ಗಂಗಾಧರ ರೆಡ್ಡಿ ಎನ್. ಮತ್ತು ರಮೇಶ ಎಂ.ಎಚ್., ಪು. 174, ಬೆಲೆ : 175, ನಿರುತ ಪಬ್ಲಿಕೇಷನ್ಸ್ ಪುಟ ತಿರುಗಿಸುವ ಮುನ್ನ..
ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ವೃತ್ತಿಯಾಗಿ ಪರಿಗಣಿಸಲ್ಪಟ್ಟ ಸಮಾಜಕಾರ್ಯ, ಭಾರತಕ್ಕೆ ಪ್ರಶಿಕ್ಷಣ ಮಾದರಿಯಲ್ಲಿ ಲಗ್ಗೆಯಿಟ್ಟಿದ್ದು 1936ರಲ್ಲಿ ಮತ್ತು ಕರ್ನಾಟಕಕ್ಕೆ 1960ರ ದಶಕದಲ್ಲಿ. ಸಮಾಜದ ಬಹುಪಾಲು ಸಮಸ್ಯೆಗಳೊಂದಿಗೆ ವ್ಯವಹರಿಸುವ ವಿಶಿಷ್ಟ ವಿಷಯವಾದ ಸಮಾಜಕಾರ್ಯ ಒಂದು ಸ್ವತಂತ್ರ ವೃತ್ತಿಯಲ್ಲ. ಇತರ ಸಮಾಜವಿಜ್ಞಾನ - ವಿಜ್ಞಾನ - ಶಾಸ್ತ್ರ ಹಾಗೂ ವೃತ್ತಿಗಳ ಸಹಯೋಗ ಮತ್ತು ಸಹಕಾರವಿಲ್ಲದೆ ತನ್ನ ಗುರಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಸಮಾಜಕಾರ್ಯ ಒಂದು ಅಂತರ್-ಶಿಸ್ತೀಯ, ಅಂತರ್-ವೃತ್ತೀಯ ಕ್ರಿಯೆಯಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲಿದೆ. ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ಸಮಾಜಕಾರ್ಯ ಪ್ರಶಿಕ್ಷಣವನ್ನು ಯಥಾವತ್ತಾಗಿ ಭಾರತದಲ್ಲಿ ಅಳವಡಿಸಿಕೊಳ್ಳಲಾಗಿ, ಇಂದಿಗೂ ಅದೇ ರೀತಿಯಲ್ಲಿ ಬೋಧಿಸಲ್ಪಡುತ್ತಿದೆ. ಒಂದು ವೇಳೆ ಅಂದು ಆಮದು ಮಾಡಿಕೊಂಡ ಪ್ರಶಿಕ್ಷಣದ ಮಾದರಿಯನ್ನು ಭಾರತದ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಯಿಸಿ ಬೋಧಿಸಿದ್ದಿದ್ದರೆ, ಬಹುಶಃ ಇಂದು ಸಮಾಜಕಾರ್ಯ ವೃತ್ತಿ ಮತ್ತಷ್ಟು ವೇಗವಾಗಿ ಬೆಳವಣಿಗೆ ಹೊಂದಿರುತ್ತಿತ್ತು. ಜೊತೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಚನೆಯಾದ ಸಾಹಿತ್ಯದ ಅವಲಂಬನೆ ಕಡಿಮೆಯಾಗಿರುತ್ತಿತ್ತು ಮತ್ತು ಭಾರತ ದೇಶದ ಸ್ಥಳೀಯ ಭಾಷೆಗಳಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಯಾಗುತ್ತಿತ್ತು. ಆದರೆ ಪ್ರಶಿಕ್ಷಣದ ಜೊತೆಗೆ ಅಲ್ಲಿನ ಪಠ್ಯಕ್ರಮ ಹಾಗೂ ಮಾದರಿಯ ಯಥಾವತ್ತು ಅನುಕರಣೆ ಸ್ಥಳೀಯ ಭಾಷೆಗಳಲ್ಲಿ ಸಮಾಜಕಾರ್ಯ ಸಾಹಿತ್ಯದ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.
1 Comment
ಡಾ. ರಮೇಶ ಎಂ. ಸೋನಕಾಂಬಳೆ, ಪು. 304, ಬೆಲೆ : 250, ನಿರುತ ಪಬ್ಲಿಕೇಷನ್ಸ್ ಮುನ್ನುಡಿ
ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಾಟಾ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣ ಇಂದು ದೇಶದ ಎಲ್ಲ ರಾಜ್ಯಗಳಿಗೂ ತಲುಪಿದೆ. ಪ್ರಾರಂಭದ ಹಂತದಲ್ಲಿ ಎಲ್ಲವೂ ವಿದೇಶಿಮಯವಾಗಿತ್ತು. ಈ ಸಮಾಜಕಾರ್ಯದ ಶಿಕ್ಷಣ : ಪಠ್ಯಕ್ರಮ, ಪುಸ್ತಕಗಳು, ರಚನೆ ಮತ್ತು ಸ್ವರೂಪ ಹಾಗೂ ಅಧ್ಯಾಪಕರೂ ಕೂಡಾ. ಈ ಕಳೆದ ಎಂಟು ದಶಕಗಳಲ್ಲಿ ಹಲವಾರು ಪ್ರಗತಿಪರ ಬದಲಾವಣೆಗಳು ಸಮಾಜಕಾರ್ಯ ಶಿಕ್ಷಣದಲ್ಲಿ ಕಾಣಸಿಗುತ್ತಿವೆ. ಆದರೂ ಕೂಡಾ ಹೇಳಿಕೊಳ್ಳುವಂತಹ ಗುಣಾತ್ಮಕ ಪರಿವರ್ತನೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು. ಚ.ನ. ಶಂಕರ್‍ರಾವ್, ಪು. 1034, ಬೆಲೆ : 325, ಜೈ ಭಾರತ್ ಪ್ರಕಾಶನ ಆದರಣೀಯ ಓದುಗ ಮಿತ್ರರೆ,
ಕರ್ನಾಟಕದ ಸಹಸ್ರಾರು ಮಂದಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಇತರ ಸಾಮಾನ್ಯ ಆಸಕ್ತ ಓದುಗರು ಹಲವಾರು ವರ್ಷಗಳಿಂದಲೂ ನಿರೀಕ್ಷಿಸುತ್ತಾ ಬಂದಿರುವ “ಸಮಾಜಶಾಸ್ತ್ರದ ಪದಕೋಶ’’ವೊಂದು ಕೇವಲ “ಪದಕೋಶ” ಮಾತ್ರವಾಗಿಯಲ್ಲದೆ “ಸಮಾಜಶಾಸ್ತ್ರದ ಕಿರು ವಿಶ್ವಕೋಶ”ದ ರೂಪದಲ್ಲಿ ಇದೀಗ ಕನ್ನಡ ಭಾಷೆಯಲ್ಲಿ ಪ್ರಪ್ರಥಮವಾಗಿ ಹೊರಬರುತ್ತಿರುವುದು ನನಗೆ ಅತೀವವಾದ ಸಂತೋಷವನ್ನುಂಟು ಮಾಡಿದೆ. ಈ ನನ್ನ ಸಂತಸವನ್ನು ನನ್ನ ಎಲ್ಲಾ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ಈ ಪುಸ್ತಕವನ್ನು ಅವರ ಕೈಯಲ್ಲಿರಿಸಿ ಇದರ ಉದ್ದೇಶ ಸಾಫಲ್ಯಕ್ಕೆ ನೆರವಾಗಬೇಕೆಂದು ಕೋರುವೆನು. ಡಾ. ಎಚ್.ಎಂ. ಮರುಳಸಿದ್ಧಯ್ಯ, ಪು. 274, ಬೆಲೆ : 150, ಐಬಿಎಚ್ ಪ್ರಕಾಶನ ‘ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ’ ಮೂಡಿದ್ದುದು ಮೂವತ್ತೆರಡು ವರ್ಷಗಳ ಹಿಂದೆ (1973). ಇದಕ್ಕೆ ಹಿನ್ನೆಲೆಯಾಗಿ, ನೆಲೆಯಾಗಿ ಸಮಾಜಕಾರ್ಯ ಪ್ರಶಿಕ್ಷಣವು ಕರ್ನಾಟಕದಲ್ಲಿ ಮುಗುಳೊಡೆದದ್ದು ಇವಕ್ಕೆ ಹನ್ನೊಂದು ವರ್ಷಗಳ ಹಿಂದೆ (1962) ಸ್ನಾತಕೋತ್ತರ ಮಟ್ಟದಲ್ಲಿ, ವಿಶ್ವವಿದ್ಯಾಲಯದ ಕಕ್ಷೆಯಲ್ಲಿ. ಸಮಾಜಕಾರ್ಯ ಪ್ರಶಿಕ್ಷಣವು ಮೊಟ್ಟಮೊದಲು ಆರಂಭವಾದದ್ದು ಧಾರವಾಡದ ಪ್ರಶಾಂತ ವಾತಾವರಣದಲ್ಲಿ.
ಡಾ. ಎಚ್.ಎಂ. ಮರುಳಸಿದ್ಧಯ್ಯ, ಪು. 104, ಬೆಲೆ : 75, ನಿರುತ ಪಬ್ಲಿಕೇಷನ್ಸ್ ಬಹಳ ವರ್ಷಗಳ ಹಿಂದೆ ಆಂಗ್ಲ ಭಾಷೆಯಲ್ಲಿದ್ದ ಸಮಾಜ ವಿಜ್ಞಾನ, ಸಮಾಜಕಾರ್ಯ ಸಾಹಿತ್ಯವನ್ನು ಓದುತ್ತಿದ್ದಾಗ ಕೆಲವು ಶಬ್ದಗಳ ಸರಿಯಾದ ಅರ್ಥ ಆಗಲಿಲ್ಲ. ಅಂಥ ಶಬ್ದಗಳನ್ನು ಪಟ್ಟಿ ಮಾಡುತ್ತಾ ಅವುಗಳಿಗೆ ಸೂಕ್ತವಾದ ಕನ್ನಡ ಶಬ್ದಗಳು ಯಾವುವು ಎಂಬುದನ್ನು ಆಂಗ್ಲ-ಕನ್ನಡ ನಿಘಂಟುಗಳಲ್ಲಿ ದೊರೆಯುವ ಸಮಾನ ಅರ್ಥಗಳ ಪಟ್ಟಿಯನ್ನು ಮಾಡತೊಡಗಿದೆ. ಈ ಕೆಲಸದ ಮೂಲಕ ನನ್ನ ತಿಳಿವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬುದೇ ಆರಂಭದ ಉದ್ದೇಶವಾಗಿತ್ತು. ಆದರೆ, ಆ ಶಬ್ದಗಳು ಇತರರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಬೇಕಾಗುತ್ತವೆ ಎಂದು ಒಂದು ಕಿರು ಶಬ್ದಕೋಶವನ್ನು ಸಿದ್ಧ ಮಾಡತೊಡಗಿದೆ. ಈ ನನ್ನ ಕೆಲಸವನ್ನು ನನ್ನ ಸಹೋದ್ಯೋಗಿಗಳ ಮುಂದಿರಿಸಿ, ಅವರ ಸಹಕಾರವನ್ನೂ ಪಡೆದುಕೊಳ್ಳತೊಡಗಿದೆ. ಇಂಥ ಶಬ್ದಕೋಶವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಕಾರ್ಯಕರ್ತರಿಗೂ ತುಂಬಾ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯವು ಅವರದೂ ಆಗಿತ್ತು. ಅವರು ನನಗೆ ನೆರವಾಗಲು ಮುಂದಾದರು. ಹೀಗೆ ಈ ಪುಸ್ತಿಕೆಯು ಸಿದ್ಧವಾಯಿತು.
ಡಾ. ಎಚ್.ಎಂ. ಮರುಳಸಿದ್ಧಯ್ಯ, ಪು. 184, ಬೆಲೆ : 100, ಐಬಿಎಚ್ ಪ್ರಕಾಶನ ಜನರ ಜೀವನವು ಬರಬರುತ್ತಾ ಕ್ಲಿಷ್ಟವಾಗುತ್ತಾ ಗೊಂದಲಮಯವಾಗುತ್ತಿದೆ; ಅದು ಹೆಚ್ಚು ಹೆಚ್ಚು ಅವೈಯಕ್ತಿಕತೆಯ, ಪರಕೀಯ ಭಾವನೆಯ ಆಗರವಾಗುತ್ತಲಿದೆ. ಇದರಿಂದಾಗಿ ಸಮಸ್ಯೆಗಳು ಸಂಖ್ಯೆಯಲ್ಲೂ, ಗಾತ್ರದಲ್ಲೂ, ತೀಕ್ಷ್ಣತೆಯಲ್ಲೂ ಹೆಚ್ಚುತ್ತಲಿವೆ. ಇವುಗಳನ್ನು ನಿರ್ಬಂಧಿಸುವ, ಪರಿಹರಿಸುವ, ಮಾನವನ ಜೀವನವನ್ನು ಮಧುರವಾಗಿಸುವ ಪ್ರಯತ್ನವು ನಾನಾ ರಂಗಗಳಲ್ಲಿ ವಿವಿಧ ಮುಖವಾಗಿ ನಡೆಯುತ್ತಲಿದೆ. ಸಮಾಜಕಾರ್ಯವೂ ಅಂಥ ಒಂದು ಸಾರ್ಥಕ ಪ್ರಯತ್ನವಾಗಿದೆ.
ಡಾ. ಎಸ್.ಬಿ. ಮುನಿರಾಜು, ಪು. 310, ಬೆಲೆ : 250, ನಿರುತ ಪಬ್ಲಿಕೇಷನ್ಸ್ ವೃತ್ತಿಪರ ಸಮಾಜಕಾರ್ಯವು ಮಾನವನ ಸಾಮಾಜಿಕ ಆರೋಗ್ಯದ ರಕ್ಷಣೆಗೆ ಮತ್ತು ಬೆಳವಣಿಗೆಗೆ ಅತ್ಯಮೂಲವಾದ ಕೊಡುಗೆಯನ್ನು ನೀಡಿದೆ. ಮಾನವನು ಒಂದು ಸಂಘ ಜೀವಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದಂತೆ ತನ್ನ ಬದುಕನ್ನು ಹಸನುಗೊಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾದನು. ಯೋಜಿತ ಮತ್ತು ವ್ಯವಸ್ಥಿತವಾದ ಜೀವನವನ್ನು ಮತ್ತು ಆರೋಗ್ಯಕರ ಸಮಾಜವನ್ನು ಸೃಷ್ಟಿಸಿಕೊಳ್ಳಲು ನಡೆಸಿದ ಹಲವು ಪ್ರಯತ್ನಗಳು ಸಾಮಾಜಿಕ ಆರೋಗ್ಯದ ಸುಧಾರಣೆಗೆ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾದವು.
ಡಾ. ಎಚ್.ಎಂ. ಮರುಳಸಿದ್ಧಯ್ಯ, ಪು. 88, ಬೆಲೆ : 60, ಐಬಿಎಚ್ ಪ್ರಕಾಶನ ಗ್ರಾಮ ಸಮಾಜದ ರಚನೆ, ಕ್ರಿಯೆ, ರೋಗಸ್ಥಿತಿ, ಅಭ್ಯುದಯದ ತತ್ತ್ವಾದರ್ಶ ಮತ್ತು ಮಾರ್ಗೋಪಾಯಗಳು, ಇತ್ಯಾದಿಗಳನ್ನು ವಿವರಿಸುವ ಲೇಖನಗಳ ಸಂಗ್ರಹವೇ ಈ ಪುಸ್ತಕ.
ಇಲ್ಲಿನ ಲೇಖನಗಳು ಈಗಾಗಲೇ ಪ್ರಜಾವಾಣಿ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ, ಕರ್ನಾಟಕ ಸರಕಾರವು ಪ್ರಕಟಿಸುತ್ತಿರುವ ಕರ್ನಾಟಕ ವಿಕಾಸ ಮತ್ತು ಜನಪದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಅಲ್ಲಿಯೇ ಉಳಿದರೆ ಜನರ ಮನಸ್ಸಿನಿಂದ ಚದುರಿ ಹೋಗುತ್ತವೆ. ವಿಷಯದ ಒಟ್ಟಂದದ ಚಿತ್ರ ದೊರೆಯದೆ ಹೋಗುತ್ತದೆ, ಎಂಬುದರಿಂದ ಆ ಲೇಖನಗಳಲ್ಲಿ ಹತ್ತನ್ನು ಆಯ್ದು, ಸೂಕ್ತವಾಗಿ ಪರಿಷ್ಕರಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದೆ. ಪದ್ಮಾ ಸುಬ್ಬಯ್ಯ, ಪು. 194, ಬೆಲೆ : 130, ನಿರುತ ಪಬ್ಲಿಕೇಷನ್ಸ್ ಮನುಷ್ಯನಾಗಿ ಹುಟ್ಟಿದ ಮೇಲೆ ಭೂಮಿಯ ಋಣವನ್ನು, ಸಮಾಜದ ಋಣವನ್ನು ನಾವೆಲ್ಲರೂ ಯಾವುದಾದರೊಂದು ರೀತಿಯಲ್ಲಿ ತೀರಿಸಲೇಬೇಕು. ಸುಮ್ಮನೆ ಸುತ್ತಮುತ್ತ ಕಣ್ಣು ಹಾಯಿಸಿದರೆ ಅದಕ್ಕೆ ಅನುವು ಮಾಡಿಕೊಡುವ ಎಷ್ಟೋ ಸಂಗತಿಗಳು ಕೈಬೀಸಿ ಕರೆಯುತ್ತವೆ. ಇದರಲ್ಲಿ ದತ್ತಕವೂ ಒಂದೆನ್ನುವುದನ್ನು ಹೇಳಬೇಕಿಲ್ಲ. ‘ಮಾತೃಛಾಯಾ' ನನಗೆ ಇಂಥದೊಂದು ಅವಕಾಶವನ್ನು ಒದಗಿಸಿತು. ಅನಾಥ ಮಕ್ಕಳನ್ನು ಪಾಲಿಸುವುದು, ದತ್ತು ಕೊಡುವುದು, ಫಾಸ್ಟರ್ ಕೇರ್ ಗೆ ಒಪ್ಪಿಸುವುದು ಮುಂತಾದ ಹತ್ತಾರು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ‘ಮಾತೃಛಾಯಾ'ದಲ್ಲಿ ಕೆಲಸ ಮಾಡಲು ಸೇರಿದ ಮೇಲೆ ನನಗೆ ಹೊಸದೊಂದು ಲೋಕವೇ ತೆರೆದುಕೊಂಡಿತು. ದಶಕಗಳ ಕಾಲ ನಾನು ಅದರಲ್ಲಿ ತನುಮನಗಳನ್ನು ಒಪ್ಪಿಸಿಕೊಂಡೆ. ಮಕ್ಕಳನ್ನು ದತ್ತು ಕೊಡುವುದಕ್ಕೆ ಅಣಿಮಾಡಿ, ಅವು `ಮನೆ' ಸೇರುವಂತೆ ಮಾಡುವ ಕೆಲಸದಲ್ಲಿ ಸಿಗುವ ಸಂತೋಷ, ಧನ್ಯತೆ ಎಲ್ಲವನ್ನೂ ಮನಃಪೂರ್ತಿ ಅನುಭವಿಸಿದೆ. ಇದಕ್ಕಾಗಿ `ಮಾತೃಛಾಯಾ'ಗೆ, ಕೆನರಾ ಬ್ಯಾಂಕ್ ರಿಲೀಫ್ ಅಂಡ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರು ಮತ್ತು ಸಮಿತಿಗೆ ನಾನು ಋಣಿಯಾಗಿದ್ದೇನೆ.
ಟಿ.ಆರ್. ಶಾಮಭಟ್ಟ, ಪು. 608, ಬೆಲೆ : 450, ಐಬಿಎಚ್ ಪ್ರಕಾಶನ ದಿ|| ಪ್ರೊ| ಎಂ.ಎನ್. ಶ್ರೀನಿವಾಸ್ ಅವರು ಭಾರತೀಯ ಸಮಾಜವಿಜ್ಞಾನದಲ್ಲಿ ಒಬ್ಬ ವರಿಷ್ಠ ವ್ಯಕ್ತಿ. ನಮ್ಮ ಸಮಾಜ ಮತ್ತು ಸಂಸ್ಕೃತಿಗಳನ್ನು ತಿಳಿದುಕೊಳ್ಳುವ ದಿಸೆಯಲ್ಲಿ ಅವರು ‘ಕ್ಷೇತ್ರಾಧಾರಿತ ದೃಷ್ಟಿಕೋನ’ ಎಂಬ ಅಧ್ಯಯನ ಮಾರ್ಗವನ್ನು ಬಳಸಿ ಜನಪ್ರಿಯಗೊಳಿಸಿದರು. ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ ದಂಗೆಕೋರರು ಹಚ್ಚಿದ ಬೆಂಕಿಗೆ ತುತ್ತಾಗಿ ತಮ್ಮೆಲ್ಲ ಕ್ಷೇತ್ರಕಾರ್ಯ ಟಿಪ್ಪಣಿಗಳನ್ನು ಕಳೆದುಕೊಂಡ ವಿಷಾದಕರ ದುರಂತದ ನಂತರ ಅವರು ಬರೆದ ‘ದಿ ರಿಮೆಂಬರ್ಡ್ ವಿಲೇಜ್’ ಎಂಬ ಗ್ರಂಥವು ಮಾನವವಿಜ್ಞಾನ ಮತ್ತು ಸಮಾಜವಿಜ್ಞಾನಗಳಲ್ಲಿ ಒಂದು ಸಾರ್ವಕಾಲಿಕ ಶ್ರೇಷ್ಠ ಕೃತಿ ಎನ್ನಬಹುದು.
|
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Categories
|
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|