|
ಸಂಶೋಧನೆಗಳ ಗುಣಮಟ್ಟ ಕುಸಿಯುತ್ತಿದೆ. ಆದರೂ ವಿಶ್ವವಿದ್ಯಾಲಯಗಳು ಪಿಎಚ್.ಡಿ. ಗಳನ್ನು ಒಂದರ ಮೇಲೊಂದರಂತೆ ಪ್ರಧಾನ ಮಾಡುತ್ತಲೇ ಬಂದಿವೆ. ಈ ಕುರಿತು ಸುದೀರ್ಘ ಲೇಖನ ಪ್ರಕಟಿಸಲು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆ ಆಶಿಸುತ್ತದೆ. ಐದು ವರ್ಷಗಳ ಕಾಲ ಶ್ರಮ ಪಟ್ಟು ಮಂಡಿಸಿದ ಪಿಎಚ್.ಡಿ. ಥೀಸಿಸ್ ನಲ್ಲಿ ಯಾವುದೇ ಗುಣಮಟ್ಟವಿರದೆ ಕೇವಲ ಪಿಎಚ್.ಡಿ. ಪಡೆಯುವ ಪ್ರಯತ್ನವಾಗಿರುತ್ತದೆ. ಐದು ವರ್ಷ ಶ್ರಮ ಪಟ್ಟಿದ್ದರೆ ಅದರ ಕೆಲವೊಂದು ಪುಟಗಳಾದರೂ ಪ್ರಕಟವಾಗಬೇಕಲ್ಲವೇ? ಬಹುಪಾಲು ಪಿಎಚ್.ಡಿ. ಥೀಸಿಸ್‍ಗಳು ಪ್ರಕಟಿಸಲು ಯೋಗ್ಯವಾಗಿರುವುದಿಲ್ಲ. ಗುಣಮಟ್ಟದ ಕೊರತೆಯಿಂದ ಕೂಡಿರುವುದು ಕಂಡುಬರುತ್ತದೆ. ಪಿಎಚ್.ಡಿ. ಗಳ ನಕಲು ಪ್ರತಿಗಳನ್ನು ಆರ್‍ಟಿಐ ಮೂಲಕ ಪಡೆದು ಅವುಗಳ ಗುಣಮಟ್ಟವನ್ನು ಪರಿಣಿತರಿಂದ ಪರೀಕ್ಷಿಸುವುದು. ಪರಿಣಿತರ ಅಭಿಪ್ರಾಯ ಬಂದ ನಂತರ ಪಿಎಚ್.ಡಿ.ಗಳಲ್ಲಿ ಏನಾದರೂ ದೋಷ ಕಂಡುಬಂದಲ್ಲಿ ಯುಜಿಸಿ, ರಾಜ್ಯಪಾಲರು, ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ದೂರು ಸಲ್ಲಿಸುವ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬರೆದು ಕಳುಹಿಸಿ. ರಮೇಶ್ ಎಂ.ಎಚ್. ನಿರಾತಂಕ www.socialworkfootprints.org
0 Comments
Your comment will be posted after it is approved.
Leave a Reply. |
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed