ಲೇಖಕರು : ಎಚ್.ಎನ್. ಯಾದವಾಡ ಪುಟ : 84 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ? ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ. ಪ್ರಶ್ನೆ: ಇ.ಎಸ್.ಐ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿಕೊಂಡ ಸಂಸ್ಥೆಯು ಆವಧಿಕವಾಗಿ ಯಾವುದಾದರೂ ವಿವರಗಳನ್ನು ಸಲ್ಲಿಸಬೇಕೆ ?
ಉತ್ತರ: ಹೌದು.
ಪ್ರಶ್ನೆ: ವಿಮಾದರ ಎಷ್ಟು ದಿನಗಳ ನಂತರ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅರ್ಹನಾಗುತ್ತಾನೆ ? ಉತ್ತರ: ಇ.ಎಸ್.ಐ ವಿಮಾದಾರನಾಗಿದ್ದು ಕನಿಷ್ಟ 2 ವರ್ಷಗಳವರೆಗೆ ಸೇವೆ ಸಲ್ಲಿಸಿ 156 ದಿನಗಳ ವಂತಿಗೆಯನ್ನು ಸಲ್ಲಿಸಿದ್ದರೆ ಸಾಕು. ಮುಂದುವರೆದ ಕಾಯಿಲೆಯ ನಿಯಮದನ್ವಯ 34 ಕಾಯಿಲೆಗಳಿಗೆ ಗುಣಮುಖವಾಗುವವರೆಗೆ ಅಥವಾ ಗರಿಷ್ಟ 3 ವರ್ಷಗಳವರೆಗೆ ವಿಮಾದಾರರು ಸೇರಿ ಅವಲಂಬಿತ ಕುಟುಂಬದ ಸದಸ್ಯರುಗಳು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಆಸ್ಪತ್ರೆಗೆ ದಾಖಲಾಗದೇ ಸಾಮಾನ್ಯ ರೋಗಿಯಾಗಿ ಇ.ಎಸ್.ಐ. ಚಿಕಿತ್ಸಾಲಯ ಹಾಗೂ ಆಸ್ಪತ್ರೆಯಲ್ಲಿ ಔಷಧಿ ಪಡೆಯುವುದು ವಿಮಾದಾರನಾದ ದಿನದಿಂದಲೇ ಆರಂಭವಾಗುತ್ತದೆ. ವಿಶೇಷ ಶುಶ್ರೂಷೆಯ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಮಾತ್ರ ಎರಡು ವರ್ಷ ಕಾಯಬೇಕು.
1 Comment
6/2/2020 07:13:20 pm
I need kannada ESI book please send what ever charge I will pay
Reply
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
January 2022
Categories
All
|
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |