Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಸಮಾಜಕಾರ್ಯಕ್ಕೆ ಮನಸೋತು ಐ.ಎ.ಎಸ್. ಹುದ್ದೆ ತೊರೆದ ಅಧಿಕಾರಿ

6/20/2017

3 Comments

 
Picture
ಐ.ಎ.ಎಸ್. ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನ, ಎದುರಲ್ಲಿ ಕಂಡರೆ ಸಾಕು ಎದ್ದು ನಿಂತು ಕೈ ಮುಗಿವ ಜನ,ಅಬ್ಬಾ! ನೆನೆಸಿಕೊಂಡರೆ ಏನೋ ಒಂದು ತರಹದ ಸಂತೋಷ. ಇಂತಹ ಅಧಿಕಾರ, ಗೌರವ, ಮನ್ನಣೆಗಳನ್ನು ಬೇಡವೆನ್ನುವುದು ಯಾರಿಗಾದರು ಸಾಧ್ಯವೇ? ಇಲ್ಲಪ್ಪ ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಾಯಿಯಿಂದ ಕೇಳಿಬರುವ ಉತ್ತರ. ಆ ರೀತಿಯ ತೀರ್ಮಾನತೆಗೆದುಕೊಳ್ಳುವ ದಿಟ್ಟತನ ಕೇವಲ ಅಪರೂಪ ಮತ್ತು ಅಸಾಧ್ಯರು ಎನಿಸುವಂತಹ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಅಂತಹ ಅಸಮಾನ್ಯರ ಸಾಲಿನಲ್ಲಿ ಸೇರಿಸಬಹುದಾದಂತ ಹೆಸರೇ ಅರುಣಾರಾಯ್. ಇವರನ್ನು ಸಮಾಜ ಕಾರ್ಯದಅರುಣೋದಯ ಎಂದರೆ ತಪ್ಪಾಗಲಾರದು. ಇವರು ತಮ್ಮ ಜಾಣ್ಮೆ, ಬುದ್ದಿಶಕ್ತಿಗೆ ದೊರೆತ ಐ.ಎ.ಎಸ್. ಅಧಿಕಾರ ತೊರೆದು ಸಾಮಾಜಿಕಕಾರ್ಯಕರ್ತೆಯಾಗಿ ಸಲ್ಲಿಸಿದ ಸೇವೆ, ಕೊಡುಗೆ ಅಪಾರ. 
ಚೆನ್ನೈನಲ್ಲಿ ಹುಟ್ಟಿ, ದೆಹಲಿಯಲ್ಲಿ ಬೆಳೆದ ಅರುಣಾ 1968ರಲ್ಲಿ ಐ.ಎ.ಎಸ್.ಪಾಸು ಮಾಡಿ. ಆರು ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆಸಲ್ಲಿಸಿದರು. ನಂತರ ತನ್ನ ಪತಿ ಸಂಜಿತ್ ‘ಬಂಕರ್' ರಾಯ್ ಅವರುರಾಜಾಸ್ತಾನದ ತಿಲೋನಿಯಾದಲ್ಲಿ ನಡೆಸುತ್ತಿದ್ದ ಸಾಮಾಜಿಕ ಕಲ್ಯಾಣ ಸಂಶೋಧನಾ ಸಂಸ್ಥೆಯನ್ನು ಸೇರಿದರು. ನಂತರ 1983ರಲ್ಲಿಸಾಮಾಜಿಕ ಕಲ್ಯಾಣ ಸಂಶೋಧನಾ ಸಂಸ್ಥೆಯನ್ನು ತೊರೆದು 80ರ ದಶಕದ ಕೊನೆಯ ಭಾಗದಲ್ಲಿ ಅರುಣಾ ಮತ್ತು ಅವರಸಹೋದ್ಯೋಗಿ ಶಂಕರ್ ಸಿಂಗ್ರು ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ಸ್ಥಾಪಿಸಿದರು. ಗ್ರಾಮೀಣ ಜನತೆಗೆ ಅವರ ಹಕ್ಕುಗಳನ್ನುತಿಳಿಸಲು ಈ ಸಂಘಟನೆ ಪ್ರಯತ್ನಿಸಿತು. ಈ ಪ್ರಕ್ರಿಯೆಯಲ್ಲಿಯೇ ಮಾಹಿತಿ ಹಕ್ಕು ಎಂಬ ಪರಿಕಲ್ಪನೆಯೂ ಹುಟ್ಟಿಕೊಂಡಿತು. ಈಸಂಘಟನೆಯ ನೇತೃತ್ವದಲ್ಲಿ ಹಲವಾರು ಹೋರಾಟಗಳು ಧರಣಿಗಳನ್ನು ನಡೆಸಲಾಯಿತು. ಸರ್ಕಾರಿ ಯೋಜನೆಗಳಿಗಾಗಿ ಕೆಲಸ ಮಾಡುವ ಸ್ಥಳೀಯ ಜನರಿಗೆ ಕಾನೂನಿನ ಪ್ರಕಾರ ನೀಡಬೇಕಾದ ಕನಿಷ್ಠ ವೇತನನೀಡಲು ಒತ್ತಾಯಿಸಲಾಯಿತು. ಅಭಿವೃದ್ಧಿ ಯೋಜನೆಗಳ ಅಧಿಕೃತ ದಾಖಲೆಗಳನ್ನು ಬಯಲು ಮಾಡುವ ಪ್ರಯತ್ನ ಮತ್ತುದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದಾಗ ದಿಗ್ಭ್ರಮೆಯಾಗುವಷ್ಟು ಸತ್ಯಗಳು ಹೊರಬಂದವು. ಶಾಲೆ, ಆಸ್ಪತ್ರೆ, ಶೌಚಾಲಯಗಳಿಗಾಗಿ ಸಕಾರದಿಂದ ಹಣ ಮಂಜೂರಾಗಿದ್ದರೂ, ಅವುಗಳು ನಿರ್ಮಾಣವಾಗಿರುವ ಬಗ್ಗೆಸಾಕಷ್ಟು ದಾಖಲೆಗಳಿದ್ದರೂ ವಾಸ್ತವದಲ್ಲಿ ಅದ್ಯಾವುದೂ ಇರಲಿಲ್ಲ. ಸತ್ತ ವ್ಯಕ್ತಿಗಳ ಹೆಸರಿನಲ್ಲಿ ಸಂಬಳ ನೀಡಿರುವುದಾಗಿ ದಾಖಲೆಗಳುಸೃಷ್ಟಿಯಾಗಿದ್ದವು. ಇವು ಸಾರ್ವಜನಿಕ ಹಣ ದುರುಪಯೋಗವಾಗುತ್ತಿರುವುದರ ಸ್ವಷ್ಟ ಚಿತ್ರಣ ನೀಡಿತ್ತು. ಇದನ್ನೇಬಂಡವಾಳವನ್ನಾಗಿಟ್ಟುಕೊಂಡ ಅರುಣಾ ಮತ್ತವರ ತಂಡ ಜನರಲ್ಲಿ ಮಾಹಿತಿ ಹಕ್ಕಿನ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲುಅನುವಾಯಿತು. ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ನಾಯಕರ ಬಳಿ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಾಹಿತಿಕೇಳುವ ಹಕ್ಕಿದೆ ಎನ್ನುವುದು ಅರುಣಾರವರ ವಾದವಾಗಿತ್ತು. ಇವರ ಈ ವಾದ ಮುಂದೆ ಜನತಾ ಆಂದೋಲನವಾಗಿ ಪರಿಣಮಿಸಿತು. ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಹೇಳಿಕೆಯಂತೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡುವ ಒಂದು ರೂಪಾಯಿಯುಹಳ್ಳಿಯನ್ನು ತಲುಪುವಷ್ಟರಲ್ಲಿ 15 ಪೈಸೆಯಾಗಿರುತ್ತದೆ. ಹಾಗಾದರೆ ಉಳಿದ 85 ಪೈಸೆ ಎಲ್ಲಿ ಹೋಗುತ್ತದೆ. ಹೀಗೆ ನಂತರದ ದಿನಗಳಲ್ಲಿಮಾಹಿತಿ ಹಕ್ಕನ್ನು ಒಂದು ಕಾಯಿದೆಯಾಗಿಸುವ ತಮ್ಮ ಗುರಿಯನ್ನು ಅಂತಿಮವಾಗಿ ಅರುಣಾ 2005ರಲ್ಲಿ ನನಸಾಗಿಸಿದರು. ಇದಕ್ಕೂ ಸಾಕಷ್ಟು ಮುಂಚೆಯೇ 2000ರಲ್ಲಿ ಅವರ ಸಾಮುದಾಯಿಕ ನಾಯಕತ್ವಕ್ಕಾಗಿ ಮ್ಯಾಗ್ಸೆಸೆ ಪ್ರಶಸ್ತಿ ಗೌರವಬಂದಿತು. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಿದ ಆಧುನಿಕ ಭಾರತದ 50 ಮಹಿಳೆಯರಲಿ ಅರುಣಾ ಕೂಡ ಒಬ್ಬರಾಗಿರುವುದುಹೆಮ್ಮೆಯ ಸಂಗತಿ. ಪ್ರಶಸ್ತಿಯಿಂದ ದೊರೆತ ಗೌರವ ಧನವಾಗಿ ದೊರೆತ 50 ಸಾವಿರ ಅಮೆರಿಕಾ ಡಾಲರ್ ಗಳನ್ನು ಪ್ರಜಾತಾಂತ್ರಿಕಹೋರಾಟಗಳನ್ನು ಬೆಂಬಲಿಸುವ ಟ್ರಸ್ಟ್ ಗೆ ಬಳಸಿದರು. 2004ರಲ್ಲಿ ಸೋನಿಯಗಾಂಧಿ ನೇತೃತ್ವದ ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಂದು ಅರುಣಾರವರುರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು ಮತ್ತು ಆರ್.ಟಿ.ಐ. ಆಕ್ಟ್ ನ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದರು. 2005ರಲ್ಲಿ ವಿವಿಧ ಮಹಿಳಾ ಸಂಘ ಸಂಸ್ಥೆಗಳು ಒಟ್ಟುಗೂಡಿ ನೊಬೆಲ್ ಪಾರಿತೋಷಕವನ್ನು ಸಮಾಜ ಸೇವೆಯಲ್ಲಿಅದ್ವಿತೀಯ ಸಾಧನೆಗೈದ ಮಹಿಳಾ ಸಾಧಕರಿಗೆ ನೀಡುವ ಉದ್ದೇಶದಿಂದ 150 ದೇಶಗಳಲ್ಲಿ ನಡೆಸಿದ ಹುಡುಕಾಟದಲ್ಲಿ ಒಟ್ಟು 1000ಮಹಿಳಾಮಣಿಗಳ ಹೆಸರುಗಳು ನೊಂದಾಯಿತವಾದವು ಅದರಲ್ಲಿ ಶ್ರೀಮತಿ ಅರುಣಾರಾಯ್ರವರ ಹೆಸರು ಸೇರಿತ್ತು ಎನ್ನುವುದು ಹೆಮ್ಮೆಯವಿಷಯ. ಅರುಣಾ ರಾಯ್- ಸಮಾಜ ಕಾರ್ಯದ ಸಾರಥಿ, ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲಿರಿಗೊಂದು ಮಾದರಿ
3 Comments
MalleshS
8/4/2018 08:15:13 am

Social worker

Reply
Ganapati Uppar
8/4/2018 09:18:57 am

Very Exlent.

Reply
Sharanamma d/mallikarjun link
8/4/2018 10:45:40 pm

Onyon

Reply



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com