Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಸಾಮಾಜಿಕ ಕ್ರಿಯಾಚರಣೆ

1/25/2022

5 Comments

 
Picture
ಲೇಖಕರು: ಡಾ. ಸಿ.ಆರ್. ಗೋಪಾಲ್
ಪುಟಗಳು: 440

ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
​
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು.


Read More
5 Comments

ಮನೋ-ವೈದ್ಯಕೀಯ ಸಮಾಜಕಾರ್ಯ

1/25/2022

4 Comments

 
Picture
ಲೇಖಕರು: ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ.
ಪುಟಗಳು: 200

20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.

ಇಂದು ಸಮಾಜಕಾರ್ಯ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಈ ಹಿಂದೆ ಸಮಾಜಕಾರ್ಯ ವೃತ್ತಿಪರರ ಸೇವೆಗಳು ಸಮುದಾಯ ಆಧಾರಿತ ಕಾರ್ಯಕ್ರಮಗಳು ತರಬೇತಿ, ಅನುಷ್ಠಾನ, ಆಪ್ತ ಸಮಾಲೋಚನೆ, ಸಮಾಜಕಾರ್ಯದ ವಿವಿಧ ವಿಧಾನಗಳು/ತಂತ್ರಗಳ ಬಳಕೆ ಹಾಗೂ ಸಂಶೋಧನೆಗಳಿಗೆ ಸೀಮಿತವಾಗಿದ್ದವು. ಪ್ರಸ್ತುತ ಇವರ ಸೇವೆಗಳು ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಮನೋ-ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಬಹುತಜ್ಞರ ಚಿಕಿತ್ಸಾ ತಂಡದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವಾದುದಾಗಿದೆ. ಬಹುಮುಖ್ಯವಾಗಿ ಮಾನಸಿಕ ಆರೋಗ್ಯ ಉತ್ತೇಜಕ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಚಿಕಿತ್ಸಕ ಮಧ್ಯಸ್ಥಿಕೆಗಳು, ಪುನರ್ವಸತಿ ಸೇವೆಗಳು ಮತ್ತು ಮಾನಸಿಕ ರೋಗಿಗಳನ್ನು ಕುಟುಂಬಕ್ಕೆ ಮರುಜೋಡಿಸುವಲ್ಲಿ ಹಾಗೂ ಸಮುದಾಯದ ಮುಖ್ಯವಾಹಿನಿಗೆ ತರುವಲ್ಲಿ ವೃತ್ತಿಪರ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಕೊಡುಗೆ ಗಣನೀಯವಾದುದು.

Read More
4 Comments

ಶಿಕ್ಷಣ ರಥ ನೀತಿ ಪಥ

1/25/2022

2 Comments

 
Picture
ಲೇಖಕರು: ಎಚ್.ಎನ್. ಯಾದವಾಡ
ಪುಟಗಳು: 144

ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು.

Read More
2 Comments

ವೃಂದಗತ ಸಮಾಜಕಾರ್ಯ

8/3/2020

5 Comments

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟಗಳು : 336
ಪರಿವಿಡಿ
Amazon
Flipkart
Buy
ಮುನ್ನುಡಿ
ಪ್ರಕಾಶಕರ
ಪ್ರಸ್ತಾವನೆ-ಕೃತಜ್ಞತೆ
ಲೇಖಕರ ಪರಿಚಯ
 
ಅಧ್ಯಾಯ - ಒಂದು
ಪೀಠಿಕೆ:- ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳು.
 
ಅಧ್ಯಾಯ - ಎರಡು
ವೃಂದಗಳ ಅರ್ಥಗ್ರಹಿಕೆ:- ವ್ಯಾಖ್ಯೆಗಳು, ಜಮಾವಣೆ, ಸಮಷ್ಟಿತನ ಮತ್ತು ವೃಂದಗಳ ವ್ಯತ್ಯಾಸ, ವೃಂದದ ಅಂಶಗಳು, ವೃಂದದ ಪ್ರಕಾರಗಳು,
 
ಅಧ್ಯಾಯ - ಮೂರು
ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು:- ವ್ಯಾಖ್ಯೆಗಳು, ವಿಸ್ತೃತ ವ್ಯಾಖ್ಯೆ, ಸ್ವಯಂಪ್ರೇರಣೆ ಅಥವಾ ಕಾರ್ಯಕರ್ತನ ಪ್ರೇರಣೆ, ವೃಂದದ ಸದಸ್ಯರ ಸಂಖ್ಯೆ, ಕಾರ್ಯಕರ್ತನ ಮಾರ್ಗದರ್ಶನ, ಅಂತರಕ್ರಿಯೆ-ಪಾರಸ್ಪರಿಕ ಕ್ರಿಯೆ, ಸಂಪರ್ಕ, ಹೊಂದಾಣಿಕೆ, ಗುಂಪಿನ ವಾತಾವರಣ, ಚಟುವಟಿಕೆಗಳು, ಅನುಭವ, ನಿಶ್ಚಿತ ಯೋಜನೆಗಳು, ಕಾರ್ಯಕ್ರಮಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೃಂದಗತ ಸಮಾಜಕಾರ್ಯದ ಗ್ರಹಿಕೆಗಳು, ವೃಂದಗತ ಸಮಾಜಕಾರ್ಯದ ಲಕ್ಷಣಗಳು, ವೃಂದಗತ ಸಮಾಜಕಾರ್ಯದ ಧ್ಯೇಯೋದ್ದೇಶಗಳು, ಉದ್ದೇಶಗಳ ಪ್ರಕಾರಗಳು, ಸೇವಾಸಂಸ್ಥೆಯ ಉದ್ದೇಶಗಳು, ಗುಂಪಿನ ಸಹವಾಸದಿಂದ ಆಗುವ ಅನುಕೂಲಗಳು. 

Read More
5 Comments

ಸಮಾಜಕಾರ್ಯದ ಶಬ್ದಕೋಶ

6/11/2020

1 Comment

 
Picture
ಸಂಪಾದಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ
ಪುಟ : 104
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books
ಬಹಳ ವರ್ಷಗಳ ಹಿಂದೆ ಆಂಗ್ಲ ಭಾಷೆಯಲ್ಲಿದ್ದ ಸಮಾಜ ವಿಜ್ಞಾನ, ಸಮಾಜಕಾರ್ಯ ಸಾಹಿತ್ಯವನ್ನು ಓದುತ್ತಿದ್ದಾಗ ಕೆಲವು ಶಬ್ದಗಳ ಸರಿಯಾದ ಅರ್ಥ ಆಗಲಿಲ್ಲ. ಅಂಥ ಶಬ್ದಗಳನ್ನು ಪಟ್ಟಿ ಮಾಡುತ್ತಾ ಅವುಗಳಿಗೆ ಸೂಕ್ತವಾದ ಕನ್ನಡ ಶಬ್ದಗಳು ಯಾವುವು ಎಂಬುದನ್ನು ಆಂಗ್ಲ-ಕನ್ನಡ ನಿಘಂಟುಗಳಲ್ಲಿ ದೊರೆಯುವ ಸಮಾನ ಅರ್ಥಗಳ ಪಟ್ಟಿಯನ್ನು ಮಾಡತೊಡಗಿದೆ. ಈ ಕೆಲಸದ ಮೂಲಕ ನನ್ನ ತಿಳಿವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬುದೇ ಆರಂಭದ ಉದ್ದೇಶವಾಗಿತ್ತು. ಆದರೆ, ಆ ಶಬ್ದಗಳು ಇತರರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಬೇಕಾಗುತ್ತವೆ ಎಂದು ಒಂದು ಕಿರು ಶಬ್ದಕೋಶವನ್ನು ಸಿದ್ಧ ಮಾಡತೊಡಗಿದೆ. ಈ ನನ್ನ ಕೆಲಸವನ್ನು ನನ್ನ ಸಹೋದ್ಯೋಗಿಗಳ ಮುಂದಿರಿಸಿ, ಅವರ ಸಹಕಾರವನ್ನೂ ಪಡೆದುಕೊಳ್ಳತೊಡಗಿದೆ. ಇಂಥ ಶಬ್ದಕೋಶವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಕಾರ್ಯಕರ್ತರಿಗೂ ತುಂಬಾ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯವು ಅವರದೂ ಆಗಿತ್ತು. ಅವರು ನನಗೆ ನೆರವಾಗಲು ಮುಂದಾದರು. ಹೀಗೆ ಈ ಪುಸ್ತಿಕೆಯು ಸಿದ್ಧವಾಯಿತು.

Read More
1 Comment

ಸಮಾಜಸೇವೆಯ ಮಿನುಗುತಾರೆ ಮೀನಾ

6/10/2020

1 Comment

 
Picture
ಲೇಖಕರು : ಕೆ.ವಿ. ರಾಮ್
ಪುಟ : 224
Buy
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books
ಅಂದು ಮೀನಾಕ್ಷಿಯ ಸಂಭ್ರಮ ಹೇಳತೀರದು. ಉತ್ಸಾಹ ಅವಳಲ್ಲಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಎಲ್ಲಾ ಕೈವಾಡ ಅವಳದೇ. ಆ ಶುಕ್ರವಾರ ಕಾರ್ತಿಕ ಶುದ್ಧ ದ್ವಾದಶಿ-ಉತ್ಥಾನ ದ್ವಾದಶಿ. ಹೆಣ್ಣು ಮಕ್ಕಳು ತುಳಸೀದೇವಿಗೆ ಬೃಂದಾವನದಲ್ಲಿ ಪೂಜೆ ಮಾಡುವ ವಿಶೇಷ ದಿನ. ಪರಮ ಪೂಜ್ಯ ಪತಿವ್ರತೆ ವೃಂದೆಯನ್ನು ನೆನಪು ಮಾಡುವ ದಿನ. ತನ್ನ ಪಾತೀವ್ರತ್ಯ ಬಲದಿಂದ ತನ್ನ ಗಂಡ ಜರಾಸಂಧನನ್ನು ಅಜೇಯನನ್ನಾಗಿ ಮಾಡಿದ್ದ ಸತಿ. ದೇವತೆಗಳು ತಮ್ಮ ಶತ್ರುವಾದ ಜರಾಸಂಧನನ್ನು ದಮನ ಮಾಡಲಾಗದೆ ಅವನನ್ನು ದಮನ ಮಾಡುವಂತೆ ಮಹಾ ವಿಷ್ಣುವನ್ನು ಪ್ರಾರ್ಥಿಸಿದರು. ವೃಂದೆಯ ಪಾತೀವ್ರತ್ಯವನ್ನು ಭಂಗಪಡಿಸಿದ ಹೊರತು ಜರಾಸಂಧನನ್ನು ಗೆಲ್ಲುವುದು ಅಸಾಧ್ಯವೆಂದು ತಿಳಿದಿದ್ದ ವಿಷ್ಣು ಜರಾಸಂಧನು ಯುದ್ಧ ಮಾಡಲು ಹೊರಗೆ ಹೋಗಿದ್ದಾಗ ಅವನ ರೂಪ ಧರಿಸಿ ವೃಂದೆಯನ್ನು ಸೇರಿದ, ವಿಷ್ಣು ಆಕೆಯ ಪಾತೀವ್ರತ್ಯ ಭಂಗ ಮಾಡಿದ. ಆ ಗಳಿಗೆಯಲ್ಲೇ ಜರಾಸಂಧನ ಸೋಲು ಸಾವಾಗಿತ್ತು. ಸತ್ಯ ತಿಳಿದ ವೃಂದೆ ವಿಷ್ಣುವಿಗೂ ಪತ್ನಿ ವಿಯೋಗವಾಗಲೆಂದು ಶಪಿಸಿ, ಚಿತೆಯಲ್ಲಿ ಪ್ರಾಣಬಿಟ್ಟಳು. ವೃಂದೆ ಗತಿಸಿದ ಜಾಗದಲ್ಲೇ ತುಳಸೀ ಬೆಳೆಯಿತು. ಬೃಂದಾವನ ನಿರ್ಮಿತವಾಯಿತು. ತುಳಸಿ ಮಹಾವಿಷ್ಣುವಿನ ಪ್ರೀತಿ ಪಾತ್ರಳಾದಳು. ಹೀಗಾಗಿ ಉತ್ಥಾನ ದ್ವಾದಶಿ, ಹೆಣ್ಣು ಮಕ್ಕಳು ತುಳಸಿಗೆ ವೃಂದಾವನದಲ್ಲಿ ವಿಶೇಷ ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸೆಂದು ಪ್ರಾರ್ಥಿಸುವ ವಿಶೇಷ ದಿನ.

Read More
1 Comment

ಭಾಷಣ ಕೈಪಿಡಿ

5/22/2020

6 Comments

 
Picture
ಲೇಖಕರು: ಡಾ. ಸಿ.ಆರ್. ಗೋಪಾಲ್
ಪುಟಗಳು: 245

Buy
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಪ್ರಸ್ತಾವನೆ-ಕೃತಜ್ಞತೆ
ಲೇಖಕರ ಪರಿಚಯ
 
1. ಅಧ್ಯಾಯ ಒಂದು
ಪೀಠಿಕೆ, ಭಾಷಣ ಒಂದು ಕಲೆ, ಭಾಷಣದ ವ್ಯಾಖ್ಯೆ-ವಿವರಣೆ, ಭಾಷಣದ ಉದ್ದೇಶ, ಭಾಷಣದ ಅಂಶಗಳು.
 
2. ಅಧ್ಯಾಯ ಎರಡು
ಭಾಷಣದ ವೇದಿಕೆ / ಸ್ಥಳ, ಮಹತ್ವ, ಉಪಯೋಗ   .
 
3. ಅಧ್ಯಾಯ ಮೂರು
ಭಾಷಣದ ವೈಶಿಷ್ಟ್ಯಗಳು, ಗುಣಲಕ್ಷಣಗಳು, ಆತ್ಮವಿಶ್ವಾಸ, ಸಕಾರಾತ್ಮಕ-ನಕಾರಾತ್ಮಕ ಭಾವನೆಗಳು.
 
4. ಅಧ್ಯಾಯ ನಾಲ್ಕು
ಭಾಷಣದ ವೈವಿಧ್ಯತೆ :- ಪ್ರಕಾರಗಳು, ವೇದಿಕೆ ಮತ್ತು ಭಾಷಣಗಳು, ನಿರೂಪಣೆ, ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ, ಪರಿಚಯ, ಉದ್ಘಾಟನೆ, ಮುಖ್ಯ ಅತಿಥಿಗಳ ಭಾಷಣ, ಬೀಳ್ಕೊಡಿಗೆ, ಸಮಾರೋಪ, ಅಧ್ಯಕ್ಷರ ಭಾಷಣ, ಅಭಿನಂದನಾ ಭಾಷಣ, ಸಂತಾಪ ಸೂಚನ ಭಾಷಣ, ಪ್ರಶಸ್ತಿ ಸ್ವೀಕಾರ ಸಮಯದಲ್ಲಿ ಭಾಷಣ, ವಂದನಾರ್ಪಣೆ, ವಾರ್ಷಿಕ ಆಚರಣೆಗಳು, ಹಬ್ಬಗಳು, ಜಯಂತಿಗಳು.

Read More
6 Comments

ಸಮಾಜಕಾರ್ಯದಲ್ಲಿ ಮನೋವಿಜ್ಞಾನ

5/22/2020

2 Comments

 
Picture
ಲೇಖಕರು: ಪ್ರದೀಪ ಎಂ.ಪಿ.
ಪುಟಗಳು: 272

Buy
ಪರಿವಿಡಿ
ಅಧ್ಯಾಯ ಒಂದು - ಮಾನವನ ಹುಟ್ಟು ಮತ್ತು ವಿಕಾಸ
  1. ವಿಜ್ಞಾನ (ವಿಶ್ವದ ಹುಟ್ಟು ಅಥವ ವಿಕಾಸ)
  2. ಚಾರ್ಲ್ಸ್ ಡಾರ್ವಿನ್
  3. ವಿಕಾಸವಾದದ ಮಹತ್ತ್ವ
  4. ಮಾನವನ ಹುಟ್ಟು ಮತ್ತು ವಿಕಾಸ
  5. ಮಾನವನ ದೇಹವನ್ನು ಗುರುತಿಸುವುದು  
  6. ಮಾನವನ ದೈಹಿಕ ವಿಕಾಸ
  7. ಮಾನವನ ದೇಹದ ಭಾಹ್ಯ ರಚನೆ
  8. ಮಾನವನ ದೇಹದ ಆಂತರಿಕ ರಚನೆ
 
ಅಧ್ಯಾಯ ಎರಡು - ಮೆದುಳು ಮತ್ತು ನರ ಮಂಡಲ ವ್ಯವಸ್ಥೆ
  1. ದೊಡ್ಡ ಮೆದುಳು
  2. ಕಿರು ಮೆದುಳು  
  3. ಮೆದುಳು ಕಾಂಡ
  4. ಮೆದುಳು ಬಳ್ಳಿ
  5. ಬಲ ಮೆದುಳು ಮತ್ತು ಎಡ ಮೆದುಳಿನ ಕಾರ್ಯಗಳು
  6. ಎಡ ಮೆದುಳಿನ ಕಾರ್ಯ, ಬಲ ಮೆದುಳಿನ ಕಾರ್ಯ
  7. ನರಕೋಶ
  8. ಮೆದುಳಿನ ಹಾನಿ
  9. ಸೋಂಕುಗಳು
  10. ಮೆದುಳಿನ ಫರಂಗಿ ರೋಗ ಅಥವಾ ಸಿಫಿಲಿಸ್
  11. ಚೋದನಿಕಗಳು (Hormones)
  12. ಮಾನವನಲ್ಲಿ ಕಂಡುಬರುವ ಅಂತಃಸ್ರಾವಕ ಗ್ರಂಥಿಗಳು

Read More
2 Comments

ಪರಿವರ್ತನೆ

5/21/2020

0 Comments

 
Picture
ಲೇಖಕರು : ಕೆ.ವಿ. ರಾಮ್
ಪುಟ : 240
Buy
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books
ಅಂದು ಭಾರತ ಸ್ವಾತಂತ್ರ್ಯ ದಿನಾಚರಣೆ. ಪರದಾಸ್ಯ ಕಳೆದು ಐದು ವರ್ಷಗಳಾಗಿದ್ದವು. ಎಲ್ಲಿ ನೋಡಿದರೂ ಜನಗಳಲ್ಲಿ ನವಚೇತನ ಉತ್ಸಾಹ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆ ಎಲ್ಲೆಡೆ ನಡೆಯುತ್ತಿತ್ತು. ವಿದ್ಯಾಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಸರ್ಕಾರದ ಎಲ್ಲಾ ಸಂಸ್ಥೆಗಳಲ್ಲಿ ವೈಯಕ್ತಿಕ ಸಂಘ, ಸಂಸ್ಥೆಗಳಲ್ಲೂ ನಡೆಯುತ್ತಿದ್ದವು. ರಾಜಕೀಯ ಪಕ್ಷಗಳು ಪ್ರಾಥಃಕಾಲದಲ್ಲಿಯೇ, ದ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡಿಕೊಂಡು, ನವಭಾರತದ ನಿರ್ಮಾಣ ಯಾವ ರೀತಿ ಮಾಡಬೇಕೆಂದು ಅಭಿಪ್ರಾಯಗಳು ಹೇಳಿ, ಸಿಹಿತಿಂದು ತಮ್ಮ ನಿವಾಸಗಳಿಗೆ ತೆರಳುತ್ತಿದ್ದರು. ಮೈಸೂರಿನಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾದ ಮಹಾರಾಜ ಕಾಲೇಜಿನಲ್ಲಿ  ಅದ್ವೀತಿಯವಾದ ಸ್ವಾತಂತ್ರ್ಯ ದಿನಾಚರಣೆ ಅತಿ ಸಂಭ್ರಮದಿಂದ ನಡೆದಿತ್ತು.

Read More
0 Comments

ಸಮಾಜಕಾರ್ಯ ಮತ್ತು ಸಮುದಾಯ ಅಭಿವೃದ್ಧಿ

5/21/2020

2 Comments

 
Picture
ಲೇಖಕರು : ಡಾ. ಎಸ್.ಬಿ. ಮುನಿರಾಜು
ಪುಟ : 310
Buy
ಪರಿವಿಡಿ
ಮುನ್ನುಡಿ
ನುಡಿನಮನ
ಪರಿವಿಡಿ
ಪರಿಶಿಷ್ಟಗಳು
​

1.  ಸಮಾಜ ಕಾರ್ಯ ಮತ್ತು ಸಮಾಜ ಕಾರ್ಯದ ವಿಧಾನಗಳು
2.  ಸಾಮಾಜಿಕ ಸಂಶೋಧನೆಯ ವಿನ್ಯಾಸ, ವಿಧಾನ, ಉದ್ದೇಶಗಳು ಮತ್ತು ಮಹತ್ವ
3.  ಆದಿಮ ಬುಡಕಟ್ಟು ಅಭಿವೃದ್ಧಿಯ ಹಿನ್ನೆಲೆ ಮತ್ತು ವಸ್ತುಸ್ಥಿತಿ
4.  ಜೇನುಕುರುಬರು
5.  ಕೊರಗರು
6.  ಆದಿಮ ಬುಡಕಟ್ಟು ಅಭಿವೃದ್ಧಿಯ ವಿಮರ್ಶೆ
7.  ಸಮಾಜಕಾರ್ಯ ನೆಲೆಯಲ್ಲಿ ಆದಿಮ ಬುಡಕಟ್ಟು ಅಭಿವೃದ್ಧಿ
 
ಅನುಬಂಧಗಳು
1.   ಅಂಕಿಅಂಶಗಳು
2.   ಪರಾಮರ್ಶನ ಗ್ರಂಥಗಳು
3.   ಛಾಯಾಚಿತ್ರಗಳು

Read More
2 Comments

ಪ್ರಶಸ್ತಿ

5/21/2020

0 Comments

 
Picture
ಲೇಖಕರು : ಆರ್. ಉಷಾ
ಪುಟ : 120
Buy
ಪರಿವಿಡಿ
1.         ಪ್ರಶಸ್ತಿ  
2.         ಹೊಸ ಬೆಳಕು
3.         ಡೈಮಂಡ್ ಮೆಡಲ್
4.         ಗೋಸುಂಬೆ
5.         ನಂಬಿಕೆ
6.         ಹಗಲುಗನಸು
7.         ಕುಬ್ಜ
8.         ಏಕಾಂಗಿ
9.         ಊಸರವಳ್ಳಿಗೊಂದು ಪತ್ರ
10.       ಸಾಲ

Read More
0 Comments

ಸನ್ಮಾರ್ಗ

5/21/2020

1 Comment

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟ : 408
Buy
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಲೇಖಕರ ಪರಿಚಯ
ಪ್ರಸ್ತಾವನೆ - ಕೃತಜ್ಞತೆ
 
1. ಅಧ್ಯಾಯ - ಒಂದು
ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ.
 
2. ಅಧ್ಯಾಯ - ಎರಡು, ಭಾಗ - ಒಂದು
ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು).

Read More
1 Comment

ವ್ಯಕ್ತಿಗತ ಸಮಾಜಕಾರ್ಯದ ಪರಿಚಯ

5/21/2020

0 Comments

 
Picture
ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ರಮೇಶ ಎಂ.ಎಚ್.
ಪುಟ : 174
Buy
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books
ಪರಿವಿಡಿ
ಅಧ್ಯಾಯ-1  ವ್ಯಕ್ತಿಗತ ಸಮಾಜಕಾರ್ಯ
1.1         ಪೀಠಿಕೆ 
1.2         ಪರಿಕಲ್ಪನೆ ಮತ್ತು ವಿಕಾಸ
1.3         ಅರ್ಥ ಮತ್ತು ವ್ಯಾಖ್ಯೆಗಳು
1.4         ಮೂಲಭೂತ ಪರಿಕಲ್ಪನೆಗಳು
1.5         ಉದ್ದೇಶಗಳು
 
ಅಧ್ಯಾಯ-2  ವ್ಯಕ್ತಿಗತ ಸಮಾಜಕಾರ್ಯದ ತತ್ವಗಳು
2.1         ವೈಯಕ್ತೀಕರಣದ ತತ್ವ
2.2         ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ತತ್ವ
2.3         ಅಂಗೀಕಾರದ/ಸ್ವೀಕಾರ ತತ್ವ
2.4         ನಿಯಂತ್ರಿತ ಭಾವನೆಗಳ ಅಂತರ್ಗತ ತತ್ವ
2.5         ತೀರ್ಪುರಹಿತ ಪ್ರವೃತ್ತಿಯ ತತ್ವ
2.6         ಅರ್ಥಿಯ ಸ್ವ-ನಿರ್ಣಯದ ತತ್ವ
2.7         ಗೌಪ್ಯತೆಯ ತತ್ವ
2.8         ಅರ್ಥಪೂರ್ಣ ಸಂಬಂಧ ತತ್ವ
2.9         ಸಂವಹನ ತತ್ವ 
2.10       ಸ್ವ-ಅರಿವಿನ ತತ್ವ
2.11       ಸಾಮಾಜಿಕ ಚಟುವಟಿಕೆಯ ತತ್ವ 
2.12       ವರ್ತನೆ ಮಾರ್ಪಡಿಸುವಿಕೆಯ ತತ್ವ
2.13       ಸಾಮಾಜಿಕ ಕಲಿಕೆಯ ತತ್ವ

Read More
0 Comments

ಸಮಾಜಕಾರ್ಯ

5/21/2020

3 Comments

 
Picture
ಲೇಖಕರು : ಡಾ. ರಮೇಶ ಎಂ. ಸೋನಕಾಂಬಳೆ
ಪುಟ : 304
Buy
ಪರಿವಿಡಿ
ಅಧ್ಯಾಯಗಳು
1. ಸಮಾಜಕಾರ್ಯ
1.1         ಪೀಠಿಕೆ 
1.2         ಆಧುನಿಕ ಸಮಾಜ
1.3         ಸಮಾಜಕಾರ್ಯ: ಅರ್ಥ ಮತ್ತು ವ್ಯಾಖ್ಯೆ
1.4         ಸಮಾಜಕಾರ್ಯದ ಸ್ವರೂಪ
1.5         ಸಮಾಜಕಾರ್ಯದ ವ್ಯಾಪ್ತಿ
1.6         ಸಮಾಜಕಾರ್ಯದ ಉದ್ದೇಶಗಳು 
1.7         ಸಮಾಜಕಾರ್ಯದ ಮೌಲ್ಯಗಳು
1.8         ಸಮಾಜಕಾರ್ಯದ ತತ್ವಗಳು
 
2. ಸಮಾಜಕಾರ್ಯ ವಿಧಾನಗಳು
2.1         ಪೀಠಿಕೆ 
2.2         ವ್ಯಕ್ತಿಗತ ಸಮಾಜಕಾರ್ಯ
2.3         ವೃಂದಗತ ಸಮಾಜಕಾರ್ಯ
2.4         ಸಮುದಾಯ ಸಂಘಟನೆ 
2.5         ಸಾಮಾಜಿಕ ಕ್ರಿಯೆ
2.6         ಸಮಾಜಕಾರ್ಯ ಸಂಶೋಧನೆ
2.7         ಸಮಾಜಕಾರ್ಯ ಆಡಳಿತ          

Read More
3 Comments

ಶಿಕ್ಷಣ ಮತ್ತು ಅಭಿವೃದ್ಧಿ

5/20/2020

0 Comments

 
Picture
ಲೇಖಕರು : ಡಾ. ಭಾಗ್ಯಮ್ಮ ಎನ್.
ಪುಟ : 214
Buy
ಪರಿವಿಡಿ
ಅಧ್ಯಾಯ-01 :     ಪೀಠಿಕೆ 
ಅಧ್ಯಾಯ-02 :     ಸಂಶೋಧನಾ ವಿಧಾನ   
ಅಧ್ಯಾಯ-03 :     ಶಾಲಾ ಶಿಕ್ಷಣ ಪದ್ಧತಿ
ಅಧ್ಯಾಯ-04 :     ಶಿಕ್ಷಣದ ಸಾರ್ವತ್ರೀಕರಣಕ್ಕೆ ಸರ್ಕಾರ ಕೈಗೊಂಡಿರುವ
                            ಕಾರ್ಯಕ್ರಮಗಳು     
ಅಧ್ಯಾಯ-05 :    ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ
                           ಯೋಜನೆಯ ಪ್ರಭಾವದ ಚಿತ್ರಣ    
ಅಧ್ಯಾಯ-06 :    ಬಿಸಿಯೂಟ ಯೋಜನೆಯ ಬಗ್ಗೆ ಎಸ್.ಡಿ.ಎಂ.ಸಿ. ಪೋಷಕ
                          ಮತ್ತು ಶಿಕ್ಷಕರ ಧೋರಣೆ     
ಅಧ್ಯಾಯ-07 :     ಸಾರಾಂಶ ಮತ್ತು ಉಪಸಂಹಾರ 
ಪರಾಮರ್ಶನ ಗ್ರಂಥಗಳು
ಛಾಯಾಚಿತ್ರಗಳು

Read More
0 Comments

ಕಾಡುಗೊಲ್ಲ ಮಹಿಳೆ : ಸಾಂಸ್ಕೃತಿಕ ಸಂಕಥನ

8/23/2018

1 Comment

 
Picture
ಲೇಖಕರು : ಡಾ. ಹೆಚ್.ಆರ್. ರೇಣುಕ
ಪುಟ : 192
ಮುನ್ನುಡಿ
ಜಾನಪದ ಅಧ್ಯಯನಗಳು ಇಂದು ಸಂಗ್ರಹಣ, ಪರಿಷ್ಕರಣ, ವಿಶ್ಲೇಷಣಾ ಹಂತಗಳನ್ನು ದಾಟುತ್ತಾ ಇತಿಹಾಸ, ಸಂಸ್ಕೃತಿಯ ಅನನ್ಯವಾದ ಸಂಗತಿಗಳಾಗುವ ಹಂತವನ್ನು ಮೀರಿ ಬದುಕನ್ನು ಕಟ್ಟಿಕೊಡುವ ಆರ್ಥಿಕ ಪ್ರಧಾನ ಯೋಜನೆಗಳಾಗಿ ರಾಜಕಾರಣ ನೀತಿ ನಿರುಪಗಳಾಗುತ್ತಿವೆ. ಜಾನಪದ ಅಧ್ಯಯನಗಳಲ್ಲಿ ಆಗಿರುವ ಈ ಬದಲಾವಣೆಯು ಅನೇಕ ಸಾಮಾಜಿಕ ಸಂಸ್ಥೆಗಳನ್ನು,  ಸಮುದಾಯ ಸಂಘಟನೆಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲ ಅತೀಸಣ್ಣ, ಸಣ್ಣ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮುನ್ನೆಲೆಗೆ ತರುತ್ತಿದೆ. ಹೀಗೆ ಹೊಸ ತಲಮಾರಿನ ಜಾನಪದ ಅಧ್ಯಯನಗಳು ಹೆಚ್ಚು ವಸ್ತು ನಿಷ್ಟವಾಗುತ್ತಿವೆ. ಸಮಗ್ರವಾಗಿದ್ದ ಜಾನಪದ ಅಧ್ಯಯನಗಳು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಅಭಿವೃದ್ಧಿ, ಬೌದ್ಧಿಕ, ಭೌತಿಕ, ಕಸುಬು, ಕಲೆ, ವೈದ್ಯ ಹೀಗೆ ನಾನಾ ಬಗೆಯಲ್ಲಿ ಸೂಕ್ಷ್ಮಗೊಂಡಿವೆ. ಜಾನಪದ ಅಧ್ಯಯನ ವಿಭಾಗಗಳು, ಅಧ್ಯಯನ ಪೀಠಗಳು, ಜಾನಪದ ವಿಶ್ವವಿದ್ಯಾನಿಲಯಗಳು ಈ ಸೂಕ್ಷ್ಮ ಅಧ್ಯಯನದ ಪ್ರತಿಫಲವಾಗಿವೆ ಎಂದರೆ ತಪ್ಪಾಗಲಾರದು. 

Read More
1 Comment

ಮಾನವ ಸಂಪನ್ಮೂಲ ಮಾರ್ಗದರ್ಶಿ

8/21/2018

0 Comments

 
Picture
ಲೇಖಕರು : ರಾಮ್ ಕೆ. ನವರತ್ನ
ಪುಟ : 176

Amazon
Buy
ಪರಿವಿಡಿ
1. ಸಂಸ್ಥೆಯ ಗುರಿ, ಧ್ಯೇಯ, ಮೌಲ್ಯಗಳು
(Objective), ದೃಷ್ಟಿ (Vision), ಧ್ಯೇಯ (Mission)

2. ಸಾಮಾನ್ಯ ನಿಯೋಜನಾ ಪತ್ರಗಳು
  1. ಉದ್ಯೋಗ ನೇಮಕಾತಿ ಪತ್ರ (Appointment Letter)
  2. ಶಿಶುಕ್ಷ ತರಬೇತಿ ಪತ್ರ (Apprentice Appointment)
  3. ಪರೀಕ್ಷಾರ್ಥಿ ನಿಯೋಜನಾ (Appointment order on Probation)
  4. ತರಬೇತಿಯಲ್ಲಿರುವವರಿಗೆ ನಿಯೋಜನಾ (Appointment order for Trainee)

3. ಒಪ್ಪಂದಗಳು (Contracts/Agreements)
  1. ವೈದ್ಯಾಧಿಕಾರಿ ನೇಮಕ   (Engagement of medical officer/ Doctor)
  2. ಉಪಾಹಾರ ಗೃಹದ ಗುತ್ತಿಗೆ (Canteen Contract)
  3. ಭದ್ರತಾ ವ್ಯವಸ್ಥೆಯ ಗುತ್ತಿಗೆ (Security Agency)
  4. ತುಣುಕು, ಮುರುಕು (Contract Scrap Dealer)
  5. ಗುತ್ತಿಗೆ ಕಾರ್ಮಿಕರ ಒಪ್ಪಂದ (Contract Labour)
  6. ಪೂರಕ ಸೇವೆಗಳ ಒಪ್ಪಂದ (Agreement for Supplementary Services)
  7. ಸಂಘದ ಜೊತೆಗಿನ ಒಡಂಬಡಿಕೆ (Agreement of settlement)​

Read More
0 Comments

ಸಮುದಾಯ ಸಂಘಟನೆ

7/21/2018

0 Comments

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟ : 490
Amazon
Flipkart
Buy
ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Google Books

ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಲೇಖಕರ ಪರಿಚಯ
ಪ್ರಸ್ತಾವನೆ - ಕೃತಜ್ಞತೆ
 
1. ಅಧ್ಯಾಯ-ಒಂದು
ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು.
 
2. ಅಧ್ಯಾಯ-ಎರಡು
ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು.

Read More
0 Comments

ಶ್ರೀ ಪೆಟ್ಟೆರಾಯ ಸ್ವಾಮಿಯ ಧಾರ್ಮಿಕ ಹಿನ್ನೆಲೆ

8/2/2017

0 Comments

 
Picture
ಲೇಖಕರು : ಪ್ರವೀಣ್‍ಕುಮಾರ್ ಎಸ್.
ಪುಟ : 80
ಮುನ್ನುಡಿ
ನಹಿಜ್ಞಾನೇನ ಸದೃಶ್ಯಂ, ಜ್ಞಾನಕ್ಕೆ ಮಿಗಿಲಾದದ್ದು ಬೇರೊಂದು ಇಲ್ಲ. ಜ್ಞಾನವೇ ಸತ್ಯ, ನಿತ್ಯ ಹಾಗೂ ನಿರಂತರ. ಇಂತಹ ಜ್ಞಾನ ಪರಂಪರೆಯು ವಿದ್ಯಾರ್ಥಿಗಳಲ್ಲಿ ವಿಶೇಷವಾಗಿದ್ದು, ಅನೇಕ ಹಂತಗಳ ಮೂಲಕ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುತ್ತಾರೆ. ಅಂದರೆ ಪ್ರಾಥಮಿಕ ಹಂತ, ಪ್ರೌಢಹಂತ, ಪದವಿಪೂರ್ವ, ಪದವಿ ಹಾಗೂ ಉನ್ನತ ಹಂತದ ಮೂಲಕ ಸಾಗುತ್ತದೆ. ಪದವಿ ಹಂತದಲ್ಲಿ ಉನ್ನತ ಶಿಕ್ಷಣದ ದೃಷ್ಟಿ ಮತ್ತು ಧ್ಯೇಯಗಳ ಸಾಕಾರ ಅಥವಾ ಅನುಷ್ಠಾನಕ್ಕಾಗಿ ವಿದ್ಯಾರ್ಥಿಗಳಲ್ಲಿ ಅನೇಕ ಕ್ರಿಯಾಶೀಲ ಚಟುವಟಿಕೆಗಳನ್ನು ಕಾಣುತ್ತೇನೆ. ಇಂತಹ ದೃಷ್ಠಿ ಮತ್ತು ಧ್ಯೇಯಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ, ಇಲ್ಲಿ ನಿರಂತರವಾಗಿ ಅಳವಡಿಸಿಕೊಂಡಿರುವುದು ಒಂದು ವಿಶೇಷ ಸಾಧನೆಯೇ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಬಿ.ಎ. ಪದವಿ, ಅಂತಿಮ ವರ್ಷದ ಹೆಚ್.ಇ.ಎಸ್ ವಿಭಾಗದ ಶ್ರೀ. ಪ್ರವೀಣ್‍ಕುಮಾರ್ ಎಸ್. ಎಂಬ ವಿದ್ಯಾರ್ಥಿಯು ತಾನು ಕಲಿಯುತ್ತಿರುವ ಸಮಾಜಶಾಸ್ತ್ರದ ಪಠ್ಯಕ್ರಮಕ್ಕೆ ಪೂರಕವಾಗಿರುವಂತಹ ಪತ್ರಿಕೆ VII: ಸಾಮಾಜಿಕ ಸಂಶೋಧನಾ ವಿಧಾನ ಮತ್ತು ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ದೊಡ್ಡಹನುಮಯ್ಯ ಬಿ.ಹೆಚ್. ಇವರ ಮಾರ್ಗದರ್ಶನದ ಮೂಲಕ ಸಂಶೋಧಿಸಿರುವ ಶ್ರೀ ಪೆಟ್ಟೆರಾಯ ಸ್ವಾಮಿಯ ಧಾರ್ಮಿಕ ಹಿನ್ನಲೆ, ಟಿ. ಕುರುಬರಹಳ್ಳಿ, ತಿಪ್ಪದೊಡ್ಡಿ ಗ್ರಾಮದ-ಸಮಾಜೋ-ಮಾನವಶಾಸ್ತ್ರೀಯ ಅಧ್ಯಯನ. ಇದು ಒಂದು ಉತ್ತಮ ವಿದ್ಯಾರ್ಥಿ ಸಂಶೋಧನಾ ಕೃತಿಯಾಗಿದ್ದು, ಒಂದು ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ, ಐದು ಅಧ್ಯಾಯಗಳ ಮೂಲಕ ವಿಶ್ಲೇಷಿಸಿರುವುದು, ಆತನ ಶೈಕ್ಷಣಿಕ ಆಸಕ್ತಿ ಹಾಗೂ ಸೃಜನಶೀಲ ಸಾಧನೆಯ ಹಾದಿಯಾಗಿದೆ, ಇಂತಹ ಸಾಧನೆಯು ಮುಂದಿನ ಉನ್ನತ ಶಿಕ್ಷಣಕ್ಕೆ ಹಾಗೂ ಸಂಶೋಧನೆಗೆ ಒಂದು ದಾರಿದೀಪವಾಗಿದೆ.

Read More
0 Comments

ಮಹಾತ್ಮಾ ಗಾಂಧೀಜಿಯವರ ತತ್ವಚಿಂತನೆಗಳ ಪ್ರಸ್ತುತತೆ

8/2/2017

0 Comments

 
Picture
ಲೇಖಕರು : ಡಾ. ಮೌನೇಶ್ವರ ಶ್ರೀನಿವಾಸರಾವ್
ಪುಟ : 119
ಪರಿವಿಡಿ
ಮುನ್ನುಡಿ
ಸಂಪಾದಕರ ನುಡಿ
ಪರಿವಿಡಿ  
  1. ಗಾಂಧೀಜಿಯವರ ತತ್ವಜ್ಞಾನ ಮತ್ತು ಭಾರತದಲ್ಲಿನ ಇತ್ತೀಚಿನ  ವಿದ್ಯಮಾನಗಳು - ಪ್ರೊ. ರವಿವರ್ಮ ಕುಮಾರ್
  2. ಗಾಂಧೀಜಿ ಮತ್ತು ಅಧಿಕಾರ ವಿಕೇಂದ್ರಿಕರಣ - ಎಸ್. ಪುಷ್ಪಲತ
  3. ಗಾಂಧೀಜಿಯವರ ತತ್ವ ಮತ್ತು ಎಂ.ಜಿ ನರೇಗಾ - ಕು. ಬಸಮ್ಮಾ ಆರ್. ಕೋರಿ
  4. ಗಾಂಧೀಜಿಯವರ ದೃಷ್ಠಿಕೋನದಲ್ಲಿ ಮಹಿಳಾ ಸಾಮಾಜಿಕ ವಿಮೋಚನೆ - ಡಾ. ಅನುರಾಧ ಎಸ್.
  5. ಗಾಂಧೀಜಿಯವರ ದೃಷ್ಟಿಯಲ್ಲಿ ಮಹಿಳಾ ಸಬಲೀಕರಣ - ಕೋಮಲ ಬಿ.
  6. ಪರಿಪೂರ್ಣತೆಯ ಬದುಕಿಗೆ ಗಾಂಧೀಜಿಯವರ ಪೂರ್ಣ ತತ್ವಗಳು - ಡಾ. ಎಚ್. ಆರ್. ರೇಣುಕ ಹಾಗೂ ಶ್ರೀ ವೆಂಕಟರೆಡ್ಡಿ ರಾಮರೆಡ್ಡಿ
  7. ಮಹಾತ್ಮ ಗಾಂಧೀಜಿಯವರ ತತ್ವಗಳು ಮತ್ತು ಜೀವನ ಮಾರ್ಗಸೂತ್ರಗಳು - ಶ್ರೀ.ಎಂ.ಶಿವಯ್ಯ ಹಾಗೂ ಜಿ. ದಾಕ್ಷಾಯಿಣಿ
  8. ಗಾಂಧೀಜಿಯವರ ಚಿಂತನೆ ಹಾಗೂ ಭಾರತದಲ್ಲಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳು - ಡಾ. ಮೌನೇಶ್ವರ ಶ್ರೀನಿವಾಸರಾವ್
  9. 21ನೇ ಶತಮಾನದಲ್ಲಿ ಗಾಂಧಿ ತತ್ವಚಿಂತನೆಗಳ ಪ್ರಸ್ತುತತೆ - ಡಾ. ಬಿ. ಸಿ. ಸವಿತ
  10. ಗಾಂಧೀಜಿ ವ್ಯಕ್ತಿತ್ವ ಮತ್ತು ಸಂದೇಶ - ಶ್ರೀಮತಿ ಎಂ. ಎಸ್. ರಾಜೇಶ್ವರಿ
  11. ಗಾಂಧೀಜಿಯವರ ತತ್ವಜ್ಞಾನ ಮತ್ತು ಭಾರತದಲ್ಲಿನ ಇತ್ತೀಚಿನ ವಿದ್ಯಮಾನಗಳು: ವಿಮರ್ಶಾತ್ಮಕ ಅವಲೋಕನ - ಪ್ರೊ. ಜಿ. ರಾಮಕೃಷ್ಣ

Read More
0 Comments

ಚಿನ್ಮಯ ಕಥಾ ಸಂಚಯ

8/2/2017

0 Comments

 
Picture
ಲೇಖಕರು : ಎಂ.ಎಂ. ಹಿರೇಮಠ
ಪುಟ : 94
ಲೇಖಕರ ನುಡಿ
ಶತಶತಮಾನಗಳಿಂದಲೂ ಕಥಾಸಾಹಿತ್ಯ ವಿಸ್ತಾರಗೊಳ್ಳುತ್ತ, ಸದಭಿರುಚಿಯನ್ನು ವಾಚಕರಿಗೆ ನೀಡುತ್ತ ಬರುತ್ತಿರುವದು ಜನಮೆಚ್ಚುಗೆಯ ಪ್ರತೀಕ. ಕಥಾಪ್ರಪಂಚ ಇಂದು ಬಹು ಆಕರ್ಷಣೀಯ ವಸ್ತುವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಕಥೆ ಹೇಳುವುದಾಗಲಿ, ಕಥೆ ಕೇಳುವುದಾಗಲಿ ಸಂತೋಷವನ್ನೀಯುವ ಕಲೆಯಾಗಿ, ಅಬಾಲವೃದ್ಧರಿಂದ ಮೆಚ್ಚುಗೆ ಪಡೆಯುತ್ತಾ ಬಂದುದು ಶ್ಲಾಘನೀಯ. ಈ ಕಥಾ-ಸಾಹಿತ್ಯವು ತನ್ನ ರೂಪ, ಸ್ವರೂಪ, ವಿಧಾನ, ವಿನ್ಯಾಸಗಳಲ್ಲಿ ಪರಿವರ್ತನೆಯೊಡನೆ ವೈವಿಧ್ಯವನ್ನೂ ಸಾಧಿಸಿ ಜನಾದರಣೀಯವಾದ ಸಾಹಿತ್ಯ ಪ್ರಕಾರವೆನ್ನುವಂತಾಗಿದೆ.

Read More
0 Comments

ಸರ್ವರಿಗೂ ಆಯುರ್ವೇದ

8/1/2017

4 Comments

 
Picture
ಲೇಖಕರು : ಡಾ|| ಟಿ.ಎಂ. ಶಿವಾನಂದಯ್ಯ
ಪುಟ : 328
ಲೇಖಕರ ನುಡಿ
ನನ್ನ ಐವತ್ತೆಂಟು (58) ವರ್ಷ ವೃತ್ತಿ ಜೀವನದ ಆಸೆ ಒಂದು ಉತ್ತಮ ಕೃತಿ ಆಯುರ್ವೇದ ಕ್ಷೇತ್ರದಲ್ಲಿ ಮುಖ್ಯವಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸುವ ಮೊದಲ ದಿನಗಳಲ್ಲಿ ತೊಂದರೆ, ವೈದ್ಯರಿಗೆ ಹೇಗೆ ನಿಭಾಯಿಸಬೇಕೆಂಬುದನ್ನು ಮನದಲ್ಲಿರಿಸಿಕೊಂಡು ಪುಸ್ತಕ ಬರೆಯಲು ಪ್ರೇರಣೆ ಎಂದರೆ ತಪ್ಪಾಗಲಾರದು. ಹೆಸರಿಗೆ ಆಯುರ್ವೇದ ಕಲಿತು ವೃತ್ತಿಯಲ್ಲಿ ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ಅನೇಕ ವೈದ್ಯರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪುಸ್ತಕ ರಚನೆಗೆ ಮುಂದಾಗಿದ್ದು ಒಂದು ಹೆಮ್ಮೆ ಎನಿಸುವಂಥ ವಿಷಯವಾಗಿದೆ.

ಆಯುರ್ವೇದದಲ್ಲಿ ಎಲ್ಲವೂ ಇದ್ದು ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ನಮ್ಮ ಯುವ ವೈದ್ಯರಿಗೆ ಒಂದು ಉತ್ತಮ ಗ್ರಂಥ ಇದಾಗಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಚ್ಛೆ ಪಡುತ್ತೇನೆ.

Read More
4 Comments

ಹಿಮನಾ ಸಮಗ್ರ ಕವನಗಳು

7/23/2017

0 Comments

 
Picture
ಸಂಪಾದಕರು : ಎಚ್.ಎಂ. ಹರ್ಷ
ಪುಟ : 256
ಕವಿ ಮಾತು
``ತುಂಬು ಅರಳಿದ ಬೇವು ನನ್ನ ಏಳನೆಯ ಕವನ ಸಂಗ್ರಹ. ಈ ಹಿಂದಿನ ಸಂಗ್ರಹಗಳಿಗೆ ದೊರೆತ ಪ್ರೋತ್ಸಾಹ ಮತ್ತು ಮೆಚ್ಚುಗೆಯಿಂದಾಗಿ, ಮತ್ತೊಂದು ಸಂಗ್ರಹವನ್ನು ಹೊರತರುವ ಪ್ರಯತ್ನ ಮಾಡಿದ್ದೇನೆ. ಕಾವ್ಯಕ್ಷೇತ್ರದಲ್ಲಿ, ಇತ್ತೀಚೆಗೆ, ಅನೇಕ ವರ್ಗಭೇದಗಳನ್ನು ಮಾಡಲಾಗಿದೆ. ನವೋದಯ, ನವ್ಯ, ಅತಿ ನವ್ಯ, ನವೋ-ನವ್ಯ, ಬಂಡಾಯ, ದಲಿತ, ಶೂದ್ರ-ಮೊದಲಾದ ಉಪ-ಪ್ರಕಾರಗಳನ್ನು ಸೃಷ್ಟಿಸಲಾಗಿದೆ. ಈ ವರ್ಗ ವಿಭೇದಗಳನ್ನು ಅರ್ಥೈಸುವ ಗೋಜಿಗೆ ನಾನು ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ.

Read More
0 Comments

ವೃತ್ತಿ ಮಾಹಿತಿ ಕೈಪಿಡಿ (ಭಾರತೀಯ ಹಿನ್ನೆಲೆಯಲ್ಲಿ)

12/18/2015

1 Comment

 
Picture
ಲೇಖಕರು : ಡಾ. ಮೋಹನ್ ದಾಸ್, ಆರ್. ನಾಗೇಶ್
ಪುಟ : XX+300=320
Amazon
Flipkart
ಪರಿವಿಡಿ
Buy
ಮುನ್ನುಡಿ
ಪ್ರಸ್ತಾವನೆ
ಕೃತಜ್ಞತೆಗಳು
 
ಭಾಗ-1
ಅಧ್ಯಾಯ 1: ಪೀಠಿಕೆ, ಅರ್ಥ ಮತ್ತು ವೃತ್ತಿಗೆ ಸಂಬಂಧಿಸಿದ ಪದಗಳ ಅರ್ಥವಿವರಣೆ

1.1   ಪೀಠಿಕೆ:
1.2   ವೃತ್ತಿಗೆ ಸಂಬಂಧಿಸಿದ ಕೆಲವು ಪದಗಳ ಅರ್ಥವಿವರಣೆ
        (Defination of Career related terms)
       1.2.1     ಕೆಲಸ/ಉದ್ಯೋಗ/ವೃತ್ತಿಗಳ ವ್ಯಾಖ್ಯೆಗಳು: (Work/Employment/Career)
       1.2.2     ವೃತ್ತಿಯ ಅಭಿವೃದ್ಧಿ ಅಥವಾ ಬೆಳವಣಿಗೆ (Career Development)
       1.2.3     ವೃತ್ತಿ ನಿರ್ವಹಣೆ (Career Management)
       1.2.4     ವೃತ್ತಿಯ ಅಧ್ಯಯನ (Career Education)
       1.2.5     ವೃತ್ತಿ ಮಾರ್ಗದರ್ಶನ (Career Guidance)
       1.2.6     ವೃತ್ತಿ ನಿರ್ಧಾರ ಮಾಡುವುದು (Career Decision Making)
        1.2.7    ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? (How to Choose the Career)
        1.2.8     ಸರಿಹೊಂದುವಿಕೆ (Suitability)
        1.2.9     ವೃತ್ತಿಯ ತಿಳುವಳಿಕೆ (Career Awarness)
        1.2.10   ವೃತ್ತಿಯ ಗುರಿ (Career Goal)
        1.2.11    ವೃತ್ತಿಯ ಪ್ರೇರಣೆ (Career Motivation)
        1.2.12    ವೃತ್ತಿಯ ಸಂತೃಪ್ತಿ (Career Satisfaction)
        1.2.13    ವೃತ್ತಿಯ ಪರಿಣಿತಿ (Career Strategy)
        1.2.14    ವೃತ್ತಿಯ ಯಶಸ್ಸು (Career Success)
        1.2.15     ವೃತ್ತಿಯ ಯೋಜನೆ (Career Planning)
        1.2.16     ವೃತ್ತಿ ಪ್ರಾವೀಣ್ಯತೆ (Career Proficience)
        1.2.17     ಸಮಸ್ಯೆಗಳ ವಿರುದ್ಧ ದೀರ್ಘ ಪ್ರಯತ್ನ (Persistence)
        1.2.18     ಸ್ವತಃ ನಿರ್ದೇಶನ (Self Direction)
        1.2.19     ವೃತ್ತಿಯ ಮಾಹಿತಿ (Career Information)

Read More
1 Comment

    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Social Work Foot Prints
    Follow me on Academia.edu

    Archives

    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015

    Categories

    All
    Academic Books
    Conference Books
    HR Books
    Kannada Books
    Social Work Books


    ​List Your Product on Our Website 

    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
Picture
Download App Here

Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com