ರೋಶನಿ ಸಂಸ್ಥೆಯ ಸಮಾಜಕಾರ್ಯ ವಿದ್ಯಾರ್ಥಿಗಳ ಸಂಘವು ಬೆಂಗಳೂರು ನಗರದ Century Club ನಲ್ಲಿ ದಿನಾಂಕ: 18-10-2013ರಂದು ಸಮಾರಂಭವನ್ನು ಏರ್ಪಡಿಸಿತ್ತು. ಸುಮಾರು 400 ರೋಶನಿ ವಿದ್ಯಾಸಂಸ್ಥೆಯ ಸಮಾಜಕಾರ್ಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೋಶನಿ ವಿದ್ಯಾಸಂಸ್ಥೆಯ ಸಮಾಜಕಾರ್ಯ ವಿದ್ಯಾರ್ಥಿ ಹಾಗೂ ಕರ್ನಾಟಕ ಸರ್ಕಾರದ ಮಾನ್ಯ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕಿಯವರು ಮಾತನಾಡುತ್ತಾ, ರೋಶನಿ ಸಂಸ್ಥೆಯ ಸಮಾಜಕಾರ್ಯ ವಿದ್ಯಾರ್ಥಿ ಸಂಘವು ಬೆಂಗಳೂರಿನಲ್ಲಿ ಈ ಮಟ್ಟದಲ್ಲಿ ಬೆಳೆದಿದೆ. ಈ ರೀತಿಯಲ್ಲಿ ನಮ್ಮ ಸಂಘ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂಬುದನ್ನು ನಾನು ಊಹಿಸಿಕೊಂಡಿರಲಿಲ್ಲ ಎಂದರು. ಹಾಗೆಯೆ ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಹಾಗೂ ನಾನು ಈ ಸ್ಥಾನಕ್ಕೆ ಬರಲು ಸಮಾಜಕಾರ್ಯ ಶಿಕ್ಷಣ ನನಗೆ ಸಹಕಾರಿಯಾಗಿತ್ತು ಎಂದರು. ನಗರಾಭಿವೃದ್ಧಿ ಇಲಾಖೆಯ ಬಗ್ಗೆ ಕಿರುಪರಿಚಯ ಮಾಡಿ ಇಲಾಖೆಗೆ ಸಮಾಜಕಾರ್ಯ ಕ್ಷೇತ್ರದಲ್ಲಿರುವವರು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅವರ ಅನುಭವ ಹಾಗೂ ಸಲಹೆಗಳನ್ನು ನೀಡಬೇಕು. ನಾನು ರಾಜಕಾರಣಿ ಹಾಗೂ ನಗರಾಭಿವೃದ್ಧಿ ಸಚಿವ ಆದುದರಿಂದ ಹಲವಾರು ಜನ ಕೆಲಸಕ್ಕಾಗಿ ನಮ್ಮ ಬಳಿ ಬರುತ್ತಾರೆ. ಇಲ್ಲಿರುವವರು ಹಲವಾರು ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೀರಿ. ನೀವು ನಿಮ್ಮ ಸಂಸ್ಥೆಗಳಲ್ಲಿನ ಉದ್ಯೋಗಗಳನ್ನು ಅರ್ಹರಿಗೆ ನೀಡಿ ಸಹಕರಿಸಿ ಎಂದು ಮನವಿ ಮಾಡಿದರು, ಸಚಿವ ಸ್ಥಾನದಲ್ಲಿರುವ ವ್ಯಕ್ತಿ ಮನವಿ ಮಾಡಿದ್ದನ್ನು ನಾ ಕಂಡುದು ಇದೇ ಮೊದಲ ಬಾರಿ. ಈ ಸರಳ ಸಜ್ಜನಿಕೆಯ ವ್ಯಕ್ತಿತ್ವ ಕಂಡು ಇಂದಿನ ದಿನಗಳಲ್ಲೂ ಇಷ್ಟೊಂದು ಸಜ್ಜನಿಕೆಯಿರುವ ವ್ಯಕ್ತಿ ನಮ್ಮ ರಾಜಕಾರಣದಲ್ಲಿದ್ದಾರೋ ಎಂದು ಆಶ್ಚರ್ಯವಾಯಿತು. ಈ ಸರಳತೆ ಸಜ್ಜನಿಕೆಗೆ ನಮ್ಮ ಸಮಾಜಕಾರ್ಯ ಶಿಕ್ಷಣದ ಪಾತ್ರವಿದ್ದರೂ ಇರಬಹುದು. ಕೇವಲ ಒಂದೆರಡು ಮಾತಿನಿಂದ ಅವರ ವ್ಯಕ್ತಿತ್ವವನ್ನು ತೂಗುವಷ್ಟು ನಿಪುಣತೆ ನನ್ನಲ್ಲಿಲ್ಲ. ಆದರೆ ಅವರ ಮಾತಿನ ಸೊಗಸು ಹಾಗೂ ಅವರ ಮಾತಿನ ವಿನಯವಂತಿಕೆಗೆ ನಾ ಮನಃ ಸೋತುಹೋದೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಸಂಘಗಳನ್ನು ಕಟ್ಟಲು ಕಷ್ಟ, ಸಾಧ್ಯವೇ ಇಲ್ಲಾ ಎನ್ನುವಂತಹವರಿಗೆ ಈ ಸಮಾರಂಭ ಮಾದರಿ ಹಾಗೂ ಆದರ್ಶ ಪ್ರಾಯವೆಂಬಂತಿತ್ತು. ಮೂಲಭೂತವಾಗಿ ಸಂಘಗಳನ್ನು ಕಟ್ಟಬಹುದು, ಈಗಾಗಲೆ ಎಲ್ಲಾ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿರುವ ಉದಾಹರಣೆಗಳಿವೆ. ಸಂಘಗಳನ್ನು ಕಟ್ಟಲು ಸಾಧ್ಯವಿಲ್ಲ ಎಂಬ ಮಾತು ಸುಳ್ಳಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿಗಳಿಗೇಕೆ ವಿದ್ಯಾರ್ಥಿ ಸಂಘವಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಏಕೆಂದರೆ ನಾನು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘವಿತ್ತಂತೆ ಎಂಬುದು ಇತಿಹಾಸ ಆದರೆ ಪ್ರಸ್ತುತ ಈ ಸಂಘದ ವತಿಯಿಂದ ಯಾವುದೇ ಕಾರ್ಯಕ್ರಮಗಳಾಗುತ್ತಿಲ್ಲ ಎಂಬುದು ವಾಸ್ತವ. ಈ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಪದವಿ ಪಡೆದವರು ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು ಉನ್ನತ ಸ್ಥಾನದಲ್ಲಿರುವ ಹಿರಿಯರು ಚಿಂತಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿದ್ಯಾರ್ಥಿಗಳ ಸಂಘಕ್ಕೆ ಮರುಚಾಲನೆ ನೀಡಿದರೆ ಒಳಿತೆನಿಸುತ್ತದೆ. ರೋಶನಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಾಧ್ಯವಾದದ್ದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ ಎಂದರೆ ಅದಕ್ಕೆ ಇರುವ ಕಾರಣಗಳನ್ನು ಹಂಚಿಕೊಂಡು ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡೋಣ.
ನಿಮ್ಮ ಸಲಹೆಗಳನ್ನು ಬರೆದು ಕಳುಹಿಸಿಕೊಡಿ............................... ರಮೇಶ ಎಂ.ಎಚ್. ಸಂಪಾದಕ, ಸಮಾಜಕಾರ್ಯದ ಹೆಜ್ಜೆಗಳು ನಿರಾತಂಕ Ph-9980066890
22 Comments
DR G P NAIK
10/11/2017 12:51:53 am
There was a alumni association of Bangalore University Social Work students and they did conduct some events in the past. Gangadharaiah, Gandhidoss, Vasu, Basu, Hema and many others were actively engaged in organizing the events. Later Gangadharaiah moved to Mysore and the momentum was slowed down. These are informal associations and hence will not have continuity. We all can consider reviving the old one or starting the new one.
Reply
NANJEGOWDA
10/11/2017 12:52:28 am
Dear Mr.Ramesh.
Reply
D. R. NAGARAJ
10/11/2017 12:53:04 am
Dear Ramesh,
Reply
VASUDEVA SHARMA
10/11/2017 12:53:44 am
ಪ್ರಿಯ ರಮೇಶ್
Reply
YOGEESH S.T
10/11/2017 12:54:03 am
Dear all,
Reply
RAMESHA M H
10/11/2017 12:54:24 am
Dear Mr Yogesh
Reply
RAMESHA M.H.
10/11/2017 12:54:43 am
ಸಮಾಜಕಾರ್ಯ ಕ್ಷೇತ್ರದಲ್ಲಿ ಸಂಘಗಳನ್ನು ಸ್ಥಾಪಿಸುವುದು ಕಷ್ಟ. ಹಲವಾರು ಸಂಘಗಳನ್ನು ಕಟ್ಟಿದವರ ಅನುಭವದ ಮಾತು. ಸಂಘಗಳನ್ನು ಕಟ್ಟಿ ಅತ್ಯಂತ ಯಶಸ್ವಿಯಾದ ಸಂಘಗಳ ಸಂಖ್ಯೆ ಅತಿ ವಿರಳ. ಆದರೆ ಕಟ್ಟುವುದನ್ನು ನಿಲ್ಲಿಸಬಾರದು. ಯಾರೊ ಪುಣ್ಯಾತ್ಮ ಹೀಗೆ ಹೇಳಿದ್ದಾನೆ: ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು. ಏನೇ ಆಗ್ಲಿ, ಕಟ್ಟಿಯೇ ಕಟ್ಟಿ. ನಾವೂ ಕಟ್ಟಲು ಪ್ರಯತ್ನಿಸೋಣ.
Reply
RAMESHA M.H.
10/11/2017 12:55:02 am
ಹಿರಿಯರ ಅಭಿಪ್ರಾಯದ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ Bangalore University Professional Social Workers Alumni Association ಅನ್ನು ಮರುಚಾಲನೆಗೊಳಿಸುವ ಸಲುವಾಗಿ ಒಂದು ಸಭೆ ಸೇರಬೇಕೆಂದು ನಿರ್ಧರಿಸಲಾಗಿದೆ. ಈಗಾಗಲೆ ನಮ್ಮ ಹಿರಿಯರು ಹಲವಾರು ಕಾರ್ಯಕ್ರಮಗಳನ್ನು ಈ ಅಸೋಸಿಯೇಷನ್ ನಿಂದ ಮಾಡಿದ್ದಾರೆ. ಅವರ ಅನುಭವಗಳನ್ನು ಹಂಚಿಕೊಳ್ಳಲಿ, ಮತ್ತೆ ಕೈಜೋಡಿಸಿ ಕಟ್ಟುವ ಪ್ರಯತ್ನ ಸಾಗಲಿ.
Reply
RAMESHA M.H.
10/11/2017 12:55:20 am
1. ಏಕೆ ನಾವು Bangalore University Professional Social Workers Alumni Association ಅನ್ನು ಸಂಘಟಿಸಲು ಸಾಧ್ಯವಾಗಲಿಲ್ಲ ? ಏನು ಕಾರಣಗಳಿರಬಹುದು ? ಅವುಗಳಿಗೆ ನೀವು ನೀಡುವ ಸಲಹೆ.
Reply
RAMESHA M.H.
10/11/2017 12:55:43 am
I welcome this move, and I will be there for the meeting. please go ahead, we will support you.
Reply
RAMESHA M.H.
10/11/2017 12:56:09 am
Dear Dr Chandrashekar sir
Reply
RAMESHA M.H
10/11/2017 12:56:31 am
Kan Vas
Reply
DR VENKAT PULLA
10/11/2017 12:56:52 am
Neither I belong to Bangalore nor am I an alumnus of your college.
Reply
RAMESHA M.H.
10/11/2017 12:57:14 am
Dear Sir Dr Venkat Pulla
Reply
MANJUNATH
10/11/2017 12:57:33 am
Dear Ramesh,
Reply
RAMESHA M.H.
10/11/2017 12:57:53 am
Dear Manjunath
Reply
GUNDAPPA
10/11/2017 12:58:09 am
Dear Ramesh
Reply
RAMESHA M.H.
10/11/2017 12:58:26 am
Dear Mr Gundappa
Reply
PRAKASH
10/11/2017 12:58:45 am
Hi Bhimappa,
Reply
DR G P NAIK
10/11/2017 12:59:05 am
Dear All
Reply
RAMESHA M.H.
10/11/2017 12:59:23 am
Dear Dr G Pandu Naik
Reply
Muniraju
1/27/2018 10:48:12 pm
Hai I am Muniraju 2001 Batch ,This is good initiative ,very happy to participate and support .
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|