Niruta Publications
  • Home
  • About Us
  • Publication With Us
  • Editor's Blog
  • Niruta's Read & Write Initiative
  • Our Services
    • Translation & Typing
    • Publications >
      • Our Books
    • Human Resource
    • PoSH
    • NGO & CSR
    • Certificate Training Courses
  • Leaders Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Publication With Us
  • Editor's Blog
  • Niruta's Read & Write Initiative
  • Our Services
    • Translation & Typing
    • Publications >
      • Our Books
    • Human Resource
    • PoSH
    • NGO & CSR
    • Certificate Training Courses
  • Leaders Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಸಮಾಜಕಾರ್ಯ

7/21/2017

1 Comment

 
Picture
ಡಾ. ರಮೇಶ ಎಂ. ಸೋನಕಾಂಬಳೆ, ಪು. 304, ಬೆಲೆ : 250, ನಿರುತ ಪಬ್ಲಿಕೇಷನ್ಸ್
ಮುನ್ನುಡಿ
ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಾಟಾ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣ ಇಂದು ದೇಶದ ಎಲ್ಲ ರಾಜ್ಯಗಳಿಗೂ ತಲುಪಿದೆ. ಪ್ರಾರಂಭದ ಹಂತದಲ್ಲಿ ಎಲ್ಲವೂ ವಿದೇಶಿಮಯವಾಗಿತ್ತು. ಈ ಸಮಾಜಕಾರ್ಯದ ಶಿಕ್ಷಣ : ಪಠ್ಯಕ್ರಮ, ಪುಸ್ತಕಗಳು, ರಚನೆ ಮತ್ತು ಸ್ವರೂಪ ಹಾಗೂ ಅಧ್ಯಾಪಕರೂ ಕೂಡಾ. ಈ ಕಳೆದ ಎಂಟು ದಶಕಗಳಲ್ಲಿ ಹಲವಾರು ಪ್ರಗತಿಪರ ಬದಲಾವಣೆಗಳು ಸಮಾಜಕಾರ್ಯ ಶಿಕ್ಷಣದಲ್ಲಿ ಕಾಣಸಿಗುತ್ತಿವೆ. ಆದರೂ ಕೂಡಾ ಹೇಳಿಕೊಳ್ಳುವಂತಹ ಗುಣಾತ್ಮಕ ಪರಿವರ್ತನೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು.
ರಾಷ್ಟ್ರೀಯ ಸಮಾಜಕಾರ್ಯ ಮಂಡಳಿ (National Council on Social Work Education), ರಾಷ್ಟ್ರಮಟ್ಟದ ಸಮಾಜಕಾರ್ಯಕರ್ತರ ಕ್ರಿಯಾತ್ಮಕ ಸಂಘಟನೆ, ಸ್ಥಳೀಯ ಸಾಹಿತ್ಯದಲ್ಲಿ ಕೃಷಿ ಇವುಗಳು ನಮ್ಮ ವೃತ್ತಿಯ ಭಾರತದಲ್ಲಿಯ ಪ್ರಮುಖವಾದ ನ್ಯೂನ್ಯತೆಗಳು. ಇವುಗಳ ಕೊರತೆಯಿಂದ ವೃತ್ತಿಪರ ಸಮಾಜಕಾರ್ಯ ಸೋಲನ್ನು ಅನುಭವಿಸುವ ದಾರಿ ಹಿಡಿದಿದೆ. ಸೂಕ್ತ ಸಮಯದಲ್ಲಿ ನಾವು ಸರಿಪಡಿಸಿಕೊಳ್ಳದಿದ್ದರೆ ಚಿಂತಾಜನಕವಾದ ಸೋಲನ್ನಪ್ಪುತ್ತೇವೆ.

ಸಮಾಜಕಾರ್ಯ ಶಿಕ್ಷಣದ ಸ್ಥಳೀಯ ಸಾಹಿತ್ಯದ ಲಭ್ಯತೆ (Availability of indigenous Literature in Social Work Education) ಸಮಾಜಕಾರ್ಯ ವೃತ್ತಿಯನ್ನು ಗುಣಾತ್ಮಕವಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಹುತಾಂಶ ಹಿರಿಯ ಸಮಾಜಕಾರ್ಯ ಶಿಕ್ಷಣ ತಜ್ಞರು ಈ ದಿಸೆಯಲ್ಲಿ ಗಮನೀಯವಾದ ಕಾರ್ಯ ಮಾಡಿಲ್ಲ. ಅಪವಾದಾತ್ಮಕವಾಗಿ ಎನ್ನುವಂತೆ ಕೆಲವೇ ಹಿರಿಯ ಶಿಕ್ಷಣ ತಜ್ಞರು ಸ್ಥಳೀಯ ಸಮಾಜಕಾರ್ಯ ಸಾಹಿತ್ಯ ಸೃಷ್ಟಿಸುವಲ್ಲಿ ಯಶಸ್ಸು ಹೊಂದಿದ್ದಾರೆ. ಪ್ರೊ. ಎಚ್.ಎಂ. ಮರುಳಸಿದ್ಧಯ್ಯ, ಡಾ. ಶಂಕರ ಪಾಠಕ, ಡಾ. ಗೋರೆ, ಪ್ರೊ. ಗೌರಿ ರಾಣಿ ಬ್ಯಾನರ್ಜಿಯವರನ್ನು ಉದಾಹರಣೆಗಾಗಿ ನಮೂದಿಸಬಹುದು.

ನಾವು ಕೈಕೊಂಡ ಸಂಶೋಧನೆ, ನಾವು ಅನುಭವಿಸಿದ ಕ್ಷೇತ್ರಾನುಭವ, ನಮ್ಮ ಅಧ್ಯಯನ, ನಮ್ಮ ಚಿಂತನ-ಮನನಗಳೆಲ್ಲ ಪುಸ್ತಕಗಳಾಗಿ ಹೊರಬಂದಾಗ ನಮ್ಮ ಸಮಾಜಕಾರ್ಯ ವೃತ್ತಿ ಶ್ರೀಮಂತವಾಗುತ್ತದೆ. ಡಾ. ರಮೇಶ ಸೋನಕಾಂಬಳೆಯವರು ಈ ದಿಸೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರು ತಾವು ಕೈಕೊಂಡ ಸಂಶೋಧನೆ ಕ್ಷೇತ್ರದಲ್ಲಿ ಪಡೆದ ಅನುಭವ ಪುಸ್ತಕದ ರೂಪದಲ್ಲಿ ಪ್ರಕಟಿಸಿ ಸಮಾಜಕಾರ್ಯದ ವಿದ್ಯಾರ್ಥಿ ವೃಂದಕ್ಕೂ ಹಾಗೂ ಕ್ಷೇತ್ರದಲ್ಲಿ ಕಾರ್ಯತತ್ಪರರಾಗಿರುವ ವೃತ್ತಿಪರ ಸಮಾಜಕಾರ್ಯಕರ್ತರಿಗೂ ಒಂದು ದಾರಿಯನ್ನು ತೋರಿಸುತ್ತಿದ್ದಾರೆ. ಡಾ.ರಮೇಶ ಅವರು ವಿದ್ಯಾರ್ಥಿ ದೆಸೆಯಿಂದಲೇ ಬರೆಯುತ್ತಾ ಬಂದಿದ್ದಾರೆ. ವೃತ್ತ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಅವರ ಬರಹವನ್ನು ನಾವು ಗಮನಿಸಬಹುದಾಗಿದೆ.

ಸ್ಥಳೀಯ ಸಾಹಿತ್ಯವಂತು ಬೇಕೇ ಬೇಕು. ಆದರೆ ಅದು ಸ್ಥಳೀಯ ಭಾಷೆಯಲ್ಲಿ ಆದರೆ ಇನ್ನೂ ಉತ್ತಮ. ಡಾ. ರಮೇಶ ಸೋನಕಾಂಬಳೆಯವರ ಪ್ರಸ್ತುತ ``ಸಮಾಜಕಾರ್ಯ ಪುಸ್ತಕವು ಸಮಾಜಕಾರ್ಯ ಶಿಕ್ಷಣ ಹಾಗೂ ಸಮಾಜಕಾರ್ಯ ವೃತ್ತಿಗೆ ಮಹತ್ತರವಾದ ಕೊಡುಗೆಯಾಗಲಿದೆ. ವಿಶೇಷವಾಗಿ ವಿದ್ಯಾರ್ಥಿ ವೃಂದ ಹಾಗೂ ಯುವ ಶಿಕ್ಷಕ ಸಂಶೋಧಕರಿಗೆ ಮಾರ್ಗದರ್ಶಿಯಾಗಲಿದೆ.
ಪ್ರಸ್ತುತ ಸಮಾಜಕಾರ್ಯ ಪುಸ್ತಕ ಹತ್ತು ಅಧ್ಯಾಯಗಳಲ್ಲಿ ಮಂಡಿಸಲಾಗಿದೆ. ಈ ಪುಸ್ತಕವು ಪ್ರಮುಖವಾಗಿ ಸಮಾಜಕಾರ್ಯದ ಪರಿಕಲ್ಪನೆಗಳು, ವಿಧಾನಗಳು, ಮೌಲಿಕ ಕಾರ್ಯಕ್ಷೇತ್ರಗಳು, ಸಮಾಜಕಾರ್ಯ ಶಿಕ್ಷಣದ ಜಾಗತಿಕ ಇತಿಹಾಸ, ಸಮಾಜಕಾರ್ಯದ ತತ್ವಜ್ಞಾನ ಹಾಗೂ ಉದ್ದೇಶಗಳನ್ನು ಒಳಗೊಂಡಿದೆ. ಒಂಬತ್ತನೇ ಅಧ್ಯಾಯದಲ್ಲಿ ಮಂಡಿಸಿದ ಭಾರತದ ಸಮಾಜಕಾರ್ಯದ ನವರತ್ನಗಳು ಒಂದು ಹೊಸ ಆಯಾಮವೆಂದೇ ಹೇಳಬೇಕು. ಪುಸ್ತಕದ ಕೊನೆಗೆ ಸೇರಿಸಿದ ಅನುಬಂಧಗಳು ಈ ನಿಟ್ಟಿನಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಸಹಕರಿಸುತ್ತವೆ.

ಸಮಾಜಕಾರ್ಯದ ಪ್ರತಿಯೊಂದು ವಿಧಾನದ ಮೇಲೆ ಒಂದೊಂದು ಸ್ವತಂತ್ರ ಪುಸ್ತಕದ ಅವಶ್ಯಕತೆ ಇದೆ. ಅಲ್ಲದೆ ಕ್ಷೇತ್ರಕಾರ್ಯದ ಕುರಿತು ಕೂಡಾ ಕನ್ನಡದಲ್ಲಿ ಬರೆಯುವ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ಡಾ. ರಮೇಶ ಅವರು ಈ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆಂದು ಆಶಿಸುತ್ತೇನೆ.

ಅಂತರ್ಜಾಲಗಳ ಇಂದಿನ ಆಧುನಿಕ ಯುಗದಲ್ಲಿ ಬರೆಯುವವರಿದ್ದರೂ ಓದುಗರು ಸಿಗುವುದಿಲ್ಲ ! ಆದುದರಿಂದ ಸಮಾಜಕಾರ್ಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರು ಪ್ರಸ್ತುತ ``ಸಮಾಜಕಾರ್ಯ ಪುಸ್ತಕವನ್ನು ಓದಿ ಅರಿತುಕೊಂಡು ಅದರಲ್ಲಿರುವ ಜ್ಞಾನವನ್ನು ತಮ್ಮ ವೃತ್ತಿಯಲ್ಲಿ ಬಳಸುವಂತಾಗಲಿ ಎಂದು ನಾವೆಲ್ಲ ಆಶಿಸೋಣವೆ.....!

ಆತಂಕವಿಲ್ಲದ ನಿರಾತಂಕದ ರಮೇಶರೆಂದೇ ನಮ್ಮೆಲ್ಲರಿಗೂ ಚಿರ ಪರಿಚಿತರಾದ ಶ್ರೀ ರಮೇಶ ಅವರ ಕಾರ್ಯ ಈ ನಿಟ್ಟಿನಲ್ಲಿ ಶ್ಲಾಘನೀಯ. ಅವರು ನವ ಬರಹಗಾರರಿಗೆ ಉತ್ತೇಜಿಸುತ್ತಿದ್ದಾರೆ. ಅವರು ಇನ್ನೂ ಇಂತಹ ಹಲವಾರು ಸಮಾಜಕಾರ್ಯ ಪುಸ್ತಕಗಳು ಪ್ರಕಟಿಸಲಿ.
 
ಡಾ. ಬಸವರಾಜ ಲಾವಣಿ
ನಿರ್ದೇಶಕರು, ಯಶವಂತರಾವ ಚವ್ಹಾಣ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸ್ಟಡೀಸ್ ಅಂಡ್ ರಿಸರ್ಚ್‍, ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯ, ಪುಣೆ-411038
Picture
1 Comment
MANJUNATH AROODI SANADI link
3/31/2020 12:42:55 pm

Super

Reply



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Social Work Foot Prints

    Categories

    All
    ಸಮಾಜಕಾರ್ಯ


    List Your Product on Our Website 

    Picture
    Niruta Catalogue 2021
    File Size: 5822 kb
    File Type: pdf
    Download File


    RSS Feed


SITE MAP


Site

  • HOME
  • ABOUT US
  • EDITOR'S BLOG
  • BLOG
  • ONLINE STORE
  • VIDEOS
  • TRANSLATION & TYPING

TRAINING

  • TRAINING PROGRAMMES
  • CERTIFICATE TRAINING COURSES

NGO & CSR

  • POSH
  • CSR

Human Resource

  • MHR LEARNING ACADEMY
  • RECRUITMENT SERVICES
  • DOMESTIC ENQUIRY
  • TRADEMARK
  • CONSULTING

JOB

  • FIND FREELANCE JOBS
  • CURRENT JOB OPENINGS

OUR OTHER WEBSITES

  • WWW.MHRSPL.COM
  • WWW.NIRATANKA.ORG
  • WWW.HRKANCON.COM

Subscribe


Subscribe to Newsletter


JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com