Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ವಿಕಲಚೇತನರಿಗೆ ಸಮುದಾಯವನ್ನೇ ಮನೆಯಂಗಳ ಮಾಡಿದ ಆಶಾಕಿರಣ: ಡಾ. ಇಂದುಮತಿ ರಾವ್

1/29/2018

0 Comments

 
Picture
ಸದ್ವಿಚಾರಗಳು ನಮಗೆ ಎಲ್ಲಾ ದಿಕ್ಕಿನಿಂದಲೂ ಸಿಗಲಿ - ಋಗ್ವೇದ
ಹೊಂದಾಣಿಕೆ ಮಾಡಿಕೊಳ್ಳುವುದು ಅನುಕರಣೆ ಅಲ್ಲ, ಅದು ಸಹನಶೀಲತೆ ಮತ್ತು ದೃಢ ಶಕ್ತಿಯ ಸಂಕೇತ - ಮಹಾತ್ಮಾ ಗಾಂಧಿ
 
ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಮಹಿಳೆಯ ಬಗ್ಗೆ ಪರಿಚಯ ಮಾಡಿಕೊಡುತ್ತೇವೆ. ಇವರು ತನ್ನ ಇಡೀ ಜೀವನವನ್ನು ವಿಕಲ ಚೇತನರಿಗಾಗಿ ಮುಡುಪಾಗಿಟ್ಟಿದ್ದಾರೆ. ವಿಕಲಚೇತನರ ಕ್ಷೇತ್ರ ಎಂದರೆ ನಮಗೆ ತಕ್ಷಣ ಹೊಳೆಯುವುದೇ ಡಾ.ಇಂದುಮತಿ ರಾವ್.
​
ಇವರು ಬೆಂಗಳೂರಿನ ಸಿ.ಬಿ.ಆರ್. ನೆಟ್‍ವರ್ಕ್ (ಸೌತ್ ಏಷಿಯಾ) ದ ಸಂಸ್ಥಾಪಕರು, ಕ್ಷೇತ್ರೀಯ ಮಾರ್ಗದರ್ಶಿಗಳು ಆಗಿದ್ದಾರೆ. ಸುಮಾರು 40 ಕ್ಕಿಂತ ಹೆಚ್ಚು ವರ್ಷಗಳಿಂದ ಇವರು ವಿಕಲಚೇತನರ ಅಂತಃಸತ್ತ್ವವನ್ನು ಸಮರ್ಥಶಕ್ತಿಯನ್ನಾಗಿ ರೂಪಿಸುವುದರಲ್ಲಿ ಕಾರ್ಯ ನಿರತವಾಗಿದ್ದಾರೆ. ಸಾಮಾನ್ಯವಾಗಿ ನಾವು ವಿಕಲಚೇತನರು ಎಂದರೆ ಸಾಕು, ಅವರು ಕೈಲಾಗದವರು, ಅಯ್ಯೋ ಪಾಪಾ ಎನ್ನುತ್ತೇವೆ. ಆದರೆ ಡಾ. ಇಂದುಮತಿ ರಾವ್ ಅವರ ದೃಷ್ಟಿಯಲ್ಲಿ ವಿಕಲಚೇತನ ಎನ್ನುವುದು ಶಕ್ತಿ. ಅವರನ್ನು ಬೇರೆ ಮಾಡಬಾರದು, ಅವರು ಸಾಮಾನ್ಯ ಜನರಲ್ಲಿ ಸೇರುತ್ತಾರೆ ಎನ್ನುತ್ತಾರೆ. ಎಲ್ಲರಂತೆಯೇ ಸಮಸ್ತ ಶಕ್ತಿಯು ಅವರಲ್ಲಿಯೇ ಇರುತ್ತದೆ. ಅದು ಪ್ರಕಟಗೊಳ್ಳಲು ಪೂರಕ ಪರಿಸರ ಬೇಕು ಎಂಬುದು ಅವರ ವಿಶ್ವಾಸ.
ಡಾ. ಇಂದುಮತಿ ರಾವ್ ಅವರು ವಿದೇಶದಿಂದ 1984ರಲ್ಲಿ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದಾಗ ಯುನೆಸ್ಕೊ ಸಂಸ್ಥೆಯಲ್ಲಿ ಕೆಲಸಮಾಡುವ ಅವಕಾಶ ದೊರೆತ್ತಿದ್ದರೂ ಅವರು ಭಾರತ ದೇಶದಲ್ಲಿ ಹುಲ್ಲು, ಬೇರುಗಳ ನಡುವೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಆಸಕ್ತಿ ಹೆಚ್ಚಿತ್ತು. ಭಾರತೀಯ ಸಂಸ್ಕೃತಿಗೆ ಸರಿಹೊಂದುವ ಸಮುದಾಯ ಆಧಾರಿತ ಪುನಃಶ್ಚೇತನ ಯೋಜನೆಗಳನ್ನು ಹಮ್ಮಿಕೊಳ್ಳುವುದು ಇವರ ಮೆಚ್ಚಿನ ಕೆಲಸ. ಹಿಂದು ಸೇವಾ ಸಂಸ್ಥೆಯು ಮತ್ತು ಯುನಿಸೆಫ್ ಸಂಸ್ಥೆಯು ಇದಕ್ಕೆ ಒತ್ತಾಸೆಯಾಗಿ ನಿಂತಿವೆ. ಕೋಲಾರ ಜಿಲ್ಲೆಯಲ್ಲಿ ನಡೆದ ಸಮುದಾಯ ಆಧಾರಿತ ಪುನಃಶ್ಚೇತನ ಯೋಜನೆಯು ವಿಶ್ವದ ಗಮನ ಸೆಳೆದಿದೆ.

ಇನ್ನು ಡಾ. ಇಂದುಮತಿ ರಾವ್‍ರವರು ಹಾಗೂ ಸಿ.ಬಿ.ಆರ್ ನೆಟ್‍ವರ್ಕ್‍ನ ಬಗ್ಗೆ ಹೇಳುವುದಾದರೆ ಈ ಸಂಚಿಕೆ ಮುಗಿಯುವುದೆ ಇಲ್ಲ. ಅವರು ನಿವೇದಿತ ಶಿಶು ಕೇಂದ್ರ ಸಂಯೋಜಿತ ಮಕ್ಕಳ ಶಾಲೆಯನ್ನು (ಕಲಿಕಾ ತೊಂದರೆ ಇರುವ ಮಕ್ಕಳಿಗಾಗಿ ಇರುವ ಶಾಲೆ) ಪ್ರಾರಂಭಿಸಿದರು. ನಂತರ ನಿವೇದಿತ ಮನೋವಿಕಾಸ ಕೇಂದ್ರದ (ವಿಕಲಚೇತನ ಮಕ್ಕಳ ತಂದೆ ತಾಯಿಯ ಸ್ವಸಹಾಯ ಗುಂಪು) ಸ್ಥಾಪನೆ ಮಾಡಿದರು;  ಅದರ ಮಾರ್ಗದರ್ಶಿಗಳಾಗಿದ್ದಾರೆ. ಅವರು ವಿಕಲಚೇತನರ ನ್ಯಾಷನಲ್ ಕಮೀಷನ್ಗೆ ಸದಸ್ಯರಾಗಿದ್ದರು.

ವಿದ್ಯಾರ್ಥಿ ದೆಸೆಯಿಂದಲೂ ವಿದ್ಯಾರ್ಥಿ ಸಂಘಟನೆಯಿಂದ ಎ.ಬಿ.ವಿ.ಪಿ. ಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಹಲವಾರು ಸೇವಾಕಾರ್ಯಕರ್ತರಿಗೆ ಪ್ರೇರಣೆಯಾಗಿ ಸ್ವಾಮಿ ವಿವೇಕಾನಂದರ ಹಾಗೂ ಸೋದರಿ ನಿವೇದಿತ ಸೇವಾ ಕಾರ್ಯದಿಂದ ಗಾಢವಾಗಿ ಪ್ರಭಾವಿತರಾಗಿದ್ದಾರೆ.
​
ಅವರು ನವದೆಹಲಿಯಲ್ಲಿರುವ ಭಾರತೀಯ ಪುನಾವಸತಿ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ವಿಶ್ವಸಂಸ್ಥೆ ಎಂಬ ವಿಶ್ವದ ಅತಿದೊಡ್ಡ ಸಂಸ್ಥೆಯ ನಿರ್ದೇಶಕರು ಆಗಿದ್ದಾರೆ. ವಾಷಿಂಗ್ಟನ್ನಲ್ಲಿ ಪಾಠವನ್ನು ಹೇಳಿಕೊಡುತ್ತಾರೆ. ಇಂದುಮತಿ ಅವರದ್ದು ಬರವಣಿಗೆಯಲ್ಲಿ ಎತ್ತಿದ ಕೈ. ಸಾಕಷ್ಟು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕಗಳನ್ನು ಓದಿದ ಒಬ್ಬ ಸಾಮಾನ್ಯ ಹಳ್ಳಿಯ ವಿಕಲಚೇತನ ವ್ಯಕ್ತಿ ಮತ್ತು ಪೋಷಕರು ಕೂಡ ತಮಗಿರುವ ಹಕ್ಕುಗಳ ಬಗ್ಗೆ, ಸೌಲಭ್ಯಗಳ ಬಗ್ಗೆ ಹಾಗೂ ಸರ್ಕಾರದಿಂದ ಬರುವ ಸಹಾಯದ ಬಗ್ಗೆ ತಿಳಿಯಬಹುದು. ಅವರು ಬರೆದಿರುವ ಕೆಲವು ಪುಸ್ತಕಗಳೆಂದರೆ "Panchayat to Parliament” “Moving Away labels” “ABC of CBR” “Portage” ಇನ್ನು ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ.
Picture
ಡಾ.ಇಂದುಮತಿ ರಾವ್ ಇಡೀ ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಅವರು 12 ಅಂಶಗಳ ಒಂದು Vision Document ನ್ನು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾಗಾಗಿ ರಚಿಸಿದ್ದಾರೆ. ಇದರಲ್ಲಿ ಭಾರತೀಯ ಜನತಾ ಪಾರ್ಟಿಯು ತಾನು ಆಡಳಿತಕ್ಕೆ ಬಂದಾಗ ಹೇಗೆ ಸಂಪೂರ್ಣವಾಗಿ ವಿಕಲಚೇತನರಿಗೆ ಸಮಾಜದ ಮುಖ್ಯವಾಹಿನಿಯ ವಿಕಾಸದ ಕಾರ್ಯಕ್ರಮದಡಿ ಸೇರ್ಪಡಿಸುವ ನಿಖರವಾದ 12 ಹೆಜ್ಜೆಗಳನ್ನು ಗುರುತಿಸಿದ್ದಾರೆ. ಇದರಿಂದ ವಿಕಲಚೇತನರಿಗೆ ಎಲ್ಲಾ ರೀತಿಯಲ್ಲೂ ಉಪಯೋಗವಾಗುವ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಇವರು ಜ್ಞಾನವಾಣಿಯಲ್ಲಿ 140 ಕ್ಕೂ ಹೆಚ್ಚು ಉಪನ್ಯಾಸಗಳ ಮೂಲಕ ವಿಕಲಚೇತನರ ಹಕ್ಕು ಮತ್ತು ಅವರಿಗಿರುವ ಅವಕಾಶಗಳ ಬಗ್ಗೆ ತಿಳಿಸಿದ್ದಾರೆ. ಇದರಿಂದ ಪ್ರಯೋಜನ ಪಡೆದ ಹಲವು ವಿಕಲಚೇತನರು ಕೆಲಸಕ್ಕಾಗಿ ಅಥವಾ ತಮಗಾಗಿ ಇರುವ ಹಕ್ಕು, ಸೌಲಭ್ಯಗಳನ್ನು ಅರಿತು ಮುಂದೆ ಬಂದರು.
 
ಸಿ.ಬಿ.ಆರ್. ನೆಟ್‍ವರ್ಕ್ ಮತ್ತು ಅದರ ಕಾರ್ಯಕ್ರಮಗಳು       
ಅದೊಂದು ಸರ್ಕಾರೇತರ ಸಂಸ್ಥೆ. ಇದರ ಪ್ರಾರಂಭ 1993ರಲ್ಲಿ ಆಯಿತು. ಸಿ.ಬಿ.ಆರ್ ನೆಟ್ ವರ್ಕ್‍ನ ಮೊಟ್ಟ ಮೊದಲ ಉದ್ದೇಶ ವಿಕಲಚೇತನರಿಗೆ ಅನುಕಂಪ, ದಯೆ, ದಾನದ ದೃಷ್ಟಿಯಿಂದ ಹೊರತಂದು ಅವರ ಹಕ್ಕುಗಳ ಬಗ್ಗೆ ವಿಚಾರ ಮಾಡಲು ತೊಡಗಿಸುವುದು. 2006ರಲ್ಲಿ ಭಾರತ ದೇಶವು UNCRPD ಒಡಂಬಡಿಕೆಗೆ ಸಹಿ ಹಾಕಿದೆ. UNCRPD ಹಾಗೂ ಭಾರತದ ವಿಕಲಚೇತನರ ಅಧಿನಿಯಮವನ್ನು ಅಳವಡಿಸಿಕೊಂಡು ನಡೆಯುವ ಸಂಪ್ರದಾಯವನ್ನು ಸಿ.ಬಿ.ಆರ್ನಲ್ಲಿ ಕಾಣಬಹುದು. ಸಿ.ಬಿ.ಆರ್ ನೆಟ್‍ವರ್ಕ್ 8 ದೇಶಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ.

ವಿಕಲಚೇತನರ ಪುನಾವಸತಿಗಾಗಿ ಸಿ.ಬಿ.ಆರ್.ನಲ್ಲಿ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳೆಂದರೆ ಇವು:
  1. ಸಿ.ಬಿ.ಆರ್ ನೆಟ್‍ವರ್ಕ್‍ ಭಾರತೀಯ ಪುನಾವಸತಿ ಕೇಂದ್ರ, ದೆಹಲಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ವಿಕಲಚೇತನರ ತರಬೇತಿಗಾಗಿ ಹಲವಾರು ಕೋರ್ಸ್‍ ಗಳನ್ನು ನಡೆಸುತ್ತದೆ.
  2. 24 ಗಂಟೆಗಳು 7 ದಿನಗಳೂ ಕಾರ್ಯ ನಿರ್ವಹಿಸುವ ಸಹಾಯವಾಣಿಯನ್ನು ಹೊಂದಿದೆ. (ನಮಸ್ಕಾರ ಸಹಕಾರ: 9880935130)
  3. ಹಲವಾರು ಸಂಶೋಧನ ಕಾರ್ಯಕ್ರಮಗಳನ್ನು ಮಾಡುತ್ತದೆ.
  4. ಇದೀಗ ಗ್ರಾಮೀಣ ವಿಕಲಚೇತನರ ನೋಂದಣಿ ಕಾರ್ಯಕ್ರಮ ಪ್ರಾರಂಭಿಸಿದೆ. ಇದರಿಂದ ಒಂದು ಪ್ರದೇಶದ ಎಲ್ಲಾ ವಿಕಲಚೇತನರ ಮಾಹಿತಿ ಮತ್ತು ಇದರಿಂದ ಮುಂದಿನ ಸಕರ್ಾರದ ಪುನಾವಸತಿ ಕಾರ್ಯಗಳಿಗೆ ಅನುಕೂಲವಾಗುತ್ತದೆ.
  5. ಇದು ಸಿ.ಬಿ.ಆರ್. ನೆಟ್ ವರ್ಕ್‍ನ ಒಂದು ಪಕ್ಷಿನೋಟವಷ್ಟೆ, ಸಮಾಜಕ್ಕೆ ದಾರಿದೀಪವಾಗಿರುವ ಡಾ. ಇಂದುಮತಿಯವರ ರಚನಾತ್ಮಕ ಕಾರ್ಯಗಳಲ್ಲಿ ಯಶಸ್ಸು ಸಿಗಲೆಂದು ನಾವೆಲ್ಲ ಹಾರೈಸೋಣ.
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com