ಸುಮ್ಮನೆ ಈ ವೆಬ್‍ಸೈಟ್‍ಗೆ ಭೇಟಿ ನೀಡಿ : www.socialworker.com ಒಮ್ಮೆ ಕಣ್ಣಾಡಿಸಿ. ಬಿಎಸ್‍ಡಬ್ಲ್ಯೂ / ಎಂಎಸ್‍ಡಬ್ಲ್ಯೂ ಓದುತ್ತಿರುವ ವಿದ್ಯಾರ್ಥಿಗಳ ಅತ್ಯಂತ ಅರ್ಥಪೂರ್ಣವಾದ ಲೇಖನಗಳು ಸಿಗುತ್ತವೆ. ಆದರೆ ಇವೆಲ್ಲಾ ವಿದೇಶೀ ನೆಲಕ್ಕೆ ಸಂಬಂಧಿಸಿದಂತವು. ಇದೆಲ್ಲಾ ನೋಡಿದ ಮೇಲೆ ನಮ್ಮ ವಿದ್ಯಾರ್ಥಿಗಳು ಏಕೆ ಈ ರೀತಿ ಕ್ರಿಯಾತ್ಮಕವಾಗಿ ಲೇಖನ ಬರೆಯುವುದಿಲ್ಲ ಎನಿಸುತ್ತದೆ. ಇದಕ್ಕೆ ಈ ಪರಿಸ್ಥಿತಿಗೆ ಕಾರಣಕರ್ತರಾರು ? ವಿದ್ಯಾರ್ಥಿಗಳೋ /ವ್ಯವಸ್ಥೆಯೋ ಅಥವಾ ಪ್ರಾಧ್ಯಾಪಕರೋ ? ನಮ್ಮ ಕರ್ನಾಟಕದ ಮಟ್ಟಿಗೆ ನೋಡುವುದಾದರೆ ನೂರಾರು ಬಿಎಸ್‍ಡಬ್ಲ್ಯೂ / ಎಂಎಸ್‍ಡಬ್ಲ್ಯೂ ಕಾಲೇಜುಗಳಿವೆ. ಭಾರತದಾದ್ಯಂತ ಲೆಕ್ಕಕ್ಕೆ ಸಿಗದಷ್ಟು ಬಿಎಸ್‍ಡಬ್ಲ್ಯೂ / ಎಂಎಸ್‍ಡಬ್ಲ್ಯೂ ಕಾಲೇಜುಗಳಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದು ವಿಶ್ವವಿದ್ಯಾನಿಲಯಗಳಿಂದ ಹೊರಬಂದಿದ್ದಾರೆ. ಆದರೆ ನಮ್ಮಲ್ಲೇಕೆ ಬರಹಗಾರರು ಕಡಿಮೆ. ವಿದ್ಯಾರ್ಥಿಗಳಿಗೆ ಅವರ ಫೀಲ್ಡ್ ವರ್ಕ್ ಅನುಭವವನ್ನು ದಾಖಲಿಸಿದರೆ ಸಾಕು. ಅದು ಒಳ್ಳೆಯ ಬರಹವಾಗುತ್ತದೆ. ಸಮಾಜಕಾರ್ಯಕ್ಕೆ ಒಂದು ಕೊಡುಗೆ ಎನಿಸುತ್ತದೆ. ಆದರೆ ಈ ಕುರಿತು ನಮ್ಮ ಪ್ರಾಧ್ಯಾಪಕರೂ ಹೇಳುವುದಿಲ್ಲ, ವಿದ್ಯಾರ್ಥಿಗಳೂ ಬರೆಯುವುದಿಲ್ಲ. ಇದಲ್ಲವೇ ದುರಂತ ?
ಬರೆಯುವುದೆಂದರೆ ಕೇವಲ ತಮ್ಮ ಪ್ರಮೋಷನ್‍ಗಾಗಿ ಲೇಖನ/ಪುಸ್ತಕ ಬರೆದು ಯಾರಿಗೂ ಗೊತ್ತಾಗದಂತೆ ಪ್ರಕಟಿಸಿ! ಕೇವಲ ತಮ್ಮ ಉದ್ಯೋಗಕ್ಕಾಗಿ ಕರೆದ ಸಂದರ್ಶನದಲ್ಲಿ ತೋರಿಸಿ ಕೆಲಸ ಗಿಟ್ಟಿಸಿಕೊಳ್ಳುವುದೇ ಬರವಣಿಗೆಯ ಸದುದ್ದೇಶ ಎಂದು ಅರ್ಥ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಳ್ಳುವುದೇ ಧ್ಯೇಯವಾಗಿರುವುದು ಇಂದಿನ ವಾಸ್ತವ. ಕೆಲವೊಬ್ಬ ಪ್ರೊಫೆಸರ್‍ಗಳು ಒಂದು ಲೇಖನವನ್ನೂ ಬರೆದಿರುವುದಿಲ್ಲ ಆದರೆ ನಮ್ಮ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಜರ್ನಲ್‍ಗಳಿಗೆ ಲೇಖನ ಬರೆಯಿರಿ ಎಂದು ಪ್ರೋತ್ಸಾಹಿಸಿ ಆ ಲೇಖನದಲ್ಲಿ ತಮ್ಮ ಹೆಸರು ಸಹಲೇಖಕನಾಗಿ ಇರಬೇಕು ಎಂದು ಕಟ್ಟಪ್ಪಣೆ ಮಾಡುತ್ತಾರೆ ಇಲ್ಲವಾದಲ್ಲಿ ಅವರ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿಗೆ ಕಂಟಕ ತಪ್ಪಿದ್ದಲ್ಲ. ಇದನ್ನೆಲ್ಲಾ ಓದಿದ ಮೇಲೆ ನಿಮ್ಮ ಅಭಿಪ್ರಾಯ ದಾಖಲಿಸಿ ಅಥವಾ ಬರೆದು ಕಳುಹಿಸಿ. ನಾವು ಅದನ್ನು ಯಥಾವತ್ತಾಗಿ ನಮ್ಮ ವೆಬ್‍ಸೈಟಿನಲ್ಲಿ ಪ್ರಕಟಿಸುತ್ತೇವೆ. ನಾವು ತಪ್ಪಾಗಿ ಹೇಳಿದ್ದಲ್ಲಿ ತಿದ್ದಿಕೊಳ್ಳುತ್ತೇವೆ. ಸಮಾಜಕಾರ್ಯ ಕ್ಷೇತ್ರ ವೃತ್ತಿಯಾಗಿ ಇನ್ನೂ ಮಾನ್ಯತೆ ಪಡೆದಿಲ್ಲದಿರುವುದಕ್ಕೆ ಇದೂ ಒಂದು ಕಾರಣವಿರಬಹುದೇ ? ಈ ಲೇಖನ ಮುಂದುವರಿಯುವುದು............ ಮುಂದುವರಿಸಲು ನೀವು ಸಲಹೆ, ಸೂಚನೆ ಕೊಡಿ..... ರಮೇಶ ಎಂ.ಎಚ್. ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |