Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಅಸಮಾನತೆಯ ಆಕೃತಿ: ಬೆಳವಣಿಗೆಯ ದ್ವಂದ್ವ ಸ್ಥಿತಿ

6/21/2017

0 Comments

 
ಬಡತನವನ್ನು ಉಪಶಮನಗೊಳಿಸಿ ಪ್ರಗತಿ ಸಾಧಿಸಲು ನಮ್ಮ ಸರ್ಕಾರವು ಉದ್ಯೋಗಖಾತರಿ ಯೋಜನೆ, ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳ ವಿತರಣಾ ಯೋಜನೆ, ರೈತರ ಸಾಲವನ್ನು ಮನ್ನಾ ಮಾಡುವ ಯೋಜನೆಗಳು ನಿರ್ಗತಿಕ (ಬಡ) ಜನರ ಕಣ್ಣಲ್ಲಿ ನೆಮ್ಮದಿಯನ್ನು ಸೂಚಿಸುತ್ತಿವೆ. ಆದರೆ, ಗ್ರಾಮೀಣ ಪ್ರದೇಶದ ಜನರಿಗೆ ಈ ಯೋಜನೆಗಳು ತಲುಪದೇ ಇರುವುದು ಅಸಮಾಧಾನಕರ ಸಂಗತಿಯೇ ಸರಿ! ಮಾವೋವಾದಿಗಳ  ಚಟುವಟಿಕೆಗಳು ಉಲ್ಬಣಗೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚಾಗುತ್ತಿರುವ  ಅಸಮಾನತೆ.
ವಾಣಿಜ್ಯ ವ್ಯವಹಾರಗಳು ಅಗಾಧ ಲಾಭವನ್ನು ಗಳಿಸುತ್ತವೆ. ಅತ್ಯುನ್ನತ ಸಂಸ್ಥೆಗಳ ಫಲಿತಾಂಶದ ಪ್ರಕಾರ ಮಾರಾಟವು ಶೇಕಡಾ 2ರಷ್ಟು ಏರಿಕೆಯಾದರೆ ಲಾಭವು ಶೇಕಡಾ 28ರಷ್ಟು ಏರಿಕೆಯಾಗುತ್ತಿದೆ. ಈ ರೀತಿಯ ಲಾಭದ ಏರಿಕೆಯಿಂದಾಗಿ ವ್ಯಾಪಾರಿಗಳು ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇವರಿಗೆ ಎ.ಸಿ ಶಾಪಿಂಗ್ಮಾಲ್ಗಳಲ್ಲಿ ಖರೀದಿ ಮಾಡಲು ಕೋಟ್ಯಂತರ ಹಣವಿದೆ; ಸ್ವಂತ ಕಾರು ಹಾಗೂ ಜೆಟ್ ವಿಮಾನಗಳಲ್ಲಿ ಪ್ರಯಾಣಿಸುವ ಅಭ್ಯಾಸವನ್ನು ಇವರು ಅಳವಡಿಸಿಕೊಂಡಿದ್ದಾರೆ, ಇನ್ನೊಂದೆಡೆ ಜಡ ವ್ಯಾಪಾರದಿಂದ ಜನರಿಗೆ ಅತ್ಯಾವಶ್ಯಕ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಶಾಪಿಂಗ್ಮಾಲ್ಗಳ ಪಕ್ಕದಲ್ಲೇ ಕೊಳೆಗೇರಿಗಳಲ್ಲಿ ಜೀವನ ಸಾಗಿಸುತ್ತಿರುವ ಅಥವಾ ನಗರ ಪ್ರದೇಶಕ್ಕೆ ಪಯಣಿಸುವ ಬಡ ಗ್ರಾಮಸ್ಥನನ್ನು ತೋರಿಕೆಯ ಆಡಂಭರವು ವಿಚಲಿತಗೊಳಿಸುತ್ತಿದೆ. ಯುವಕರು ತಲ್ಲಣಗೊಳ್ಳುತ್ತಿದ್ದಾರೆ. ಅವರು ಸಮಾನತೆಯ ಮಾವೋವಾದದ ಕಡೆ ವಾಲುತ್ತಿದ್ದಾರೆ.

ಅಸಮಾನತೆಯ ಏರಿಕೆಯು ಹೊಸತೇನಲ್ಲ. ಹಲವಾರು ವರ್ಷಗಳಿಂದ ಈ ಸ್ಥಿತಿಯು ಜಾರಿಯಲ್ಲಿದೆ. ಆರ್ಥಿಕ ಅಭಿವೃದ್ಧಿಗಾಗಿ ಸಾಮಾನ್ಯ ಮನುಷ್ಯನು ಆವಶ್ಯಕ ವಸ್ತುಗಳಿಂದ ವಂಚಿತನಾಗುವುದು ದೇಶಕ್ಕೆ ಅಗತ್ಯವೇ ಆಗಿದೆ.  ಇದನ್ನೇ ಅರ್ಥಶಾಸ್ತ್ರದಲ್ಲಿ ಅನಾದಿಕಾಲದ ಸಂಗ್ರಹಣೆ ಎನ್ನುತ್ತಾರೆ. ನೀವು ಗಿರಿಜನರ ಗುಂಪಿನಲ್ಲಿ ವಾಸಿಸುತ್ತಿದ್ದೀರೆಂದು ಊಹಿಸಿಕೊಳ್ಳಿ. ಎಲ್ಲಾ ಕುಟುಂಬಗಳು  ಸಮನಾದ ಜಮೀನು ಮತ್ತು ಜೀವನಮಟ್ಟವನ್ನು ಹೊಂದಿರುತ್ತವೆ. ಈಗ ಒಂದು ಕಾರ್ಖಾನೆ ಸ್ಥಾಪಿಸಲು ಯೋಜನೆಯನ್ನು ಮುಂದಿಟ್ಟಿದ್ದಾರೆ. ವ್ಯವಹಾರದಲ್ಲಿ ಗುಂಪಿನ ಮಾಲೀಕತ್ವವು ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿಲ್ಲ. ಗಿರಿಜನಾಂಗದ ಯಾವುದೇ ಒಬ್ಬ ವ್ಯಕ್ತಿಗೂ ಬಂಡವಾಳ ಹೂಡಲು ಸಾಧ್ಯವಿಲ್ಲ. ಕಟ್ಟುನಿಟ್ಟಾಗಿ ಸರಿಸಮಾನತೆಯನ್ನು ಪಾಲಿಸುತ್ತಿರುವುದರಿಂದ ಆ ಜನರು ಕಾರ್ಖಾನೆಯನ್ನು ಸ್ಥಾಪಿಸುವುದು ಸಾಧ್ಯವಿರುವುದಿಲ್ಲ ಮತ್ತು ಅವರು ಹಾಗೆಯೇ ಹಿಂದುಳಿಯುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಅಸಮಾನತೆಯನ್ನು ಬಿತ್ತಲು ಬಂಡವಾಳದ ಮುಖ್ಯಸ್ಥನಿಗೆ ದಾರಿಯೊಂದು ತೋರುತ್ತದೆ. ಕಾರ್ಖಾನೆಯನ್ನು ಸ್ಥಾಪಿಸಲು ಅವನು ನೌಕರರಿಗೆ ಉಚಿತವಾಗಿ ಕೆಲಸ ಆರಂಭಿಸಲು ಸೂಚಿಸುತ್ತಾನೆ. ಕೊನೆಗೆ ಆ ಮುಖ್ಯಸ್ಥನು ಕಾರ್ಖಾನೆಯನ್ನು ಪ್ರಾರಂಭಿಸಿ ಸಿರಿವಂತನಾಗುತ್ತಾನೆ ಮತ್ತು ಇನ್ನೊಂದೆಡೆ ಉಚಿತವಾಗಿ ಕೆಲಸ ಮಾಡಿದುದರ ಪರಿಣಾಮವಾಗಿ ನೌಕರರು ಬಡವರಾಗಿಯೇ ಉಳಿಯುತ್ತಾರೆ. ಬಿಟ್ಟಿ ಕೆಲಸ ಮಾಡುವುದರಿಂದ ಇದು ಅವರಿಗೆ ದೊರೆತ ಫಲ. ಅದೇನೇ ಆದರೂ ಕಾರ್ಖಾನೆ ಸ್ಥಾಪನೆಯಾಗುವವರೆಗೂ ಅಭಿವೃದ್ಧಿಯ ಪಥವಾದ ರಸ್ತೆಯ ಉನ್ನತಿಯಾಗಲೀ, ವಾಹನಗಳ ಚಲನೆಯಾಗಲೀ ಇರುವುದಿಲ್ಲ. ಇಂತಹ ಬಡಜನರ ಶ್ರಮದ ಅಪಹರಣವನ್ನು ಅನಾದಿಕಾಲದ ಸಂಗ್ರಹಣೆ ಎನ್ನುತ್ತಾರೆ. ಈ ಪರಿಸ್ಥಿತಿಯು ಆರ್ಥಿಕ ಅಭಿವೃದ್ಧಿಯ ಜೊತೆಗೆ ಅಸಮಾನತೆಯ ಏರಿಕೆಗೂ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆಯ ಏರಿಕೆ ಆಗುತ್ತಲೇ ಸಾಗಿದೆ. ಈ ಇಂಥ ಪ್ರಕ್ರಿಯೆಯಿಂದಲೇ ಭಾರತದ ಪ್ರಾಕೃತಿಕ ಸಂಪತ್ತನ್ನು ಬ್ರಿಟನ್ನವರು ಒತ್ತಾಯದಿಂದ ಅತೀ ಕಡಿಮೆ ದರದಲ್ಲಿ ರಫ್ತು ಮಾಡುತ್ತಿದ್ದರು. ಬ್ರಿಟನ್ ಶ್ರೀಮಂತ ದೇಶವಾಗಿ ಹೊರಹೊಮ್ಮುತ್ತಿದ್ದರೆ ಭಾರತವು ಬಡತನದ ಬೇಗೆಯಲ್ಲಿ ಬೇಯುತ್ತಿತ್ತು. ಇನ್ನೊಂದೆಡೆ ಇದೇ ರೀತಿಯ ಹೀನ ಪದ್ಧತಿಯನ್ನು ಅಮೆರಿಕಾ ಸಂಯುಕ್ತ ಸಂಸ್ಥಾನವು ಕೈಗೊಂಡಿತ್ತು. ಆಫ್ರಿಕಾದ ಕಪ್ಪು ಜನಾಂಗದವರನ್ನು ಗುಲಾಮಗಿರಿಗಾಗಿ ತನ್ನತ್ತ ಆಮದು ಮಾಡಿಕೊಳ್ಳುತ್ತಿತ್ತು. ಈ ಗುಲಾಮರನ್ನು ಕಾರ್ಖಾನೆಗಳಲ್ಲಿ ಮತ್ತು ದಕ್ಷಿಣ ಅಮೆರಿಕಾದ ಭೂಮಿಯಲ್ಲಿ ವ್ಯವಸಾಯ ಮಾಡಲು ಉಪಯೋಗಿಸಿಕೊಂಡಿದ್ದಲ್ಲದೆ ಅವರಿಗೆ ಅತೀ ಕಡಿಮೆ ಕೂಲಿಯನ್ನು ನೀಡಲಾಗಿಗುತ್ತಿತ್ತು.

ಅಸಮಾನತೆಯ ಹೆಚ್ಚಳ:
ಇದೇ ರೀತಿಯ ಅಸಮಾನತೆಯ ಪದ್ಧತಿಯು ಭಾರತದಲ್ಲಿ ಇಂದಿಗೂ ಹೆಚ್ಚುತ್ತಿರುವುದು ಅವಮಾನವೇ ಸರಿ! ಕೃಷಿ ಇಳುವರಿಯ ಉತ್ಪನ್ನಗಳ ಬೆಲೆಯು ಐತಿಹಾಸಿಕವಾಗಿ ಕುಸಿತ ಕಂಡಿದೆ. ಹಿಂದಿನ 50ವರ್ಷಗಳಿಂದಲೂ ಆಗುತ್ತಿದ್ದ ಕುಸಿತಕ್ಕೆ  ಸ್ವಲ್ಪ ಮಟ್ಟದ ನಷ್ಟವನ್ನು ಭರಿಸಲು ಈ ವರ್ಷದ ತಾತ್ಕಾಲಿಕ ಬೆಲೆ ಏರಿಕೆಯು ಸಾಧ್ಯವಾಗಿಸಿದೆ. ಗ್ರಾಮೀಣರು ನಗರದ ಕಡೆ ಹೆಚ್ಚು ಗಳಿಸಲು ಸಾಗುತ್ತಿದ್ದಾರೆ. ಇದರಿಂದ  ಅಸಮಾನತೆಯು ಹಳ್ಳಿ-ನಗರಗಳ ನಡುವೆ ಹೆಚ್ಚುತ್ತಿದೆ. ಒಂದೆಡೆ ನಗರದ ಕಾರ್ಮಿಕರ ಕೂಲಿಯೂ ಶೇಕಡ 20ರಷ್ಟು ಹೆಚ್ಚಾದರೆ ಇನ್ನೊಂದೆಡೆ ರಾಜಕಾರಣಿಗಳ, ಇಲಾಖಾಧಿಕಾರಿಗಳ ಹಾಗೆಯೇ ವಾಣಿಜ್ಯೋದ್ಯಮಿಗಳ ಆದಾಯವು ಅದೇ ಅವಧಿಯಲ್ಲಿ 20 ಬಾರಿಯಷ್ಟು  ಹೆಚ್ಚಿರುವುದು ಒಂದು ಕತೆ.  ಶೇಕಡ 9ರಷ್ಟು ಬೆಳವಣಿಗೆಯ ಪ್ರಮಾಣದ ವಿಖ್ಯಾತಿ ಲಭಿಸಿರುವುದನ್ನು ನಾವು ಬೀಗುತ್ತಾ ಹೇಳುತ್ತೇವೆ. ಈ ಸಾಧನೆಯನ್ನು ನಾನು ಗೌಣವೆಂದು ಹೀಗಳೆಯುವುದಿಲ್ಲ; ಇದು ಅಭಿನಂದನಾರ್ಹವೇ.  ಇಲ್ಲಿ ತಿದ್ದಿಕೊಳ್ಳಬಹುದಾದ ಒಂದು ಅಂಶವೆಂದರೆ ಬೃಹತ್ತಾದ ಅಸಮಾನತೆಯೂ ಏರಿಕೆಯಾಗಿದೆ; ಇದು ಆರ್ಥಿಕ ಅಭಿವೃದ್ಧಿಯ ನೈಜ ಫಲಿತಾಂಶವೇ ಆಗಿದೆ. 

ಮುಂಚೂಣಿಯ ಅರ್ಥಶಾಸ್ತ್ರಜ್ಞರ ಪ್ರಕಾರ ಬಡತನವನ್ನು ನಿರ್ಮೂಲನೆ ಮಾಡಲು ಶೇಕಡಾ 9ರಷ್ಟು  ಆರ್ಥಿಕ ಬೆಳವಣಿಗೆಯ ಪ್ರಮಾಣವನ್ನು ಸಾಧಿಸಬೇಕಾಗಿದೆ. ಇದರಿಂದ  ಸರ್ಕಾರವು ಹೆಚ್ಚು ತೆರಿಗೆಯನ್ನು ವಸೂಲಿ ಮಾಡಿ, ಆ ಹಣವನ್ನು ಬಡತನದ ನಿರ್ಮೂಲನೆಗಾಗಿ ರೂಪಿಸಿರುವ ಉದ್ಯೋಗ ಖಾತರಿಯಂತಹ ಯೋಜನೆಗಳಿಗೆ ಉಪಯೋಗಿಸಿಕೊಂಡು ಹೆಚ್ಚು ಬೆಳವಣಿಗೆಯನ್ನು ಸಾಧಿಸಬಹುದಾಗಿದೆ. ಬಡತನದ ವಿಷಯಕ್ಕೆ ಸಂಬಂಧಿಸಿದಂತೆ ಈ ಅಂಶವು ಸರಿಯಾದುದೇ. ಆದರೆ, ಅಸಮಾನತೆಯನ್ನು ನಿಕಷಕ್ಕೆ ಒಡ್ಡಿದರೆ ಇದು ಸೋತುಹೋಗುತ್ತದೆ. ನಿಜದಲ್ಲಿ ಈ ಅಂಶವು ಅಸಮಾನತೆಯ ಏರಿಕೆಯನ್ನು ಅಂಗೀಕರಿಸುವುದರ  ಮೇಲೆಯೇ ನಿಂತಿದೆ. ಅತಿ ದೊಡ್ಡ ಕಾರ್ಖಾನೆಗಳಿಗೆ ಸ್ವಯಂಚಾಲಿತ ಯಂತ್ರಗಳಿಂದ ಉತ್ಪಾದಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದು ಬೆಳವಣಿಗೆಯ ಪ್ರಮಾಣವನ್ನು ಶೇಕಡಾ 9 ರಷ್ಟು ಏರಿಸುತ್ತದೆ. ಸ್ವಯಂಚಾಲಿತ ಯಂತ್ರಗಳನ್ನು ಉಪಯೋಗಿಸುವುದರಿಂದ ಉನ್ನತ ನೈಪುಣ್ಯ ಹೊಂದಿದ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ.

ವ್ಯವಸ್ಥಿತ ವಲಯಗಳಲ್ಲಿನ ನಿಪುಣ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಏರುತ್ತಿರುವುದರಿಂದ ಉನ್ನತ ನಿಪುಣ ಕಾರ್ಮಿಕರಿಗೂ ಉನ್ನತ ಮಟ್ಟದ ಕೂಲಿ ದೊರೆಯುವುದಿಲ್ಲ. ಒಂದು ಉದಾಹರಣೆ ನೀಡುವುದಾದರೆ ಟ್ರ್ಯಾಕ್ಟರ್ ಚಾಲಕನು ಉನ್ನತ ನೈಪುಣ್ಯತೆಯನ್ನು ಹೊಂದಿದ್ದರೂ ಆತನ ಹಾಗೂ ನೇಗಿಲು ಹೊಡೆಯುವವನ ಕೂಲಿಯು ಒಂದೇ ಮಟ್ಟದಲ್ಲಿರುತ್ತದೆ. ಅಂದರೆ ದಿನಗೂಲಿಯು ಅಂದಾಜು 150-200 ರೂಪಾಯಿಗಳಾಗಿರುತ್ತದೆ. ಇದಕ್ಕೆ ಕಾರಣ ಟ್ರ್ಯಾಕ್ಟರ್ ಚಾಲಕರು ಅಧಿಕ ಸಂಖ್ಯೆಯಲ್ಲಿ ಲಭ್ಯವಿರುವುದು.   ಟ್ರ್ಯಾಕ್ಟರ್ ಚಾಲಕನು  ನೇಗಿಲು ಊಳುವವನಿಗಿಂತಲೂ ಹತ್ತು ಪಟ್ಟು ಹೆಚ್ಚಿನದಷ್ಟನ್ನು ಉತ್ಪಾದಿಸಿದರೂ ಅವನಿಗೆ ಸಿಗುವ ಹೆಚ್ಚಿನ ಕೂಲಿಯು ಕೇವಲ ಶೇ. 33ರಷ್ಟು ಮಾತ್ರ. ಕೂಲಿಯು ಕಾರ್ಮಿಕರ ಉತ್ಪಾದನಾ ಸಾಮಥ್ರ್ಯದಿಂದ ನಿಶ್ಷಯಿಸಲಾಗುವುದಲ್ಲ. ಅವು ಕಾರ್ಮಿಕ ಮಾರುಕಟ್ಟೆಯ ಪೂರೈಕೆ ಮತ್ತು ಬೇಡಿಕೆಯ ಆಧಾರದಿಂದ ನಿಶ್ಚಯಿಸಲಾಗುತ್ತದೆ. ಟ್ರ್ಯಾಕ್ಟರ್ ಚಾಲಕನ ಕೂಲಿ ಕಡಿಮೆಯಿರಲು ಮುಖ್ಯ ಕಾರಣ ಅವನಂಥವರ ಸಂಖ್ಯೆ ಹೆಚ್ಚಿ, ಸ್ಪರ್ಧೆಯೂ ಹೆಚ್ಚಿರುವುದು ವಿರುದ್ಧವಾಗಿ ಉದ್ಯಮಿಗಳ ಲಾಭದ ಏರಿಕೆಯು ಅನೇಕ ಪಟ್ಟು ಹೆಚ್ಚಿತ್ತಾಸಾಗಿದೆ.

ವಿಶ್ವ ಮಾರುಕಟ್ಟೆಯಲ್ಲಿ ಏದ್ದುನಿಲ್ಲಬೇಕಾದರೆ ನಾವು ಬಹು ಕಷ್ಟದ ಸವಾಲನ್ನು ಎದುರಿಸಬೇಕಾಗಿದೆ. ನಾವು ಕಡಿಮೆ ಖರ್ಚಿನಲ್ಲಿ ಹೆಚ್ಚು ವಸ್ತುಗಳನ್ನು ಉತ್ಪಾದಿಸಲು ಸ್ವಯಂಚಾಲಿತ ಯಂತ್ರಗಳನ್ನು ಉಪಯೋಗಿಸಿಕೊಳ್ಳಲೇಬೇಕಾಗಿದೆ. ಇದು ಸಮಾಜದ ಅಭದ್ರತೆ ಹಾಗೂ ಅಸಮಾನತೆಯ ವಿಪರೀತ ಏರಿಕೆಗೆ ದೂಡುತ್ತದೆ. ಇದರ ಸ್ಪಷ್ಟ ಪರಿಣಾಮವೆಂದರೆ ಮಾವೋವಾದಿಯ ಬಂಡಾಯ. ನನ್ನ ಎಣಿಕೆಯ ಪ್ರಕಾರ ಇದಕ್ಕೆ ಉತ್ತಮ ಪರಿಹಾರವು ಶ್ರೀಮಂತ ಸಂಸ್ಕೃತಿಯ ಬದಲಾವಣೆಯಲ್ಲಿದೆ.  ಸರಳ ಜೀವನಶೈಲಿಯನ್ನು ಅಳವಡಿಸಿಕೊಂಡು ಬಡವರಿಗೆ ಅಪಾರ ಔದಾರ್ಯವನ್ನು ತೋರಿಸಬೇಕು. ಹೇಗೆ ಒಬ್ಬ ತಿರುಕನ ಬ್ಯಾಂಕ್ ನ ಮೊತ್ತವು ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುವುದಿಲ್ಲವೋ ಹಾಗೆಯೇ ಸಿರಿವಂತರ  ಸಂಪತ್ತು ಬಡವರಿಗೆ ಕಿರಿಕಿರಿ ಉಂಟು ಮಾಡುವುದಿಲ್ಲ. ದಾನದಿಂದ ಬಡವರ  ಜೀವನ ಮಟ್ಟವನ್ನು ಹೆಚ್ಚಿಸಿದಂತಾಗುತ್ತದೆ. ಈ ಪರಿಹಾರವು ಬಡತನ ನಿರ್ಮೂಲನ ಯೋಜನೆಯಷ್ಟಕ್ಕೆ  ಮಾತ್ರವೇ ಸೀಮಿತವಾಗಿರುವುದಿಲ್ಲ.

ನೇಗಿಲು ಹೊಡೆಯುವವನ ಕೂಲಿಯು ಒಂದೇ ಮಟ್ಟದಲ್ಲಿರುತ್ತದೆ. ಅಂದರೆ ದಿನಗೂಲಿಯು ಅಂದಾಜು 150-200ರೂಪಾಯಿಗಳಾಗಿರುತ್ತದೆ. ಇದಕ್ಕೆ ಕಾರಣ ಟ್ರ್ಯಾಕ್ಟರ್ ಚಾಲಕರು ಅಧಿಕ ಸಂಖ್ಯೆಯಲ್ಲಿ ಲಭ್ಯವಿರುವುದು.   ಟ್ರ್ಯಾಕ್ಟರ್ ಚಾಲಕನು  ನೇಗಿಲು ಊಳುವವನಿಗಿಂತಲೂ ಹತ್ತು ಪಟ್ಟು ಹೆಚ್ಚಿನದಷ್ಟನ್ನು ಉತ್ಪಾದಿಸಿದರೂ ಅವನಿಗೆ ಸಿಗುವ ಹೆಚ್ಚಿನ ಕೂಲಿಯು ಕೇವಲ ಶೇ. 33ರಷ್ಟು ಮಾತ್ರ. ಕೂಲಿಯು ಕಾರ್ಮಿಕರ ಉತ್ಪಾದನಾ ಸಾಮಥ್ರ್ಯದಿಂದ ನಿಶ್ಷಯಿಸಲಾಗುವುದಲ್ಲ. ಅವು ಕಾರ್ಮಿಕ ಮಾರುಕಟ್ಟೆಯ ಪೂರೈಕೆ ಮತ್ತು ಬೇಡಿಕೆಯ ಆಧಾರದಿಂದ ನಿಶ್ಚಯಿಸಲಾಗುತ್ತದೆ. ಟ್ರ್ಯಾಕ್ಟರ್ ಚಾಲಕನ ಕೂಲಿ ಕಡಿಮೆಯಿರಲು ಮುಖ್ಯ ಕಾರಣ ಅವನಂಥವರ ಸಂಖ್ಯೆ ಹೆಚ್ಚಿ, ಸ್ಪರ್ಧೆಯೂ ಹೆಚ್ಚಿರುವುದು ವಿರುದ್ಧವಾಗಿ ಉದ್ಯಮಿಗಳ ಲಾಭದ ಏರಿಕೆಯು ಅನೇಕ ಪಟ್ಟು ಹೆಚ್ಚಿತ್ತಾಸಾಗಿದೆ.

ವಿಶ್ವ ಮಾರುಕಟ್ಟೆಯಲ್ಲಿ ಏದ್ದುನಿಲ್ಲಬೇಕಾದರೆ ನಾವು ಬಹು ಕಷ್ಟದ ಸವಾಲನ್ನು ಎದುರಿಸಬೇಕಾಗಿದೆ. ನಾವು ಕಡಿಮೆ ಖರ್ಚಿನಲ್ಲಿ ಹೆಚ್ಚು ವಸ್ತುಗಳನ್ನು ಉತ್ಪಾದಿಸಲು ಸ್ವಯಂಚಾಲಿತ ಯಂತ್ರಗಳನ್ನು ಉಪಯೋಗಿಸಿಕೊಳ್ಳಲೇಬೇಕಾಗಿದೆ. ಇದು ಸಮಾಜದ ಅಭದ್ರತೆ ಹಾಗೂ ಅಸಮಾನತೆಯ ವಿಪರೀತ ಏರಿಕೆಗೆ ದೂಡುತ್ತದೆ. ಇದರ ಸ್ಪಷ್ಟ ಪರಿಣಾಮವೆಂದರೆ ಮಾವೋವಾದಿಯ ಬಂಡಾಯ. ನನ್ನ ಎಣಿಕೆಯ ಪ್ರಕಾರ ಇದಕ್ಕೆ ಉತ್ತಮ ಪರಿಹಾರವು ಶ್ರೀಮಂತ ಸಂಸ್ಕೃತಿಯ ಬದಲಾವಣೆಯಲ್ಲಿದೆ.  ಸರಳ ಜೀವನಶೈಲಿಯನ್ನು ಅಳವಡಿಸಿಕೊಂಡು ಬಡವರಿಗೆ ಅಪಾರ ಔದಾರ್ಯವನ್ನು ತೋರಿಸಬೇಕು. ಹೇಗೆ ಒಬ್ಬ ತಿರುಕನ ಬ್ಯಾಂಕ್ ನ ಮೊತ್ತವು ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುವುದಿಲ್ಲವೋ ಹಾಗೆಯೇ ಸಿರಿವಂತರ  ಸಂಪತ್ತು ಬಡವರಿಗೆ ಕಿರಿಕಿರಿ ಉಂಟು ಮಾಡುವುದಿಲ್ಲ. ದಾನದಿಂದ ಬಡವರ  ಜೀವನ ಮಟ್ಟವನ್ನು ಹೆಚ್ಚಿಸಿದಂತಾಗುತ್ತದೆ. ಈ ಪರಿಹಾರವು ಬಡತನ ನಿರ್ಮೂಲನ ಯೋಜನೆಯಷ್ಟಕ್ಕೆ  ಮಾತ್ರವೇ ಸೀಮಿತವಾಗಿರುವುದಿಲ್ಲ.

ಮೂಲ: ಭರತ್ ಝಂಝನ್ ವಾಲಾ
ಕನ್ನಡಕ್ಕೆ: ನಿರ್ಮಲ.ಎಲ್., ನಿರಾತಂಕ
(ಕೃಪೆ: Deccan Herald, 7 jan 2012)
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com