ಲೇಖಕರು : ಡಾ. ಎಸ್.ಬಿ. ಮುನಿರಾಜು ಪುಟ : 310
ಪರಿವಿಡಿ ಮುನ್ನುಡಿ ನುಡಿನಮನ ಪರಿವಿಡಿ ಪರಿಶಿಷ್ಟಗಳು 1. ಸಮಾಜ ಕಾರ್ಯ ಮತ್ತು ಸಮಾಜ ಕಾರ್ಯದ ವಿಧಾನಗಳು 2. ಸಾಮಾಜಿಕ ಸಂಶೋಧನೆಯ ವಿನ್ಯಾಸ, ವಿಧಾನ, ಉದ್ದೇಶಗಳು ಮತ್ತು ಮಹತ್ವ 3. ಆದಿಮ ಬುಡಕಟ್ಟು ಅಭಿವೃದ್ಧಿಯ ಹಿನ್ನೆಲೆ ಮತ್ತು ವಸ್ತುಸ್ಥಿತಿ 4. ಜೇನುಕುರುಬರು 5. ಕೊರಗರು 6. ಆದಿಮ ಬುಡಕಟ್ಟು ಅಭಿವೃದ್ಧಿಯ ವಿಮರ್ಶೆ 7. ಸಮಾಜಕಾರ್ಯ ನೆಲೆಯಲ್ಲಿ ಆದಿಮ ಬುಡಕಟ್ಟು ಅಭಿವೃದ್ಧಿ ಅನುಬಂಧಗಳು 1. ಅಂಕಿಅಂಶಗಳು 2. ಪರಾಮರ್ಶನ ಗ್ರಂಥಗಳು 3. ಛಾಯಾಚಿತ್ರಗಳು ವೃತ್ತಿಪರ ಸಮಾಜಕಾರ್ಯವು ಮಾನವನ ಸಾಮಾಜಿಕ ಆರೋಗ್ಯದ ರಕ್ಷಣೆಗೆ ಮತ್ತು ಬೆಳವಣಿಗೆಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದೆ. ಮಾನವನು ಒಂದು ಸಂಘ ಜೀವಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದಂತೆ ತನ್ನ ಬದುಕನ್ನು ಹಸನುಗೊಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾದನು. ಯೋಜಿತ ಮತ್ತು ವ್ಯವಸ್ಥಿತವಾದ ಜೀವನವನ್ನು ಮತ್ತು ಆರೋಗ್ಯಕರ ಸಮಾಜವನ್ನು ಸೃಷ್ಟಿಸಿಕೊಳ್ಳಲು ನಡೆಸಿದ ಹಲವು ಪ್ರಯತ್ನಗಳು ಸಾಮಾಜಿಕ ಆರೋಗ್ಯದ ಸುಧಾರಣೆಗೆ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾದವು.
ಭಾರತದಲ್ಲಿ ಸಮಾಜಕಾರ್ಯವು ವೃತ್ತಿಪರ ಕಾರ್ಯವಾಗಿ ರೂಪುಗೊಳ್ಳಲು ಹಲವು ಶತಮಾನಗಳೆ ಬೇಕಾಯಿತು. ಆರಂಭದ ನಂತರವು ವೃತ್ತಿಪರ ಸಮಾಜ ಕಾರ್ಯದ ಬೆಳವಣಿಗೆ ತೀಕ್ಷ್ಣವಾಗಿರುವುದಿಲ್ಲ. ಕಾರಣ ಭಾರತದಲ್ಲಿ ಸಮಾಜ ಕಾರ್ಯವನ್ನು ಒಂದು ವೃತ್ತಿಪರ ಕಾರ್ಯವೆಂದು ಇಂದಿಗೂ ಪರಿಗಣಿಸದಿರುವುದೇ ಮುಖ್ಯವಾಗಿದೆ. ಸಮಾಜಕಾರ್ಯದ ನೆಲೆಯಲ್ಲಿ ಸಮುದಾಯ ಅಭಿವೃದ್ಧಿ ಎಂಬ ಈ ಕೃತಿಯು ಮಾನವನ ಸಾಮಾಜಿಕ ಜೀವನದ ಪ್ರಗತಿಯಲ್ಲಿ ಒಂದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರು ಸಮಾಜಕಾರ್ಯ ಮತ್ತು ಸಮುದಾಯದ ಅಭಿವೃದ್ಧಿ ಯನ್ನು ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಬಾಂಧವ್ಯ ಮತ್ತು ಸರ್ವತೋಮುಖ ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ. ಸಮಾಜಕಾರ್ಯದ ಮುಖ್ಯ ಉದ್ದೇಶ ಮಾನವನ ಸಾಮಾಜಿಕ ಜೀವನವನ್ನು ಸಮೃದ್ಧಗೊಳಿಸುವುದು ಮತ್ತು ಸಂತೋಷಕರ ಹಾಗೂ ಆರೋಗ್ಯಕರ ಸಮಾಜವನ್ನು ರೂಪಿಸುವುದಾಗಿದೆ. ಸಮಾಜಕಾರ್ಯವು ವ್ಯಕ್ತಿ ಸಮೂಹ ಸಮುದಾಯವನ್ನು ಸ್ವಪ್ರಯತ್ನದ ಮೂಲಕ ಸಾಮಾಜಿಕ ಸಮಸ್ಯೆಗಳಿಂದ ಮುಕ್ತಿಗೊಳಿಸುವ ಪ್ರಾಯೋಗಿಕ ಸಮಾಜ ವಿಜ್ಞಾನವಾಗಿದೆ. ಸಮಾಜಕಾರ್ಯ ಮತ್ತು ಸಮುದಾಯ ಅಭಿವೃದ್ಧಿ ಎಂಬ ನನ್ನ ಕೃತಿಯಲ್ಲಿ ಸಮಾಜಕಾರ್ಯದ ಉಗಮ, ವಿಧಾನಗಳು, ಸಮಾಜಕಾರ್ಯದ ಪ್ರಯೋಗ, ಸಮಾಜಕಾರ್ಯ ಮತ್ತು ಇತರ ಸಾಮಾಜಿಕ ವಿಜ್ಞಾನಗಳ ನಡುವಿನ ಸಂಬಂಧಗಳು ಮತ್ತು ಭಾರತದಲ್ಲಿ ಸಮಾಜಕಾರ್ಯದ ಪ್ರಯೋಗ, ಸಮಾಜಕಾರ್ಯದ ಪ್ರಾಯೋಗಿಕ ವಿಧಾನಗಳ ಮುಖಾಂತರ ಸಮುದಾಯ ಅಭಿವೃದ್ಧಿಯನ್ನು ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಈ ಕೃತಿಯು ಪದವಿ, ಸ್ನಾತಕೋತ್ತರ ಪದವಿ ಮತ್ತು ಸಮಾಜಕಾರ್ಯ ಸಂಶೋಧನೆಯಲ್ಲಿ ತೊಡಗಿರುವ ಹಲವು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಸಮಾಜ ಕಾರ್ಯ ಮತ್ತು ಸೇವೆಯಲ್ಲಿ ತೊಡಗಿರುವ ಹಲವು ಕಾರ್ಯಕರ್ತರಿಗೆ ಉಪಯುಕ್ತ ವಾದ ಗ್ರಂಥವಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟ ಕುಲಪತಿ ಹಾಗೂ ಕುಲಸಚಿವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಸಂಶೋಧನೆಯ ವಿಧಿ-ವಿಧಾನಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಪ್ರೋತ್ಸಾಹಿಸಿದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಅಧ್ಯಾಪಕರಿಗೆ, ಅಧ್ಯಯನಾಂಗದ ನಿರ್ದೇಶಕರಿಗೆ, ಪ್ರೊ. ವಾಸಂತಿ ವಿಜಯ, ಪ್ರೊ. ಮರಳುಸಿದ್ದಯ್ಯ, ಪ್ರೊ. ಸಿದ್ಧೇಗೌಡ ಮೈಸೂರು, ಅವರುಗಳಿಗೆಲ್ಲ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಕನ್ನಡ ಭಾಷೆಯಲ್ಲಿ ಸಮಾಜಕಾರ್ಯ ಪುಸ್ತಕವನ್ನು ಹೊರತರುವ ನನ್ನ ಈ ಪ್ರಥಮ ಪ್ರಯತ್ನ ಸಾಕಾರಗೊಳಿಸುವಲ್ಲಿ ಸಹಕರಿಸಿದ ಮಾರ್ಗದರ್ಶಕರಾದ ಪ್ರೊ ಕೆ.ಎಂ. ಮೇತ್ರಿ ಮತ್ತು ಅವರ ಧರ್ಮಪತ್ನಿ ಡಾ. ದಾಕ್ಷಾಯಿಣಿ ಮೇತ್ರಿ ಹಾಗೂ ಅವರ ಮಗಳಾದ ಸಹನಾ ಅವರಿಗೆ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ನನ್ನ ವಿದ್ಯಾಭ್ಯಾಸ ಮತ್ತು ಸಂಶೋಧನೆಗೆ ಪ್ರೋತ್ಸಾಹ ಕೊಟ್ಟು ಹಾರೈಸಿದ ಅಪ್ಪ-ಅಮ್ಮ ಮತ್ತು ಕುಟುಂಬದ ಸದಸ್ಯರಿಗೆ, ಪ್ರಬಂಧದ ಹಸ್ತಪ್ರತಿಯನ್ನು ತಿದ್ದಲು ಸಹಕರಿಸಿದ ಪತ್ನಿ ರಶ್ಮಿ, ಮಗನಾದ ಅಥರ್ವ ಹಾಗೂ ಆತ್ಮೀಯ ಗುರುಗಳಾದ ಮುನಿಯಪ್ಪ ಅವರಿಗೆ, ಸ್ನೇಹಿತರಾದ ಮುರುಳಿ, ರಮೇಶ್, ಉಮಾಶಂಕರ, ಶಿವರಾಜು ಅವರುಗಳಿಗೆಲ್ಲ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಈ ಕೃತಿಗೆ ಮುನ್ನುಡಿ ಮತ್ತು ಬೆನ್ನುಡಿ ಬರೆದು ಶುಭ ಹಾರೈಸಿದ ಡಾ. ಕೆ.ಎಂ. ಮೇತ್ರಿಯವರಿಗೆ ಹಾಗೂ ಸುಂದರವಾಗಿ ಅಕ್ಷರ ಸಂಯೋಜಿಸಿ ಪುಟವಿನ್ಯಾಸ ಗೊಳಿಸಿದ ನಿರುತ ಪಬ್ಲಿಕೇಷನ್ಸ್ ಅವರಿಗೆ ಮತ್ತು ಮುಖಪುಟ ವಿನ್ಯಾಸ ಮಾಡಿಕೊಟ್ಟ ಟಿ.ಎಫ್. ಹಾದಿಮನಿ ಅವರಿಗೆ, ಅಂದವಾಗಿ ಮುದ್ರಿಸಿದ ನಿರುತ ಮುದ್ರಣಾಲಯ ಸಿಬ್ಬಂದಿವರ್ಗಕ್ಕೆ ಹಾಗೂ ಪಿಎಚ್.ಡಿ. ಸಂಶೋಧನಾ ಕ್ಷೇತ್ರ ಕಾರ್ಯದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ಸಹಾಯ ಸಹಕಾರ ನೀಡಿದ ಸಮಸ್ತ ವಕ್ತೃಗಳನ್ನೂ ಅತ್ಯಂತ ಅಭಿಮಾನದಿಂದ ಸ್ಮರಿಸುತ್ತೇನೆ. ಡಾ. ಮುನಿರಾಜು ಎಸ್.ಬಿ
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|