Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

 ವಿಶ್ವವಿದ್ಯಾಲಯಗಳ ವಾಸ್ತವ ಪ್ರಸಂಗವನ್ನು ವಿವರಿಸಿದರು

8/9/2015

0 Comments

 
ದೆಹಲಿ (JNU) ಪ್ರೊಫೆಸರ್ ವಿಶ್ವವಿದ್ಯಾಲಯಗಳ ವಾಸ್ತವ ಪ್ರಸಂಗವನ್ನು ವಿವರಿಸಿದರು. ಹೀಗೆ, PhD ಯನ್ನು ಮೌಲ್ಯಮಾಪನ ಮಾಡಲು ಅವರಿಗೆ ಬೇರೊಂದು ವಿಶ್ವವಿದ್ಯಾಲಯದಿಂದ ಪ್ರೊಫೆಸರೊಬ್ಬರಿಂದ ಆಹ್ವಾನ ಬಂತಂತೆ, ಆ ಆಹ್ವಾನವನ್ನು ಒಪ್ಪಿ PhD ಅಭ್ಯರ್ಥಿ ಬರೆದ thesis ಅನ್ನು ಮೌಲ್ಯಮಾಪನಕ್ಕೆ ಕಳುಹಿಸಿ ಕೊಡಿ ಎಂದರಂತೆ, 
ಕೆಲ ದಿನಗಳಾದ ಮೇಲೆ ಆ thesis ಅನ್ನು ಇವರು ಮೌಲ್ಯಮಾಪನ ಮಾಡಿದಾಗ ಆ Thesis ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿತ್ತಂತೆ, ನಂತರ PhD ಅಭ್ಯರ್ಥಿಗೆ PhD VIVA Voce ಮಾಡಲು ಅದೇ ಪ್ರೊಫೆಸರ್ ಆಹ್ವಾನವಿತ್ತರಂತೆ. ಇವರು ವಿಮಾನದಲ್ಲಿ Airport ನಲ್ಲಿ ಇಳಿದಾಗ PhD ಪ್ರೊಫೆಸರ್ ಹಾಗೂ ಮತ್ತೊಬ್ಬರು ಅವರ ಜೊತೆಗಿದ್ದರಂತೆ, JNU ಪ್ರೊಫೆಸರ್ ಮತ್ತೊಬ್ಬರ ಪರಿಚಯ ಮಾಡಿಕೊಳ್ಳಲು ಮುಂದಾದಾಗ ಪ್ರೊಫೆಸರ್, ಇವರ thesis ಅನ್ನೇ ನೀವು examine ಮಾಡುತ್ತಿರುವುದು ಎಂದು ಆತನನ್ನು ಪರಚಯ ಮಾಡಿದರು. ಆತ ದೊಡ್ಡದಾದ ಒಂದು ಹೂವಿನ ಹಾರ ಹಾಕಿದರಂತೆ. ಆಗ JNU ಪ್ರೊಫೆಸರ್ ಗೆ ಕೋಣ ಬಲಿ ಕೊಡುವುದಕ್ಕೂ ಮುಂಚೆ ಕೋಣಕ್ಕೆ ಹೂವಿನ ಹಾರವನ್ನು ಹಾಕಿದ ಹಾಗೆ ಭಾಸವಾಯಿತಂತೆ. ಸರಿ ಎಂದು ಪ್ರೊಫೆಸರ್ ವಿಶ್ವವಿದ್ಯಾಲಯದ Guest House ಗೆ ಕರೆದುಕೊಂಡು ಹೋದರಂತೆ. ಪ್ರೊಫೆಸರ್ ಹೇಳಿದರಂತೆ ನಿಮಗೆ ತೊಂದರೆ ಆಗದ ರೀತಿಯಲ್ಲಿ (ನಾಳೆ PhD ವೈವ ಎದುರಿಸಬೇಕಾದ) ವ್ಯಕ್ತಿ ಎಲ್ಲವನ್ನು ಮಾಡಿಕೊಳ್ಳುತ್ತಾನೆ ಮತ್ತು ಈ ರಾತ್ರಿ ಈತನೂ ಇದೇ Guest House ನಲ್ಲಿ ತಂಗಿರುತ್ತಾನೆ ಎಂದರಂತೆ. JNU ಪ್ರೊಫೆಸರ್ ಬೇಡ ಅವಶ್ಯಕತೆಯಿಲ್ಲ ಎಂದರಂತೆ. ಆದರೆ ಪ್ರೊಫೆಸರ್ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡರಂತೆ.
ಬೆಳಗ್ಗೆ ಸಾರ್ವಜನಿಕವಾಗಿ ವೈವಾ ನಡೆಸಲು ಸಿದ್ಧತೆ. ಈ ವೈವದಲ್ಲಿ ಅಭ್ಯರ್ಥಿಗೆ ಪ್ರಶ್ನೆಗಳನ್ನು JNU ಪ್ರೊಫೆಸರ್ ಹೇಳಿದರಂತೆ ಆದರೆ ಅಭ್ಯರ್ಥಿ ಬಾಯಿ ಬಿಡುತ್ತಿಲ್ಲ, ಆಗ Head of the Dept ಆಗಿದ್ದ ಪ್ರೊಫೆಸರ್ ಕೇಳಿದರಂತೆ, ನೀವೇಕೆ ಹೀಗೆ ಮಾಡಿದಿರಿ ? ಎಂದು ತಮ್ಮ ಸಹೋದ್ಯೋಗಿ ಪ್ರೊಫೆಸರ್ (PhD ಸೂಪರ್ ವೈಸ್) ಮಾಡಿದವರನ್ನು ಕೇಳಿದರಂತೆ. ಆಗ ಅವರು ನಾನೇನು ಮಾಡಲಿ ಸಾರ್ ಅವನಿಗೆ ತಲೆಯಲ್ಲಿ ಸ್ವಲ್ಪ ಬುದ್ಧಿ ಕಡಿಮೆ ಆದುದರಿಂದ ನಾನೆ ಆತನ thesis ಬರೆದ ಬಿಟ್ಟೆ ಎಂದರಂತೆ ? ಆಗ JNU ಪ್ರೊಫೆಸರ್ ಗೆ ಆಘಾತ ಕಾದಿತ್ತು. ಹೀಗೂ ಉಂಟೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತರಂತೆ !
ಆ ಕ್ಷಣದಲ್ಲಿ JNU ಪ್ರೊಫೆಸರ್ ಗೆ ತಕ್ಷಣ ಏನೂ ತೋಚಲಿಲ್ಲವಂತೆ. ಈ ವೈವ ಮುಗಿದ ನಂತರ PhD (ಸೂಪರ್ ವೈಸ್ ಮಾಡುತ್ತಿದ್ದ) ಪ್ರೊಫೆಸರ್ ರಾತ್ರಿ ಔತಣಕೂಟಕ್ಕೆ ಕರೆದರಂತೆ. ಅಲ್ಲಿ ವೈಭವ ಪ್ರೇರಿತ ಔತಣ. ಅಲ್ಲಿಯೂ VIVA ಎದುರಿಸಿದ ಅಭ್ಯರ್ಥಿ ಪ್ರತ್ಯಕ್ಷವಾದನಂತೆ. ಆಗ (PhD ಸೂಪರ್ ವೈಸ್ ಮಾಡುತ್ತಿದ್ದ) ಪ್ರೊಫೆಸರ್ ಆತನನ್ನು ತೋರಿಸಿ ನೋಡಿ ಇವನೆ ಇವೆಲ್ಲವನ್ನು ಅರೇಂಜ್ ಮಾಡಿದ್ದು ಎಂದರಂತೆ ! ಇದೆಲ್ಲಾ ಬೇಕಿತ್ತಾ ಎಂದದ್ದಕ್ಕೆ ಇದು ಈ ವಿಶ್ವವಿದ್ಯಾಲಯದ ಸಂಪ್ರದಾಯ ಎಂದರಂತೆ. ಅಭ್ಯರ್ಥಿಯನ್ನು ನಿನಗೇಕೆ PhD ಬೇಕು ಎಂದರಂತೆ. ನನಗೆ Lecturer/Asst. Professor ಆಗಿ ನೇಮಕ ಆಗಬಹುದು. ಅದಕ್ಕಾಗಿ PhD ಬೇಕು ಎಂದನಂತೆ. ಇದಕ್ಕೆ ಒಳ್ಳೆ ಸಂಬಳವಿದೆ, approve ಆದ 9 ತಿಂಗಳಿಗೆ ನನಗೆ ಸಂಬಳ ಗ್ಯಾರಂಟಿ ಎಂದನಂತೆ, 9 ತಿಂಗಳ ನಂತರ ಯಾಕೆ ಎಂದನಂತೆ. ಮೊದಲ ಆರು ತಿಂಗಳು College Principal ಗೆ ನಂತರ 3 ತಿಂಗಳು ನನಗೆ PhD ಕೊಡಿಸಿದವರಿಗೆ ! ನಂತರ ಊಟ ಮುಗಿದ ಮೇಲೆ ಈ ಅಭ್ಯರ್ಥಿಗೆ PhD ಕೊಡಲು ಮನಸ್ಸಾಗುತ್ತಿಲ್ಲ. ಆತ ಅರ್ಹನಲ್ಲ ಎಂದರಂತೆ. ಆಗ HOD ಆತನನ್ನು ಸೂಪರ್ ವೈಸ್ ಮಾಡಿದ ಪ್ರೊಫೆಸರ್ ಆತನನ್ನು Approve ಮಾಡಿದ್ದ, external examiner ಇಬ್ಬರು Approve ಮಾಡಿದ್ದಾರೆ ನೀವು ಈತನನ್ನು Approve ಮಾಡದಿದ್ದರೆ ನಾವು ಖಂಡಿತ ಮತ್ತೊಮ್ಮೆ ವೈವಾ ಮಾಡಿಸಿ ಈತನು ವೈವದಲ್ಲಿ ಪಾಸಾಗುವಂತೆ ನೋಡಿಕೊಳ್ಳುತ್ತೇವೆ, ತಕರಾರು ಮಾಡಬೇಡಿ ಎಂದರಂತೆ. ಆಗ ವಿಧಿಯಿಲ್ಲದೆ 10 ಪುಟಗಳನ್ನು ಈತನ PhD ಬಗ್ಗೆ ಬರೆದು ಕೊನೆಯ ಸಾಲು ಈತನಿಗೆ PhD ಕೊಡಲು ಅರ್ಹ ಎಂದು ಬರೆದರಂತೆ. PhD ವೈವಾ ಮಾಡಿದ JNU ಪ್ರೊಫೆಸರ್.
ಎಲ್ಲಿದ್ದೇವೆ ನಾವು……………………………….ಮುಂದುವರೆಯುವುದು.
0 Comments

Your comment will be posted after it is approved.


Leave a Reply.

    Categories

    All
    Conference
    English Books
    Kannada Articles
    Kannada Books
    Niruta Books
    Others
    Registration
    Social Work
    SWFP
    Women


    Picture

    Social Work Learning Academy

    Join WhatsApp Channel

    Niruta Publications

    Social Workers- Karnataka

    Leaders Talk

    Ramesha Niratanka

    More Details

    Picture

    MHR LEARNING ACADEMY

    Get it on Google Play store
    Download App
    Online Courses

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups



    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com