|
ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ.
ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು. ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್!ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ. ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು. ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್! https://www.prajavani.net/columns/nataraj-huliyar-column-new-book-for-the-new-year-897910.html?fbclid=IwAR1RxdFkBzf2nfvk3p8bwlpnWlLkZNNZZuSGI9ZbL5-uTjFYAxNnUcfbX9A
0 Comments
Your comment will be posted after it is approved.
Leave a Reply. |
Categories
All
HR BooksSocial Work BooksMHR LEARNING ACADEMYGet it on Google Play store
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed