ಲೇಖಕರು : ಪ್ರವೀಣ್‍ಕುಮಾರ್ ಎಸ್. ಪುಟ : 80 ಮುನ್ನುಡಿ ನಹಿಜ್ಞಾನೇನ ಸದೃಶ್ಯಂ, ಜ್ಞಾನಕ್ಕೆ ಮಿಗಿಲಾದದ್ದು ಬೇರೊಂದು ಇಲ್ಲ. ಜ್ಞಾನವೇ ಸತ್ಯ, ನಿತ್ಯ ಹಾಗೂ ನಿರಂತರ. ಇಂತಹ ಜ್ಞಾನ ಪರಂಪರೆಯು ವಿದ್ಯಾರ್ಥಿಗಳಲ್ಲಿ ವಿಶೇಷವಾಗಿದ್ದು, ಅನೇಕ ಹಂತಗಳ ಮೂಲಕ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುತ್ತಾರೆ. ಅಂದರೆ ಪ್ರಾಥಮಿಕ ಹಂತ, ಪ್ರೌಢಹಂತ, ಪದವಿಪೂರ್ವ, ಪದವಿ ಹಾಗೂ ಉನ್ನತ ಹಂತದ ಮೂಲಕ ಸಾಗುತ್ತದೆ. ಪದವಿ ಹಂತದಲ್ಲಿ ಉನ್ನತ ಶಿಕ್ಷಣದ ದೃಷ್ಟಿ ಮತ್ತು ಧ್ಯೇಯಗಳ ಸಾಕಾರ ಅಥವಾ ಅನುಷ್ಠಾನಕ್ಕಾಗಿ ವಿದ್ಯಾರ್ಥಿಗಳಲ್ಲಿ ಅನೇಕ ಕ್ರಿಯಾಶೀಲ ಚಟುವಟಿಕೆಗಳನ್ನು ಕಾಣುತ್ತೇನೆ. ಇಂತಹ ದೃಷ್ಠಿ ಮತ್ತು ಧ್ಯೇಯಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ, ಇಲ್ಲಿ ನಿರಂತರವಾಗಿ ಅಳವಡಿಸಿಕೊಂಡಿರುವುದು ಒಂದು ವಿಶೇಷ ಸಾಧನೆಯೇ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಬಿ.ಎ. ಪದವಿ, ಅಂತಿಮ ವರ್ಷದ ಹೆಚ್.ಇ.ಎಸ್ ವಿಭಾಗದ ಶ್ರೀ. ಪ್ರವೀಣ್‍ಕುಮಾರ್ ಎಸ್. ಎಂಬ ವಿದ್ಯಾರ್ಥಿಯು ತಾನು ಕಲಿಯುತ್ತಿರುವ ಸಮಾಜಶಾಸ್ತ್ರದ ಪಠ್ಯಕ್ರಮಕ್ಕೆ ಪೂರಕವಾಗಿರುವಂತಹ ಪತ್ರಿಕೆ VII: ಸಾಮಾಜಿಕ ಸಂಶೋಧನಾ ವಿಧಾನ ಮತ್ತು ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ದೊಡ್ಡಹನುಮಯ್ಯ ಬಿ.ಹೆಚ್. ಇವರ ಮಾರ್ಗದರ್ಶನದ ಮೂಲಕ ಸಂಶೋಧಿಸಿರುವ ಶ್ರೀ ಪೆಟ್ಟೆರಾಯ ಸ್ವಾಮಿಯ ಧಾರ್ಮಿಕ ಹಿನ್ನಲೆ, ಟಿ. ಕುರುಬರಹಳ್ಳಿ, ತಿಪ್ಪದೊಡ್ಡಿ ಗ್ರಾಮದ-ಸಮಾಜೋ-ಮಾನವಶಾಸ್ತ್ರೀಯ ಅಧ್ಯಯನ. ಇದು ಒಂದು ಉತ್ತಮ ವಿದ್ಯಾರ್ಥಿ ಸಂಶೋಧನಾ ಕೃತಿಯಾಗಿದ್ದು, ಒಂದು ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ, ಐದು ಅಧ್ಯಾಯಗಳ ಮೂಲಕ ವಿಶ್ಲೇಷಿಸಿರುವುದು, ಆತನ ಶೈಕ್ಷಣಿಕ ಆಸಕ್ತಿ ಹಾಗೂ ಸೃಜನಶೀಲ ಸಾಧನೆಯ ಹಾದಿಯಾಗಿದೆ, ಇಂತಹ ಸಾಧನೆಯು ಮುಂದಿನ ಉನ್ನತ ಶಿಕ್ಷಣಕ್ಕೆ ಹಾಗೂ ಸಂಶೋಧನೆಗೆ ಒಂದು ದಾರಿದೀಪವಾಗಿದೆ. ಇಂತಹ ಪ್ರಯತ್ನಗಳು ನಮ್ಮ ಕಾಲೇಜಿನ ಎಲ್ಲಾ ವಿಭಾಗಗಳಲ್ಲಿ ಬೆಳೆದು ಬರಲೆಂದು ಹಾರೈಸುತ್ತಾ ವಿದ್ಯಾರ್ಥಿ ಸಂಶೋಧಕ ಶ್ರೀ. ಪ್ರವೀಣ್‍ಕುಮಾರ್ ಎಸ್. ಈತನ ಭವಿಷ್ಯದ ಶಿಕ್ಷಣಕ್ಕೆ ಶುಭಹಾರೈಕೆಯನ್ನು ಕೋರುತ್ತೇನೆ. ಹಾಗೆಯೇ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತು ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡುತ್ತಾ, ತರಗತಿಯ ಪ್ರತಿ ವಿದ್ಯಾರ್ಥಿಯಲ್ಲೂ ಇಂತಹ ಪ್ರಯತ್ನಗಳಿಗೆ ಪ್ರೇರಕವಾಗಿರುವಂತಹ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ದೊಡ್ಡಹನುಮಯ್ಯ ಬಿ.ಹೆಚ್ ಇವರಿಗೂ ನನ್ನ ಅಭಿನಂದನೆ ತಿಳಿಸುತ್ತಿದ್ದೇನೆ ಹಾಗೂ ವಿದ್ಯಾರ್ಥಿಯ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿದ ಎಲ್ಲಾ ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗದವರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ. ಡಾ|| ಮುನಿನಾರಾಯಣಪ್ಪ ಪ್ರಾಂಶುಪಾಲರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಸಕೋಟೆ, ಬೆಂಗಳೂರು ಗ್ರಾಮಾಂತರ. ಪರಿವಿಡಿ ಅಧ್ಯಾಯ-1: ಸಮಾಜೋ-ಮಾನವಶಾಸ್ತ್ರೀಯ ದೃಷ್ಟಿಕೋನಗಳು
ಪೀಠಿಕೆ ಎ) ಸಮಾಜಶಾಸ್ತ್ರೀಯ ದೃಷ್ಟಿಕೋನ ಬಿ) ಮಾನವಶಾಸ್ತ್ರೀಯ ದೃಷ್ಟಿಕೋನ ಸಿ) ಧಾರ್ಮಿಕ ದೃಷ್ಟಿಕೋನ ಡಿ) ಪ್ರಾದೇಶಿಕ ದೃಷ್ಟಿಕೋನ ಇ) ಸಾಹಿತ್ಯ ಪುನರಾವಲೋಕನ ಅಧ್ಯಾಯ-2: ಪೆಟ್ಟೆರಾಯಸ್ವಾಮಿ ದೇವರ ಚಾರಿತ್ರಿಕ ಹಿನ್ನಲೆ ಎ) ಮೌಖಿಕ ಪರಂಪರೆ - ದೇವರ ಉಗಮ ಮತ್ತು ಬೆಳವಣಿಗೆ ಬಿ) ಲಿಖಿತ ಮಾಹಿತಿಗಳು ಅಧ್ಯಾಯ-3: ಸಂಶೋಧನೆಯ ವಿಧಾನಗಳು ಎ) ಸಂಶೋಧನಾ ಅಧ್ಯಯನದ ಉದ್ದೇಶಗಳು ಬಿ) ಸಂಶೋಧನಾ ಅಧ್ಯಯನದ ಮಹತ್ವ ಸಿ) ಸಂಶೋಧನಾ ಕ್ಷೇತ್ರದ ವ್ಯಾಪ್ತಿ ಡಿ) ಮಾಹಿತಿ ಸಂಗ್ರಹಣೆ ಅಧ್ಯಾಯ-4: ಪೆಟ್ಟೆರಾಯಸ್ವಾಮಿಯ ಧಾರ್ಮಿಕ ಆಚರಣಾ ಪದ್ಧತಿಗಳು ಎ) ದೇವರ ಆರಾಧನಾ ಕುಟುಂಬಗಳು ಹಾಗೂ ಪಾರುಪತ್ತೆದಾರರ ಮಾಹಿತಿ ಬಿ) ಜಾತಿ-ಸಮೂಹಗಳು ಸಿ) ದೇವರ ಆಚರಣೆಗಳು ಮತ್ತು ಪದ್ಧತಿಗಳು ಅಧ್ಯಾಯ-5: ಪರಿಸಮಾಪ್ತಿ ಪರಾಮರ್ಶನ ಗ್ರಂಥಗಳು ಛಾಯಾಚಿತ್ರಗಳು
0 Comments
Leave a Reply. |
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|