ಸ್ನೇಹಿತರೇ ವೃತ್ತಿನಿರತ ಸಮಾಜಕಾರ್ಯ ಕ್ಷೇತ್ರದ ಬಂಧುಗಳೇ, ಕಾವೇರಿ ಹೋರಾಟದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸಮಾಜಕಾರ್ಯ ವೃತ್ತಿನಿರತನು ತನ್ನ ಆತ್ಮಸಾಕ್ಷಿಯನ್ನು ಹಾಗೂ ತನ್ನ ವೃತ್ತಿಪರತೆಯನ್ನು ಪ್ರಶ್ನಿಸಿಕೊಂಡು ನಾವು ಈ ಸಂದರ್ಭದಲ್ಲಿ ನಮ್ಮ ಕರ್ತವ್ಯವೇನು ? ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಸಮಾಜಕಾರ್ಯದ ಶಿಕ್ಷಣ, ಕೌಶಲ್ಯ, ವೃತ್ತಿಪರತೆ ಯಾವ ರೀತಿ ಈ ಸಂದರ್ಭದಲ್ಲಿ ಸದುಪಯೋಗ ಪಡಿಸಿಕೊಂಡು ಸಮಸ್ಯೆಯ ಭಾಗವಾಗಬೇಕು ಎಂಬ ಕನಿಷ್ಟ ಸೌಜನ್ಯ ನಾವು ತೋರಲಿಲ್ಲವೆಂದರೆ ತಪ್ಪಾಗುವುದಿಲ್ಲ. ಸಮಾಜಕಾರ್ಯ ಸಂಘಟನೆಗಳ ಮೂಲಕ ಈ ಸಂದರ್ಭದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರಾದ ನಾವು ರೈತರ ಪರವಾಗಿ ಒಕ್ಕೊರಲಿನಿಂದ ಬೆಂಬಲಿಸಬೇಕಾಗಿದ್ದು ಕರ್ನಾಟಕದ ಯಾವೊಂದು ವೃತ್ತಿಪರ ಸಮಾಜಕಾರ್ಯ ಸಂಘಟನೆಯು ಈ ವಿಷಯದಲ್ಲಿ ಮೌನ ತಳೆದಿರುವುದು ಬೇಸರದ ಸಂಗತಿ. ಹಲವಾರು ಸಾಮಾನ್ಯ ನಾಗರಿಕರು ಹಾಗೂ ಸಂಘಟನೆಗಳು ಬೆಂಗಳೂರಿನ ನಾಗರಿಕರಿಗೆ ಊಟದ ವ್ಯವಸ್ಥೆ ಹಾಗೂ ಇತರೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವಾಗ ಸಮಾಜಕಾರ್ಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವೃತ್ತಿಗರು ಸುಮ್ಮನೇ ಕೂರುವುದು ಸಮಂಜಸವೇ ?
ನಾವು ಸಮಸ್ಯೆಯ ಪರಿಹಾರದ ಭಾಗವಾಗದಿದ್ದಲ್ಲಿ ನಾವು ಸಮಸ್ಯೆಯ ಭಾಗವಿದ್ದಂತೆಯೇ ಸರಿ. ನಾವು ನಮ್ಮ ಹೊಟ್ಟೆಪಾಡಿಗೋಸ್ಕರ ಸಮಾಜಕಾರ್ಯವನ್ನು ಆದರಿಸಿದರೆ ಸಮಾಜಕಾರ್ಯ ವೃತ್ತಿಯ ಬೆಳವಣಿಗೆ ಸಾಧ್ಯವಿಲ್ಲ. ಒಂದು ವೃತ್ತಿ ವೃತ್ತಿಯಾಗಿ ಸಮಾಜದಲ್ಲಿ ಮನ್ನಣೆ ಪಡೆಯಬೇಕೆಂದರೆ ವೃತ್ತಿನಿರತರು ವೃತ್ತಿನಿರತರಂತೆ ಕೆಲಸ ಮಾಡಿದಾಗ ಮಾತ್ರ ಸಾಧ್ಯ. ಕೇವಲ ಮಾತಿನಲ್ಲಿ ಮಾತ್ರ ವೃತ್ತಿಯ ಬಗ್ಗೆ ಗಹನವಾದ ಭಾಷಣ ಬಿಗಿದು ಆಚರಣೆಯಲ್ಲಿ ಇರದಿದ್ದರೆ ಸಮಾಜಕಾರ್ಯ ವೃತ್ತಿಯನ್ನು ಕಟ್ಟಲು ಸಾಧ್ಯವಿಲ್ಲ. ರಮೇಶ ಎಂ.ಎಚ್. ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |