ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯ ಸೃಷ್ಟಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ನಿರುತ ಪ್ರಕಾಶನ ಡಾ. ಸಿ.ಆರ್. ಗೋಪಾಲ್ ವಿರಚಿತ ಸಮುದಾಯ ಸಂಘಟನೆ ಪುಸ್ತಕ ಆವಿಷ್ಕರಣೆ ಕಾರ್ಯಕ್ರಮವನ್ನು ನಿರಾತಂಕ ಸಂಸ್ಥೆ ಮತ್ತು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. 2018ರ ಮೇ ಮಾಹೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಸದರಿ ಕಾರ್ಯಕ್ರಮದಲ್ಲಿ ಅಭಿವೃದ್ಧಿ / ಸಮುದಾಯ ಸಂಘಟನೆ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭೂತಪೂರ್ವ ಸಾಧನೆಗೈದ ಸಮಾಜಕಾರ್ಯಕರ್ತರನ್ನು ಗುರುತಿಸಿ, ಸನ್ಮಾನಿಸುವ ಆಲೋಚನೆ ಇದೆ. ಸಾಮಾಜಿಕ ಅಭಿವೃದ್ಧಿ ಅಥವಾ ಸಮುದಾಯ ಸಂಘಟನೆಯ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಿ, ಅತ್ಯುತ್ತಮ ಬರಹಗಳನ್ನು ಗುರುತಿಸಿ, ಪುರಸ್ಕರಿಸುವುದರ ಜೊತೆಗೆ ಪುಸ್ತಕ (ಐ.ಎಸ್.ಬಿ.ಎನ್. ಸಂಖ್ಯೆ ಹೊಂದಿದ) ರೂಪದಲ್ಲಿ ಎಲ್ಲ ಲೇಖನಗಳನ್ನು ಪ್ರಕಟಿಸಲು ಯೋಜಿಸಲಾಗಿದೆ. ಇದು ನಿರುತ ಪ್ರಕಾಶನ ಮತ್ತು ನಿರಾತಂಕ ಸಂಸ್ಥೆಯ ಜೊತೆಗಿರುವ ಸಮಾನ ಮನಸ್ಕ ವೃತ್ತಿಪರ ಸಮಾಜಕಾರ್ಯಕರ್ತರ ಕಲ್ಪನೆಯಾಗಿದ್ದು, ಸದರಿ ಕಾರ್ಯಕ್ರಮವನ್ನು ಕರ್ನಾಟಕದ ಯಾವುದಾದರೊಂದು ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಆಸಕ್ತ ಸಮಾಜಕಾರ್ಯಕರ್ತರು ಮತ್ತು ಸಂಸ್ಥೆಗಳಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಆಸಕ್ತ ವ್ಯಕ್ತಿ ಹಾಗೂ ಸಂಸ್ಥೆಗಳು ಈ ಕೂಡಲೇ ಸಂಪರ್ಕಿಸಲು ಕೋರಿದೆ. ಆದರದ ಸ್ವಾಗತ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಲಹೆ ಹಾಗೂ ಸೂಚನೆಗಳಿಗೆ ಆದರದ ಸ್ವಾಗತ. ಆರೋಗ್ಯಕರ, ರಚನಾತ್ಮಕ ಹಾಗೂ ಪಾರದರ್ಶಕ ಚರ್ಚೆಗಳನ್ನು ನಾವು ಗೌರವಿಸುತ್ತೇವೆ. ಸದರಿ ಕಾರ್ಯಕ್ರಮ ಆಯೋಜನೆಯಲ್ಲಿ ಪಾಲ್ಗೊಳ್ಳುವವರು ತಮ್ಮ ಸಂಪರ್ಕ ಮಾಹಿತಿಯನ್ನು ರವಾನಿಸಿ, ಅನಿವಾರ್ಯ ಸಂದರ್ಭದಲ್ಲಿ ಸಂಬಂಧಿಸಿದವರ ಸೇವೆಯನ್ನು ಪಡೆಯಲಾಗುವುದು. ವಂದನೆಗಳೊಂದಿಗೆ ರಮೇಶ ಎಂ.ಎಚ್. ನಿರಾತಂಕ ಡಾ. ಸಿ.ಆರ್. ಗೋಪಾಲ್ ಡಾ. ಸಿ.ಆರ್. ಗೋಪಾಲ್ 1953 ರಲ್ಲಿ ಜನನ, ಎಂ.ಎ., ರಾಜ್ಯಶಾಸ್ತ್ರ ಕರ್ನಾಟಕ ವಿಶ್ವವಿದ್ಯಾಲಯ 1974: ಎಂ.ಎಸ್.ಡಬ್ಲ್ಯೂ (ರೋಶನಿ ನಿಲಯ, ಸಮಾಜಕಾರ್ಯ ಶಾಲೆ, ಮಂಗಳೂರು) ಮೈಸೂರು ವಿಶ್ವವಿದ್ಯಾಲಯ, 1977: ಗ್ರಾಮಾಂತರ ಸಾಮಾಜಿಕ ನಾಯಕತ್ವ ಡಿಪ್ಲೋಮ - ಸಿಯರ್ಸೋಲಿನ್, ಪಿಲಿಪೈನ್ಸ್, 1978: ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೋಮ-ಅಣ್ಣಾಮಲೈ ವಿಶ್ವವಿದ್ಯಾಲಯ, 2001, ಡಾಕ್ಟರೇಟ್ ಪದವಿ-ಬೆಂಗಳೂರು ವಿಶ್ವವಿದ್ಯಾಲಯ 2002, ಮಾರ್ಗದರ್ಶನ ಪ್ರೊ. ಎಚ್.ಎಂ. ಮರುಳಸಿದ್ಧಯ್ಯ. ಅನುಭವ: ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಒಂದು ವರ್ಷ ಬೋಧನೆ ಮತ್ತು ಕ್ಷೇತ್ರಕಾರ್ಯ ಮಾರ್ಗದರ್ಶನ. ದಿ ಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ ಲಿಮಿಟೆಡ್‍ನಲ್ಲಿ ಸಿಬ್ಬಂದಿ ಆಡಳಿತ, ಕಾರ್ಮಿಕ ಕಲ್ಯಾಣ, ಸಾರ್ವಜನಿಕ ಸಂಪರ್ಕ, ಸಾಮಾನ್ಯ ಆಡಳಿತ, ಸಮುದಾಯ ಅಭಿವೃದ್ಧಿ, ಸಹಕಾರ, ಕುಶಲ ಕಲೆ, ಶಿಕ್ಷಣ, ವಯಸ್ಕರ ಶಿಕ್ಷಣ, ಸಂಪೂರ್ಣ ಸಾಕ್ಷರತಾ ಆಂದೋಲನ (ಜಿಲ್ಲಾ ಕಾರ್ಯದರ್ಶಿಯಾಗಿ) ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ 33 ವರ್ಷಗಳ ಅನುಭವ, ಒಟ್ಟು 34 ವರ್ಷಗಳು. ಡಿಸೆಂಬರ್ 2012ರಲ್ಲಿ ನಿವೃತ್ತಿ. ಡಾ. ಸಿ.ಆರ್. ಗೋಪಾಲ್ ರವರ ಇತರೆ ಕೃತಿಗಳು
https://www.socialworkfootprints.org/our-books/11 https://www.socialworkfootprints.org/3250327132223240322332513265/-2
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|