ಭಾರತ ಹಳ್ಳಿಗಳ ದೇಶ. ವ್ಯವಸಾಯ ಪ್ರಧಾನವಾಗಿರುವ ಈ ದೇಶದಲ್ಲಿ ಅನಕ್ಷರತೆಯ ಪಿಡುಗು, ಕಂದಾಚಾರ ಮತ್ತು ಪರಂಪರೆಯಿಂದ ಬಂದ ಕೃಷಿ ಪದ್ಧತಿಗಳು ಒಂದು ಕಡೆಯಿಂದ ಕಾಡುತ್ತಿದ್ದರೆ, ಸಾಮಾನ್ಯ ಸೌಲಭ್ಯಗಳನ್ನೂ ಪಡೆದುಕೊಳ್ಳಲಾಗದ ಪರಿಸ್ಥಿತಿ. ಕೃಷಿ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸೌಲಭ್ಯಗಳು ಇದೆಯೇ, ಇದ್ದರೆ ಯಾರನ್ನು ಕೇಳಬೇಕು? ಯಾರು ಸಹಾಯ ಮಾಡುವವರು? ಎಂದೆಲ್ಲಾ ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ. ಆದರೆ, ಇದಕ್ಕೆ ಸಮಾಧಾನವಿದೆ ಎಂದು ಹೇಳುವವರಿದ್ದರೂ ಅಂಥಹವರನ್ನು ತಪ್ಪಿಸಿ ಈ ಸಮಾಧಾನಗಳಿಗೂ ಬೆಲೆಯನ್ನು ಕಟ್ಟಿ ಬೆಲೆಗೆ ತಕ್ಕಂತೆ, ಉತ್ತರಗಳನ್ನು ಮರೀಚಿಕೆಯಂತೆ ತೋರಿಸಿ ತಮಗೆ ಬೇಕಾದಂತೆ ಈ ಮುಗ್ಧ ಜನರನ್ನು ಉಪಯೋಗಿಸಿಕೊಳ್ಳುವ ಮಧ್ಯವರ್ತಿಗಳು ಮೊದಲಿನಿಂದಲೂ ಇದ್ದಾರೆ. ಸರ್ಕಾರ ತಂದ ಯಾವುದೇ ಯೋಜನೆಗಳು ಜನ ಹಿತಕ್ಕಾಗಿಯೇ ಇದ್ದು, ಕಾರ್ಯಗತವಾದರೆ ನಿಜವಾಗಿ ಬಡ ಜನರ, ರೈತರ ಅನೇಕ ಸಮಸ್ಯೆಗಳು ಅಳಿಸಿ ಹೋಗುತ್ತದೆ. ಸರ್ಕಾರದ ಯೋಜನೆಗಳ ಪರಿಚಯ ಮತ್ತು ಪ್ರಸಾರ ಸರ್ಕಾರದ ಜವಾಬ್ದಾರಿಯೇ ಆಗಿದ್ದರೂ ಸರ್ಕಾರವು ಅನೇಕ ಮಾಧ್ಯಮಗಳ ದ್ವಾರ ಮಾಡುತ್ತಿದ್ದರೂ ಅನಕ್ಷರತೆಯಿಂದಲೂ, ಮಧ್ಯವರ್ತಿಗಳ ಕಾಟದಿಂದಲೂ ನಿಜವಾಗಿ ತಲುಪಬೇಕಾದ ವರ್ಗಗಳಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಗಳು ಅಪಾರ ಸೇವೆಯನ್ನು ಮಾಡುತ್ತಿದೆ.
ಯಾವುದೇ ದೇಶದಲ್ಲಿ ಪ್ರಜಾ ಸಂರಕ್ಷಣೆಗೆ ಬೇಕಾದ್ದು 1. ಆರೋಗ್ಯ 2. ಸ್ವಾವಲಂಬನೆ. ಸರ್ಕಾರವು ಯಾವ ಯೋಜನೆಯನ್ನು ತಂದರೂ ಈ ಎರಡನ್ನೂ ಗುರಿಯಾಗಿರಿಸಿಯೇ ಯೋಜನೆಗಳನ್ನು ರೂಪಿಸುವುದು. ಇದಕ್ಕಾಗಿ ಪ್ರತಿ ಆಯ-ವ್ಯಯ ಪಟ್ಟಿಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ತೆಗೆದಿರಿಸುತ್ತದೆ. ಆದರೂ ಈ ಹಣದ ಹೆಚ್ಚು ಭಾಗ ದುರ್ಬಳಕೆಯಾಗುತ್ತದೆ ಅಥವಾ ಬಳಕೆಯಾಗದೇ ಹೋಗುತ್ತದೆ. ಆದುದರಿಂದ, ಸ್ವಯಂಸೇವಾ ಸಂಘಗಳ ಕಾರ್ಯವ್ಯಾಪ್ತಿ ಕಾರ್ಪೋರೇಟ್ ಸೋಷಿಯಲ್ ರೆಸ್ಪಾಂಸಿಬಿಲಿಟಿ ಜವಾಬ್ದಾರಿ ಬಹಳಷ್ಟು ಇರುತ್ತದೆ. ಬಹಳಷ್ಟು ಸ್ವಯಂ ಸೇವಾ ಸಂಘಗಳು ಈ ಯೋಜನೆಗಳನ್ನು ಸಮರ್ಥವಾಗಿ ಕಾರ್ಯಗತ ಮಾಡುತ್ತಿದ್ದರೂ ಇನ್ನೂ ಹೆಚ್ಚಿನ ಕಾರ್ಯಗಳು ನಡೆಯಬೇಕಾದ್ದರಿಂದ ಅನೇಕ ಪ್ರತಿಷ್ಟಿತ ಕೈಗಾರಿಕಾ ಸಂಸ್ಥೆಗಳೂ ತಮ್ಮ ಲಾಭಾಂಶದಲ್ಲೇ ಒಂದು ಭಾಗವನ್ನು ವಿನಿಯೋಗಿಸಲು ಮುಂದೆ ಬಂದಿದೆ. ಎದನ್ನೇ 'ಕಾರ್ಪೋರೇಟ್ ಸೋಷಿಯಲ್ ರೆಸ್ಪಾಂಸಿಬಿಲಿಟಿ [ ಸಿ ಎಸ್ ಆರ್]' ಎನ್ನುವುದು. ಆರೋಗ್ಯದ ಹಲವಾರು ಯೋಜನೆಗಳಿದ್ದು ಅದರ ಪ್ರಚಾರ ಆಗಿದ್ದರೂ ಜನತೆ ಅವುಗಳ ಉಪಯೋಗವನ್ನು ಪಡೆದುಕೊಳ್ಳುತ್ತಿಲ್ಲ. ಈ ಬಗ್ಗೆ, ಜನ ಜಾಗೃತಿ ಮೂಡಿಸುವುದು ಮನವೊಲಿಸುವುದು ಸ್ವಯಂ ಸೇವಾ ಸಂಘಗಳ ಕರ್ತವ್ಯವಾಗಿರುತ್ತದೆ. ಇದು ಸಾಮಾನ್ಯ ಕೆಲಸವೇನೂ ಅಲ್ಲ. ತಮ್ಮ ಪಾರಂಪರಿಕ ಪದ್ಧತಿಗಳನ್ನು ಬಿಟ್ಟು ಹೊಸ ಹೊಸ ಪದ್ಧತಿಗಳನ್ನು ರೂಢಿಸಿಕೊಳ್ಳುವುದು ಯಾರಿಗಾದರೂ ಕಷ್ಟವೇ, ಅದರಲ್ಲೂ ಗ್ರಾಮಾಂತರ ಜನರ ಮನವೊಲಿಕೆಗೆ ನುರಿತವರೇ ಬೇಕಾಗುತ್ತದೆ. ಗೃಹಿಣಿಯರ ಆರೋಗ್ಯ, ಸುಸೂತ್ರ ಪ್ರಸವ, ಮಗುವಿನ ಶುಷ್ರೂಷೆ, ರೋಗಗಳ ನಿಯಂತ್ರಣ, ಆರೈಕೆ, ಈ ರೀತಿ ಆರೋಗ್ಯದ ಅನೇಕ ಕಾರ್ಯಕ್ರಮಗಳಿದ್ದು ಮೇಲೆ ತಿಳಿಸಿದಂತೆ ಕಷ್ಟ ಸಾಧ್ಯವಾದರೂ ಸ್ವಯಂ ಸೇವಾ ಸಂಘಗಳು ಒಳ್ಳೆಯ ಸಾಧನೆಯನ್ನೇ ಮಾಡಿದೆ. ಇದರೊಂದಿಗೆ ಸಂಸ್ಥೆಗಳೂ ಸಿ.ಎಸ್.ಆರ್ ಅಡಿಯಲ್ಲಿ ತಮ್ಮ ಸಂಸ್ಥೆಯ ಸೇವೆಯಲ್ಲಿರುವ ವೈದ್ಯರ ಮೂಲಕವೋ ಅಥವಾ ಈ ಸೇವೆಗಾಗಿ ದಹಾಯ ಹಸ್ತ ನೀಡಿ ಸ್ವಾಸ್ಥ್ಯ ಕುಟುಂಬಗಳ ಅಭಿವೃದ್ಧಿಗೆ ಕಾರಣವಾಗಬಹುದು. ಇದಕ್ಕೂ ಹೆಚ್ಚಿನ ಜವಾಬ್ದಾರಿ ಹದಿ ಹರಯದವರಿಗೆ ವಿವಾಹದ ವಯಸ್ಸು, ವಿವಾಹ ಪೂರ್ವ ಸಂಬಂಧದ ರೋಗಗಳು ಮತ್ತು ಅಪಾಯಗಳು, ಇವುಗಳ ಬಗ್ಗೆ ತಿಳುವಳಿಕೆ ನೀಡುವುದು ಆಗಿದೆ. ಇನ್ನು ಸುಖಮಯ ದಾಂಪತ್ಯಕ್ಕೆ ಸಂತಾನ ನಿಯಂತ್ರಣ, ಮಕ್ಕಳ ನಡುವೆ ಅಂತರ ಈ ಕ್ಷೇತ್ರಗಳಲ್ಲಿ ಸ್ವಯಂ ಸೇವಾ ಸಂಘಗಳ ಪಾತ್ರ ಬಹಳ ಹೆಚ್ಚಿನದ್ದಾಗಿದೆ. ನಂತರ ಶಿಕ್ಷಣ. ಈ ಬಹಳ ಮಹತ್ವದ್ದಾಗಿದ್ದು, ಸರ್ಕಾರ, ಸ್ವಯಂ ಸೇವಾ ಸಂಘಗಳು ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ಇಲ್ಲಿ ಮೇಲೆ ತಿಳಿಸಿದ 'ಕಾರ್ಪೋರೇಟ್ ಸೋಷಿಯಲ್ ರೆಸ್ಪಾಂಸಿಬಿಲಿಟಿ [ಸಿ ಎಸ್ ಆರ್]ಯ ವ್ಯಾಪ್ತಿ ಅವಶ್ಯವಾಗಿದೆ. ಶಾಲೆಗಳ ಸ್ಥಾಪನೆ, ಸರ್ಕಾರಿ ಶಾಲೆಗಳ ದತ್ತು ಕೊಳ್ಳುವಿಕೆ ಮತ್ತು ಸೌಲಭ್ಯಗಳ ಕಲ್ಪಿಸುವುದು, ಸಂಕಷ್ಟದಲ್ಲಿರುವ ಮತ್ತು ಮುಚ್ಚುವ ಸ್ಥಿತಿಯಲ್ಲಿರುವ ಶಾಲೆಗಳ ಪುನಶ್ಚೇತನಗೊಳಿಸುವುದು, ವಿದ್ಯಾರ್ಥಿ ವೇತನಗಳನ್ನು ನೀಡುವುದು, ವೃತ್ತಿ ಪರ ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ. ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾದಿಯಾಗುತ್ತದೆ. ದೇಶಕ್ಕೆ ಸಲ್ಲಿಸಬಹುದಾದ ಅತ್ಯುತ್ತಮ ಸೇವೆಯಾಗಿರುತ್ತದೆ. ಈ ಸೇವೆಯನ್ನು ಈಗಾಗಲೇ ಸಂಸ್ಥೆಗಳು ಸಿ.ಎಸ್.ಆರ್ ಅಡಿಯಲ್ಲಿ ಚೆನ್ನಾಗಿಯೇ ನಿರ್ವಹಿಸುತ್ತಿದ್ದರೂ, ಈ ಸೇವೆಯ ವ್ಯಾಪ್ತಿಯನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಗತಕ್ಕೆ ತಂದರೆ, ಹಳ್ಳಿಗಳಿಂದ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಇನ್ನು ಕೃಷಿ ವಿಚಾರಕ್ಕೆ ಬಂದರೆ, ದೇಶದ ಇತರೆ ಭಾಗಗಳಲ್ಲಿನ ಪದ್ಧತಿಗಳನ್ನು ಪರಿಚಯಿಸುವುದು. ಸಾವಯವ ಕೃಷಿ, ತೋಟಗಾರಿಕೆ, ಹೈನುಗಾರಿಕೆಗಳ ಬಗ್ಗೆ ವೈಜ್ಞಾನಿಕ ವಿಚಾರಗಳ ಪರಿಚಯ, ಸರ್ಕಾರದಿಂದ ಪ್ರಕಟವಾದ ಸೌಲಭ್ಯಗಳು, ಅದರ ಪರಿಚಯ, ಅವುಗಳನ್ನು ಪಡೆದುಕೊಳ್ಳುವ ರೀತಿ ಇವುಗಳ ಬಗ್ಗೆ ತಿಳುವಳಿಕೆಯನ್ನು ನೀಡುವುದು ಈ ಸೇವೆಯನ್ನು ಸಂಸ್ಥೆಗಳು ಹಾಗೂ ಸ್ವಯಂ ಸೆವಾ ಸಂಘಗಳು ಎರಡೂ ಸೇರಿ ನಿರ್ವಹಿಸಿದರೆ ದೇಶದ ಆಹಾರ ಸಮಸ್ಯೆಯ ಪರಿಹಾರದ ಜೊತೆಗೆ ಆಹಾರವನ್ನು ರಫ್ತೂ ಮಾಡಬಹುದು. ಸಂಘಟನೆಗಳ ಉಗಮವಾಗಿದ್ದು ಭಾರತದಲ್ಲೇ. ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳ ಸ್ಥಾಪನೆ, ಸ್ವಯಂ ಸೇವಾ ಸಂಘಗಳ ಮಹತ್ತರ ಸಾಧನೆಯಾಗಿದ್ದು ಅದರ ಪ್ರಯೋಜನ ಪಡೆದ ಲಕ್ಷಾಂತರ ಗ್ರಾಮೀಣ ನಿವಾಸಿಗಳು ಇಂದು ಸುಖವಾಗಿದ್ದಾರೆ. ಈ ಕಾರ್ಯ ಇನ್ನೂ ಹೆಚ್ಚು ಪ್ರಸಾರವಾಗಬೇಕಾಗಿದೆ. ಈಗಾಗಲೇ ಪ್ರತಿಷ್ಟಿತ ಸಂಸ್ಥೆಗಳು ಸಿ.ಎಸ್.ಆರ್ ಅಡಿಯಲ್ಲಿ ನುರಿತ ಕಾರ್ಯಕರ್ತರ ದ್ವಾರ ಸಾವಿರಾರು ಸ್ವಸಹಾಯ ಸಂಘಗಳ ನಿರ್ಮಾಣ ಮಾಡಿರುತ್ತಾರೆ. ಈ ಸಂಘಗಳಿಗೆ ಸೌಲಭ್ಯ, ಅರಿವುಗಳ ಜೊತೆಗೆ ಆರ್ಥಿಕ ನೆರವನ್ನೂ ನೀಡಿ ಉತ್ತೇಜನ ನೀಡುತ್ತಿದೆ. ಈ ನಿಟ್ಟಿನಲ್ಲಿ ತೊಂದರೆ ತೊಡಕುಗಳನ್ನು ವಿಚಾರ ಮಾಡುವುದರ ಬದಲು, ಸರ್ಕಾರ ತಜ್ಞ ಪರಿಶೀಲನೆ, ಸ್ವಯಂ ಸೇವಾ ಸಂಘಗಳಿಗೆ, ಸಿ.ಎಸ್.ಆರ್ ಅಂಗವನ್ನು ಹೊಂದಿದ ಸಂಸ್ಥೆಗಳಿಗೆ ಉತ್ತೇಜನ, ಸಮಯದಲ್ಲಿ ಹಣ ಬಿಡುಗಡೆ ಮಾಡುವುದರಿಂದ ದೇಶವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಪಂಚಕ್ಕೆ ತೋರಬಹುದಾಗಿದೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|