ಲೇಖಕರು: ಡಾ. ಸಿ.ಆರ್. ಗೋಪಾಲ್ ಪುಟಗಳು: 440 ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು.
5 Comments
ಲೇಖಕರು: ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. ಪುಟಗಳು: 200 20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
ಇಂದು ಸಮಾಜಕಾರ್ಯ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಈ ಹಿಂದೆ ಸಮಾಜಕಾರ್ಯ ವೃತ್ತಿಪರರ ಸೇವೆಗಳು ಸಮುದಾಯ ಆಧಾರಿತ ಕಾರ್ಯಕ್ರಮಗಳು ತರಬೇತಿ, ಅನುಷ್ಠಾನ, ಆಪ್ತ ಸಮಾಲೋಚನೆ, ಸಮಾಜಕಾರ್ಯದ ವಿವಿಧ ವಿಧಾನಗಳು/ತಂತ್ರಗಳ ಬಳಕೆ ಹಾಗೂ ಸಂಶೋಧನೆಗಳಿಗೆ ಸೀಮಿತವಾಗಿದ್ದವು. ಪ್ರಸ್ತುತ ಇವರ ಸೇವೆಗಳು ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಮನೋ-ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಬಹುತಜ್ಞರ ಚಿಕಿತ್ಸಾ ತಂಡದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವಾದುದಾಗಿದೆ. ಬಹುಮುಖ್ಯವಾಗಿ ಮಾನಸಿಕ ಆರೋಗ್ಯ ಉತ್ತೇಜಕ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಚಿಕಿತ್ಸಕ ಮಧ್ಯಸ್ಥಿಕೆಗಳು, ಪುನರ್ವಸತಿ ಸೇವೆಗಳು ಮತ್ತು ಮಾನಸಿಕ ರೋಗಿಗಳನ್ನು ಕುಟುಂಬಕ್ಕೆ ಮರುಜೋಡಿಸುವಲ್ಲಿ ಹಾಗೂ ಸಮುದಾಯದ ಮುಖ್ಯವಾಹಿನಿಗೆ ತರುವಲ್ಲಿ ವೃತ್ತಿಪರ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಕೊಡುಗೆ ಗಣನೀಯವಾದುದು. ಲೇಖಕರು: ಎಚ್.ಎನ್. ಯಾದವಾಡ ಪುಟಗಳು: 144 ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು.
|
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |