ಲೇಖಕರು: ಡಾ. ಸಿ.ಆರ್. ಗೋಪಾಲ್ ಪುಟಗಳು: 440 ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು. ಸಾಮಾಜಿಕ ಕ್ರಿಯಾಚರಣೆ ಎರಡು ಶಬ್ದಗಳ ಪದಗುಚ್ಚ. ಆಂಗ್ಲ ಭಾಷೆಯ ‘Social Action’ ಎಂಬ ಪದಗುಚ್ಚಕ್ಕೆ ಸಾಮಾಜಿಕ ಪ್ರಚೋದನ ಕ್ರಿಯೆ, ಸಾಮಾಜಿಕ ಕ್ರಿಯೆ ಎಂಬ ಅರ್ಥಗಳಿವೆ. ಸಾಮಾಜಿಕ ಕ್ರಿಯಾಚರಣೆಯಲ್ಲಿ ಪ್ರಚೋದನೆಯ ಅಂಶದ ಹೊರತಾಗಿಯೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಕ್ರಿಯೆ ಎಂಬ ಪದಗುಚ್ಛ ಹೆಚ್ಚು ಸಮಂಜಸ. ಸಾಮಾಜಿಕ ಕ್ರಿಯಾಚರಣೆ ಬೃಹದಾಕಾರದ ಚಟುವಟಿಕೆ. ಅದನ್ನು ಸಾಧಿಸಲು ಬಹುಜನರ ಭಾಗವಹಿಸುವಿಕೆ ಅವಶ್ಯವಾಗಿರುತ್ತದೆ. ಈ ಬಹುಜನರಲ್ಲಿ ಸಾಮಾಜಿಕ ಕಾರ್ಯಕರ್ತ, ಕ್ರಿಯಾವಾದಿ, ದೌರ್ಜನ್ಯಕ್ಕೆ ಒಳಗಾದವರು, ನಾಯಕರು, ಗುಂಪುಗಳು, ವಿಷಯ ಪರಿಣಿತರು, ಸ್ವಯಂ ಸೇವಕರು, ಮುಂಚೂಣಿ ಕಾರ್ಯಕರ್ತರು, ಪ್ರಚಾರಕರು, ಹೋರಾಟಗಾರರು, ಭಾಷಣಕಾರರು, ಸಂಧಾನಕಾರರು, ವಿಪಕ್ಷದವರು ಮುಂತಾದವರು ಸೇರಿರುತ್ತಾರೆ. ಇವರೆಲ್ಲರೂ ಸಾಮಾಜಿಕ ಕ್ರಿಯಾಚರಣೆಯಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಸಾಮೂಹಿಕ ಸ್ವಭಾವವನ್ನು ಗುರುತಿಸಿ, ಸೋಷಲ್ ಯಾಕ್ಷನ್ಸ್ ಎಂಬ ಪದಗುಚ್ಚಕ್ಕೆ, `ಸಾಮಾಜಿಕ ಕ್ರಿಯಾಚರಣೆ’ ಎಂಬ ಪದಪುಂಜವನ್ನು ಬಳಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಕೃತಿಯ ರೂಪರೇಷೆ ಹೀಗಿದೆ. ಒಟ್ಟು ಹನ್ನೆರಡು ಅಧ್ಯಾಯಗಳು. ಸಾಮಾಜಿಕ ಕ್ರಿಯಾಚರಣೆಯ ಸಿದ್ಧಾಂತ, ಪರಿಕಲ್ಪನೆ, ವ್ಯಾಖ್ಯೆಗಳು, ಲಕ್ಷಣಗಳು, ಗ್ರಹಿಕೆಗಳು, ಸಮಾಜ ಸುಧಾರಣೆ, ಚರಿತ್ರೆ, ಧ್ಯೇಯೋದ್ದೇಶಗಳು, ತತ್ತ್ವಗಳು, ಮಾದರಿಗಳು, ಕಾರ್ಯತಂತ್ರಗಳು, ಪ್ರಕ್ರಿಯೆ, ಜನಜಾಗೃತಿ, ಸಂಪನ್ಮೂಲಗಳ ಕ್ರೋಡೀಕರಣ, ಸಾಮಾಜಿಕ ಕ್ರಿಯಾಚರಣೆ ಮತ್ತು ಕಾನೂನು, ಕಾರ್ಮಿಕರು ಮತ್ತು ಕಾನೂನು, ಸಮಾಜಕಾರ್ಯಕರ್ತನ ಪಾತ್ರ, ಸಾಮಾಜಿಕ ಆಂದೋಲನಗಳು, ಭಾರತದಲ್ಲಿ ಆಂದೋಲನಗಳು, ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯೆ ಮುಂತಾದ ವಿಷಯಗಳನ್ನು ವಿವರಿಸಲು, ಪ್ರತಿಪಾದಿಸಲು ಪ್ರಯತ್ನ ಮಾಡಲಾಗಿದೆ. ಕೃತಿ ಸಂಶೋಧನಾ ಅಂಶಗಳನ್ನು ಒಳಗೊಂಡಿದೆ. ಹಾಗೇನೇ ಕೃತಿ ವಿಶ್ಲೇಷಣಾತ್ಮಕ ಮತ್ತು ವಿವರಣಾತ್ಮಕ ಗುಣಗಳನ್ನೂ ಹೊಂದಿದೆ. ಪುಸ್ತಕದ ಕೊನೆಗೆ ಆಕರ ಸಾಹಿತ್ಯದ ಮೂಲಗಳನ್ನು ಒದಗಿಸಲಾಗಿದೆ. ಕಠಿಣ ಶಬ್ದಗಳ ಅರ್ಥಗಳನ್ನು ಕೊಡಲಾಗಿದೆ. ಡಾ. ಸಿ.ಆರ್. ಗೋಪಾಲ್ ಪರಿವಿಡಿ ಮುನ್ನುಡಿ ಪ್ರಕಾಶಕರ ನುಡಿ ಪ್ರಸ್ತಾವನೆ-ಕೃತಜ್ಞತೆ ಲೇಖಕರ ಪರಿಚಯ ಅಧ್ಯಾಯ - ಒಂದು : ಸಾಮಾಜಿಕ ಕ್ರಿಯಾಚರಣೆ-ಪೀಠಿಕೆ, ಪರಿಕಲ್ಪನೆ, ವ್ಯಾಖ್ಯೆಗಳು, ಸಿದ್ಧಾಂತ. ಅಧ್ಯಾಯ - ಎರಡು : ಸಾಮಾಜಿಕ ಕ್ರಿಯಾಚರಣೆಯ ಲಕ್ಷಣಗಳು, ಗ್ರಹಿಕೆಗಳು-ಸಾಮಾಜಿಕ ಕ್ರಿಯಾಚರಣೆ ಮತ್ತು ಸಮಾಜ ಸುಧಾರಣೆ ಹಾಗೂ ಚರಿತ್ರೆ ಅಧ್ಯಾಯ – ಮೂರು : ಸಾಮಾಜಿಕ ಕ್ರಿಯಾಚರಣೆಯ ಧ್ಯೇಯೋದ್ದೇಶಗಳು, ತತ್ತ್ವಗಳು. ಅಧ್ಯಾಯ – ನಾಲ್ಕು : ಸಾಮಾಜಿಕ ಕ್ರಿಯಾಚರಣೆಯ ಮಾದರಿಗಳು ಹಾಗೂ ಕಾರ್ಯತಂತ್ರಗಳು. ಅಧ್ಯಾಯ – ಐದು : ಸಾಮಾಜಿಕ ಕ್ರಿಯಾಚರಣೆಯ ಪ್ರಕ್ರಿಯೆ ಅಧ್ಯಾಯ – ಆರು : ಸಾಮಾಜಿಕ ಕ್ರಿಯಾಚರಣೆಯಲ್ಲಿ ಜನಜಾಗೃತಿ ಅಧ್ಯಾಯ – ಏಳು : ಸಂಪನ್ಮೂಲಗಳ ಕ್ರೋಡೀಕರಣ ಅಧ್ಯಾಯ – ಎಂಟು : ಸಾಮಾಜಿಕ ಕ್ರಿಯಾಚರಣೆಯಲ್ಲಿ ಸಮಾಜಕಾರ್ಯಕರ್ತನ ಪಾತ್ರ ಅಧ್ಯಾಯ - ಒಂಬತ್ತು, ಭಾಗ – ಒಂದು : ಕಾನೂನು ಮತ್ತು ಸಾಮಾಜಿಕ ಕ್ರಿಯಾಚರಣೆ ಅಧ್ಯಾಯ - ಒಂಬತ್ತು, ಭಾಗ – ಎರಡು : ಕಾರ್ಮಿಕರ ಕಾನೂನು ಮತ್ತು ದೌರ್ಜನ್ಯ ಪ್ರತಿಬಂಧ ಅಧ್ಯಾಯ – ಹತ್ತು : ಸಾಮಾಜಿಕ ಆಂದೋಲನಗಳು ಅಧ್ಯಾಯ – ಹನ್ನೊಂದು : ಭಾರತದಲ್ಲಿ ಸಮಾಜ ಸುಧಾರಣಾ ಚಟುವಟಿಕೆಗಳು / ಆಂದೋಲನಗಳು ಅಧ್ಯಾಯ – ಹನ್ನೆರಡು : ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ![]()
5 Comments
Kiran Naik
4/30/2022 01:33:34 am
One of the best Book for MSW kannada medium students.
Reply
Jeevankumar A
5/3/2022 01:04:21 am
ಸಾಮಾಜಿಕ ಕ್ರಿಯಾಚರಣೆಯು ಒಂದು ಒಳ್ಳೆಯ ಪುಸ್ತಕವಾಗಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಮಾಹಿತಿಗಳು ಪುಸ್ತಕದಲ್ಲಿ ದೊರೆಯುತ್ತದೆ.
Reply
Naveen M
5/9/2022 01:38:11 am
One more valuable social work book by C R Gopal sir
Reply
Paramesh Rao
5/24/2022 03:27:46 am
Knowledgeable book
Reply
Prem
5/26/2022 02:57:12 am
Help full and very information book
Reply
Leave a Reply. |
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.