ಲೇಖಕರು : ಎಂ.ಎಸ್. ಶ್ರೀವತ್ಸ, ರವಿವರ್ಮ ವಿ. ಪುಟ : 224 ಸನ್ಮಾನ್ಯ ಶ್ರೀ ವೈ.ಹೆಚ್. ಹುಚ್ಚಯ್ಯನವರ ಅಭಿನಂದನಾ ಗ್ರಂಥ ಹೊರತರಬೇಕೆಂಬ ಆಲೋಚನೆಯನ್ನು ಹೊತ್ತ ನನ್ನ ಆಪ್ತ ಸ್ನೇಹಿತ ಶ್ರೀಯುತ ರವಿವರ್ಮ ವಿ. ರವರು ನನಗೆ ಸಂಪಾದಕ ಜವಾಬ್ದಾರಿಯನ್ನು ವಹಿಸಿದಾಗ ಸ್ವಲ್ಪ ಸಂಕೋಚದಿಂದಲೇ ಒಪ್ಪಿಕೊಂಡಿದ್ದೆ. ವೈ.ಹೆಚ್. ಹುಚ್ಚಯ್ಯನವರನ್ನು ಭೇಟಿಯಾದಂತೆಲ್ಲಾ ಅವರ ವ್ಯಕ್ತಿತ್ವದ ಅನಾವರಣವಾಯಿತು. ಕೇವಲ ಅಧಿಕಾರ ಹಾಗೂ ಲಾಭಕ್ಕಾಗಿ ರಾಜಕಾರಣ ನಡೆಸುವ ವ್ಯಕ್ತಿಗಳ ನಡುವೆ ಶ್ರೀ ವೈ.ಹೆಚ್. ಹುಚ್ಚಯ್ಯನವರು ಸಂಪೂರ್ಣ ಭಿನ್ನರಾಗಿ ಕಂಡರು. “ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ತಿಳಿಯಬೇಕಾದರೆ ಆತನಿಗೆ ಅಧಿಕಾರವನ್ನು ಕೊಟ್ಟು ನೋಡಿ'' ಎಂಬ ಅಬ್ರಹಂ ಲಿಂಕನ್ನರ ಮಾತುಗಳನ್ನು ನೆನಪಿಸಿಕೊಂಡೆ ತಮ್ಮ ಜೀವನವನ್ನು ಪ್ರಜಾ ಸೇವೆಗೆ ಮುಡಿಪಾಗಿಟ್ಟ ವೈ.ಹೆಚ್. ಹುಚ್ಚಯ್ಯನವರು ಜನರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ದಣಿದವರೇ ಅಲ್ಲ. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅದರ ಆಡಳಿತದ ದಿಕ್ಕನ್ನೇ ಬದಲಿಸಿದವರು. ವೈ.ಹೆಚ್. ಹುಚ್ಚಯ್ಯನವರದು ಬಹುವಿಧ ವ್ಯಕ್ತಿತ್ವ, ಯಾವುದೇ ವಿಷಯದ ಕುರಿತು ಅವರು ನಿರರ್ಗಳವಾಗಿ ಮಾತನಾಡಬಲ್ಲರು. ವಿದ್ಯಾರ್ಥಿಗಳಿಗೆ ಅವರೊಬ್ಬ ಶಿಕ್ಷಕ, ಜನರಿಗೆ ಸಮಸ್ಯೆ ಬಂದಾಗ ಅವರೊಬ್ಬ ಹೋರಾಟಗಾರ. ಒಟ್ಟಿನಲ್ಲಿ ಜಿಲ್ಲೆ ಕಂಡ ಅಪರೂಪದ ಸಜ್ಜನ ಸಹೃದಯಿ ರಾಜಕಾರಣಿ. ಇದೇ ಕಾರಣಕ್ಕೆ ಪಕ್ಷಾತೀತವಾಗಿ ಎಲ್ಲರೂ ವೈ.ಹೆಚ್. ಹುಚ್ಚಯ್ಯನವರ ಸ್ನೇಹವನ್ನು ಬಯಸುತ್ತಾರೆ. ರಾಜಕೀಯವನ್ನು ಸವಾಲಾಗಿ ಸ್ವೀಕರಿಸಿ ಸರ್ಕಾರಿ ಉದ್ಯೋಗವನ್ನು ತ್ಯಜಿಸಿ ಬಂದ ವೈ.ಹೆಚ್. ಹುಚ್ಚಯ್ಯನವರು ತಮ್ಮ ಹಾದಿಯಲ್ಲಿ ಎಷ್ಟೋ ಅಡ್ಡಿ ಆತಂಕಗಳನ್ನು ಕಂಡಿದ್ದಾರೆ. ಆದರೆ “ಬನ್ನ ಬವಣೆಗಳ ತಾನೆನಿನೆತು ಪಟ್ಟಿರೆಯು, ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ಸನ್ನಹಿಸುವಂ'' ಎಂಬ ಕವಿ ವಾಣಿಯಂತೆ ಎಷ್ಟು ಕಷ್ಟ, ತೊಂದರೆ ಮತ್ತೊ ಸೋಲು ಅನುಭವಿಸಿದರೂ ಎದೆಗುಂದದೆ ಹೊಸ ಸಾಹಸಗಳಿಗೆ ಸಿದ್ಧರಾಗಿದ್ದಾರೆ. ತುಮಕೂರು ಜಿಲ್ಲಾ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಮನೆ ಮನೆ ಮಾತಾಗಿರುವ ವೈ.ಹೆಚ್. ಹುಚ್ಚಯ್ಯನವರ ಬಗ್ಗೆ ದಾಖಲಿಸುವುದು ಸವಾಲಿನ ಕೆಲಸ, ಆದರೂ ನಮಗಿರುವ ಚೌಕಟ್ಟಿನಲ್ಲಿ ಆ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗಿದೆ. ಈ ರೀತಿಯ ಅಪರೂಪದ ವ್ಯಕ್ತಿತ್ವವುಳ್ಳ ಶ್ರೀ ವೈ.ಹೆಚ್. ಹುಚ್ಚಯ್ಯನವರ ಅಭಿನಂದನಾ ಗ್ರಂಥವನ್ನು ಹೊರತರಬೇಕೆಂಬ ಶ್ರೀ ರವಿವರ್ಮ ವಿ. ರವರ ಪ್ರಯತ್ನ ಪ್ರಶಂಸಾರ್ಹವಾದುದು. ಇನ್ನು ಈ ಅಭಿನಂದನಾ ಗ್ರಂಥಕ್ಕೆ “ಕಾಡುಮಲ್ಲಿಗೆ'' ಎಂಬ ಶೀರ್ಷಿಕೆ ಕೊಡಲಾಗಿದೆ. ಕಾಡುಮಲ್ಲಿಗೆ ಒಂದು ವಿಶೇಷ ಪುಷ್ಪ. ಸಾಮಾನ್ಯವಾಗಿ ಅದನ್ನು ಯಾರೂ ಗುರ್ತಿಸುವುದಿಲ್ಲ. ಆದರೆ ತನ್ನ ಸುವಾಸನೆಯಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಅದೇ ರೀತಿ ಶ್ರೀಯುತ ವೈ.ಹೆಚ್. ಹುಚ್ಚಯ್ಯನವರು ತಮ್ಮ ಸ್ವಯಂ ಪ್ರಯತ್ನದಿಂದ ಮತ್ತು ಪ್ರತಿಭೆಯಿಂದ ಬೆಳಕಿಗೆ ಬಂದವರು. ಆದ್ದರಿಂದ ಆ ಹೆಸರು ಸೂಕ್ತ ಎಂದು ಭಾವಿಸಲಾಯಿತು. ಈ ಅಭಿನಂದನಾ ಗ್ರಂಥವನ್ನು ಪ್ರಕಟಿಸಲು ಶ್ರೀ ರವಿವರ್ಮ ವಿ.ರವರು ಅವಿರತ ಶ್ರಮಿಸಿದ್ದಾರೆ. ವೈ.ಹೆಚ್. ಹುಚ್ಚಯ್ಯನವರ ಸ್ನೇಹಿತರು ಹಿತೈಷಿಗಳು ಮತ್ತು ಅಭಿಮಾನಿಗಳ ಲೇಖನಗಳನ್ನು ಸಂಗ್ರಹಿಸಲು ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಅವರು ತಂದುಕೊಟ್ಟ ಲೇಖನಗಳನ್ನು ನಾನು ಪರಿಷ್ಕರಿಸಿ ವ್ಯವಸ್ಥಿತವಾಗಿ ಜೋಡಿಸಲು ಸಹಕರಿಸಿದ್ದೇನೆ. ಆದರೆ ಈ ಗ್ರಂಥ ರಚನೆಯ ಎಲ್ಲಾ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಅಭಿನಂದನಾ ಗ್ರಂಥಕ್ಕಾಗಿ ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಕಳುಹಿಸಿದ ವೈ.ಹೆಚ್. ಹುಚ್ಚಯ್ಯನವರ ಸಮಸ್ತ ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಸಂಪಾದಕ ಮಂಡಳಿಯು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಗ್ರಂಥ ರಚನಾ ಸಮಿತಿಗೆ ಛಾಯಾಚಿತ್ರಗಳನ್ನು ಸಕಾಲಕ್ಕೆ ಒದಗಿಸಿದ ವಿವಿಧ ಇಲಾಖೆಗಳಿಗೂ ಆಭಾರಿಯಾಗಿರುತ್ತದೆ. ಅಭಿನಂದನಾ ಗ್ರಂಥವನ್ನು ಸಕಾಲಕ್ಕೆ ಸುಂದರವಾಗಿ ಮುದ್ರಿಸಿಕೊಟ್ಟ ‘ನಿರುತ ಪ್ರಕಾಶನ'ಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನೇರವಾಗಿ ಮತ್ತು ನೇಪಥ್ಯದಲ್ಲಿ ನಮಗೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾ ಈ ‘ಕಾಡುಮಲ್ಲಿಗೆ'ಯ ಸುವಾಸನೆಯನ್ನು ಹರಡುತ್ತಿದ್ದೇವೆ. ಎಂ.ಎಸ್. ಶ್ರೀವತ್ಸ ಸಂಪಾದಕರು ಪರಿವಿಡಿ 1. ಶುಭ ಸಂದೇಶ - ಟಿ.ಬಿ. ಜಯಚಂದ್ರ
2. ಶುಭ ಸಂದೇಶ - ಡಾ. ಈ. ಪರಮೇಶ್ವರ್ 3. ಅಗಾಧ ವ್ಯಕ್ತಿತ್ವ - ಡಾ. ಎಂ.ಆರ್. ಹುಲಿನಾಯ್ಕರ್ 4. ಸೂಕ್ಷ್ಮಮತಿಯುಳ್ಳ ವ್ಯಕ್ತಿ - ಕೆ.ಎಂ. ತಿಮ್ಮರಾಯಪ್ಪ 5. ಸ್ವಾಭಿಮಾನಿ ನಾಯಕ - ಎಂ.ಡಿ. ಲಕ್ಷ್ಮೀನಾರಾಯಣ್ (ಅಣ್ಣಯ್ಯ) 6. ಸ್ವಚ್ಛ ಹಾಗೂ ನಿಷ್ಕಳಂಕ ವ್ಯಕ್ತಿತ್ವ - ಡಾ. ಎಲ್. ಹನುಮಂತಯ್ಯ 7. ಸಾತ್ವಿಕತೆಯ ಸಂಕೇತ ಶ್ರೀ ಹುಚ್ಚಯ್ಯನವರು - ಡಾ. ಸಿ. ಸೋಮಶೇಖರ್ ಐ.ಎ.ಎಸ್. 8. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಸಿರಾಡೊ ಜೀವಿ -ಶ್ರೀಯುತ ವೈ.ಹೆಚ್. ಹುಚ್ಚಯ್ಯ - ಡಾ. ಎಸ್.ಸಿ. ಶರ್ಮಾ 9. ಆನಪರ ಕಾಳಜಿಯ ವಿರಾಟ ರೂಪ - ಡಾ. ಕೆ.ಎನ್. ಅನುರಾಧ 10. ಚಿಂತನಾಶೀಲ ವ್ಯಕ್ತಿತ್ವ - ಶ್ರೀ ಬಿ. ಸತ್ಯನಾರಾಯಣ್ 11. ಸಂದೇಶ - ಪ್ರೊ. ಎ.ಹೆಚ್. ರಾಜಾಸಾಬ್ 12. ಕಾಯಕ ಜೀವಿ - ಪ್ರೊ. ಡಿ. ಶಿವಲಿಂಗಯ್ಯ 13. ಬಡವರ ಬಂಧು - ಜಿ.ಎಸ್. ಬಸವರಾಜು 14. ಶುಭ ಸಂದೇಶ - ಎಸ್. ಶಿವಣ್ಣ 15. ಸೌಮ್ಯಸ್ವಭಾವ - ಜೆ.ಸಿ. ಮಧುಸ್ವಾಮಿ 16. ಉತ್ತಮ ಸಂಘಟನಾ ಚತುರ - ಎಂ. ಶಂಕರಪ್ಪ 17. ಅಪೂರ್ವ ಸಂಗಮ - ಆರ್.ಸಿ. ಆಂಜನಪ್ಪ 18. ಆಶಾಕಿರಣ - ಕಮಲ ಗಂಗಹನುಮಯ್ಯ 19. ದಕ್ಷ ಆಡಳಿತಗಾರ - ಶ್ರೀ ಹೆಚ್. ನಿಂಗಯ್ಯ 20. ಶೋಷಿತರ ಆಸರೆ - ಜ್ಯೋತಿಗಣೇಶ್ 21. ಅವಿನಾಭಾವ ಸಂಬಂಧ - ಎನ್. ಸುಕುಮಾರ್ 22. ನಾ ಕಂಡಂತೆ ವೈ.ಹೆಚ್.ಹೆಚ್. - ಡಾ. ನರಸಿಂಹನ್ ಎಂ.ಎಸ್. 23. ತುಳಿತಕ್ಕೊಳಗಾದವರ ದನಿ - ಹೊಸಕೆರೆ ರಿಜ್ವಾನ್ ಬಾಷ 24. ಆಶಯ ನುಡಿಗಳು - ಈಶ್ವರಯ್ಯ 25. ಸಾಮಾಜಿಕ ಹರಿಕಾರ ಮತ್ತು ಆದರ್ಶ ರಾಜಕಾರಣಿ - ಎನ್. ತಿಮ್ಮಯ್ಯ (ಎನ್. ತಿಮ್ಮಾರೆಡ್ಡಿ) 26. ನಿಷ್ಠಾವಂತ ಜನಸೇವಕ - ವಿ. ನಾಗಭೂಷಣ ರೆಡ್ಡಿ 27. ವೈ.ಹೆಚ್. ಹುಚ್ಚಯ್ಯನವರ ಸಾಮಾಜಿಕ ಹೋರಾಟ - ಶ್ರೀ ಕೆ.ಎಸ್. ಸಿದ್ಧಲಿಂಗಪ್ಪ 28. ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿತ್ವದ ವೈ.ಹೆಚ್.ಹೆಚ್. ರವರು - ಎಸ್.ಪಿ. ಸಿದ್ದಲಿಂಗಸ್ವಾಮಿ 29. ವಿರಳ ನಾಯಕ - ಶ್ರೀಮತಿ ಮರಿಚೆನ್ನಮ್ಮನವರು 30. ಮಹಾನ್ ಚೇತನ - ಕೆ.ಆರ್. ರಾಜ್ ಕುಮಾರ್ 31. ಜನಸೇವಾ ನಿರತ - ಶ್ರೀ ವೈ.ಹೆಚ್. ಹುಚ್ಚಯ್ಯ - ಡಾ. ಸೋ.ಮು. ಭಾಸ್ಕರಾಚಾರ್ 32. ಜಾತ್ಯತೀತ ವ್ಯಕ್ತಿ - ಜಿ.ಎಂ. ಸಣ್ಣಮುದ್ದಯ್ಯ 33. ಸಜ್ಜನ ರಾಜಕಾರಣಿ - ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣ 34. ಸೌಜನ್ಯತೆಯ ಬಿಂದು - ಸಿ.ವಿ. ಮಹದೇವಯ್ಯ 35. ಸಮಸಮಾಜದ ಹರಿಕಾರ - ಡಾ. ಬಸವರಾಜು 36. ಕ್ರಿಯಾಶೀಲ ಜನ ಪ್ರತಿನಿಧಿ - ಬಾ.ಹ. ರಮಾಕುಮಾರಿ 37. ವೈ.ಹೆಚ್. ಹುಚ್ಚಯ್ಯ ಅನ್ನುವ ಸಾಂಘಿಕ ಶಕ್ತಿ - ಡಾ. ಲಕ್ಷ್ಮಣ್ ದಾಸ್ 38. ನಾ ಕಂಡಂತೆ ನಮ್ಮ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು - ಶಶಿಧರ. ಸಿ. 39. ಜನಮಾನಸದ ಭೈರಾಗಿ - ಮಹೇಂದ್ರ 40. 'ಯೋಗ-ಯೋಗ್ಯತೆ ಮೇಳೈಸಿದ ನಿಜನಾಯಕ' - ಎಸ್. ಹರೀಶ್ ಆಚಾರ್ಯ 41. 'ದುರ್ಬಲರ ಧ್ವನಿ' - ಸಿ. ಗಂಗಚಂದ್ರಯ್ಯ 42. ಸರಳ ಜೀವಿ ವೈ.ಹೆಚ್.ಹೆಚ್. - ಡಾ. ಸಿ.ಎಂ. ಲಕ್ಷ್ಮಣ 43. ಸಾಂಸ್ಕೃತಿಕ ಚೇತನ-ವೈ.ಹೆಚ್.ಹೆಚ್. - ಕೋಟೆ ಕುಮಾರ್ 44. ದಕ್ಷನಾಯಕ - ಸಿದ್ಧಲಿಂಗೇಗೌಡ 45. 1976ರಲ್ಲಿ ಕಂಡ ಅಚ್ಚರಿಯ ಆ ಮುಖ - ಡಾ. ಚಿಕ್ಕಣ್ಣ ಯಣ್ಣೆಕಟ್ಟೆ 46. ಯುವ ಪೀಳಿಗೆಗೆ ದಾರಿದೀಪ - ಹೆಚ್.ಎನ್. ಮಂಜುನಾಥ್ 47. ಸಂಸ್ಕಾರಯುತ ರಾಜಕಾರಣಿ - ನಂಜಪ್ಪ ಎಂ.ಎ. 48. ನಾ ಕಂಡ ಸಹೃದಯ ದಲಿತ ನಾಯಕ - ಪ್ರೊ. ಎಂ. ರೇಣುಕಾರ್ಯ 49. ವೈ.ಹೆಚ್.ಹೆಚ್. ಶಾಸಕರಾಗಿ ಆಯ್ಕೆಯಾಗಬೇಕೆನ್ನುವುದೇ ನನ್ನ ಮಹದಾಸೆ - ಎ.ಎಸ್. ಶಿವಸ್ವಾಮಿ 50. ಮಹಾನ್ ವ್ಯಕ್ತಿ - ಶ್ರೀ ವಿದ್ವಾನ್ ರಾಜಶೇಖರಯ್ಯ 51. ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿತ್ವ - ಆರ್. ಜಯರಾಮಯ್ಯ 52. ಶಿಕ್ಷಣ ಪ್ರೇಮಿ ವೈ.ಹೆಚ್.ಹೆಚ್. - ಟಿ.ಎಲ್. ವೆಂಕಟೇಶ್ ಬಾಬು 53. ಸಂವಿಧಾನದ ಸೌಂದರ್ಯದ ಪ್ರತೀಕ - ಡಾ. ವಡ್ಡಗೆರೆ ನಾಗರಾಜಯ್ಯ 54. ಅನಘ್ರ್ಯ ವೈ.ಹೆಚ್.ಹೆಚ್.ರವರ ಸೇವೆ - ಪ್ರೊ. ಸಮತಾ ಬಿ. ದೇಶಮನಿ 55. ಪರಿಪಕ್ವ ರಾಜಕಾರಣಿ - ಜೈಶೀಲ 56. ಜನಪದ ರಾಜಕಾರಣಿ - ಕೆ. ದೊರೈರಾಜ್ 57. ಜನ ಸೇವೆಯೇ ಅದಮ್ಯ ಆಸಕ್ತಿ - ಶ್ರೀಮತಿ ನಾಗರತ್ನಮ್ಮ ವೈ.ಹೆಚ್. ಹುಚ್ಚಯ್ಯ 58. ನಿನ್ನ ಸೇವೆ ಸದನ ಮಂಡಲದಲ್ಲಿ - ಮಹಮ್ಮದ್ ಇಕ್ಬಾಲ್ 59. ಅಣ್ಣನ ಸಾಧನೆ ಮೆಚ್ಚುವಂತಹುದು - ವೈ.ಹೆಚ್. ಪುಟ್ಟಸ್ವಾಮಯ್ಯ 60. ಸಹಪಾಠಿಯ ಸಾಧನೆ - ಸಿದ್ಧಲಿಂಗಾರಾಧ್ಯ 61. ಅಸಾಧಾರಣ ನೈಪುಣ್ಯತೆ - ಡಿ.ಸಿ. ಲಕ್ಷ್ಮೀ ನರಸಿಂಹಯ್ಯ 62. ಬಹುಬೇಗ ಸ್ಪಂದಿಸುವ ವೈ.ಹೆಚ್.ಹೆಚ್. - ಮಮತಾಮಣಿ 63. ವೈ.ಹೆಚ್. ಹುಚ್ಚಯ್ಯ - ಬಿ.ಸಿ. ಶೈಲಾ ನಾಗರಾಜ್ 64. ಸಹೃದಯಿ ರಾಜಕಾರಣಿ ವೈ.ಹೆಚ್. ಹುಚ್ಚಯ್ಯ - ಚಿ.ನಿ. ಪುರುಷೋತ್ತಮ್ 65. ಅಸಹಾಯಕರ ಸೇವಕ ಈ 'ಜನನಾಯಕ' - ಎಸ್. ಸುರೇಶ್ವತ್ಸ 66. ರೈತರಿಗೆ ನೆರಳಾಗಿ ಬಂದವರು - ಡಾ. ಹೆಚ್. ನಾಗರಾಜ್ 67. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಂತೆ ವೈ.ಹೆಚ್.ಹೆಚ್. - ಎ.ಕೆ. ಬಸವರಾಜಪ್ಪ 68. ನಾ ಕಂಡ ವೈ.ಹೆಚ್. ಹುಚ್ಚಯ್ಯನವರು - ಜಿ.ಬಿ. ಮಲ್ಲಪ್ಪ 69. ಶೋಷಣೆಗೊಳಗಾದವರ ಪರ - ಡಾ. ಎನ್. ಶಶಿಕಲಾ 70. ದಮನಿತರ ಧೀಮಂತ - ಪ್ರೊ. ಜಯಪ್ರಕಾಶಗೌಡ 71. 'ಭಾಷಾಶಾಸ್ತ್ರದ ಪ್ರಬುದ್ಧತೆಯ ಗಣಿ' - ಶ್ರೀಮತಿ ರಮಾ ನಾಗಭೂಷಣ್ 72. ಉತ್ತಮ ವ್ಯಕ್ತಿತ್ವದ ವೈ.ಹೆಚ್.ಹೆಚ್. - ಶ್ರೀ ಶಂಕರಪ್ಪ 73. ನಮ್ಮೂರಿನವರು ಇಷ್ಟಪಡುವ ವ್ಯಕ್ತಿ ವೈ.ಹೆಚ್.ಹೆಚ್. - ವೈ.ಸಿ. ನಂಜುಂಡಯ್ಯ 74. ಸದಾ ಹಸನ್ಮುಖಿ ವೈ.ಹೆಚ್.ಹೆಚ್. - ವೈ.ಎ. ಮಾರೇಗೌಡರು 75. ಉತ್ತಮ ಸ್ನೇಹ ಜೀವಿ - ಹಕೀಮುದ್ದೀನ್ ಸಾಬ್ 76. ಸ್ಪಂದನ ವ್ಯಕ್ತಿ - ಡಾ. ಹೆಚ್.ಎಲ್. ಚಂದ್ರಕುಮಾರ್ 77. ಧೀಮಂತ ನಾಯಕರು - ಶ್ರೀ ಸುಬ್ರಮಣ್ಯ 78. ದಮನಿತರ ದನಿ - ರೆಹಮಾನ್ ಷರೀಫ್ (ಭಯ್ಯ)
0 Comments
Leave a Reply. |
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|