ರಮೇಶ ಎಂ.ಎಚ್. ನಿರಾತಂಕ ನಿರಾತಂಕ ಸಂಸ್ಥೆ 2007 ರಲ್ಲಿ ಆರಂಭಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕಾರ್ಯದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಆಯೋಜಿಸಿಕೊಂಡು ಬರುತ್ತಿದ್ದೇವೆ. “ಸಮಾಜಕಾರ್ಯದ ಹೆಜ್ಜೆಗಳು”ಪತ್ರಿಕೆ ಹಾಗೂ ಹಲವಾರು ಪುಸ್ತಕಗಳನ್ನು ಪ್ರಕಟಿಸಿ 100 ಕ್ಕೂ ಹೆಚ್ಚು ಸಾಹಿತ್ಯಲೋಕಕ್ಕೆ ಹಾಗೂ 10ಕ್ಕೂ ಹೆಚ್ಚು ಕೃತಿಗಳನ್ನು ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನಿರಾತಂಕವನ್ನು ಅತ್ಯಂತ ದೂರದೃಷ್ಟಿಯಿಂದ ಕಟ್ಟಿದ ಸಂಸ್ಥೆಯಾಗಿದೆ.
ಆತಂಕವನ್ನು ದೂರ ಸರಿಸಿ, ವಿಶ್ವಮಾನವ ಸಂದೇಶವ ಪಸರಿಸಿ, ನೆಮ್ಮದಿಯ ಬದುಕು ನಮ್ಮದಾಗಲಿ ಎನುತ, ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿ ಕಟ್ಟಿದ ಸಹೃದಯಿಗಳ ತಂಡ ನಿರಾತಂಕ. ಭಾಷೆ, ನೆಲ, ಕೈಗಾರಿಕೆ ಹಾಗೂ ಮಾನವ ಸಂಪನ್ಮೂಲಗಳು ಕೂಡಾ ಸಹ ಅವಿನಾಭಾವವಾಗಿ ಬೆಸೆದುಕೊಂಡಿವೆ. ಆಧುನಿಕವಾಗಿ ನಮಗೆ ದಿನನಿತ್ಯದ ಒಡನಾಟದಲ್ಲಿ ಆಂಗ್ಲ ಭಾಷೆ ಅನಿವಾರ್ಯ ಹಾಗೂ ಮಹತ್ವ ಎಂದು ಎನಿಸಿದರೂ ಕೂಡ ತಾಯಿ ಭಾಷೆ ನಮ್ಮ ಮನದಲ್ಲಿ ಅಗ್ರಸ್ಥಾನ ಪಡೆದಿರುತ್ತದೆ.
0 Comments
ಅವನು ನನ್ನ ಆತ್ಮೀಯ ಗೆಳೆಯ, ಮಹೇಶ್ ಚುನಾವಣಾ ಪ್ರಚಾರದ ವೇಳೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಂಡೆ. ಅವನು ಆನಂದದಿಂದ ನಮ್ಮ ಲೇಔಟ್ ನವರನ್ನೆಲ್ಲಾ ಸೇರಿಸುತ್ತೇನೆ. ನಾನೆ ಆ ಲೇಔಟ್ ನ ಸಂಘದ ಅಧ್ಯಕ್ಷ, ಒಮ್ಮೆ ಅಭ್ಯರ್ಥಿಯನ್ನು ಕರೆದುಕೊಂಡು ಬನ್ನಿ ಎಂದರು. ನಾನು ಸರಿ ಎಂದು ನನ್ನ ಇನ್ನೂ ಕೆಲವು ಗೆಳೆಯರಿಗೆ ಹೇಳಿ ಆ ಲೇಔಟ್ ಗೆ ಪ್ರಚಾರಕ್ಕೆ ಹೋದೆ. ಅಲ್ಲಿ ನನ್ನ ಇನ್ನೊಬ್ಬ ಪ್ರಾಣ ಸ್ನೇಹಿತ ಕೂಡ ಆ ಸಭೆಗೆ ಬಂದಿದ್ದ. ಅವನನ್ನು ನಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಪ್ಪ ಎಂದು ವಿನಂತಿಸಿದೆ. ಅದಕ್ಕೆ ಅವನು ಸಮ್ಮತಿಸಿದ, ಈ ನನ್ನ ಪ್ರಾಣ ಸ್ನೇಹಿತನಿಗೆ ಹಲವು ಉಪಕಾರಗಳನ್ನು ನಾನು ಮಾಡಿದ್ದೆ. ಅವನ ಮಗನಿಗೆ ಒಂದು ಪ್ರಮುಖ ಶಾಲೆಯಲ್ಲಿ ಸೀಟು, ಅವನ ಪುಸ್ತಕ ಪ್ರಕಟಣೆ ಮಾಡಿದ್ದೆ ಹಾಗೂ ನಾನು ಅವನಿಗೆ ಒಂದು ಸೈಟು ತೋರಿಸಿ ಖರೀದಿ ಮಾಡಲು ನೆರವಾಗಿದ್ದೆ. ಹೀಗೆ ಹತ್ತು ಹಲವು ಉಪಕಾರ ಮಾಡಿದ್ದೆ. ಹಾಗಾಗಿ ಅವನು ನನ್ನ ಪರ ಪ್ರಚಾರ ಮಾಡುತ್ತಾನೆ ಎಂದು ನಂಬಿದ್ದೆ ಕೂಡ.
ಕೆಲವು ದಿನಗಳು ಕಳೆದ ನಂತರ ನನ್ನ ಸ್ನೇಹಿತ ಮಹೇಶ ಸಿಕ್ಕಿದ್ದ. ನಾನು ಎಂದಿನಂತೆ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಕೇಳಿದೆ ಹಾಗೂ ನನ್ನ ಪ್ರಾಣಕ್ಕಿಂತ ಶಶಿಧರನೂ ನಿನಗೆ ಸಹಾಯ ಮಾಡುತ್ತಿರುವನೆ ಎಂದೆ? ಅದಕ್ಕೆ ಅವನು ಸಹಾಯ ಮಾಡುವುದು ಹಾಗಿರಲಿ, ನೀನು ಅಂದು ಸಭೆ ಮಾಡಿ ಹೊರಟ ನಂತರ ನಿನ್ನ ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಕರೆಸಿ ನಿನ್ನ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ ಎಂದನು! ನನಗೆ ಕೇಳಿ ಆಶ್ಚರ್ಯವಾಯಿತು….. ಕೆಲವೊಮ್ಮೆ ನಮ್ಮ ಅನಿಸಿಕೆ ಸರಿ ಎಂದು ನಾವು ಹೇಳಿದರೆ ಅದನ್ನು ಒಪ್ಪದ ನನ್ನ ಸ್ನೇಹಿತ ಅದು ಹೀಗೂ ಇರಬಹುದು, ಅದು ಹಾಗೂ ಇರಬಹುದು ಎಂದು ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಚರ್ಚೆ ನಡೆಸಿ, ನಂತರ ನಿನ್ನ ಅನಿಸಿಕೆ ನಿನಗೆ ಇರಲಿ, ನನ್ನ ಅನಿಸಿಕೆ ನನಗಿರಲಿ ಗೆಳೆಯ ಎಂದು ವಿಷಯಗಳ ಚರ್ಚೆ ನಿಲ್ಲಿಸಿಬಿಡುತ್ತೇವೆ. ಕೊನೆಗೆ ನನ್ನನ್ನು ಅವನು ಒಪ್ಪಲಿಲ್ಲ, ಅವನನ್ನು ನಾನು ಒಪ್ಪಲಿಲ್ಲ. ಇಬ್ಬರ ನಡುವೆ ಮತ್ತೆ ನೂರು ಪ್ರಶ್ನೆಗಳು ಎದ್ದು, ಆ ನೂರು ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತವೆ. ನನ್ನ ಸ್ನೇಹಿತ ನನ್ನ ವಾದವನ್ನು ಒಪ್ಪಿಕೊಳ್ಳದಿದ್ದರಿಂದ ಅವನ ಬಗೆಗೆ ಅಸಮಾಧಾನ ಹೆಚ್ಚಾಗತೊಡಗುತ್ತವೆ. ಮತ್ತೆ ನನ್ನ ಸ್ನೇಹಿತನಿಗೂ ಅದೇ ರೀತಿಯ ಅನುಭವ ಆಗಿದೆ. ಇದಕ್ಕೆ ಪರಿಹಾರವೆಂಬಂತೆ ಇತ್ತೀಚಿಗೆ ನಾನು ಅಂತಿಮವಾಗಿ ನನ್ನ ಸ್ನೇಹಿತನನ್ನು ಒಪ್ಪಿಸಲು ಜೋತು ಬೀಳುವುದು. ನಿನ್ನ ಅನಿಸಿಕೆ, ನನ್ನ ಅನಿಸಿಕೆ ಎರಡೂ ತಪ್ಪಿರಬಹುದು, ಆದರೆ ಬುದ್ಧನು ಕಂಡುಕೊಂಡ ಸತ್ಯದ ಬೆಳಕಿನಲ್ಲಿ ನಮ್ಮ ವಾದವನ್ನು ಮಾಡೋಣ ಎನ್ನುತ್ತ ಬುದ್ಧ ಈ ರೀತಿ ಹೇಳಿರುತ್ತಾನೆ ಎಂದು ಬುದ್ಧನ ಎರಡು ವಾಕ್ಯ Quote ಮಾಡಿ ಹೇಳಿದರೆ ತಕ್ಷಣ ನನ್ನ ಸ್ನೇಹಿತ ಇರಬಹುದು ಎಂದು ಒಪ್ಪಿ ವಾದಗಳಿಗೆ ತೆರೆ ಎಳೆದುಬಿಡುತ್ತಾನೆ. ಹಲವು ಸಂದರ್ಭಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಬುದ್ಧನ ದಾರಿ ಹೊರತು ಅನ್ಯಮಾರ್ಗವಿಲ್ಲ ಎನಿಸಿಬಿಡುತ್ತದೆ.
ರಮೇಶ ಎಂ.ಎಚ್. ನಿರಾತಂಕ ಅದೊಮ್ಮೆ ಅಂತರ್ಜಾಲ ತಾಣದಲ್ಲಿ ಓದಿದ ನೆನಪು. ಒಬ್ಬ ಗೃಹಿಣಿ ಒಂದು ಸುಂದರವಾದ ಹೂವಿನ ಗಿಡವನ್ನು ಮನೆಗೆ ತರುತ್ತಾರೆ. ಸುಮಾರು 2 ವರ್ಷಗಳ ಕಾಲ ನೀರನ್ನು ಹಾಕುತ್ತಾ ಪೋಷಣೆ ಮಾಡುತ್ತಾರೆ. ಆದರೆ ಆ ಹೂವಿನ ಗಿಡದಲ್ಲಿ ಯಾವುದೇ ಬೆಳವಣಿಗೆ ಕಂಡುಬರುವುದಿಲ್ಲ. ಅವರು ಆ ಹೂವಿನ ಗಿಡದಲ್ಲಿ ಯಾವುದೇ ಬದಲಾವಣೆ ಕಂಡುಬಾರದಿದ್ದಾಗ ಅನುಮಾನ ಬಂದು ಗಿಡವನ್ನು ಕುಂಡದಿಂದ ಬೇರ್ಪಡಿಸಿ ನೋಡುತ್ತಾರೆ. ಆಗ ಅವರಿಗೆ ತಿಳಿದದ್ದು ಅವರು ಮನೆಗೆ ತಂದು ಬೆಳೆಸಿದ್ದು ಪ್ಲಾಸ್ಟಿಕ್ ನಿಂದ ಮಾಡಿದ ನೈಜ ಹೂ ಗಿಡದಂತೆ ಭಾಸವಾಗುವ ಪ್ಲಾಸ್ಟಿಕ್ ಹೂವಿನ ಗಿಡ. ಆದರೆ ನೈಜ ಹೂವಿನ ಗಿಡದಂತೆ ಕಾಣಿಸುತ್ತಿರುತ್ತದೆ. ನೈಜ ಗಿಡದ ಪಕ್ಕ ಅದನ್ನು ಇಟ್ಟು ಹೋಲಿಸಿ ನೋಡಿದರೆ ಅದು ಪ್ಲಾಸ್ಟಿಕ್ ಗಿಡ ಎಂಬಂತೆ ಯಾವುದೇ ಅನುಮಾನ ಬಾರದಿರುವುದು ಅಚ್ಚರಿ ಮೂಡಿಸುತ್ತದೆ.
ಅದೊಂದು ದಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಬಿ.ಎ. ತರಗತಿಯಲ್ಲಿ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದ ನಮ್ಮ ಗುರುಗಳು ಒಂದು ನೈಜ ಕಥೆಯನ್ನು ಹೇಳಿದ್ದರು. ಅವರ ಸ್ನೇಹಿತ ಶೇಖರ್ (ಅವರ ಹೆಸರು ಮರೆತಿದ್ದೇನೆ) ವೈಚಾರಿಕ ಪ್ರಜ್ಞೆಯಿಂದ ಕೂಡಿದ್ದರಂತೆ. ಅವರು ಯಾವುದೇ ಅವೈಜ್ಞಾನಿಕ ಪದ್ಧತಿಯನ್ನು ಆಚರಣೆ ಮಾಡುತ್ತಿರಲಿಲ್ಲವಂತೆ. ಯಾವುದೇ ಶ್ರಾದ್ಧ, ತಿಥಿಗಳಿಗೆ ಕುರಿತಂತೆ ಅವರಿಗೆ ಯಾವುದೇ ನಂಬಿಕೆ ಇರಲಿಲ್ಲವಂತೆ. ಅದನ್ನು ಆಚರಿಸುವವರನ್ನು ಕಂಡರೆ ಅವರಿಗೆ ವಿರೋಧಿಸುತ್ತಿದ್ದರಂತೆ.
ಕೆಲವು ವರ್ಷಗಳ ನಂತರ ಶೇಖರ್ ರವರ ತಂದೆ ಮರಣ ಹೊಂದಿದರು. ಆಗ ಶೇಖರ್ ತಂದೆಯ ಶ್ರಾದ್ಧ, ತಿಥಿ, ಪುಣ್ಯ ನೆರವೇರಿಸಬೇಕಾದ ಅನಿವಾರ್ಯತೆ ಒದಗಿಬಂತು. ಆಗ ಶೇಖರ್ ತಂದೆಯ ತಿಥಿಯ ನಂತರ ತಲೆಯ ಕೂದಲನ್ನು ತೆಗೆಸಿದರಂತೆ. ಇದು ಕಾಲೇಜಿನ ಇತರ ಸಹೋದ್ಯೋಗಿಗಳಿಗೆ ಇದುವರೆಗೂ ವೈಚಾರಿಕ ಪ್ರಜ್ಞೆ ಎಂದು ಬೋಧನೆ ನೀಡುತ್ತಿದ್ದ ಶೇಖರ್ ತಾವೇ ಅಂಧಾನುಕರಣೆ ಮಾಡುತ್ತಿದ್ದಾರೆ ಎಂದು ಗುಸುಗುಸು ಶುರುವಾಯಿತು. ಅವರ ಆತ್ಮೀಯ ಸ್ನೇಹಿತರು ಅಲ್ಲ ಶೇಖರ್, ನೀನು ಇಷ್ಟು ದಿವಸ ಅಂಧಾನುಕರಣೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿ ಅತ್ಯಂತ ವೈಚಾರಿಕನೆಂಬಂತೆ ಬಿಂಬಿಸಿಕೊಂಡು ಇಂದು ನೀನೇ ತಿಥಿ, ಶ್ರಾದ್ಧ ಮಾಡಿ ತಲೆ ಬೋಳಿಸಿಕೊಂಡು ಬಂದಿರುವೆ. ಈ ರೀತಿ ಹೇಳುವುದೊಂದು, ಮಾಡುವುದೊಂದು ನಿನ್ನ ಘನತೆಗೆ ತಕ್ಕುದಾದುದೆ ಎಂದು ಪ್ರಶ್ನಿಸಿದರಂತೆ. ಇದಕ್ಕೆ ಉತ್ತರಿಸಿದ ಶೇಖರ್ ಹೌದಪ್ಪ, ನಾನು ವೈಚಾರಿಕನಾಗಿಯೇ ಇದ್ದೇನೆ. ಆದರೆ ನಾನು ಸಂಪ್ರದಾಯ ಆಚರಿಸದೆ ಹಾಗೆಯೇ ನನ್ನ ಇಷ್ಟ ಬಂದ ಹಾಗೆ ಇದ್ದರೆ ನನ್ನ ವೃದ್ಧಾಪ್ಯದಲ್ಲಿರುವ ತಾಯಿ ಹಾಗೂ ನನ್ನ ಕುಟುಂಬದವರಿಗೆ ಬೇಸರ ತರಿಸಿದಂತಾಗುತ್ತದೆ. ನನ್ನ ವೈಚಾರಿಕತೆ ಏನಿದ್ದರೂ ನನ್ನ ವೈಯಕ್ತಿಕವಾದದ್ದು. ಇದನ್ನು ನನ್ನ ವೃದ್ಧ ತಾಯಿಗೆ ತಿಳಿಹೇಳಿ ಅರ್ಥ ಮಾಡಿಸಲು ಹೋಗಿ ಅವರು ಹಿಂಸೆ ಪಡುವುದನ್ನು ಹಾಗೂ ಸಂಕಟ ಪಡುವುದನ್ನು ನಾನು ನೋಡಲಾರೆ. ನನ್ನ ವೈಚಾರಿಕ ಪ್ರಜ್ಞೆ ಅವರಿಗೆ ನೋವು ನೀಡುವುದಾದರೆ ಮಾನಸಿಕವಾಗಿ ನಾನು ವೈಚಾರಿಕವಾಗಿದ್ದು ಲೌಕಿಕವಾಗಿ ವೈಚಾರಿಕತೆ ಬದಿಗಿಟ್ಟು ಅವರ ಸಂತಸಕ್ಕಾಗಿ ನಾನು ಮಾಡಬೇಕಾದ ಆಚರಣೆಗಳೆಲ್ಲವನ್ನೂ ಮಾಡಿ ಮುಗಿಸುತ್ತೇನೆ. ಅದು ತಪ್ಪೇ ಎಂದರಂತೆ. ಎಷ್ಟೋ ಸಂದರ್ಭಗಳಲ್ಲಿ ವ್ಯಕ್ತಿಗಳ ಹಲವು ಸಂಕೀರ್ಣ ಕಾಲಘಟ್ಟಗಳಲ್ಲಿ ಅವರಿಗೆ ಸರಿ ಎನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರನ್ನು ಟೀಕಿಸಿ, ಅವರನ್ನು ಅನುಮಾನದಿಂದ ನೋಡುವ ಬದಲು ವ್ಯಕ್ತಿಯನ್ನು ಕೇಳಿ ಅವರು ಇರುವ ಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಒಳಿತಲ್ಲವೇ. ವಂದನೆಗಳೊಂದಿಗೆ ರಮೇಶ ಎಂ.ಎಚ್. ಒಂದು ಪುಸ್ತಕ ನಮ್ಮ ಚಿಂತನೆಯ ವಿಧಾನವನ್ನು ಬದಲಿಸಿಬಿಡಬಲ್ಲದು. ಅದೇ ಒಂದು ಪುಸ್ತಕವೇಕೆ, ಒಂದು ಪುಸ್ತಕದೊಳಗಿನ ವಾಕ್ಯದಿಂದಲೂ ನಮ್ಮ ಜೀವನ ಬದಲಾಯಿಸಿಕೊಂಡುಬಿಡಬಹುದು. ಆದರೆ ನಮಗೆ ಬದಲಾಯಿಸಿಕೊಳ್ಳುವ ತಾಕತ್ತು ಇರಬೇಕು ಅಷ್ಟೆ. ಒಂದು ದೀಪ ಸುತ್ತಲೂ 4 ಅಡಿ ಬೆಳಕು ನೀಡುತ್ತದೆ. ಅದೇ ದೀಪವನ್ನು ಹಿಡಿದು ಕತ್ತಲಲ್ಲಿ ನಡೆಯುತ್ತಾ ಸಾಗಿದರೆ ದಾರಿಯುದ್ದಕ್ಕೂ ಬೆಳಕು ನೀಡಬಲ್ಲದು. ನಾವು ತಲುಪಬೇಕಾಗಿರುವ ಜಾಗವನ್ನು ದೀಪದ ಬೆಳಕಿನಿಂದ ತಲುಪಿಬಿಡಬಹುದು. ಅಂತೆಯೇ ಒಂದು ಪುಸ್ತಕದಲ್ಲಿನ ವಿಚಾರಗಳು ಹಲವು ವಿಭಿನ್ನ ವಿಚಾರ, ಚಿಂತನೆ, ಪ್ರಶ್ನೆಗಳನ್ನು ನಮ್ಮ ತಲೆಯೊಳಗೆ ಬಿತ್ತುತ್ತವೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ಮತ್ತೆ ಹಲವು ಪುಸ್ತಕಗಳನ್ನು ಓದಲೇಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ.
ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE) “Dear Ramesh, Can you do me a favour. You know me for the last 10 years. In my books, as a publisher you have written me few good things about me. You have never got a chance to analyze my personality. Now you can do it here. You can talk to me or you can put it on paper. You should be analysis my personality, my positives and negatives without any hesitation, so that I can correct myself. Feel free to do it, I will not misuse.” ಡಾ. ಸಿ.ಆರ್ ಗೋಪಾಲ್ ಹಾಗೂ ನನ್ನ ಪರಿಚಯವಾಗಿ ಸುಮಾರು 10 ವರ್ಷ ಕಳೆದಿವೆ. ಅವರಿಗೆ ಈಗ 67 ವರ್ಷಗಳು. ಅವರು MSW ಸ್ನಾತಕೋತ್ತರ ಪದವಿಯನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯ ದಿಂದ Ph.D. ಅನ್ನು ಪಡೆದಿದ್ದಾರೆ. ದಿ ಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ (ಲಿ) ರಲ್ಲಿ ಕೆಲಸ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದುವರೆಗೂ 10 ಪುಸ್ತಕಗಳನ್ನು ರಚಿಸಿದ್ದಾರೆ. ಅತ್ಯಂತ ಸೌಮ್ಯ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ನನಗೂ ಡಾ. ಸಿ.ಆರ್. ಗೋಪಾಲ್ ರವರಿಗೂ ಎಚ್.ಎಂ. ಮರುಳಸಿದ್ಧಯ್ಯ ರವರ ಮನೆಯಲ್ಲಿ ಆಗಾಗ ಭೇಟಿ ಆಗುತ್ತಿತ್ತು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಂತರದ ದಿನಗಳಲ್ಲಿ ನಮ್ಮ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಇರಲು ಕೋರಿಕೊಂಡೆವು. ನಂತರ ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅದನ್ನು ಹೊರತರಲು ನಮ್ಮ ಸಂಸ್ಥೆ ಹಾಗೂ ತಂಡಕ್ಕೆ ಸಹಕಾರ ನೀಡುತ್ತಾ, ಸಹಕರಿಸಿದರು.
ಗೆಲ್ಲಲು ಹೊರಟವರು ನಾವು
ಯಾರನ್ನು ಗೆಲ್ಲಬೇಕು ನಾವು ನೀವು ಸ್ನೇಹಿತರ ಮನಸ್ಸನ್ನು ಸಮಾಜದಲ್ಲಿರುವ ಜನರನ್ನು ಜಗತ್ತಿಗೆ ಹೊತ್ತು ತಂದ ಜನ್ಮದಾತರನ್ನು ಜೀವನ ಹಂಚಿಕೊಂಡ ಜೀವನ ಸಂಗಾತಿಯನ್ನು ಜನ್ಮ ನೀಡಿದ ಮಕ್ಕಳನ್ನು ಹೊನ್ನು, ಹೆಣ್ಣು, ಮಣ್ಣನ್ನು ಯಾವುದು ಮೊದಲು ಯಾವುದು ಆನಂತರ ಎಲ್ಲವನ್ನು ಗೆಲ್ಲಬೇಕು ಎಂಬರು ಹಲವರು ಕೆಲವು ಗೆದ್ದರೆ ಸಾಕು ಎಂಬುತ ಸಾಗುವರು ಕೆಲವರು ಗೆಲ್ಲಲು ಮತ್ತಷ್ಟಿವೆ ಎಂಬ ದಾವಂತದಲ್ಲಿ ಹೆಜ್ಜೆ ಹಾಕುವರು ಕೆಲವರು ಕಣ್ಣ ಮುಂದಿನ ಕೆಲಸವನ್ನು ಕಂಡು ಕಾಣದಂತೆ ಕುಂತಿಹರು ಹಲವರು ಅಹಂಕಾರವನ್ನು ಗೆಲ್ಲಲು ಗೊತ್ತಿಲ್ಲ ಪ್ರೀತಿಯಿಂದ ಬದುಕಲು ಕಲಿಯಲಿಲ್ಲ ಸ್ನೇಹದ ಅರ್ಥ ಹುಡುಕಲಿಲ್ಲ ಸಮಾಜದ ನೋವು ತಿಳಿಯಲಿಲ್ಲ ಗೆಲ್ಲಲು ನೀನು ಯಾರು? ಯಾವ ಊರು? ಹೇಗೆ ಬಂದೆ, ಎಲ್ಲಿಗೆ ಹೊರಟಿರುವೆ ? ಪ್ರಶ್ನೆಗಳು ಸಾವಿರಾರು ಕೆಲವರು ಒಗಟಿನ ಪ್ರಶ್ನೆಗಳ ಹುಡುಕಲು ಹೊರಡುವರು ಹಲವರು ಆಟವಾಡಿಕೊಂಡು ಸುಮ್ಮನೆ ಕಾಲಕಳೆಯುವರು ಉತ್ತರ ಸಿಕ್ಕವರು ಮೌನದಲ್ಲಿ ಕುಂತು ಧ್ಯಾನಿಸುವರು ಉತ್ತರ ಸಿಗದವರು ಜಗದ ನಾಟಕ ನೋಡುತ ಆಡುತ ನಿದ್ರಿಸುವರು ಅವರವರ ದಾರಿ ಅವರವರೆ ಕಂಡುಕೊಂಡ ಜಾಣರು ನಾವು ಕಂಡುಕೊಂಡದ್ದೇ ದಾರಿ ಸತ್ಯವೆಂದುಕೊಂಡು ಸಾಗುತಿರುವೆವು ರಮೇಶ ಎಂ.ಎಚ್. #ನಿರಾತಂಕಕವನ ಬದುಕಿನಲ್ಲಿ ಅನುಭವಗಳು ಪಾಠ ಕಲಿಸುತ್ತಾ ಸಾಗುತ್ತವೆ. ನಾವು ಪಾಠ ಕಲಿತಿದ್ದೇವೆ ಅನಿಸುತ್ತದೆ. ಆದರೆ ಮತ್ತೆ ಮತ್ತೆ ಎಡವಿ ಬೀಳುತ್ತಿರುತ್ತೇವೆ. ಸಾವಿನವರೆಗೂ ಪಾಠ ಕಲಿಯುತ್ತಿರಲೇಬೇಕು ಅನಿಸುತ್ತದೆ. ಕೆಲವೊಮ್ಮೆ ನಮ್ಮ ಜಾನಪದ ಕಥೆಗಳು, ಹಿರಿಯರ ಅನುಭವದ ಮಾತುಗಳು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಬದುಕಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ನನ್ನ ಜೀವನದಲ್ಲಿ ನಾನು ಓದಿದ ಮೂರು ಕತೆಗಳು ಇಂದಿಗೂ ನನಗೆ ಕ್ಲಿಷ್ಟಕರ ಸಮಯದಲ್ಲಿ ಕೆಲವು ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿವೆ.
ನಾನು ಈ ಕತೆ ಓದಿ ಬಹಳ ವರ್ಷಗಳು ಕಳೆದಿವೆ. ಹಾಗಾಗಿ ಎಲ್ಲಿ ಓದಿದೆ ಎಂಬ ನೆನಪಿಲ್ಲ, ಆದರೆ ಇಂದಿಗೂ ನನ್ನನ್ನು ಕಾಡುವ ಕಥೆಗಳಾಗಿವೆ. ರಾಮಕೃಷ್ಣ ಪರಮಹಂಸರು ಈ ಕಥೆ ಹೇಳಿದರು ಎಂದು ನೆನಪು. ಬಾಲ್ಯದಿಂದ ಹತ್ತಾರು ಗೆಳೆಯರು ನಮ್ಮ ಜೀವನದಲ್ಲಿ ಬಂದು ಹೋಗುತ್ತಾರೆ. ಶಾಲಾ ದಿನಗಳಲ್ಲಿ ನನಗೊಬ್ಬ ಅತ್ಯಂತ ಆತ್ಮೀಯ ನವೀನ್ ಎಂಬ ಗೆಳೆಯನಿದ್ದ. ಬಾಲ್ಯದ ಆತ್ಮೀಯ ಗೆಳೆತನದಲ್ಲಿ ಇರುವಂತೆ ಅತ್ಯಂತ ನಿಷ್ಕಲ್ಮಷ ಬಾಂಧವ್ಯವಿತ್ತು. ಜೊತೆಗೆ ನಾವು ಶಾಲೆಗೆ ಹೋಗುವುದು, ಆಟವಾಡುವುದು, ಒಟ್ಟಿಗೆ ಕಾಲಕಳೆಯುವುದು ಸಾಮಾನ್ಯವಾಗಿತ್ತು. 7ನೇ ತರಗತಿ ಪಾಸಾದ ನಂತರ ನಾನು ಬೇರೆ ಶಾಲೆಗೆ ಸೇರಿಕೊಂಡೆ. 10ನೇ ತರಗತಿಯ ತನಕವೂ ನವೀನನ ಒಡನಾಟದಲ್ಲಿ ಇರುತ್ತಿದ್ದೆ. ನಂತರದ ದಿನಗಳಲ್ಲಿ ಅವನನ್ನು ಕಾಣಲು ಆಗುತ್ತಿರಲಿಲ್ಲ. ಇತ್ತೀಚೆಗೆ ನನ್ನ ಇನ್ನೊಬ್ಬ ಸ್ನೇಹಿತನಿಂದ ತಿಳಿಯಿತು. 10ನೇ ತರಗತಿಯಲ್ಲಿ ನವೀನನಿಗೆ ಅತ್ಯಂತ ಉತ್ತಮ ಅಂಕಗಳು ಬಂದು ಪಾಸಾಗಿದ್ದನು. ಆದರೂ ಬಡತನದ ಕಾರಣದಿಂದ ಕಾಲೇಜಿಗೆ ಸೇರಲಾಗಲಿಲ್ಲ ಹಾಗೂ ಅವನು ಹತ್ತು ಸಾವಿರ ಸಾಲ ಮಾಡಿಕೊಂಡು ತೀರಿಸಲಾಗದೆ, ನೇಣು ಬಿಗಿದುಕೊಂಡು ಸತ್ತು ಹೋದನಂತೆ. ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು.
ನಿಧಿ ಸಂಗ್ರಹಣೆಗಾಗಿ ವಿಸ್ತೃತವಾದ ವರದಿಯನ್ನು ಹಲವರು ಸಂಘ ಸಂಸ್ಥೆಗಳಿಗೆ ಕೊಟ್ಟು ದೇಣಿಗೆ ಕೇಳುವ ಬದಲು ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ಒಂದು Envelope ಗೆ ಹಾಕಿ ಒಂದು ಕಾಗದದಲ್ಲಿ ಈ ರೀತಿ ಬರೆಯಲಾಗಿತ್ತು. ಸುಮಾರು 2003 ಬೆಂಗಳೂರು ಉತ್ತರ ತಾಲ್ಲೂಕಿನ ಕೆಲವು ಹಳ್ಳಿಗಳನ್ನು ಬಿಡಿಎ ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ ರಚಿಸಲು ಭೂಸ್ವಾಧೀನ ಮಾಡಿಕೊಳ್ಳತೊಡಗಿತು. ನಮ್ಮ ಊರಿನ ಜಮೀನುದಾರ ರಂಗಪ್ಪನಿಗೆ ಸುಮಾರು 110 ಎಕರೆ ಜಮೀನಿತ್ತು. ರಂಗಪ್ಪನ ಮಗಳನ್ನು ನಮ್ಮದೇ ಊರಿನ ವಿದ್ಯಾವಂತ ಅನಂತಕುಮಾರ್ ಗೆ ಮದುವೆ ಮಾಡಿದರು. ಅನಂತಕುಮಾರ್ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದನು. ಹಾಗೆಯೇ ಕೆಲವೊಂದು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡುತ್ತಿದ್ದನು. ಮಾವ ರಂಗಪ್ಪನ ಜಮೀನು ಬಿಡಿಎ ಭೂಸ್ವಾಧೀನ ಮಾಡಿಕೊಳ್ಳುತ್ತದೆಂದು ಮಾವನಿಗೆ ತಲೆಕೆಡಿಸಿ ಯಾರಿಗಾದರೂ ಮಾರಿಬಿಡೋಣ ಎಂಬ ಉಪಾಯ ಹೇಳಿಕೊಟ್ಟನು. ಅದರಂತೆಯೇ ಅಳಿಯನಿಗೆ ಜಮೀನು ಮಾರಲು ಮಾವ ರಂಗಪ್ಪ ಒಪ್ಪಿಕೊಂಡರು. ಕಿಲಾಡಿ ಅನಂತಕುಮಾರ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹುಡುಕಿ ಎಕರೆಗೆ 8 ಲಕ್ಷದಂತೆ ವ್ಯಾಪಾರ ಮಾಡಿ ಸುಮಾರು 60 ಎಕರೆ ಮಾರಾಟ ಮಾಡಿದನು. ತನ್ನ ಮಾವನಿಗೆ ಎಕರೆಗೆ 6 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ ಎಂದು ಕರೆದುಕೊಂಡು ಹೋಗಿ ರಿಜಿಸ್ಟರ್ ಮಾಡಿಸಿಕೊಟ್ಟನು. ಇದಾದ ಕೆಲವೇ ದಿನಗಳಲ್ಲಿ ಸುಮಾರು 1 ಕೋಟಿ 20 ಲಕ್ಷ ಲಾಭ ಮಾಡಿಕೊಂಡು ಅಳಿಯ ಅನಂತಕುಮಾರ್ ಸಾಹುಕಾರನಾದನು. ಇದು ಊರು ತುಂಬೆಲ್ಲಾ ಹಬ್ಬಿತು. ಆಗ ನನಗಿನ್ನೂ ಸುಮಾರು 20-21 ರ ಆಸುಪಾಸಿನ ವಯಸ್ಸು. ನಾನು ನನಗೆ ತಿಳಿದ ಇನ್ನೊಬ್ಬ ವಿದ್ಯಾವಂತ ಮಹದೇವನಿಗೆ, ತನ್ನ ಮಾವನಿಗೆ ಮೋಸ ಮಾಡಿದ ಅನಂತಕುಮಾರ ನಾಲಾಯಕ್ ಎಂದೆ. ಅದಕ್ಕೆ ಮಹದೇವ ನಾನು ಅದೇ ರೀತಿ ವ್ಯಾಪಾರ ಮಾಡುವಾಗ ನನ್ನ ಕಮಿಷನ್ ಇಟ್ಟುಕೊಳ್ಳುತ್ತೇನೆ. ಅದು ವ್ಯಾಪಾರ, ಅಳಿಯ ಆದರೇನು, ಮಾವ ಆದರೇನು ವ್ಯಾಪಾರ ವ್ಯಾಪಾರವೇ ಎಂದನು.
ರಮೇಶ ಎಂ.ಎಚ್. ನಿರಾತಂಕ ಒಂಟಿಯಾಗಿ ಇರುವುದು ಕಲಿಯಲಿಲ್ಲ
ಒಬ್ಬನೆ ಕುಳಿತರೆ ಮನಸ್ಸು ನಲಿಯುವುದಿಲ್ಲ ಅಲ್ಲಿ-ಇಲ್ಲಿ ಅಡ್ಡಾಡಿದರೆ ದಿನ ಮುಗಿಯಿತು ಮನಸ್ಸಿಗೆ ಬಂದಂತೆ ಕುಣಿದಾಡಿದರೆ ವರುಷ ಉರುಳಿತು ಬದುಕು ಸಾಗುತ್ತಿದೆ ಅಂದುಕೊಂಡು ಸಾಗುತ್ತಿದ್ದೇವೆ ನಿಲ್ದಾಣ ಬಂದಾಗ ಏನು ಮಾಡಲಿಲ್ಲ ಎಂದು ಕೊರಗುತ್ತೇವೆ ಒಮ್ಮೆ ಯೋಚಿಸಿ ಏನು ಮಾಡುತ್ತಿದ್ದೇವೆ ಇದುವರೆಗೂ ಏನು ಮಾಡಿದ್ದೇವೆ ಬಾಲ್ಯದ ಬದುಕು ಸಂತಸ ತಂದಿತ್ತು ಶಾಲೆಯ ದಿನಗಳು ಬದುಕು ಕಲಿಸಲು ಹೊರಟಿತ್ತು ಕಾಲೇಜಿನ ದಿನಗಳು ಕನಸ ಕಂಡಿತ್ತು ಕೆಲಸದ ದಿನಗಳು ಪೈಪೋಟಿ ಕಲಿಸಿತ್ತು ಓಡಲು ಹೊರಟೆವು ಯಾವುದನ್ನು ಹಿಂದಿಕ್ಕಲೋ ಗೊತ್ತಿಲ್ಲ ಅಪ್ಪ, ಅಮ್ಮ, ಮಕ್ಕಳಿಗೆ, ಸಂಬಂಧಿಕರಿಗೆ ಸಮಯವಿಲ್ಲ ಸ್ನೇಹ, ಪ್ರೀತಿ, ಮಮತೆ ಎಲ್ಲವೂ ವ್ಯಾಪಾರ ವ್ಯವಹಾರಗಳಾಗಿ ಸಂತಸ ಹುಡುಕುತ್ತಾ ವಿದೇಶಿ ಪ್ರಯಾಣಿಗರಾಗಿ ಜಗದ ನಿಯಮ ಮರೆತು ಮೆರೆದು ಸಾಧಿಸಿದ್ದೇವೆಂಬ ಭ್ರಮೆಯಲ್ಲಿ ಮಿಂದು ಜಗದ ಪಯಣ ಮುಗಿಸುತ್ತಿರುವೆವು ಅಪ್ಪಿ ಇನ್ನಾದರೂ ಪ್ರೀತಿ ಕೊಡಿ ಮಮತೆಯಿಂದ ಮಾತನಾಡಿ ಸಂಬಂಧಗಳ ಅರಿತು ನೋಡಿ ಒಂಟಿಯಾಗಿ ಧ್ಯಾನ ಮಾಡಿ ಇಂದೇ ಕೊನೆಯ ದಿನ ಎಂದು ಬದುಕಿನೋಡಿ ಜೀವನದ ಸುಖವ ನೋಡಿ... ರಮೇಶ ನಿರಾತಂಕ #ನಿರಾತಂಕಕವನ ನಾನು ನನ್ನ ಆತ್ಮೀಯ ಸ್ನೇಹಿತ ಬೆಳಗಿನ ಜಾವ 5.00 ಗಂಟೆಗೆ ಬೆಂ.ವಿ.ವಿ.ಯ ಆವರಣದಲ್ಲಿ ಫಿಟ್‍ನೆಸ್ ತರಗತಿಗೆ ಹೋಗುತ್ತೇವೆ. ಈ ತರಗತಿಯಲ್ಲಿ ನಮಗೆ ಇನ್ನೊಬ್ಬ ರಾಮು ಎಂಬುವವನ ಪರಿಚಯವಾಯಿತು. ನಮ್ಮಿಬ್ಬರಿಗೂ ರಾಮು ಆತ್ಮೀಯನಾದ. ಸುಮಾರು 1 ವರ್ಷಗಳ ಕಾಲ ಒಡನಾಟದಲ್ಲಿ ನಾವು ಮೂರೂ ಜನರು ಆತ್ಮೀಯ ಸ್ನೇಹಿತರಾದೆವು. ಕೆಲವೊಮ್ಮೆ ನಾವು ಮೂರೂ ಜನರು ಭಾನುವಾರಗಳಂದು ಬೆಂಗಳೂರು ವಿಶ್ವವಿದ್ಯಾಲಯದ ಕಾಡಿನಲ್ಲಿ 10 ಕಿಲೋಮೀಟರ್ ಗಳ ನಡಿಗೆಯ ನಂತರ ಎಳನೀರು, ಊಟ ಎಲ್ಲವೂ ಆಗುತ್ತಿದ್ದವು. ರಾಮು ಒಂದು ದಿನ ನನ್ನಲ್ಲಿಗೆ ಬಂದು ನನಗೆ ತುರ್ತಾಗಿ 1 ಲಕ್ಷ ಸಾಲ ಬೇಕು ಎಂದು ಕೇಳಿದ. ನನಗೆ ಇತ್ತೀಚೆಗೆ ಪರಿಚಯವಾದ ರಾಮುವಿನ ಮೇಲೆ ಸ್ವಲ್ಪ ನಂಬಿಕೆ ಬರಲಿಲ್ಲ. ಒಂದೆರಡು ದಿನ ಕಾಲಾವಕಾಶ ಕೊಡು, ನನಗೆ ಸಾಧ್ಯವಾದರೆ ಹಣ ಕೊಡುತ್ತೇನೆ ಎಂದೆ. ಹಾಗೆಯೇ 1 ವರ್ಷದ ಆತ್ಮೀಯತೆಯಲ್ಲಿ ರಾಮುವಿಗೆ ಹಣ ಕೊಡುವುದಿಲ್ಲ ಎಂದು ಹೇಳುವುದಕ್ಕೆ ಮನಸ್ಸಿಗೆ ಕಷ್ಟಕರವಾಗುತ್ತಿತ್ತು.
ಮೊನ್ನೆ ನಡೆದ ಯಡಿಯೂರಪ್ಪ ನವರ ಹುಟ್ಟುಹಬ್ಬದಂದು ಅವರು ನಡೆದುಕೊಂಡ ರೀತಿ ಸಿದ್ದರಾಮಯ್ಯರವರು ತೋರಿದ ಪ್ರೀತಿಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಇಬ್ಬರು ಮಹಾನ್ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ.
ಬುದ್ದ ಹಾಗೂ ಮಹಾವೀರ ಒಮ್ಮೆಗೆ ಅಕ್ಕಪಕ್ಕದ ಕೋಣೆಯಲ್ಲಿ ತಂಗಿರುತ್ತಾರೆ. ಆದರೆ ಮಾರನೆಯ ದಿನ ಇಬ್ಬರೂ ಮಾತನಾಡದೆ ಅವರವರ ಪಾಡಿಗೆ ಹೊರಟುಬಿಡುತ್ತಾರೆ. ಆಗ ಅವರ ಅನುಯಾಯಿಗಳು ನಾಯಿಗಳು ಕಿತ್ತಾಡುವ ರೀತಿಯಲ್ಲಿ ಕಿತ್ತಾಡುತ್ತಾರೆ. ಬುದ್ದನ ಅನುಯಾಯಿಗಳು ಬುದ್ದ ಶ್ರೇಷ್ಠ ಎಂದು, ಮಹಾವೀರನ ಅನುಯಾಯಿಗಳು ಮಹಾವೀರ ಶ್ರೇಷ್ಠ ಎಂದು ಹಾಗೂ ಕೆಲವೊಬ್ಬರು ಇಬ್ಬರೂ ಮಹಾನ್ ego ಹೊಂದಿದ ವ್ಯಕ್ತಿಗಳು ಎಂದು. ಇಬ್ಬರು ಭೇಟಿಯಾಗಿದ್ದರೆ ಮಹತ್ವದ ಜ್ಞಾನ ಉದಯಿಸುತ್ತಿತ್ತು ಎಂದುಕೊಂಡರಂತೆ. ಕೊನೆಯಲ್ಲಿ ಅನುಯಾಯಿಗಳು ಗೊಂದಲ ಪರಿಹರಿಸಿಕೊಳ್ಳಲು ತಮ್ಮ ಗುರುಗಳ ಬಳಿ ಕೇಳುತ್ತಾರೆ, ಯಾರು ಶ್ರೇಷ್ಠ ಎಂದು? ಆಗ ಗುರುಗಳು ಇಬ್ಬರು ತುಂಬಿದ ಕೊಡಗಳಿದ್ದಂತೆ. ಹಂಚಿಕೊಳ್ಳಲು ಏನು ಇಲ್ಲದ ಕಾರಣ ಅವರು ಮಾತನಾಡಲಿಲ್ಲ ಎನ್ನುತ್ತಾರೆ. ಮೂರ್ಖರ ಹಾಗೆ ಅನುಯಾಯಿಗಳು ಬಡಿದಾಡಿಕೊಂಡು ಅಸಹ್ಯ ಭಾಷೆ ಒರಟುತನ ಬಿಡಬೇಕಾಗಿದೆ. (ಮೂಲ ಓಶೊಃ ರವರದ್ದು. ಯಾವಾಗಲೋ ಓದಿದ ನೆನಪು) ಸುಮ್ಮನೆ ಅಸಭ್ಯವಾಗಿ ಕಮೆಂಟ್ ಮಾಡಿ ಮನುಷ್ಯತ್ವವನ್ನೆ ಮರೆಯುವವರು ಜಗದ ಹೆಜ್ಜೆ ಗುರುತುಗಳಲ್ಲಿ ಮಾಯವಾಗಿ ಬಿಡುವರು. ಅರೆಬೆಂದವರು ಅರಚುವುದು, ಕಿರಿಚುವುದು, ಕೆಸರೆರಚುವುದು ಸಾಮಾನ್ಯ. ಅರಚುವವರನ್ನು, ಕಿರಿಚುವವರನ್ನು, ಕೆಸರೆರಚುವವರನ್ನು ನೋಡಿಯೂ ನೋಡದಂತೆ ಪ್ರತಿಕ್ರಿಯೆ ನೀಡದಿರುವುದು ಮಾನ್ಯ. ರಮೇಶ ಎಂ.ಎಚ್. ನಿರಾತಂಕ ಸ್ನೇಹ ಎಂಬುದು ಕನ್ನಡಿಯಂತೆ
ನಕ್ಕರೆ ನಕ್ಕು, ಅತ್ತಾಗ ಅಳುವುದು ನೆರಳಂತೆ ಹಿಂದೆ ಬರುವುದು ನಗುವಾಗ ಅಳುತ, ಅಳುವಾಗ ನಗುತ ನಟಿಸಿದರೆ ಆಪತ್ತು ತರುವುದು ವಜ್ರದಂತೆ ಜೋಪಾನ ಮಾಡಿ ಕಾಪಾಡು ಹಣದ ಆಸೆಗೂ ಮೀರಿ ಪ್ರೀತಿ ಕೊಡು ನನ್ನಂತೆ ಅವನೆಂದು ಮಮತೆ ನೀಡು ಗೊತ್ತಾಗದೆ ತಪ್ಪು ಮಾಡಿದರೆ ಕ್ಷಮಿಸಿಬಿಡು ದುರಾಸೆ ಇರುವವನೆಂದು ತಿಳಿದರೆ ದೂರವಿಡು ರಮೇಶ ಎಂ.ಎಚ್. ನಿರಾತಂಕ ನಾನೇನು ತಪ್ಪು ಮಾಡದ ಪರಮಾತ್ಮನಲ್ಲ
ಒಮ್ಮೊಮ್ಮೆ ತಪ್ಪುಗಳನ್ನು ಎತ್ತಿ ತೋರಿದಾಗ ತಲೆ ಬಾಗುವುದಿಲ್ಲ ನನ್ನ ತಪ್ಪು ತಿದ್ದು ನನ್ನಗೆಳೆಯ, ನಾ ನಿನ್ನ ತಪ್ಪು ತಿಳಿಯುವುದಿಲ್ಲ ತಪ್ಪು ಹೇಳಲು ಕೇಳಲು ಒಂದು ರೀತಿ ಇದೆ, ಸಮಯವಿದೆ ಸಂಯಮದಿ ಕಾದು ಹೇಳದ ವಿಷಯ ಜಗದಿ ಮತ್ತೆ ಏನಿದೆ ನನ್ನ ಆರು ನಿನಗೆ ಒಂಬತ್ತರಂತೆ ಕಾಣಬಹುದು ನನ್ನ ದೃ ಷ್ಟಿಯಿಂದ ಒಮ್ಮೆ ನೋಡು ಸತ್ಯ ಕಾಣ ಸಿಗುವುದು ನಾ ತಪ್ಪು ಮಾಡಿದರೆ ಕ್ಷಮಿಸಿ ಬಿಡು ಮನವ ಬಿಚ್ಚಿ ಮಾತನಾಡು ನಿನ್ನ ಅನಿಸಿಕೆಯನ್ನು ತಿಳಿಸಿಬಿಡು ಮಿಗಿಲಲ್ಲ ತಪ್ಪು ಸ್ನೇಹಕಿಂತ ಮನದಿ ಕೊರಗಿ ಕೊರಗಿ ಅನುಭವಿಸದಿರು ಏಕಾಂತ ತಪ್ಪು ಮಾಡದವರು ಯಾರಿಲ್ಲ ಜಗದಲಿ ಎಲ್ಲರೂ ಸ್ವಾರ್ಥಿಗಳೆ ಮನದಲಿ ರಮೇಶ ಎಂ.ಎಚ್. ನಿರಾತಂಕ ಎಲ್ಲರ ಕಣ್ಣುಗಳು ಒಂದೇ ಆದರೆ ನೋಡುವ ನೋಟ ಬೇರೆ ಬೇರೆ
ಎಲ್ಲರ ಮನಸ್ಸು ಒಂದೇ ಆದರೆ ವಿಷಯ ಅರ್ಥೈಸುವ ಬಗೆ ಬೇರೆ ಬೇರೆ ಎಲ್ಲರ ಕಿವಿಗಳ ಬಗೆ ಒಂದೇ ಆದರೆ ಗ್ರಹಿಸುವ ವಿಧಾನ ಬೇರೆ ಬೇರೆ ಕೇಳಿದ್ದು ನೋಡಿದ್ದು, ಹೊಗಳಿದ್ದು, ತೆಗಳಿದ್ದು ಸುಳ್ಳಾಗಬಹುದು ಜೀವನದ ಕೊನೆಯವರೆಗೂ ಭ್ರಮೆಯಲ್ಲೇ ಬದುಕಬಹುದು ಜೀವನದ ಗುರಿ ಇದೆ ಎಂದು ನಂಬಿ ಕೊನೆಗೆ ಗುರಿ ತಲುಪದಿರಬಹುದು ಸಂಭ್ರಮ, ಸಂತಸವೆಂದು ಆಚರಿಸಿದ ಆಚರಣೆಗಳು ಅರ್ಥ ಕಳೆದುಕೊಳ್ಳಬಹುದು ಬುದ್ಧ ಎಂಬ ಪದ ಕಿವಿಗೆ ಬಿದ್ದೊಡನೆ ಬುದ್ಧನೇ ನಾನಾದಂತೆ ಭ್ರಮಿಸಬಹುದು ಧ್ಯಾನಿಸಿ, ಶ್ರಮಿಸಿ ಬುದ್ಧನಂತೆ ನಮ್ಮದೇ ಮಾರ್ಗವ ಕಂಡುಕೊಳ್ಳದಿದ್ದರೆ ಬುದ್ಧನಂತೆ ಜೀವನದ ಸಾರ ಕಳೆದುಕೊಂಡಂತೆ ಬದುಕಿನ ದಿನಗಳ ಸವೆಸಿದರೂ ಬದುಕಿದ್ದು ಸತ್ತಂತೆ ರಮೇಶ ಎಂ.ಎಚ್. ನಿರಾತಂಕ ಬೀದಿಯಲ್ಲಿ ನೋಡಿದ್ದು ಒಂದೇ ಸಾವು,
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು, ಪ್ರಶ್ನೆಗಳು ಉದ್ಭವಿಸಿದವು ಹಲವು ಹಲವು, ಜ್ಞಾನೋದಯದೆಡೆಗೆ ನಡೆಸಿದವು. ಒಂದೇ ದಿನ ಸಾಕಾಯಿತು ಜಗದ ಸಂಕಷ್ಠವನು ಅಳೆದು ನೋಡಲು ಒಂದೇ ಸಾವು ಸಾಕಾಯಿತು ಸಿದ್ದಾರ್ಥ ಬುದ್ಧನಾಗಲು ದಿನವಿಡೀ ನೋಡುತ್ತಿದ್ದೇವೆ ನಾವು ಸಾಲು ಸಾಲು ಸಾವು ನಮ್ಮಲ್ಲಿ ಮಡುಗಟ್ಟಬಹುದೆ ನೋವು? ಪ್ರಶ್ನೆಗಳೇಳುತಿಹವೆ ಹಲವು ಹಲವು ಜ್ಞಾನೋದಯ ಬುದ್ಧನಿಗೆ ಜ್ಞಾನ ಜಗದಗಲಕೆ ಸತ್ಯ ಅಹಿಂಸೆಗಳ ಕೊಡುಗೆ ಜಗಕೆ ಹುಡುಕಿದರೆ ಸಿಗಬಹುದೆ ನಮ್ಮೊಳಗೆ ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ? ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ ಎಲ್ಲವನ್ನು ಮಾರಾಟ ಮಾಡುವ ವ್ಯವಹಾರಿಕತೆಯಲಿ ಮಾನವೀಯತೆಯನ್ನು ಮುಚ್ಚಿಡುತ ಮನದಲ್ಲಿ ಎಲ್ಲಿದ್ದೇವೆ ನಾವು? ಎಲ್ಲಿದ್ದೇವೆ ಎಲ್ಲಿದ್ದೇವೆ? ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ |
RAMESHA NIRATANKA NATIONAL ASSOCIATION OF PROFESSIONAL SOCIAL WORKERS IN INDIA Ramesha for Ullal Ward |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|