ಜೀವನದಲ್ಲಿ ಎಷ್ಟೇ ಕಷ್ಟಗಳು, ಸಮಸ್ಯೆಗಳು ಬಂದರೂ, ದುಃಖದೊಳು ಮುಳುಗಿದರೂ, ತನ್ನ ಅಸ್ಥಿತ್ವವನ್ನು ಸ್ಥಾಪಿಸಿಕೊಂಡು ಜೊತೆಗೆ ತನ್ನಂತಹ ಅನೇಕ ವಿಕಲಚೇತನರ ಅಸ್ಥಿತ್ವಕ್ಕಾಗಿ, ಹಕ್ಕುಗಳಿಗಾಗಿ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಹೋರಾಟಗಾರರು, ಛಲಗಾರರು ತೀರಾ ವಿರಳ. ಹೀಗಿರುವಾಗ ತನ್ನೊಳಗಿನ ದೈಹಿಕ ಅಶಕ್ತತೆಯನ್ನು ಸಂಪೂರ್ಣ ದೂರವಿಟ್ಟು, ಆತ್ಮ ಶಕ್ತಿಯನ್ನು ಮನದೊಳಗಿನ ಧೀಃಶಕ್ತಿಯನ್ನು ಕೇಂದ್ರೀಕರಿಸಿಕೊಂಡು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವೆನಿಸಿಕೊಂಡಿದ್ದಲ್ಲದೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹೀಗೆ ಇನ್ನೂ ಅನೇಕ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡು ಸಮಾಜಸೇವೆಯ ಕಡೆ ಮುಖಮಾಡಿರುವ ಈ ಅದಮ್ಯ ಚೇತನವೇ ಮಾಲತಿ ಹೊಳ್ಳ. ಅಪ್ರತಿಮ ಕ್ರೀಡಾಪಟು, ಸಮಾಜಸೇವಕಿಯೂ ಆಗಿರುವ ಮಾಲತಿ ಹೊಳ್ಳ ನೂರಾರು ವಿಕಲಚೇತನರ ಬಾಳಿಗೆ ಬೆಳಕಾಗಿದ್ದಾರೆ. ಈ ಮಕ್ಕಳನ್ನು ಸಲಹುವುದಕ್ಕಾಗಿಯೇ ಮಾತೃ ಪ್ರತಿಷ್ಠಾನ ಎಂಬ ಸ್ವಯಂಸೇವಾಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಸಂಸ್ಥೆಯ ಮುಖಾಂತರ ಅನೇಕ ವಿಕಲಚೇತನ ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ, ಊಟ ಮತ್ತು ವಸತಿಯನ್ನು ನೀಡುತ್ತಿದ್ದಾರೆ. ಇಲ್ಲಿನ ಮಕ್ಕಳೆಲ್ಲಾ ಅನಾಥರಲ್ಲ. ದೂರದ ಊರುಗಳಿಂದ ಇಲ್ಲ್ಲಿಗೆ ಬಂದಿದ್ದಾರೆ. ಮನೆಯಲ್ಲಿನ ಕಷ್ಟ, ಅಸೌಕರ್ಯಗಳನ್ನೆಲ್ಲ ಹಿಂದಿಕ್ಕಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಂದಿದ್ದಾರೆ. ಇಲ್ಲಿ ಅವರೆಲ್ಲರನ್ನು ನೋಡಿಕೊಳ್ಳುವುದು ಸ್ವತಃ ಮಾಲತಿ ಅವರೇ.
ಒಟ್ಟು 17 ಮಕ್ಕಳಿರುವ ಈ ಪ್ರತಿಷ್ಠಾನದಲ್ಲಿ ಗುಲ್ಬರ್ಗಾ, ರಾಯಚೂರು ಕಾರವಾರ ಇತ್ಯಾದಿ ಕಡೆಗಳಿಂದ 10 ವರ್ಷದಿಂದ 25 ವರ್ಷದೊಳಗಿನ ವಿಶಿಷ್ಟ ಚೇತನ ಮಕ್ಕಳಿದ್ದಾರೆ. ಅವರಿಗೆ ಸರಿಯಾದ ಸೌಲಭ್ಯ, ವಿದ್ಯಾಭ್ಯಾಸ, ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ಓಡಾಟಕ್ಕೆ ಗಾಲಿ ಕುರ್ಚಿ ಎಲ್ಲವನ್ನೂ ನೋಡಿಕೊಳ್ಳುವುದು ಮಾಲತಿಯವರೇ. ಇವರನ್ನು ತಮ್ಮ ಸ್ವಂತ ಮಕ್ಕಳಂತೆಯೇ ಕಾಪಾಡುತ್ತಿರುವ ಈ ಮಹಾತಾಯಿಗೆ ಎಲ್ಲ ಮಕ್ಕಳೂ ಒಂದೇ. ಈ ಮೂಲಕ ಅವರೊಳಗೆ ಸಮಾನತೆಯ ಅರಿವು ತುಂಬಿ, ಅದಮ್ಯ ಆತ್ಮವಿಶ್ವಾಸವನ್ನು ಬೆಳೆಸುತ್ತಿದ್ದಾರೆ. ಇಲ್ಲಿ ಒಂದನೇ ತರಗತಿಯಿಂದ ಪಿ.ಯು.ಸಿ. ಯವರೆಗೂ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅನುಕಂಪ ಕೀಳರಿಮೆ ತುಂಬಿದರೆ, ಸಮಾನತೆ ಆತ್ಮವಿಶ್ವಾಸವನ್ನು ತುಂಬುತ್ತದೆ ಎನ್ನುವುದಕ್ಕೆ ಇಲ್ಲಿಯ ಮಕ್ಕಳೊಳಗಿನ ನಗುಮುಖವೇ ಸಾಕ್ಷಿ. ಈ ರೀತಿ ವಿಕಲಚೇತನರಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟುರುವ ಮಾಲತಿ ಹೊಳ್ಳ ಅವರು ವಿಕಲಚೇತನರ ಏಳಿಗೆಗಾಗಿ ಅವಕಾಶಗಳು ಬೇಕೇ ವಿನಃ ಔದಾರ್ಯವಲ್ಲ ಎನ್ನುತ್ತಾರೆ Mathru Foundation (A Charitable trust for people with disability) GBI, 350, HAL East New Township (Near Marathahalli) Airport Road, B.lore– 37 Mobile: +91 98800 80133 (Miss Malathi K. Holla, The Chair Person) Malathi Krishnamurthy Holla was born on July 6, 1958 in Bangalore. Her father ran a small hotel, while her mother took care of their four children. A raging fever when she was one year old paralyzed Malathi's entire body. Electric shock treatment for more than two years saw little Mala regaining strength in her upper body, but below the waist her body remained completely weak. Not with standing the trials and turbulences that plagued her, Malathi decided to live life Queen Size, undaunted by the fury of fate. She chose sports as the best alternative medicine to forget her pain, and went on to become one of the most inspiring sports personalities of modern India. ವೆಂಕಟೇಶ್ .ಕೆ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |