ಲೇಖಕರು : ಶೇಖರ್ ಗಣಗಲೂರು ಪುಟ : 151 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಪರಿವಿಡಿ
ಮುನ್ನುಡಿ ನಮ್ಮ ಪ್ರೀತಿಯ ಹುಡುಗ ಶೇಖರ್ ತಮ್ಮೆಲ್ಲಾ ಕೆಲಸ ಕಾರ್ಯಗಳ ಒತ್ತಡಗಳ ಮಧ್ಯೆ ಸಮಯ ಹೊಂದಿಸಿಕೊಂಡು ಈ ಹೊತ್ತಿಗೆ ಬದುಕು ಬದಲಾಯಿಸಿದ ಕಥನಗಳು ಹೊರತಂದಿರುವುದು ಬಹಳ ಹೆಮ್ಮೆಯ ವಿಚಾರ.
ನನ್ನ ಹಾಗೂ ಶೇಖರ್ ರ ಒಡನಾಟದ ಈ 8-10 ವರ್ಷಗಳಲ್ಲಿ ನಾನು ಕಂಡಿದ್ದು ಅವರ ಎರಡು ವಿಭಿನ್ನ ಆದರೆ ಸಹಜ ಪೂರಕ ವ್ಯಕ್ತಿತ್ವಗಳು. ಅವರ ಬಾಹ್ಯ ವ್ಯಕ್ತಿತ್ವ ಕಾರ್ಯನಿಷ್ಠೆ ಮತ್ತು ಕುಶಲತೆಯನ್ನು ವ್ಯಕ್ತಪಡಿಸಿದರೆ, ಆಂತರ್ಯದ ವ್ಯಕ್ತಿತ್ವ ಸೃಜನಶೀಲತೆ ಮತ್ತು ಸಂವೇದನಾಶೀಲತೆಯನ್ನು ತೋರುವಂತಹುದಾಗಿದೆ. ಬಾಲ್ಯಾವಸ್ಥೆಯಲ್ಲಿ ಹಳ್ಳಿಯ ವಾತಾವರಣದಲ್ಲಿ, ಸಗಣಿ ಸಾರಿಸಿದ ನೆಲದಲ್ಲಿ, ಹೊಲ, ಪ್ರಾಣಿ, ಪಕ್ಷಿಗಳ ಮಧ್ಯದಲ್ಲಿ ರೂಪುಗೊಂಡ ವ್ಯಕ್ತಿತ್ವ ಮುಂದೆ ಬೆಂಗಳೂರು ನಗರ ಕೊಡುವ ಐಷಾರಾಮದ ಸಕಲ ಆಧುನಿಕ ಸೌಕರ್ಯಗಳ ಬದುಕಿಗೆ ಮಾರ್ಪಾಡಾಗಿರುವ ನೈಜತೆಯನ್ನು ಈ ಹೊತ್ತಿಗೆಯಲ್ಲಿ ಅವರಿಗೆ ಪ್ರದತ್ತವಾದ ಆಡುಭಾಷೆಯ ಸಹಜ ಶೈಲಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಇಂತಹ ಮಹಾ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಶೇಖರ್ ತಮಗೆ ಚಿಕ್ಕಂದಿನಲ್ಲಿ ತಂದೆ ತಾಯಿಯರು, ಗುರುಗಳು ಹಾಗೂ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಯಾವ ರೀತಿಯಲ್ಲಿ ಈ ಮಟ್ಟ ತಲುಪಲು ಸಾಧ್ಯವಾಯಿತು ಅನ್ನುವುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಶೇಖರ್ ತಮ್ಮ ಈ ಮಾರ್ಪಾಡಿನ ಪ್ರಕ್ರಿಯೆಯ ಪ್ರತಿ ಮಜಲಿನಲ್ಲೂ ಎದುರಿಸಿದ ದ್ವಂದ್ವ ಬಹುಶಃ ನಾವೆಲ್ಲರೂ ಯಾವುದೋ ಒಂದು ಘಟ್ಟದಲ್ಲಿ ಅನುಭವಿಸಿರುವ ದಿನಗಳನ್ನು ನಮಗೆ ನೆನಪಿಸಿಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಅವರ ಅಂತಃಕರಣದ ನುಡಿಗಳು ನಮಗರಿವಿಲ್ಲದಂತೆ ಅವರೆಡೆಗೆ ನಮ್ಮನ್ನು ಸೆಳೆದುಬಿಡುತ್ತದೆ. ನಮ್ಮ ಒಳಗಿನ ವ್ಯಕ್ತಿತ್ವದ ಆತ್ಮವಿಶ್ವಾಸ ಮತ್ತು ನಮ್ಮ ಬಾಹ್ಯ ವ್ಯಕ್ತಿತ್ವದ ಆತ್ಮವಿಶ್ವಾಸದ ಕೊರತೆ (inferiority complex) ನಡುವಿನ ದ್ವಂದ್ವ ಯುದ್ಧದ ಫಲಿತಾಂಶದ ಮೇಲೆ ನಮ್ಮ ವೈಯಕ್ತಿಕ ಬೆಳವಣಿಗೆ ನಿಂತಿದೆ ಎನ್ನುವುದನ್ನು ಹಲವಾರು ನೈಜ ನಿದರ್ಶನಗಳ ಮೂಲಕ ಬಹಳ ಪರಿಣಾಮಕಾರಿಯಾಗಿ ಮನತಟ್ಟುವಂತೆ ಶೇಖರ್ ಚಿತ್ರಿಸಿದ್ದಾರೆ. ಶೇಖರ್ ಎಂಬ ಗಿಡ, ಇಂದು ಒಂದು ವೃಕ್ಷವಾಗಿ ಬೆಳೆಯಲು ಕಾರಣರಾದ ಅವರ ತಂದೆ, ತಾಯಿ, ಕಾಂತಮ್ಮ ಟೀಚರ್, ಗುರು ರಾಘವನಾಥ್, ಸಹೋದ್ಯೋಗಿಗಳು, ಮಡದಿ ಹಾಗೂ ಮಗಳನ್ನು ಬಹಳ ಆತ್ಮೀಯತೆಯಿಂದ ಬೇರೆ ಬೇರೆ ದೃಷ್ಟಾಂತಗಳ ಮೂಲಕ ಸ್ಮರಿಸಿಕೊಂಡಿದ್ದಾರೆ. ಶೇಖರ್ ಅವರ ಬರವಣಿಗೆಯ ಶೈಲಿ ಅತ್ಯಾಕರ್ಷಕ. ಬರವಣಿಗೆಯ ಬದುಕು ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಸೂಚನೆಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಇಂಗ್ಲಿಷ್ ಮಯವಾಗಿರುವ ಬೆಂಗಳೂರಿನ ಇಂದಿನ ಒತ್ತಡದ ಜೀವನದಲ್ಲಿ ಶೇಖರ್ ರ ಈ ಕನ್ನಡದ ಕೃತಿಯ ತಂಗಾಳಿಯ ತಂಪು ಹಾಗೂ ಕೋಗಿಲೆಯ ಇಂಪನ್ನು ನಾವು ನೀವೆಲ್ಲಾ ಆಸ್ವಾದಿಸುತ್ತಾ ಅವರನ್ನು ಕನ್ನಡ ಸಾರಸ್ವತ ಲೋಕಕ್ಕೆ ತುಂಬುಹೃದಯದಿಂದ ಸ್ವಾಗತಿಸೋಣ. ಬಿ.ಸಿ. ಪ್ರಭಾಕರ್ ಅಧ್ಯಕ್ಷರು - ಕರ್ನಾಟಕ ಮಾಲೀಕರ ಸಂಘ ಮತ್ತು ವಕೀಲರು - ಬಿಸಿಪಿ ಅಸೊಸಿಯೇಟ್ಸ್
0 Comments
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
January 2022
Categories
All
|
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |