ಆತ್ಮೀಯರೆ…ಓಡುತ್ತಿರುವ ಈ ಕಾಲದಲ್ಲಿ ಕಾಡುತ್ತಿರುವ ಸಮಸ್ಯೆಗಳ ಸಂಖ್ಯೆಯೇ ಹೆಚ್ಚು. ಜವಾಬ್ದಾರಿಗಳ ಮೂಟೆ ಹೊತ್ತು ಕಂಡ ಕನಸ್ಸುಗಳನ್ನು ನನಸಾಗಿಸಲು ಮನುಷ್ಯ ಸೆಣಸುತ್ತಾನೆ. ಜೀವನದಲ್ಲಿ ಉದ್ಭವಿಸಿದ ಭಾಧೆಗಳನ್ನು ಬದಿಗೊತ್ತಿ ಜೀವನ ನಿರ್ವಹಣೆಯ ಉದ್ದೇಶದಿಂದ ಕೈಗೆ ಸಿಕ್ಕ ಉದ್ಯೋಗವನ್ನು ಮಾಡುತ್ತಾ ಜೀವನ ಸಾಗಿಸುವಂತಹ ಜನಸಾಮಾನ್ಯರ ಜೀವನದಲ್ಲಿ ಎಂದೂ ಕಾಣದ ಕೇಳದ ಕೊರೋನಾ ವೈರಸ್ ಎಂಬ ಮಹಾಮಾರಿ ದುತ್ ಎಂದು ಉದ್ಬವಿಸಿ ಕಂಡ ಕನಸುಗಳನ್ನ ದಿಕ್ಕಾಪಾಲಾಗಿಸಿ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿರುವುದು ಎಲ್ಲರೂ ತಿಳಿದಿರುವ ಸತ್ಯಸಂಗತಿ ಅದು ಅವರವರ ಅನುಭವಕ್ಕೆ ಬಂದಿರುತ್ತದೆ. ಅರೆ..ಇದೆನಪ್ಪಾ..ಎಲ್ಲ್ಲಾ ಟಿವಿ ಮಾಧ್ಯಮಗಳಲ್ಲೂ, ದಿನ ಪತ್ರಿಕೆಗಳಲ್ಲೂ, ಸಾಮಾಜಿಕ ಜಾಲತಾಣಗಳಲ್ಲೂ ಸತತ ನಾಲ್ಕು ತಿಂಗಳಿನಿಂದಲೂ ದಿನಂಪ್ರತಿ ಕೊರೋನಾ ಸುದ್ದಿಗಳನ್ನು ಕೇಳಿ ಕೇಳಿ ಸಾಕಾಗಿದೆ ಅಂತಹದರಲ್ಲಿ ಇವರೂ ಅದನ್ನೆ ಹೇಳುತ್ತಿದ್ದಾರೆ ಅನ್ಕೋಬೇಡಿ. ಪ್ರಪಂಚದ್ಯಾಂತ ಆತಂಕವನ್ನು ಸೃಷ್ಟಿಸಿರುವ ಕೊರೊನಾದಿಂದ ಜನಸಾಮಾನ್ಯರ ಜೀವನ ನಿರ್ವಹಣೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮವನ್ನು ಬೀರಿದ್ದು ಜೊತೆಗೆ ಅದಕ್ಕಿಂತಲೂ ಬಲವಾದ ಸಮಸ್ಯೆಯೊಂದಿಷ್ಟನ್ನು ಉದ್ಭವಿಸಲು ಕಾರಣಿಭೂತವಾಗಿದೆ. ದೀರ್ಘ ಲಾಕ್‍ಡೌನ್‍ನಿಂದಾಗಿ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸವನ್ನು ಕಳೆದುಕೊಂಡಿದ್ದಾರೆ. ಉದ್ಯೋಗವನ್ನರಸಿ ನಗರಗಳತ್ತ ತಿರುಗಿದ್ದ ಜನರೆಲ್ಲಾ ಹಳ್ಳಿಗಳತ್ತ ತಿರುಗಿರುವುದರಿಂದ ಜೀವನ ನಿರ್ವಹಣೆಗೆ ತೊಡಕ್ಕುಂಟಾಗಿದೆ. ಇನ್ನು ದಿನಗೂಲಿ ಕಾರ್ಮಿಕರ ಪರಿಸ್ಥಿತಿಯೂ ಹಂಗೆ ಸಮಾಜದ ಎಲ್ಲಾ ವರ್ಗದ ಜನರೂ ಸಮಸ್ಯೆಗೆ ಒಳಗಾಗಿರುವುದು ನೈಜ ಸಂಗತಿ. ಇತ್ತ ಕೊರೋನಾ ಸಮಸ್ಯೆಯಿಂದ ಭಯಬೀತರಾಗಿ ಮನೆಯಲ್ಲೆ ಕುಳಿತು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿರುವ ಸಂಗತಿಗಳು ದಿನೇ ದಿನೇ ಬೆಳಕಿಗೆ ಬರುತ್ತಿವೆ. ಸರ್ಕಾರದ ನಿಯಮಗಳ ಪಾಲನೆಗಾಗಿ, ಜವಾಬ್ದಾರಿಯುತ ಕುಟುಂಬದ ಸದಸ್ಯನಾಗಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಭಯಭೀತರಾಗಿ ದಿನದ ಇಪ್ಪತ್ತನಾಲ್ಕು ತಾಸು ಮನೆಯಲ್ಲೆ ಕಳೆಯಬೇಕಾದ ಪರಿಸ್ಥಿತಿಯ ಉಲ್ಬಣದಿಂದ ವ್ಯಕ್ತಿಗಳು ಜೀವನದ ಒತ್ತಡದಿಂದ, ಖಿನ್ನತೆಯಿಂದ, ಆತಂಕದಿಂದ ನಿದ್ರಾಹೀನತೆಯಿಂದ ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುತ್ತಿರುವುದು ಶೋಚನೀಯವಾದದ್ದು. ಇನ್ನೂ ಸೋಂಕಿತ ಶಂಕಿತರ ಕಥೆಯಂತೂ ಹೇಳತೀರದು. ಜನರ ತಿರಸ್ಕೃತ ಭಾವನೆಯಿಂದ ಅದೆಷ್ಟೋ ಸೋಂಕಿತ ಜನರು ಸೋಂಕಿನಿಂದ ಚೇತರಿಸಿಕೊಂಡರೂ ಒತ್ತಡ, ಖಿನ್ನತೆಯಿಂದ ಭಯಭೀತರಾಗಿ ಮಾನಸಿಕ ಅನಾರೋಗ್ಯದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯು ನಮ್ಮ ಕಣ್ಣು ಮುಂದೆ ಇವೆ. ವ್ಯಕ್ತಿಯ ದೇಹಕ್ಕೆ ಬರುವ ಅನಾರೋಗ್ಯದಂತೆ ಮಾನವನ ಮಿದುಳು ಕೂಡಾ ನಾನಾ ಬಗೆಯ ಮಾನಸಿಕ ಅನಾರೋಗ್ಯದಿಂದ ಬಳಲುತ್ತದೆ. ಯಾವಾಗ ವ್ಯಕ್ತಿ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾನೋ ಅವನ ವರ್ತನೆಯಲ್ಲಿ, ಆಲೋಚನೆಯಲ್ಲಿ ವ್ಯತ್ಯಾಸಗಳು ಕಂಡುಬರಲು ಪ್ರಾರಂಭಿಸುತ್ತವೆ. ಕ್ರಮೇಣ ಒತ್ತಡ, ಖಿನ್ನತೆ, ಒಂಟಿತನದಂತಹ ಸಮಸ್ಯೆಗಳು ಹೆಚ್ಚಾಗಿ ಅವನ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಒಂದಿಲ್ಲೊಂದು ಸಮಸ್ಯೆಯನ್ನು ಉಂಟುಮಾಡುತ್ತದೆ. ನಿಸ್ಸಾಯಕ, ನಿರಾಸಕ್ತಿ, ಚಿಂತೆ, ಕಿರಿಕಿರಿ, ಆಲಸ್ಯಗಳು ಉದ್ಭವಿಸಿ ಮನಸ್ಸು ಅಸಂತೋಷದ ತಾಣವಾಗಿ ಕೊನೆಗೆ ಆತ್ಮಹತ್ಯೆಯಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಅಯ್ಯೋ ಮಹಾಮಾರಿ ಕರೋನಾದಿಂದ ನಮ್ಮ ಪ್ಲಾನ್ ಎಲ್ಲಾ ಮೂರಾಬಟ್ಟೆಯಾಗಿ ಬಿಟ್ಟಿದೆ ಸರಿಯಾಗಿ ಕೆಲಸಾ ಸಿಗುತ್ತಾ ಇಲ್ಲ, ಕೈಯಾಗ ದುಡ್ಡುನೂ ಇಲ್ಲ ಎಂಬೆಲ್ಲಾ ಸಮಸ್ಯೆಗಳು ಸಹಜ. ಇವೆಲ್ಲ ಗಂಭೀರ ಸ್ವರೂಪದ ಸಮಸ್ಯೆಯಲ್ಲ ಎನ್ನುವುದನ್ನು ಅರಿತು ಭವಿಷ್ಯವನ್ನು ರೂಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೆ? ಅದನ್ನು ಬಿಟ್ಟು ಮಾನಸಿಕ ಸಮಸ್ಯೆಗೆ ಎಡೆ ಮಾಡಿಕೊಳ್ಳುವುದು ಎಷ್ಟು ಸರಿ, ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಎಲ್ಲಾ ವಯೋಮಾನದವರೂ ಸಹ ಇಂತಹ ಪರಿಸ್ಥಿತಿಗೆ ಸಿಲುಕಿ ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿದು ಬರುತ್ತದೆ. ನಿಜ ನಮಗಲ್ಲವಾದರೂ ನಮ್ಮ ಆತ್ಮೀಯರಿಗೆ, ಕುಟುಂಬದವರಿಗೆ, ನೆರೆಹೊರೆಯವರಿಗಾದರೂ ಈ ರೀತಿಯ ಸಮಸ್ಯೆಗಳಿರುವ ಸಾಧ್ಯತೆಗಳಿವೆ. ಆಂತರಿಕ ಸಮಸ್ಯೆಯಾದ್ದರಿಂದ ಬಾಹ್ಯವಾಗಿ ಗುರುತಿಸುವುದು ತುಸು ಕಷ್ಟದ ಕೆಲಸವೇ, ಆಗಂತಾ ನಿರ್ಲಕ್ಷ್ಯ ವಹಿಸಿದರೆ ಮತ್ತೊಂದು ಸಮಸ್ಯೆಗೆ ಎಡೆ ಮಾಡಿಕೊಟ್ಟಂತೆ. ಹೌದಲ್ವ..ಇಂತಹ ಸಮಸ್ಯೆಗಳು ಇದ್ರೆ ಏನ್ ಮಾಡಬೇಕು ಅಂತಾ ಪ್ರಶ್ನೆ ಉದ್ಭವಿಸುವುದು ಸಹಜ. ನಾವೆಲ್ಲರೂ ಭಾವನಾತ್ಮಕ ಜೀವಿಗಳಾಗಿರುವುದರಿಂದ ಇನ್ನೊಬ್ಬರ ನೋವುಗಳಿಗೆ ಭಾದೆಗಳಿಗೆ ಸಮಸ್ಯೆಗಳಿಗೆ ಬೆಲೆ ಕೊಡದೆ ಕಡೆಗಣಿಸುವುದು ಎಷ್ಟು ಸೂಕ್ತ ಎನ್ನುವುದನ್ನು ಅರಿತು ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಏನಾದರೂ ಕಂಡು ಬಂದರೆ ಅದರಿಂದ ಅವರನ್ನು ಮುಕ್ತವಾಗಿಸುವಲ್ಲಿ ನಿಮ್ಮ ಸಲಹೆ ಸಹಕಾರದ ಅಗತ್ಯತೆಯಿದೆ. ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದು ನಮ್ಮ ಕೈಯಲ್ಲೆಯಿದೆ. ಸಮಸ್ಯೆಗಳು ಸ್ವಾಭಾವಿಕ ಅದಕ್ಕೆ ಪರಿಹಾರವನ್ನು ಹುಡುಕಿ ನಿಭಾಹಿಸಿ ಎಲ್ಲರೊಂದಿಗೆ ಅನ್ಯೋನ್ಯವಾಗಿರುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಒಂದು ವೇಳೆ ನಿಮ್ಮ ಆತ್ಮೀಯರಲ್ಲಿ ಏನಾದರೂ ಸಮಸ್ಯೆ ಗೋಚರಿಸಿದರೆ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಆತ್ಮಸಮಾಲೋಚನೆಯನ್ನು ಪಡೆದುಕೊಳ್ಳಲು ಬೆಂಬಲಿಸಿ. ಸಾಧ್ಯವಾದರೆ ನೀವೇ ಅವರೊಂದಿಗೆ ಮುಕ್ತವಾಗಿ ಚರ್ಚಿಸಿ, ಸಲಹೆ ನೀಡಿ, ಧೈರ್ಯ ತುಂಬಿ, ಭವಿಷ್ಯವನ್ನು ಕಟ್ಟಿಕೊಳ್ಳುವ ದಾರಿಗಳನ್ನು ಸೂಚಿಸಿ ಅದು ಸಾಧ್ಯವಾಗದಿದ್ದರೆ ನಿಮಗೆ ತಿಳಿದಿರುವ ಮನೋವೈದ್ಯರ ಬಳಿಗೂ ಇಲ್ಲವೇ ಆಪ್ತಸಮಾಲೋಚಕರ ಭೇಟಿ ಮಾಡಲು ಸಹಕಾರ ನೀಡಿ ನಿಮ್ಮ ನಿರಂತರ ಕಾಳಜಿ ಮತ್ತು ಸಲಹೆಯಿಂದ ಅವರು ಸಮಸ್ಯೆಯಿಂದ ಮುಕ್ತರಾಗಲು ಸಹಾಯವಾಗುತ್ತದೆ. ಕೆಲವೊಂದು ಸಲ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರು ಯಾರೊಂದಿಗೂ ಹಂಚಿಕೊಳ್ಳದೆ ಮುಚ್ಚಿಡುವುದೇ ಹೆಚ್ಚು. ಬೇರೆಯವರಿಗೆ ತಿಳಿದರೆ ಜನರು ಎಲ್ಲಿ ನಕ್ಕು ಬಿಡುತ್ತಾರೋ ಎಂಬ ಭಯ ಸಂಕೋಚ ಅವರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸುತ್ತದೆ. ಅಂತಹ ವರ್ತನೆಗಳೇನಾದರೂ ಕಂಡು ಬಂದರೆ ಆರೋಗ್ಯ ಸಹಾಯವಾಣಿ 104 ಕುರಿತು ಮಾಹಿತಿ ನೀಡಿ. ಈ ಉಚಿತ ಸಹಾಯವಾಣಿಗೆ ಕರೆ ಮಾಡುವುದರಿಂದ ಪರಿಣಿತರಿಂದ ಸೂಕ್ತ ಆಪ್ತಸಮಾಲೋಚನೆಯನ್ನು ಸಲಹೆಯನ್ನು ಪಡೆದುಕೊಂಡು ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು. ಮಾನಸಿಕ ಅನಾರೋಗ್ಯಕ್ಕೆ ಸೂಕ್ತವಾದ ಚಿಕಿತ್ಸೆಗಳು ಲಭ್ಯವಿದ್ದು ಪ್ರಾಥಮಿಕ ಹಂತದಲ್ಲೇ ಅದನ್ನು ಪತ್ತೆಹಚ್ಚಿ ಗುಣಮುಖ ಪಡಿಸಬಹುದಾಗಿದೆ. ಮಾನಸಿಕ ಅನಾರೋಗ್ಯ ಸಮಸ್ಯೆ ವಿನಃ ಸವಾಲಲ್ಲ ಆದ್ದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಉಂಟು. ಸಮಸ್ಯೆ ಬಾರದಿರುವ ಹಾಗೆ ಮುನ್ನೆಚ್ಚರಿಕೆ ವಹಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಬೇಕು. ಹುಸೇನಸಾಬ ವಣಗೇರಿ ಸಂಶೋಧನಾ ವಿದ್ಯಾರ್ಥಿ, ಸಮಾಜಕಾರ್ಯಅಧ್ಯಯನ ವಿಭಾಗ, ಕ.ವಿ.ವಿ. ಧಾರವಾಡ. ದೂ: 7829606194 ಇಮೇಲ್: [email protected] ಸಮಾಜಕಾರ್ಯಕ್ಕೆ ಸಂಬಂಧಿಸಿದ ಲೇಖನಗಳಿದ್ದಲ್ಲಿ ನಮಗೆ ಕಳುಹಿಸಿಕೊಡಬಹುದು. ನಿಮ್ಮ ಲೇಖನಗಳನ್ನು ಪರಾಮರ್ಶಿಸಿ ನಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.
ಲೇಖನಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬಹುದು. [email protected]
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|