ಲೇಖಕರು : ಗೋವಿಂದರಾಜು ಎನ್.ಎಸ್. ಪುಟ : 308 ಪರಿವಿಡಿ
ಮಾರ್ಗದರ್ಶಕರ ನುಡಿ ಮೊದಲ ಓದುಗರ ಅನಿಸಿಕೆಗಳು ಮುನ್ನುಡಿ ಅಭಿವೃದ್ಧಿಯ ಪಥದತ್ತ ದಾಪುಗಾಲಿಡಲು ಪ್ರಗತಿಪರ ಕೈಗಾರಿಕಾ ಬಾಂಧವ್ಯವು ಅತ್ಯಂತ ಪ್ರಮುಖ ಮತ್ತು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯವಾಗಿದೆ. ಜಾಗತಿಕ ಸವಾಲುಗಳ ಮೇಲೆ ಬೆಳಕು ಚೆಲ್ಲಿ, ಸಕಾರಾತ್ಮಕ ಚಿಂತನೆ, ಅರ್ಪಣೆ ಮತ್ತು ನಿರೀಕ್ಷೆಗಳ ಮೂಲಕ ಗುರಿ ಸಾಧಿಸುವ ಕಾರ್ಯವೈಖರಿಯು ಬಹುಮುಖ್ಯವಾಗಿದೆ. ವಾಸ್ತವಿಕೆಯ ಅನಾವರಣವು ಹೊಂದಾಣಿಕೆಗೆ ರೂಪುರೇಷೆಯನ್ನೊದಗಿಸಿ ಕಲಿಕೆ ಮತ್ತು ಆಚರಣೆಯನ್ನು ಪ್ರೇರೇಪಿಸಲು ಸಹಕರಿಸುತ್ತದೆ.
ಶ್ರೀಯುತ ಗೋವಿಂದರಾಜು ಎನ್.ಎಸ್. ರವರು ತಮ್ಮ ವಿದ್ವತ್ ಮತ್ತು ವೃತ್ತಿ ಜೀವನದ ಅನುಭವದೊಂದಿಗೆ ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆ ಎಂಬ ಪ್ರಾಯೋಗಿಕ ಕೈಪಿಡಿಯನ್ನು ಕನ್ನಡದಲ್ಲಿ ರಚಿಸಿರುವುದು ಪ್ರಸ್ತುತ ಸಮಯದಲ್ಲಿ ಅವಶ್ಯಕ ಹಾಗಾಗಿ ಈ ಕೃತಿ ಅಭಿನಂದನಾರ್ಹವಾದುದು. ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆಗಿರುವ ಮಾರ್ಗೋಪಾಯಗಳ ಈ ಕೈಪಿಡಿಯ ಪ್ರತಿಯೊಂದು ಅಧ್ಯಾಯದ ವಸ್ತು ವಿಷಯವು ಸುದೀರ್ಘ ಚಿಂತನೆ, ಅಭಿವ್ಯಕ್ತಿಯ ನಿಖರತೆ, ಸೂಕ್ಷ್ಮತೆ ಮತ್ತು ಭಾವನಾತ್ಮಕ ಅನುಭವಗಳಿಂದ ಮನಸೆಳೆಯುತ್ತವೆ. ಕೃತಿಯಲ್ಲಿನ ಅಂತರ್ಕ್ರಿಯಾ ಪ್ರಕ್ರಿಯೆ, ದೃಷ್ಠಿಕೋನ ಮತ್ತು ಆಯಾಮಗಳು ವೈಜ್ಞಾನಿಕ ಮತ್ತು ವಿಶ್ಲೇಷಣಾ ಶಕ್ತಿಯನ್ನು ಪ್ರೇರೇಪಿಸುತ್ತವೆ. ಕೈಗಾರಿಕಾ ಬಾಂಧವ್ಯಗಳಿಗೆ ಸಂಬಂಧಿಸಿದಂತೆ ಕೆಲವು ಮಾದರಿಗಳನ್ನು ರೂಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಲೇಖಕರು ಹೆಚ್ಚು ಹೆಚ್ಚು ಕೃತಿಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಉಪಯೋಗವಾಗಲೆಂದು ಆಶಿಸಿ, ಅಂತೆಯೇ ಲೇಖಕರ ಕನ್ನಡದ ಚೊಚ್ಚಲ ಕೃತಿಯು ಕಾರ್ಯತತ್ಪರತೆಯನ್ನು ವೃದ್ಧಿಸುವಲ್ಲಿ ದಿಕ್ಸೂಚಿಯಾಗಲೆಂದು ಹಾರೈಸುವೆ. ಪ್ರೀತಿಪೂರ್ವಕ ಶುಭಾಶಯಗಳು ಪ್ರೊ. ವೈ.ಎಸ್. ಸಿದ್ದೇಗೌಡ ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ
0 Comments
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
January 2022
Categories
All
|
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |