ನಾವೆಲ್ಲ ಭಾರತ ದೇಶದ ಪ್ರಜೆಗಳು. ಈ ನಮ್ಮ ದೇಶದಲ್ಲಿ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ, ಸಾಮಾಜಿಕ ಅಸಮಾನತೆ. ನಮ್ಮ ಕಣ್ಣ ಮುಂದೆಯೇ ರಾಜರೋಷವಾಗಿ ನಡೆಯುತ್ತಿದ್ದರು ನಮಗೆ ಅದರ ಪರಿವೇ ಇಲ್ಲದೆ ಮೂಕ ಪ್ರೇಕ್ಷರಂತೆ ನೋಡುತ್ತಿರುವುದು ಮೂರ್ಖತನವೇ ಸರಿ. ಇಂದಿನ ಸರ್ಕಾರಿ ಶಾಲೆಯ ಬಗ್ಗೆ, ಸರ್ಕಾರಿ ಶಿಕ್ಷಕರಿಗೆ ಇರುವ ಕಾಳಜಿ ಬಗ್ಗೆ ಹೇಳ ತೀರದಷ್ಟು. ಅಂದರೆ, ಸರ್ಕಾರಿ ಸಂಬಂಳವನ್ನು ಪಡೆದು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವುದು ಸಾಮಾಜಿಕ ನ್ಯಾಯಕ್ಕೆ, ಸಾಮಾಜಿಕ ಸಮಾನತೆಗೆ ಧಕ್ಕೆ ತಂದಂತಲ್ಲವೇ? ಶೈಕ್ಷಣಿಕ ಕ್ರಾರ್ಯಕ್ರಮಗಳು
ಕೇಂದ್ರ ಮತ್ತು ರಾಜ್ಯ ಸರ್ಕಾರ ಕಳೆದ 10 ವರ್ಷಗಳಿಂದ ನಿರಂತರವಾಗಿ ಹಮ್ಮಿಕೊಂಡಿರುವ ಶೈಕ್ಷಣಿಕ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಫಲ ನೀಡತೊಡಗಿವೆ. 2001 ರಲ್ಲಿ 10 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದರೆ ಈಗ ಅವರ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ ಇದರಲ್ಲಿ ಸರಿ ಸುಮಾರು ಶೇಕಡ 80 ರಷ್ಟು ಮಕ್ಕಳು ಬಡತನ ರೇಖೆಗಿಂತ ಕಡಿಮೆ ಇರುವ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಸರ್ಕಾರಿ ಶಾಲೆಗಳಲ್ಲಿಯೇ ವ್ಯಾಸಂಗ ಮಾಡುತ್ತಿರುವವರು. ಬಾ-ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಬೀದಿಯಿಂದ ಶಾಲೆಗೆ, ಚಿಣ್ಣರ ಅಂಗಳ, ನಲಿ-ಕಲಿ, ಸಮುದಾಯದತ್ತ ಶಾಲೆಗೆ, ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಬೈಸಿಕಲ್ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇವ್ಯಾವು ಖಾಸಗಿ ಶಾಲೆಗಳಲ್ಲಿಲ್ಲ. ಅಲ್ಲದೇ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದ್ದರೂ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಶಿಕ್ಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದು ಯಾವ ಪುರುಷಾರ್ಥಕ್ಕೆ? ಶಿಕ್ಷಣಕ್ಕಾಗಿ ಸರ್ಕಾರ ಪ್ರತಿವರ್ಷ 12 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಸದ್ಯ ಹಣದ ಕೊರತೆ ಇಲ್ಲ, ಮೂಲ ಸೌಕರ್ಯಗಳ ವ್ಯವಸ್ಧೆಯು ಪರವಾಗಿಲ್ಲ, ಆದರೂ ತಮ್ಮ ಗೌರವ ಪ್ರತಿಷ್ಠೆಗಳಿಗೆ ಸರ್ಕಾರಿ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬೋಧನೆಯನ್ನಾದರೂ ಸರಿಯಾಗಿ ಮಾಡುತ್ತಾರೆಂದರೆ ಗ್ರಾಮಾಂತರ ಜನರದ್ದು ಇಲ್ಲ ಎಂಬ ಮಾತು. ಹಾಗಾಗಿಯೇ ಅವರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವತ್ತ ಒಲವು ತೋರುತ್ತಾರೆ ಇಂತಹ ಶಿಕ್ಷಕರಿಂದಲೇ ಅದೆಷ್ಟೋ ಶಾಲೆಗಳು ಗ್ರಾಮೀಣ ಭಾಗದಲ್ಲಿ ತೆರೆ ಹಿಂದಕ್ಕೆ ಸರಿಯುತ್ತಿವೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2010-11ನೆಯ ಸಾಲಿನಲ್ಲಿ ರಾಜ್ಯಕ್ಕೆ 1268 ಕೋಟಿ ರೂಪಾಯಿ ಮಂಜೂರಾಗಿದೆ. ಶಿಕ್ಷಕರಿಗೆ ತರಬೇತಿ, ಪೀಠೋಪಕರಣಗಳು, ಶಿಕ್ಷಕರ ಸಂಬಳ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಬಳಸಲು ಉದ್ದೇಶಿಸಲಾಗಿದೆ. ಸುಧಾರಣೆ ಎಂಬುದು ನಿರಂತರವಾಗಿದ್ದು ಸರ್ಕಾರಿ ಶಾಲೆಗಳು ಉತ್ತಮವಾಗುತ್ತಿವೆ. ಇಂತಹ ಸೌಲಭ್ಯಗಳು ಗೊತ್ತಿದ್ದು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವುದು ವಿಪರ್ಯಾಸವೇ ಸರಿ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಹಿನ್ನೆಲೆ ಮತ್ತು ಖಾಸಗಿ ಶಾಲೆಗಳಿಗೆ ಬರುವ ಮಕ್ಕಳ ಹಿನ್ನೆಲೆ ಬೇರೆ ಬೇರೆಯಾಗಿರುತ್ತದೆ. ಅಂದರೆ ಇಂದಿನ ಪ್ರಸ್ತುತ ಸಮಾಜಗಳಲ್ಲಿ ಸರ್ಕಾರಿ ಶಾಲೆಗೆ ಬರುವ ಬಹುತೇಕ ಮಕ್ಕಳು ಕೂಲಿ ಕಾರ್ಮಿಕರ ಮಕ್ಕಳು ಅವರಿಗೆ ಉತ್ತಮ ಶಿಕ್ಷಣ ನೀಡಬೇಕಾಗಿರುವುದು ಸರ್ಕಾರಿ ಶಿಕ್ಷಕರ ಆದ್ಯ ಕರ್ತವ್ಯ, ಅಷ್ಟೇ ಅಲ್ಲದೆ ಸರ್ಕಾರಿ ಶಾಲಾ ಶಿಕ್ಷಕರು ಬಿ.ಎಡ್, ಡಿ.ಎಡ್ ನಂತಹ ಪದವಿಗಳನ್ನು ಪಡೆದುಕೊಂಡಿರುತ್ತಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಬಹುತೇಕವಾಗಿ ಯಾವುದೇ ಶಿಕ್ಷಕರು ತರಬೇತಿ ಪಡೆಯದೆ ಉತ್ತಮ ಸಂವಹನ (ಇಂಗ್ಲಿಷ್) ವನ್ನು ಹೊಂದಿದ ಮಾತ್ರಕ್ಕೆ ಅವರಿಗೆ ಶಿಕ್ಷಕ ಪಟ್ಟ್ಟ, ಮಕ್ಕಳನ್ನು ಹೇಗೆ ಪಾಲನೆ ಮಾಡಬೇಕೆಂಬ ಸೌಜನ್ಯತೆಯು ಅವರಿಗೆ ಇರುವುದಿಲ್ಲ ಇಂತಹ ಶಿಕ್ಷಕರು ಇರುತ್ತಾರೆಂದು ಗೊತ್ತಿದ್ದರು ಸಹ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿಯೇ ಸೇರಿಸುವುದು ದುರಂತವಲ್ಲವೇ? ಖಾಸಗಿ ಶಾಲೆಗಳು ಉತ್ತಮ ಕಟ್ಟಡ ವಾತಾವರಣ ಹಾಗೂ ಆಂಗ್ಲಭಾಷೆಯ ಹೆಸರನ್ನು ಇಟ್ಟು ಕೊಂಡಿರುವುದನ್ನು ನೋಡಿ ಮಕ್ಕಳನ್ನು ಮೊಸಳೆಗಳ ಬಾವಿಗೆ ತಳ್ಳಿದಂತಾಗುವುದಿಲ್ಲವೆ? ಅದರ ಒಳಹೊಕ್ಕು ನೋಡುವುದೇ ಇಲ್ಲ. ಇದೇ ಅಲ್ಲವೇ ಮೇಲೆ ಹೊಳಪು ಒಳಗೆ ಕೊಳಕು ಎನ್ನುವ ಗಾದೆ ಮಾತಿರುವುದು. ಪ್ರಸುತ ಸುಮಾರು 56 ಸಾವಿರ ಸರ್ಕಾರಿ ಶಾಲೆಗಳು ಕರ್ನಾಟಕದಲ್ಲಿವೆ. ಆದರೆ ಖಾಸಗಿ ಶಾಲೆಗಳ ಸಂಖ್ಯೆ ಬೆರಳಣಿಕೆಯಷ್ಠಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಅಷ್ಟೊಂದಿಲ್ಲ, ಸರಾಸರಿ 1:26 ರ ಪ್ರಮಾಣದಲ್ಲಿ ಶಿಕ್ಷಕರಿದ್ದಾರೆ, ಸರ್ಕಾರಿ ಶಾಲಾ ಶಿಕ್ಷಕರಿಗೆ, ಬಿ.ಆರ್.ಸಿ., ಸಿ.ಆರ್.ಸಿ,ಗಳಿಗೆ ತರಬೇತಿ ನೀಡುವ ಮೂಲಕ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದರೂ ಇವ್ಯಾವು ಸರ್ಕಾರಿ ಶಿಕ್ಷಕರಿಗೆ ಕಾಣಿಸಿದಂತಿಲ್ಲ, ತನ್ನ ಮಗು ತನ್ನ ಶಾಲೆಯಲ್ಲಿಯೇ ವ್ಯಾಸಂಗ ಮಾಡಬೇಕೆಂಬ ಅರಿವು ಬರುವುದಿಲ್ಲವೇಕೆ? ಕೊನೆಯ ಮಾತು ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಸರ್ಕಾರಿ ಸಂಬಳವನ್ನು ಪಡೆಯುತ್ತಿರುವ ಪ್ರತಿಯೊಬ್ಬ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತಹ ಕಾನೂನನ್ನು ಜಾರಿಗೆ ತರಬೇಕು. ಸರ್ಕಾರಿ ಶಿಕ್ಷಕರು ಮತ್ತು ನೌಕರರು 6ನೆಯ ವೇತನ ಆಯೋಗ ಮಂಜೂರಾತಿಗಾಗಿ ಹೋರಾಟ ಮಾಡುವವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಮೊದಲು ಸೇರಿಸಿ, ಯಾವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುವರೋ ಅದೇ ಶಾಲೆಯಲ್ಲಿ ಅವರ ಮಗು ವ್ಯಾಸಂಗ ಮಾಡಬೇಕು. ಹಾಗಾದಾಗ ತನ್ನ ಮಗು ವ್ಯಾಸಂಗ ಮಾಡುತ್ತಿದೆ ಎಂಬುದನ್ನು ಅರಿತು ಉತ್ತಮ ಬೋಧನೆ ಮಾಡುತ್ತಾರೆ ಹೀಗಾದಲ್ಲಿ ಸ್ವಲ್ಪ ಮಟ್ಟಿಗಾದರೂ ಸಮಾಜದ ಪರಿವರ್ತನೆ, ಬಡ ಮಕ್ಕಳ ಉತ್ತಮ ಶಿಕ್ಷಣವನ್ನು ಈ ದೇಶ ಕಾಣಬಹುದು. ನಾಗೇಶ್.ಹೆಚ್.ವಿ ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಕೋಲಾರ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |