ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗಕ್ಕೆ ಬಿಓಇ/ಬಿಓಎಸ್ ಗೆ ಅರ್ಹತೆಯುಳ್ಳ ಹಲವಾರು ಅಭ್ಯರ್ಥಿಗಳು ಬೆಂಗಳೂರಿನಲ್ಲಿದ್ದರೂ ನಮಗೆ ಮಾನ್ಯತೆ ನೀಡದೆ ಹೊರಗಡೆಯವರಿಗೆ ಮಾನ್ಯತೆ ನೀಡುವ ಉದ್ದೇಶವೇನು ? ಬೆಂಗಳೂರಿನಲ್ಲಿರುವ ನಮಗೆ ಮಾನ್ಯತೆ ನೀಡದೆ ಇರುವುದಕ್ಕೆ ಯಾವುದಾದರೂ ತಾಂತ್ರಿಕ ಅಡಚಣೆಗಳಿದೆಯೇ ಸ್ವಾಮಿ ? ಈ ವರ್ಷದ ಸಮಾಜಕಾರ್ಯ ವಿಭಾಗದ Affiliated ಕಾಲೇಜುಗಳ Admission ಅನ್ನು ಗಮನಿಸಿದರೆ ಕೆಲವೊಂದು ಕಾಲೇಜುಗಳಿಗೆ ಕೇವಲ ಒಬ್ಬರು, ಇಬ್ಬರು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಸೇರಿಕೊಂಡಿದ್ದಾರೆ. ಈ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣಕರ್ತರಾರು ? ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಬಹುಪಾಲು ಪ್ರಾಧ್ಯಾಪಕರು ತರಗತಿಗೆ ಹೋಗದೆ ಸಂಬಳ ಎಣಿಸುತ್ತಿದ್ದಾರೆ. ಹೀಗಾದರೆ ಸಮಾಜಕಾರ್ಯ ವಿದ್ಯಾರ್ಥಿಗಳ ಪಾಡೇನು ? ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ಗಮನಿಸಿದಲ್ಲಿ ಸಮಾಜಕಾರ್ಯ ವಿಭಾಗಗಳನ್ನು ಬೆಂಗಳೂರಿನಲ್ಲಿ ಮುಚ್ಚುವ ಸಾಧ್ಯತೆ ಇದೆ.
ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ಓದಿ ನಿಮಗೆ ಅನಿಸಿದ್ದನ್ನು ಬರೆದು ಕಳುಹಿಸಿ. ಇನ್ನು ಕೆಲವೇ ದಿನಗಳಲ್ಲಿ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಲಿ ಎಂದು ಆಶಿಸುವ ಸಮಾಜಕಾರ್ಯ ಹೆಜ್ಜೆಗಳು ತಂಡ. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಇದಕ್ಕೆ ಪ್ರತಿಕ್ರಿಯೆ ನೀಡಿದಲ್ಲಿ ಒಳಿತು. ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿಗಳಿಗಾಗಿ Facebook Group ಅನ್ನು ತೆರೆಯಲಾಗಿದೆ. ಎಲ್ಲರೂ ಒಗ್ಗೊಟ್ಟಾಗಿ ಈ Group ಗೆ ಸದಸ್ಯರಾಗಬೇಕಾಗಿ ವಿನಂತಿ. bangalore university professional social workers alumni association https://www.facebook.com/groups/147517268784733/?fref=nf ಈ ಮೇಲ್ಕಂಡ ವಿಷಯಗಳನ್ನು ನಂಬಲಾರ್ಹ ಮೂಲಗಳಿಂದ ಸಂಗ್ರಹಿಸಲಾಗಿದೆ. ಇದಕ್ಕೆ ಸ್ಪಷ್ಟನೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗವು ಬರೆದು ಕಳುಹಿಸಿದ್ದಲ್ಲಿ ಅದನ್ನು ನಮ್ಮ ವೆಬ್ ತಾಣದಲ್ಲಿ ಪ್ರಕಟಿಸಲಾಗುವುದು. ರಮೇಶ ಎಂ.ಎಚ್. ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು www.socialworkfootprints.org
0 Comments
Leave a Reply. |
Categories
All
MHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA cLUB hOUSEJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |