|
50 ಸಾವಿರಕ್ಕೆ ಪಿಎಚ್‌ಡಿ ಪದವಿ, 3 ಲಕ್ಷಕ್ಕೆ ಗೌರವ ಡಾಕ್ಟರೇಟ್ ಬೆಂಗಳೂರು: ಬೆಂಗಳೂರಿನಲ್ಲಿ ಪಿಎಚ್‌ಡಿ ಪದವಿ ಮಾರಾಟಕ್ಕಿದೆ. 50 ಸಾವಿರ ಕೊಟ್ಟರೆ ಎರಡೇ ತಿಂಗಳಲ್ಲಿ ಸಿಗುತ್ತೆ ಪಿಎಚ್‌ಡಿ ಪದವಿ. 3 ಲಕ್ಷ ಕೊಟ್ಟರೆ ಬರುತ್ತೆ ಗೌರವ ಡಾಕ್ಟರೇಟ್. ಹೌದು ಇದು ಅಚ್ಚರಿ ಎನಿಸಿದರೂ ನಿಜ. ಕಳೆದ ವಾರ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು, ತಮಗೆ ಗೌರವ ಡಾಕ್ಟರೇಟ್ ಕೊಡಿಸುವ ಪ್ರಸ್ತಾವನೆ ಇಟ್ಟರು. ಅಲ್ಲದೆ ಶ್ರೀಲಂಕಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯಲು ಒಂದು ಅಪ್ಲಿಕೇಶನ್ ಸಹ ನೀಡುತ್ತಾರೆ. 'ಅವರು ನನ್ನ ಸಾಮಾಜಿಕ ಕೆಲಸಕ್ಕೆ ಗೌರವ ಡಾಕ್ಟರೇಟ್ ಪಡೆಯಲು 3,500 ಡಾಲರ್(2. 14ಲಕ್ಷ ರು.) ಕಟ್ಟಬೇಕು' ಎನ್ನುತ್ತಾರೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ತಿಳಿಸಿದ್ದಾರೆ. ಆ ವ್ಯಕ್ತಿಗಳು ತಮ್ಮನ್ನು ಸುರೇಶ್ ಮತ್ತು ಅನಂತ್ ಎಂದು ಪರಿಚಯಿಸಿಕೊಂಡಿದ್ದು, ಆ ಇಬ್ಬರು ತಾವು ಕೊಲಂಬೊದಲ್ಲಿರುವ ಪೂರಕ ಔಷದಿಗಳ ಅಂತರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೆ ಈ ವಿವಿಯಿಂದ ಗೌರವ ಡಾಕ್ಟರೇಟ್ ಮಾತ್ರವಲ್ಲದೆ ನೂರಾರು ಮಂದಿ ಹೋಮಿಯೋಪತಿ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಪಿಎಚ್‌ಡಿ ಪದವಿಗಳನ್ನು ಪಡೆದುಕೊಂಡು ವೈದ್ಯರಾಗಿ ಪ್ರಾಕ್ಟಿಸ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಪರ್ಯಾಯ ಔಷಧಿಯನ್ನು ಜನಪ್ರಿಯಗೊಳಿಸಲು ಶ್ರೀಲಂಕಾ ಮುಕ್ತ ವಿವಿಯ ವೈಬ್‌ಸೈಟ್‌ನಲ್ಲಿ ಇಂತಹ ಹಲವು ಸುಳ್ಳುಗಳನ್ನು ಹೇಳಲಾಗಿದೆ. ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ಭಾರತದಲ್ಲಿ ಒಟ್ಟು 11 ಸಂಶಯಾಸ್ಪದ ಸಂಸ್ಥೆಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಅಮೆರಿಕ, ಚೀನಾ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದಲ್ಲೂ 12 ಸಂಶಯಾಸ್ಪದ ಸಂಸ್ಥೆಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ.
'ಅವರು ನನ್ನ ಹೆಸರಿನ ಹಿಂದೆ ಡಾಕ್ಟರ್ ಅಂತ ಸೇರಿಸಿಕೊಳ್ಳಲು, ಗೌರವ ಡಾಕ್ಟರೇಟ್ ಪಡೆಯುವಂತೆ ಸಲಹೆ ಮಾಡಿದರು' ಎಂದು ಶರ್ಮಾ ತಿಳಿಸಿದರು. ಆದರೆ ಅವರು ಶರ್ಮಾ ಅವರಿಗೆ ಮಾತ್ರ ಅಲ್ಲ ಈ ರೀತಿ ಹಲವು ಮಂದಿಯ ಬಳಿ ತೆರಳಿ ಪ್ರಸ್ತಾಪ ಮಾಡಿದ್ದಾರೆ. ಇನ್ನು ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಮೇಲ್ವಿಚಾರಣಾ ಘಟಕದ ಕಾರ್ಯಕಾರಿ ನಿರ್ದೇಶಕ ಮ್ಯಾಥ್ಯುಸ್ ಫಿಲಪ್ ಅವರನ್ನು ಸಹ ಲಂಕಾ ವಿವಿ ಪ್ರತಿನಿಧಿಗಳು ಸಂಪರ್ಕಿಸಿದ್ದು, ಮೂರು ಲಕ್ಷ ಖರ್ಚು ಮಾಡಿದರೆ ನಿಮಗೆ ಗೌರವ ಡಾಕ್ಟರೇಟ್ ಸಿಗುತ್ತೆ ಎಂದು ಹೇಳಿದ್ದರು. ಆದರೆ ಅದನ್ನು ನಾನು ತಿರಸ್ಕರಿಸಿದೆ ಮತ್ತು ಅವರನ್ನು ಕಚೇರಿಯಿಂದ ಹೊರ ಹಾಕಿದೆ. ಅದು ಮೋಸ ಅಂತ ತಮಗೆ ಗೊತ್ತು ಎಂದು ಮ್ಯಾಥ್ಯೂ ತಿಳಿಸಿದ್ದಾರೆ. ಎರಡು ತಿಂಗಳಲ್ಲಿ ಪಿಎಚ್‌ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರೊಬ್ಬರು ಪಿಎಚ್‌ಡಿ ಆಕಾಂಕ್ಷಿಯಾಗಿ, ಶಿವಾಜಿನಗರದಲ್ಲಿರುವ ಪರ್ಯಾಯ ಔಷಧಿ ಪದ್ಧತಿಯ ರಾಷ್ಟ್ರೀಯ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಈ ಸಂಸ್ಥೆ ಪೂರಕ ಔಷದಿಗಳ ಅಂತರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದ್ದು, ಈ ವಿವಿಯಿಂದ ಪಿಎಚ್‌ಡಿ ಪಡೆಯಲು 50 ಸಾವಿರ ರುಪಾಯಿ ಫೀ ನೀಡಬೇಕು. 50 ಸಾವಿರ ಫೀ ಕಟ್ಟಿದರೆ ಒಂದು ತಿಂಗಳಲ್ಲೇ ನಿಮಗೆ ಪಿಎಚ್‌ಡಿ ಪ್ರಮಾಣ ಪತ್ರ ಸಿಗುತ್ತದೆ. ಒಂದು ವೇಳೆ ನೀವು ಇನ್ನೂ ವಿವರವಾಗಿ ಕಲಿಯಬೇಕು ಎಂದರೆ ಎರಡು ತಿಂಗಳಲ್ಲಿ ಶ್ರೀಲಂಕಾ ವಿವಿಯ ಮುದ್ರೆಯುಳ್ಳ ಪ್ರಮಾಣ ಪತ್ರ ಸಿಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎ.ಆರ್. ಸಮಿಉಲ್ಲಾ ಅವರು ನಮ್ಮ ವರದಿಗಾರರಿಗೆ ವಿವರಿಸಿದ್ದಾರೆ. ಈ ಸಂಸ್ಥೆಗೆ ಶ್ರೀಲಂಕಾದ ಮಾನ್ಯತೆ ಇಲ್ಲ ಪೂರಕ ಔಷದಿಗಳ ಅಂತರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಶ್ರೀಲಂಕಾ ಯುಜಿಸಿಯಿಂದ ಮಾನ್ಯತೆ ಪಡೆದ ಮತ್ತು ನೊಂದಾಯಿತ ಸಂಸ್ಥೆ ಅಲ್ಲ ಎಂದು ದೆಹಲಿಯಲ್ಲಿರುವ ಶ್ರೀಲಂಕಾ ರಾಯಭಾರ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. http://www.kannadaprabha.com/top-news/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%BE%E0%B2%B0%E0%B2%BE%E0%B2%9F%E0%B2%95%E0%B3%8D%E0%B2%95%E0%B2%BF%E0%B2%A6%E0%B3%86-%E0%B2%AA%E0%B2%BF%E0%B2%8E%E0%B2%9A%E0%B3%8D%E2%80%8C%E0%B2%A1%E0%B2%BF/239783.html#.U_XCYk4CXHo.facebook
0 Comments
Your comment will be posted after it is approved.
Leave a Reply. |
Categories
All
HR BooksSocial Work BooksMHR LEARNING ACADEMYGet it on Google Play store
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed