್ಲಾ... ಆ ಶತ್ರುಗಳು ಯಾರೂಂತಾ. ಅದೇ ಅರಿಷಡ್ವರ್ಗಗಳು. I. ಕಾಮ II. ಕ್ರೋಧ III. ಮೋಹ IV. ಮದ V. ಮಾತ್ಸರ್ಯ VI. ಲೋಭ ಭಾಗ 3- ಸಕಾರಾತ್ಮಕ ಬೆಳವಣಿಗೆ ನಾವು ನಮ್ಮ ಜೀವನದ ಯಾವುದೇ ಚಟುವಟಿಕೆಯಲ್ಲೂ ಹೇಗೆ ಸಕಾರಾತ್ಮಕವಾಗಿ ಪ್ರತಿ ಪಾದಿಸಬೇಕು ಎಂಬುದರ ಗುಟ್ಟೇ ಈ ಭಾಗದ ಆರು ಅಂಶಗಳು. I. ಸೋಲನ್ನು ಒಪ್ಪಿಕೊಳ್ಳಬೇಡಿ (ಕೇಳಿದ್ದು) II. ಭವಿಷ್ಯದೆಡೆಗೆ ನೋಟ ಹರಿಸಿ (ನೋಡಿದ್ದು) III. ನಿರಾಶರಾಗಬೇಡಿ IV. ಎಷ್ಟು ಸಾಧ್ಯವೋ ಅಷ್ಟು ಮಾಡಿ V. ಇಷ್ಟಪಟ್ಟು ಕೆಲಸ ಮಾಡಿ VI. ಹೊಂದಾಣಿಕೆಯ ಸಾಮರ್ಥ್ಯ ಭಾಗ 4 - ಆರು ಅದ್ಭುತಗಳು ನಾಲ್ಕನೆ ಭಾಗವಾಗಿ ಆ ದೇವರು ಕೊಟ್ಟಂತ... ಅಂದರೆ ನಮಗೆ ಕೊಟ್ಟಂತಹ, ನಮ್ಮಲ್ಲಿಯೇ ಇರುವಂತಹ, ಅರು ಅತ್ಯದ್ಭುತಗಳನ್ನು ಸರಿಯಾದ ಸಮಯದಲ್ಲಿ ಚೊಕ್ಕವಾಗಿ ಸಹನೆಯಿಂದ ಉಪಯೋಗಿಸುವುದು. I. ಹೃದಯ II. ಮನಸ್ಸು III. ಕರಗಳು (ಕೈಗಳು) VI. ಪಾದ V. ಕಣ್ಣು VI. ವದನ (ಮುಖ) ಭಾಗ 5 - ಉತ್ತಮ ಜೀವನಕ್ಕೆ ಎಂಟು ಶ್ರೇಷ್ಠ ಪಥಗಳು ನಮ್ಮ ಉತ್ತಮ ಜೀವನಕ್ಕೆ ಹೇಗೆ ಎಂಟು ಶ್ರೇಷ್ಠ ಪಥಗಳನ್ನು ಅಳವಡಿಸಿಕೊಳ್ಳುವುದು...? I. ಸರಿಯಾದ ಕ್ರಿಯೆ II. ಸರಿ ಎನಿಸಿದ ನಂಬಿಕೆ III. ಸರಿಯಾದ ಆಸೆ, ಆಕಾಂಕ್ಷೆ IV. ಸರಿಯಾದ ಮಾತು V. ಸರಿಯಾದ ಜೀವನ VI. ಸರಿಯಾದ ಶ್ರಮ VII. ಸರಿಯಾದ ಆಲೋಚನೆ VIII. ಸರಿಯಾದ ಏಕಾಗ್ರತೆ
0 Comments
Your comment will be posted after it is approved.
Leave a Reply. |
Categories
All
Social Work Learning AcademyInviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
30,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|