Blog |
ತಲಘಟ್ಟಪುರ ಪೊಲೀಸ್ ಠಾಣೆಯ ಸಿಬ್ಬಂದಿಯ ವರ್ತನೆಯ ಕುರಿತು ಈ ಕೆಳಕಂಡ ದೂರಿನ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಬಿ.ಎಸ್. ಲೋಕೇಶ್ ಕುಮಾರ್, IPS, DCP South, Bangalore City Police ರವರು ಗಮನಿಸಿ, ದೂರಿನ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಇವರಿಗೆ ಧನ್ಯವಾದಗಳು. ದೂರಿನ ವಿವರ ದಿನಾಂಕ 13-12-2015, ಭಾನುವಾರ ಬೆಳಿಗ್ಗೆ 10.30ಕ್ಕೆ ನಮ್ಮ ಡ್ರೈವರ್ ನಂಜೇಗೌಡರವರು ಅವರ ಸ್ನೇಹಿತ ಮತ್ತು ಅವರ ಹೆಂಡತಿ ಮತ್ತು ಅವರ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಮೈಸೂರು ರಸ್ತೆಯ ನೈಸ್ ರೋಡ್ ನಿಂದ ಬನ್ನೇರುಘಟ್ಟದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಟಾಟಾ ಏಸ್ ಗಾಡಿಗೂ ನಂಜೇಗೌಡರವರ ಮಾರುತಿ ರಿಟ್ಜ್ ಕಾರಿಗೆ ಚಿಕ್ಕ ಅಪಘಾತವಾಗಿ ಕಾರಿನಲ್ಲಿದ್ದ ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದವು. ಕೂಡಲೇ ಸ್ಥಳಕ್ಕೆ ನೈಸ್ ರಸ್ತೆಯ ಆಂಬ್ಯುಲೆನ್ಸ್ ಧಾವಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಟಾಟಾ ಏಸ್ ಗಾಡಿಯ ಡ್ರೈವರ್ ಸ್ಥಳದಿಂದ ನಾಪತ್ತೆಯಾಗಿದ್ದರು. ಇದಾದ ನಂತರ ಸುಮಾರು 12 ಘಂಟೆಗೆ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಲು ಧಾವಿಸಿದೆವು. ಪೊಲೀಸ್ ಮುಖ್ಯ ಪೇದೆ ನಂಜುಂಡಯ್ಯನವರು ಸ್ಥಳ ಪರಿಶೀಲನೆ ಮಾಡಲು ಪೊಲೀಸರನ್ನು ಕಳುಹಿಸಿದ್ದೇವೆ. ಸ್ಥಳ ಪರಿಶೀಲಿಸಿ ದೂರು ದಾಖಲಿಸಿಕೊಳ್ಳುವುದಾಗಿ ತಿಳಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಅಪಘಾತವಾದ ಗಾಡಿಗಳನ್ನು ಪೊಲೀಸ್ ಠಾಣೆಗೆ ತರಲು ಸಹಕಾರ ನೀಡಿದರು. ಈ ಸಂದರ್ಭದಲ್ಲಿ ದೂರು ದಾಖಲಿಸುವಂತೆ ನಾವು ಸುಮಾರು 4.30 ಕ್ಕೆ ನಂಜುಂಡಯ್ಯನವರಲ್ಲಿ ಕೇಳಿಕೊಂಡೆವು. ಆದರೆ ಅವರು ಬೇಗ ಬೇಗ ಕೆಲಸವಾಗಬೇಕೆಂದರೆ ನಮ್ಮನ್ನು ಸ್ವಲ್ಪ ನೋಡಿಕೊಳ್ಳಿ ಎಂದರು. ನಾವು ಅದಕ್ಕೆ ನಿರಾಕರಿಸಿದೆವು. ಇದರಿಂದ ಅತೃಪ್ತರಾದ ಅವರು ಯಾವುದೇ ದೂರು ದಾಖಲಿಸಿಕೊಳ್ಳದೆ ನಮ್ಮನ್ನು ಸತಾಯಿಸಿದರು. ನಂತರ ಅಪಘಾತ ಹೇಗಾಯಿತು ಎಂದು ನಂಜೇಗೌಡರವರನ್ನು ತುಂಬ ದರ್ಪದಿಂದ ಕೇಳಿದರು ನೀವೇ ಟಾಟಾ ಏಸ್ ಗಾಡಿಗೆ ಗುದ್ದಿರುತ್ತೀರಿ ಹಾಗೂ ನಿಮ್ಮದೇ ತಪ್ಪು ಎಂದು ದಬಾಯಸಿದರು ಹಾಗೂ ತೀರ್ಪು ನೀಡಿ ಅದೇ ರೀತಿ ದೂರು ಬರೆದುಕೊಡಿ ಎಂದು ಹೇಳಿದರು ಆ ಸಂದರ್ಭದಲ್ಲಿ ರಮೇಶ ಆದ ನಾನು ‘ಸ್ವಾಮೀ ಆ ರೀತಿ ದೂರು ಬರೆದುಕೊಡಲು ಸಾಧ್ಯವಿಲ್ಲವೆಂದು’ ತಿಳಿಸಿದೆ. ಇದಕ್ಕೆ ಕೋಪಗೊಂಡ ಅವರು ನೀನು ಹೇಳಿದಂತೆ ನಾನು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದರು ಹಾಗೂ ಕೋಪಗೊಂಡು ನಮ್ಮ ಮೇಲೆ ರೇಗಾಡಿ, ಕಂಪ್ಲೆಂಟ್ ದಾಖಲಿಸಿಕೊಳ್ಳಲು ನಿರಾಕರಿಸಿದರು ಮತ್ತು ಈ ಮಧ್ಯೆ ನಾವು ಬೆಳಿಗ್ಗೆಯಿಂದ 2 ಸಣ್ಣ ಮಕ್ಕಳನ್ನು ಬಿಸಿಲಿನಲ್ಲೇ ಕಾಯಿಸಿದ್ದೇವೆ ದೂರು ದಾಖಲಿಸಿಕೊಳ್ಳಿ, ಅವರು ಊಟವನ್ನೂ ಸಹ ಮಾಡಿಲ್ಲ ಎಂದು ಸೌಜನ್ಯದಿಂದ ಹೇಳಿದರೂ ಸಹ ನಮ್ಮ ಮಾತಿಗೆ ಕಿವಿಕೊಡದೆ ನಿಮ್ಮ ಮಕ್ಕಳಿಗೆ ಊಟ ಮಾಡಿಸಬೇಡಿ ಎಂದು ನಾವೇನಾದರೂ ಹೇಳಿದ್ದೇವ, ಮೊದಲು ಜಾಗ ಖಾಲಿ ಮಾಡಿ ಎಂದು ದರ್ಪದಿಂದ ಹೇಳಿದರು ಆಗ ಸಮಯ ಸಂಜೆ ಆರು ಗಂಟೆಯಾಗಿತ್ತು. ನಂತರ ಇನ್ಸ್ ಪೆಕ್ಟರ್ ರಾಮಪ್ಪ ರವರಿಗೆ ವಿಷಯ ತಿಳಿಸಿದ ಮೇಲೆ ದೂರನ್ನು ಸಂಜೆ 7.00 ಕ್ಕೆ ದಾಖಲಿಸಿಕೊಂಡರು, ಅಪಘಾತವಾದ ಸಮಯದಲ್ಲಿ ಒಂದು ದೂರನ್ನು ದಾಖಲಿಸಲು ಈ ರೀತಿಯ ವಿಳಂಬ ನೀತಿ ಹಾಗೂ ಅದಕ್ಕಾಗಿ ಪರೋಕ್ಷವಾಗಿ ಲಂಚ ಕೇಳುವುದು ಸಮಂಜಸವೇ?
ದಿನಾಂಕ : 14-12-2015 ರಂದು ಆರ್ ಟಿ ಓ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ, ರಿಪೋರ್ಟ್ ನೀಡಿದ ನಂತರ ಆ ರಿಪೋರ್ಟ್ ಅನ್ನು ಪೊಲೀಸ್ ಸ್ಟೇಷನ್ ಗೆ ನೀಡಲು ಮತ್ತು ನಮ್ಮ ಗಾಡಿಯನ್ನು ರಿಲೀಸ್ ಮಾಡುವಂತೆ ಮನವಿ ಮಾಡಿದರೆ ನೆನ್ನೆ ನಡೆದ ಘಟನೆಯಿಂದಾಗಿ ಇತರೆ ಪೊಲೀಸ್ ಅಧಿಕಾರಿಗಳು ಯಾವುದೇ ಸಹಕಾರ ನೀಡದೆ ಮತ್ತೆ ಕಾಯುವಂತೆ ಮಾಡಿರುತ್ತಾರೆ ಹಾಗೂ ಅನವಶ್ಯಕವಾದ ಮಾಹಿತಿ ಕೇಳಿ ವಿಳಂಬ ನೀತಿ ಅನುಸರಿಸಿದ್ದಾರೆ. ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.45 ರ ತನಕವೂ ಅನವಶ್ಯಕವಾಗಿ ಪೊಲೀಸ್ ಸ್ಟೇಷನ್ ಹಾಗೂ ಆರ್ ಟಿ ಓ ಕಚೇರಿಗಳ ನಡುವೆ ಓಡಾಟ ಮಾಡಬೇಕಾದ ಅನಿವಾರ್ಯತೆ ಒದಗಿಬಂದಿದೆ. ಸಾರ್ವಜನಿಕರಾದ ನಮ್ಮ ಸಮಯಕ್ಕೆ ಬೆಲೆಯಿಲ್ಲವೇ ? ನಂಜೇಗೌಡರವರು LOAN ನ ಮೇಲೆ ಕಾರನ್ನು ಖರೀದಿಸಿ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿರುವಾಗ ಹಾಗೂ ಪ್ರತಿ ತಿಂಗಳು ಕಾರಿನ ಬ್ಯಾಂಕ್ EMI ಕಟ್ಟಲು ಹಾಗೂ ಕುಟುಂಬವನ್ನು ನಡೆಸಲು ಕಷ್ಟವಿರುವಾಗ ಈ ಅಪಘಾತದಿಂದ ಚೇತರಿಸಿಕೊಳ್ಳುವುದೇ ಮನಸ್ಸಿಗೆ ಕಷ್ಟಕರ. ಈ ಅಪಘಾತದಿಂದ ನಂಜೇಗೌಡರವರಿಗೆ ಸುಮಾರು 1 ತಿಂಗಳ ಕೆಲಸವಿರುವುದಿಲ್ಲ. ಈ 1 ತಿಂಗಳನ್ನು ನಿಭಾಯಿಸಿ ಬ್ಯಾಂಕ್ EMI ಕಟ್ಟಿ ಮತ್ತೆ ಜೀವನ ಚೇತರಿಸಿಕೊಳ್ಳುವುದೇ ಕಷ್ಟಕರ. ಈ ಪರಿಸ್ಥಿತಿಯಲ್ಲಿ ಅವರನ್ನು ಶೋಷಣೆ ಮಾಡಿ ಲಂಚ ಪಡೆಯಬೇಕೆನ್ನುವ ಪೊಲೀಸ್ ಸಿಬ್ಬಂದಿಯ ದುರಾಸೆಗೆ ಧಿಕ್ಕಾರವಿರಲಿ. ಬೇರೆಯವರ ಮನೆ ಕಷ್ಟ ಮತ್ತೊಬ್ಬನ ಮನುಷ್ಯನ ನೋವು ಅರ್ಥವಾಗದ ಪೊಲೀಸ್ ಸಿಬ್ಬಂದಿಗೆ ಅವರ ಜೇಬು ತುಂಬಬೇಕು ಅಷ್ಟೆ. ಪೊಲೀಸ್ ಸಿಬ್ಬಂದಿಗಳು ಅಪಘಾತವಾದಾಗ ನಾಗರೀಕರಾದ ನಮ್ಮನ್ನು ಕ್ರಿಮಿನಲ್ ಅಪರಾಧಿಗಳಂತೆ ನೋಡುವ, ನಡೆಸಿಕೊಳ್ಳುವ ರೀತಿ ಹೇಸಿಗೆ ಹುಟ್ಟಿಸುತ್ತದೆ. ಅಪಘಾತವಾಗುವುದು ಆಕಸ್ಮಿಕ, ಆ ಸಂದರ್ಭದಲ್ಲಿ ನಾಗರೀಕರಿಗೆ ಧೈರ್ಯ ತುಂಬಿ ಸಹಕಾರ ನೀಡಬೇಕಾದ ಹೊತ್ತಿನಲ್ಲಿ ಇವರೇ ನಮ್ಮನ್ನು ಶೋಷಣೆ ಮಾಡಲು ನಿಂತರೆ ನಾಗರೀಕ ಸಮಾಜಕ್ಕೆ ಅವಮಾನ. ನಮಗೆ ಅನಿಸಿದ ಕೆಲವು ಅನಿಸಿಕೆಗಳು :-
ಮನುಷ್ಯರೇ ಮನುಷ್ಯರನ್ನು ಶೋಷಣೆ ಮಾಡಿ ಪರಿಸ್ಥಿತಿಯ ಅನುಕೂಲವನ್ನು ಪಡೆದು ಹೇಗಾದರೂ ದುಡ್ಡು ಮಾಡಬೇಕೆಂಬ ಬಯಕೆಯಿಂದ ಮಾನವೀಯ ಮೌಲ್ಯಗಳನ್ನು ಬದಿಗೊತ್ತುತ್ತಿರುವುದು ಇಂದಿನ ಸಮಾಜದ ದುರಂತ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಒಂದು ಪ್ರಕರಣವನ್ನು ಪರಿಗಣಿಸಿ ನಂಜುಂಡಯ್ಯನವರಂತೆ ಪೊಲೀಸ್ ಇಲಾಖೆಯಲ್ಲಿರುವ ಇತರೆ ಪೊಲೀಸ್ ಸಿಬ್ಬಂದಿಗಳನ್ನು ಗುರುತಿಸಿ ನಾಗರೀಕರ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ತರಬೇತಿಯನ್ನು ಕೊಡಿಸಿದರೆ ಒಳಿತು. ವಿದೇಶಗಳಲ್ಲಿ ಪೊಲೀಸರೆಂದರೆ ರಕ್ಷಕರು ಎಂಬ ಭಾವನೆ ಬರುತ್ತದೆ ಆದರೆ ನಮ್ಮಲ್ಲಿ ಪೊಲೀಸ್ ಠಾಣೆಗೆ ಕಾಲಿಟ್ಟರೆ ಲಂಚ ಕೊಡದೇ ಕೆಲಸವಾಗುವುದಿಲ್ಲ ಎಂಬ ಭಾವನೆ ನಾಗರೀಕ ಸಮಾಜದಲ್ಲಿದೆ. ಇನ್ನು ಮುಂದಾದರು ಈ ರೀತಿಯ ಅವ್ಯವಸ್ಥೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಲಿ. ವಂದನೆಗಳೊಂದಿಗೆ, ರಮೇಶ. ಎಂ.ಹೆಚ್ ಸಂಪಾದಕರು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆ www.socialworkfootprints.org
0 Comments
Your comment will be posted after it is approved.
Leave a Reply. |
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |