Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ತಪ್ಪು ಮಾಡದವರು ಯಾರಿಲ್ಲ ಜಗದಲಿ

1/17/2022

0 Comments

 
ನಾನೇನು ತಪ್ಪು ಮಾಡದ ಪರಮಾತ್ಮನಲ್ಲ
ಒಮ್ಮೊಮ್ಮೆ ತಪ್ಪುಗಳನ್ನು ಎತ್ತಿ ತೋರಿದಾಗ ತಲೆ ಬಾಗುವುದಿಲ್ಲ
ನನ್ನ ತಪ್ಪು ತಿದ್ದು ನನ್ನಗೆಳೆಯ, ನಾ ನಿನ್ನ ತಪ್ಪು ತಿಳಿಯುವುದಿಲ್ಲ
  
ತಪ್ಪು ಹೇಳಲು ಕೇಳಲು ಒಂದು ರೀತಿ ಇದೆ, ಸಮಯವಿದೆ 
ಸಂಯಮದಿ ಕಾದು ಹೇಳದ ವಿಷಯ ಜಗದಿ ಮತ್ತೆ ಏನಿದೆ
ನನ್ನ  ಆರು ನಿನಗೆ ಒಂಬತ್ತರಂತೆ ಕಾಣಬಹುದು
ನನ್ನ ದೃ ಷ್ಟಿಯಿಂದ ಒಮ್ಮೆ ನೋಡು ಸತ್ಯ ಕಾಣ ಸಿಗುವುದು
 
ನಾ ತಪ್ಪು ಮಾಡಿದರೆ ಕ್ಷಮಿಸಿ ಬಿಡು
ಮನವ ಬಿಚ್ಚಿ ಮಾತನಾಡು
ನಿನ್ನ ಅನಿಸಿಕೆಯನ್ನು ತಿಳಿಸಿಬಿಡು
 
ಮಿಗಿಲಲ್ಲ ತಪ್ಪು ಸ್ನೇಹಕಿಂತ
ಮನದಿ ಕೊರಗಿ ಕೊರಗಿ ಅನುಭವಿಸದಿರು ಏಕಾಂತ
 
 ತಪ್ಪು ಮಾಡದವರು ಯಾರಿಲ್ಲ ಜಗದಲಿ
 ಎಲ್ಲರೂ ಸ್ವಾರ್ಥಿಗಳೆ ಮನದಲಿ
 
ರಮೇಶ ಎಂ.ಎಚ್.
ನಿರಾತಂಕ
0 Comments

ಬುದ್ಧ ಪೌರ್ಣಿಮೆ

1/17/2022

0 Comments

 
Picture
ಎಲ್ಲರ ಕಣ್ಣುಗಳು ಒಂದೇ ಆದರೆ ನೋಡುವ ನೋಟ ಬೇರೆ ಬೇರೆ
ಎಲ್ಲರ ಮನಸ್ಸು ಒಂದೇ ಆದರೆ ವಿಷಯ ಅರ್ಥೈಸುವ ಬಗೆ ಬೇರೆ ಬೇರೆ
ಎಲ್ಲರ ಕಿವಿಗಳ ಬಗೆ ಒಂದೇ ಆದರೆ ಗ್ರಹಿಸುವ ವಿಧಾನ ಬೇರೆ ಬೇರೆ
 
ಕೇಳಿದ್ದು ನೋಡಿದ್ದು, ಹೊಗಳಿದ್ದು, ತೆಗಳಿದ್ದು ಸುಳ್ಳಾಗಬಹುದು
ಜೀವನದ ಕೊನೆಯವರೆಗೂ ಭ್ರಮೆಯಲ್ಲೇ ಬದುಕಬಹುದು
ಜೀವನದ ಗುರಿ ಇದೆ ಎಂದು ನಂಬಿ ಕೊನೆಗೆ ಗುರಿ ತಲುಪದಿರಬಹುದು
ಸಂಭ್ರಮ, ಸಂತಸವೆಂದು ಆಚರಿಸಿದ ಆಚರಣೆಗಳು ಅರ್ಥ ಕಳೆದುಕೊಳ್ಳಬಹುದು
 
ಬುದ್ಧ ಎಂಬ ಪದ ಕಿವಿಗೆ ಬಿದ್ದೊಡನೆ
ಬುದ್ಧನೇ ನಾನಾದಂತೆ ಭ್ರಮಿಸಬಹುದು
ಧ್ಯಾನಿಸಿ, ಶ್ರಮಿಸಿ ಬುದ್ಧನಂತೆ
ನಮ್ಮದೇ ಮಾರ್ಗವ ಕಂಡುಕೊಳ್ಳದಿದ್ದರೆ ಬುದ್ಧನಂತೆ
ಜೀವನದ ಸಾರ ಕಳೆದುಕೊಂಡಂತೆ
ಬದುಕಿನ ದಿನಗಳ ಸವೆಸಿದರೂ ಬದುಕಿದ್ದು ಸತ್ತಂತೆ
 
ರಮೇಶ ಎಂ.ಎಚ್.
ನಿರಾತಂಕ
0 Comments

ಗೆಲ್ಲಲು ಹೊರಟುವರು

1/17/2022

0 Comments

 
ಗೆಲ್ಲಲು ಹೊರಟವರು ನಾವು
ಯಾರನ್ನು ಗೆಲ್ಲಬೇಕು ನಾವು ನೀವು
 
ಸ್ನೇಹಿತರ ಮನಸ್ಸನ್ನು
ಸಮಾಜದಲ್ಲಿರುವ ಜನರನ್ನು
ಜಗತ್ತಿಗೆ ಹೊತ್ತು ತಂದ ಜನ್ಮದಾತರನ್ನು
ಜೀವನ ಹಂಚಿಕೊಂಡ ಜೀವನ ಸಂಗಾತಿಯನ್ನು
ಜನ್ಮ ನೀಡಿದ ಮಕ್ಕಳನ್ನು
ಹೊನ್ನು, ಹೆಣ್ಣು, ಮಣ್ಣನ್ನು
 
ಯಾವುದು ಮೊದಲು
ಯಾವುದು ಆನಂತರ
ಎಲ್ಲವನ್ನು ಗೆಲ್ಲಬೇಕು ಎಂಬರು ಹಲವರು
ಕೆಲವು ಗೆದ್ದರೆ ಸಾಕು ಎಂಬುತ ಸಾಗುವರು ಕೆಲವರು
ಗೆಲ್ಲಲು ಮತ್ತಷ್ಟಿವೆ ಎಂಬ ದಾವಂತದಲ್ಲಿ ಹೆಜ್ಜೆ ಹಾಕುವರು ಕೆಲವರು
ಕಣ್ಣ ಮುಂದಿನ ಕೆಲಸವನ್ನು ಕಂಡು ಕಾಣದಂತೆ ಕುಂತಿಹರು ಹಲವರು
 
ಅಹಂಕಾರವನ್ನು ಗೆಲ್ಲಲು ಗೊತ್ತಿಲ್ಲ
ಪ್ರೀತಿಯಿಂದ ಬದುಕಲು ಕಲಿಯಲಿಲ್ಲ
ಸ್ನೇಹದ ಅರ್ಥ ಹುಡುಕಲಿಲ್ಲ
ಸಮಾಜದ ನೋವು ತಿಳಿಯಲಿಲ್ಲ
 
ಗೆಲ್ಲಲು ನೀನು ಯಾರು? ಯಾವ ಊರು?
ಹೇಗೆ ಬಂದೆ, ಎಲ್ಲಿಗೆ ಹೊರಟಿರುವೆ ? ಪ್ರಶ್ನೆಗಳು ಸಾವಿರಾರು
 
ಕೆಲವರು ಒಗಟಿನ ಪ್ರಶ್ನೆಗಳ ಹುಡುಕಲು ಹೊರಡುವರು
ಹಲವರು ಆಟವಾಡಿಕೊಂಡು ಸುಮ್ಮನೆ ಕಾಲಕಳೆಯುವರು
ಉತ್ತರ ಸಿಕ್ಕವರು ಮೌನದಲ್ಲಿ ಕುಂತು ಧ್ಯಾನಿಸುವರು
ಉತ್ತರ ಸಿಗದವರು ಜಗದ ನಾಟಕ ನೋಡುತ ಆಡುತ ನಿದ್ರಿಸುವರು
 
ಅವರವರ ದಾರಿ ಅವರವರೆ ಕಂಡುಕೊಂಡ ಜಾಣರು ನಾವು
ಕಂಡುಕೊಂಡದ್ದೇ ದಾರಿ ಸತ್ಯವೆಂದುಕೊಂಡು ಸಾಗುತಿರುವೆವು
 
ರಮೇಶ ಎಂ.ಎಚ್.
#ನಿರಾತಂಕಕವನ
0 Comments

ಇಂದೇ ಕೊನೆಯ ದಿನ ಎಂದು ಬದುಕಿನೋಡಿ

1/17/2022

0 Comments

 
ಒಂಟಿಯಾಗಿ ಇರುವುದು ಕಲಿಯಲಿಲ್ಲ 
ಒಬ್ಬನೆ ಕುಳಿತರೆ ಮನಸ್ಸು  ನಲಿಯುವುದಿಲ್ಲ 

ಅಲ್ಲಿ-ಇಲ್ಲಿ ಅಡ್ಡಾಡಿದರೆ ದಿನ ಮುಗಿಯಿತು
ಮನಸ್ಸಿಗೆ ಬಂದಂತೆ ಕುಣಿದಾಡಿದರೆ ವರುಷ ಉರುಳಿತು

ಬದುಕು ಸಾಗುತ್ತಿದೆ ಅಂದುಕೊಂಡು ಸಾಗುತ್ತಿದ್ದೇವೆ
ನಿಲ್ದಾಣ ಬಂದಾಗ ಏನು ಮಾಡಲಿಲ್ಲ ಎಂದು ಕೊರಗುತ್ತೇವೆ

ಒಮ್ಮೆ ಯೋಚಿಸಿ ಏನು ಮಾಡುತ್ತಿದ್ದೇವೆ
ಇದುವರೆಗೂ ಏನು ಮಾಡಿದ್ದೇವೆ

ಬಾಲ್ಯದ ಬದುಕು ಸಂತಸ ತಂದಿತ್ತು 
ಶಾಲೆಯ ದಿನಗಳು ಬದುಕು ಕಲಿಸಲು ಹೊರಟಿತ್ತು

ಕಾಲೇಜಿನ ದಿನಗಳು ಕನಸ ಕಂಡಿತ್ತು
ಕೆಲಸದ ದಿನಗಳು ಪೈಪೋಟಿ ಕಲಿಸಿತ್ತು

ಓಡಲು ಹೊರಟೆವು ಯಾವುದನ್ನು ಹಿಂದಿಕ್ಕಲೋ  ಗೊತ್ತಿಲ್ಲ
ಅಪ್ಪ, ಅಮ್ಮ, ಮಕ್ಕಳಿಗೆ, ಸಂಬಂಧಿಕರಿಗೆ ಸಮಯವಿಲ್ಲ

ಸ್ನೇಹ, ಪ್ರೀತಿ, ಮಮತೆ ಎಲ್ಲವೂ ವ್ಯಾಪಾರ ವ್ಯವಹಾರಗಳಾಗಿ
ಸಂತಸ ಹುಡುಕುತ್ತಾ ವಿದೇಶಿ ಪ್ರಯಾಣಿಗರಾಗಿ

ಜಗದ ನಿಯಮ‌ ಮರೆತು ಮೆರೆದು 
ಸಾಧಿಸಿದ್ದೇವೆಂಬ ಭ್ರಮೆಯಲ್ಲಿ ಮಿಂದು
ಜಗದ ಪಯಣ ಮುಗಿಸುತ್ತಿರುವೆವು

ಅಪ್ಪಿ ಇನ್ನಾದರೂ ಪ್ರೀತಿ ಕೊಡಿ
ಮಮತೆಯಿಂದ ಮಾತನಾಡಿ
ಸಂಬಂಧಗಳ ಅರಿತು ನೋಡಿ
ಒಂಟಿಯಾಗಿ ಧ್ಯಾನ ಮಾಡಿ
ಇಂದೇ ಕೊನೆಯ ದಿನ ಎಂದು ಬದುಕಿನೋಡಿ
ಜೀವನದ ಸುಖವ ನೋಡಿ...

ರಮೇಶ ನಿರಾತಂಕ
#ನಿರಾತಂಕಕವನ
0 Comments

ಒಂದೇ  ಸಾವು

1/17/2022

0 Comments

 
ಬೀದಿಯಲ್ಲಿ ನೋಡಿದ್ದು ಒಂದೇ  ಸಾವು,
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು,                          
ಪ್ರಶ್ನೆಗಳು ಉದ್ಭವಿಸಿದವು ಹಲವು ಹಲವು,  
ಜ್ಞಾನೋದಯದೆಡೆಗೆ ನಡೆಸಿದವು.    
 
ಒಂದೇ ದಿನ ಸಾಕಾಯಿತು
ಜಗದ ಸಂಕಷ್ಠವನು ಅಳೆದು ನೋಡಲು
ಒಂದೇ ಸಾವು ಸಾಕಾಯಿತು
ಸಿದ್ದಾರ್ಥ ಬುದ್ಧನಾಗಲು

ದಿನವಿಡೀ ನೋಡುತ್ತಿದ್ದೇವೆ ನಾವು
ಸಾಲು ಸಾಲು ಸಾವು
ನಮ್ಮಲ್ಲಿ ಮಡುಗಟ್ಟಬಹುದೆ ನೋವು?     
ಪ್ರಶ್ನೆಗಳೇಳುತಿಹವೆ ಹಲವು ಹಲವು

ಜ್ಞಾನೋದಯ ಬುದ್ಧನಿಗೆ
ಜ್ಞಾನ ಜಗದಗಲಕೆ
ಸತ್ಯ ಅಹಿಂಸೆಗಳ ಕೊಡುಗೆ ಜಗಕೆ
ಹುಡುಕಿದರೆ ಸಿಗಬಹುದೆ ನಮ್ಮೊಳಗೆ 
 
ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ?
ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ
ಎಲ್ಲವನ್ನು ಮಾರಾಟ ಮಾಡುವ ವ್ಯವಹಾರಿಕತೆಯಲಿ
ಮಾನವೀಯತೆಯನ್ನು ಮುಚ್ಚಿಡುತ ಮನದಲ್ಲಿ
ಎಲ್ಲಿದ್ದೇವೆ ನಾವು? ಎಲ್ಲಿದ್ದೇವೆ ಎಲ್ಲಿದ್ದೇವೆ?

ರಮೇಶ ಎಂ.ಎಚ್.
​ನಿರಾತಂಕ
#ನಿರಾತಂಕಕವನ
0 Comments

ಕೊರೋನಾ ಕೊರೋನಾ

1/17/2022

0 Comments

 
Picture
0 Comments

ಸ್ನೇಹ

1/17/2022

0 Comments

 
ಸ್ನೇಹ ಎಂಬುದು ಕನ್ನಡಿಯಂತೆ
ನಕ್ಕರೆ ನಕ್ಕು, ಅತ್ತಾಗ ಅಳುವುದು
ನೆರಳಂತೆ ಹಿಂದೆ ಬರುವುದು
ನಗುವಾಗ ಅಳುತ, ಅಳುವಾಗ ನಗುತ
ನಟಿಸಿದರೆ ಆಪತ್ತು ತರುವುದು

ವಜ್ರದಂತೆ ಜೋಪಾನ ಮಾಡಿ ಕಾಪಾಡು
ಹಣದ ಆಸೆಗೂ ಮೀರಿ ಪ್ರೀತಿ ಕೊಡು
ನನ್ನಂತೆ ಅವನೆಂದು ಮಮತೆ ನೀಡು
ಗೊತ್ತಾಗದೆ ತಪ್ಪು ಮಾಡಿದರೆ ಕ್ಷಮಿಸಿಬಿಡು
ದುರಾಸೆ ಇರುವವನೆಂದು ತಿಳಿದರೆ ದೂರವಿಡು

ರಮೇಶ ಎಂ.ಎಚ್.
ನಿರಾತಂಕ
0 Comments

ಟೀಕೆ ಮಾಡಬೇಡ

1/17/2022

0 Comments

 
Picture
0 Comments

ತಪ್ಪು ಮಾಡದವರು ಯಾರಿಲ್ಲ ಜಗದಲಿ

11/26/2020

0 Comments

 
ನಾನೇನು ತಪ್ಪು ಮಾಡದ ಪರಮಾತ್ಮನಲ್ಲ
ಒಮ್ಮೊಮ್ಮೆ ತಪ್ಪುಗಳನ್ನು ಎತ್ತಿ ತೋರಿದಾಗ ತಲೆ ಬಾಗುವುದಿಲ್ಲ
ನನ್ನ ತಪ್ಪು ತಿದ್ದು ನನ್ನಗೆಳೆಯ, ನಾ ನಿನ್ನ ತಪ್ಪು ತಿಳಿಯುವುದಿಲ್ಲ
 
 
ತಪ್ಪು ಹೇಳಲು ಕೇಳಲು ಒಂದು ರೀತಿ ಇದೆ, ಸಮಯವಿದೆ 
ಸಂಯಮದಿ ಕಾದು ಹೇಳದ ವಿಷಯ ಜಗದಿ ಮತ್ತೆ ಏನಿದೆ
ನನ್ನ  ಆರು ನಿನಗೆ ಒಂಬತ್ತರಂತೆ ಕಾಣಬಹುದು
ನನ್ನ ದೃ ಷ್ಟಿಯಿಂದ ಒಮ್ಮೆ ನೋಡು ಸತ್ಯ ಕಾಣ ಸಿಗುವುದು
 
ನಾ ತಪ್ಪು ಮಾಡಿದರೆ ಕ್ಷಮಿಸಿ ಬಿಡು
ಮನವ ಬಿಚ್ಚಿ ಮಾತನಾಡು
ನಿನ್ನ ಅನಿಸಿಕೆಯನ್ನು ತಿಳಿಸಿಬಿಡು
 
ಮಿಗಿಲಲ್ಲ ತಪ್ಪು ಸ್ನೇಹಕಿಂತ
ಮನದಿ ಕೊರಗಿ ಕೊರಗಿ ಅನುಭವಿಸದಿರು ಏಕಾಂತ
 
 ತಪ್ಪು ಮಾಡದವರು ಯಾರಿಲ್ಲ ಜಗದಲಿ
 ಎಲ್ಲರೂ ಸ್ವಾರ್ಥಿಗಳೆ ಮನದಲಿ
 
ರಮೇಶ ಎಂ.ಎಚ್.
ನಿರಾತಂಕ

0 Comments

ಬುದ್ಧ ಪೌರ್ಣಿಮೆ

5/7/2020

0 Comments

 
Picture
ಎಲ್ಲರ ಕಣ್ಣುಗಳು ಒಂದೇ ಆದರೆ ನೋಡುವ ನೋಟ ಬೇರೆ ಬೇರೆ
ಎಲ್ಲರ ಮನಸ್ಸು ಒಂದೇ ಆದರೆ ವಿಷಯ ಅರ್ಥೈಸುವ ಬಗೆ ಬೇರೆ ಬೇರೆ
ಎಲ್ಲರ ಕಿವಿಗಳ ಬಗೆ ಒಂದೇ ಆದರೆ ಗ್ರಹಿಸುವ ವಿಧಾನ ಬೇರೆ ಬೇರೆ
 
ಕೇಳಿದ್ದು ನೋಡಿದ್ದು, ಹೊಗಳಿದ್ದು, ತೆಗಳಿದ್ದು ಸುಳ್ಳಾಗಬಹುದು
ಜೀವನದ ಕೊನೆಯವರೆಗೂ ಭ್ರಮೆಯಲ್ಲೇ ಬದುಕಬಹುದು
ಜೀವನದ ಗುರಿ ಇದೆ ಎಂದು ನಂಬಿ ಕೊನೆಗೆ ಗುರಿ ತಲುಪದಿರಬಹುದು
ಸಂಭ್ರಮ, ಸಂತಸವೆಂದು ಆಚರಿಸಿದ ಆಚರಣೆಗಳು ಅರ್ಥ ಕಳೆದುಕೊಳ್ಳಬಹುದು
 
ಬುದ್ಧ ಎಂಬ ಪದ ಕಿವಿಗೆ ಬಿದ್ದೊಡನೆ
ಬುದ್ಧನೇ ನಾನಾದಂತೆ ಭ್ರಮಿಸಬಹುದು
ಧ್ಯಾನಿಸಿ, ಶ್ರಮಿಸಿ ಬುದ್ಧನಂತೆ
ನಮ್ಮದೇ ಮಾರ್ಗವ ಕಂಡುಕೊಳ್ಳದಿದ್ದರೆ ಬುದ್ಧನಂತೆ
ಜೀವನದ ಸಾರ ಕಳೆದುಕೊಂಡಂತೆ
ಬದುಕಿನ ದಿನಗಳ ಸವೆಸಿದರೂ ಬದುಕಿದ್ದು ಸತ್ತಂತೆ
 
ರಮೇಶ ಎಂ.ಎಚ್.
ನಿರಾತಂಕ

0 Comments

ಗೆಲ್ಲಲು ಹೊರಟುವರು

5/5/2020

0 Comments

 
ಗೆಲ್ಲಲು ಹೊರಟವರು ನಾವು
ಯಾರನ್ನು ಗೆಲ್ಲಬೇಕು ನಾವು ನೀವು
 
ಸ್ನೇಹಿತರ ಮನಸ್ಸನ್ನು
ಸಮಾಜದಲ್ಲಿರುವ ಜನರನ್ನು
ಜಗತ್ತಿಗೆ ಹೊತ್ತು ತಂದ ಜನ್ಮದಾತರನ್ನು
ಜೀವನ ಹಂಚಿಕೊಂಡ ಜೀವನ ಸಂಗಾತಿಯನ್ನು
ಜನ್ಮ ನೀಡಿದ ಮಕ್ಕಳನ್ನು
ಹೊನ್ನು, ಹೆಣ್ಣು, ಮಣ್ಣನ್ನು
 
ಯಾವುದು ಮೊದಲು
ಯಾವುದು ಆನಂತರ
ಎಲ್ಲವನ್ನು ಗೆಲ್ಲಬೇಕು ಎಂಬರು ಹಲವರು
ಕೆಲವು ಗೆದ್ದರೆ ಸಾಕು ಎಂಬುತ ಸಾಗುವರು ಕೆಲವರು
ಗೆಲ್ಲಲು ಮತ್ತಷ್ಟಿವೆ ಎಂಬ ದಾವಂತದಲ್ಲಿ ಹೆಜ್ಜೆ ಹಾಕುವರು ಕೆಲವರು
ಕಣ್ಣ ಮುಂದಿನ ಕೆಲಸವನ್ನು ಕಂಡು ಕಾಣದಂತೆ ಕುಂತಿಹರು ಹಲವರು
 
ಅಹಂಕಾರವನ್ನು ಗೆಲ್ಲಲು ಗೊತ್ತಿಲ್ಲ
ಪ್ರೀತಿಯಿಂದ ಬದುಕಲು ಕಲಿಯಲಿಲ್ಲ
ಸ್ನೇಹದ ಅರ್ಥ ಹುಡುಕಲಿಲ್ಲ
ಸಮಾಜದ ನೋವು ತಿಳಿಯಲಿಲ್ಲ
 
ಗೆಲ್ಲಲು ನೀನು ಯಾರು? ಯಾವ ಊರು?
ಹೇಗೆ ಬಂದೆ, ಎಲ್ಲಿಗೆ ಹೊರಟಿರುವೆ ? ಪ್ರಶ್ನೆಗಳು ಸಾವಿರಾರು
 
ಕೆಲವರು ಒಗಟಿನ ಪ್ರಶ್ನೆಗಳ ಹುಡುಕಲು ಹೊರಡುವರು
ಹಲವರು ಆಟವಾಡಿಕೊಂಡು ಸುಮ್ಮನೆ ಕಾಲಕಳೆಯುವರು
ಉತ್ತರ ಸಿಕ್ಕವರು ಮೌನದಲ್ಲಿ ಕುಂತು ಧ್ಯಾನಿಸುವರು
ಉತ್ತರ ಸಿಗದವರು ಜಗದ ನಾಟಕ ನೋಡುತ ಆಡುತ ನಿದ್ರಿಸುವರು
 
ಅವರವರ ದಾರಿ ಅವರವರೆ ಕಂಡುಕೊಂಡ ಜಾಣರು ನಾವು
ಕಂಡುಕೊಂಡದ್ದೇ ದಾರಿ ಸತ್ಯವೆಂದುಕೊಂಡು ಸಾಗುತಿರುವೆವು
 
ರಮೇಶ ಎಂ.ಎಚ್.
#ನಿರಾತಂಕಕವನ
0 Comments

ಇಂದೇ ಕೊನೆಯ ದಿನ ಎಂದು ಬದುಕಿನೋಡಿ

3/25/2020

0 Comments

 
ಒಂಟಿಯಾಗಿ ಇರುವುದು ಕಲಿಯಲಿಲ್ಲ 
ಒಬ್ಬನೆ ಕುಳಿತರೆ ಮನಸ್ಸು  ನಲಿಯುವುದಿಲ್ಲ 

ಅಲ್ಲಿ-ಇಲ್ಲಿ ಅಡ್ಡಾಡಿದರೆ ದಿನ ಮುಗಿಯಿತು
ಮನಸ್ಸಿಗೆ ಬಂದಂತೆ ಕುಣಿದಾಡಿದರೆ ವರುಷ ಉರುಳಿತು

ಬದುಕು ಸಾಗುತ್ತಿದೆ ಅಂದುಕೊಂಡು ಸಾಗುತ್ತಿದ್ದೇವೆ
ನಿಲ್ದಾಣ ಬಂದಾಗ ಏನು ಮಾಡಲಿಲ್ಲ ಎಂದು ಕೊರಗುತ್ತೇವೆ

ಒಮ್ಮೆ ಯೋಚಿಸಿ ಏನು ಮಾಡುತ್ತಿದ್ದೇವೆ
ಇದುವರೆಗೂ ಏನು ಮಾಡಿದ್ದೇವೆ

ಬಾಲ್ಯದ ಬದುಕು ಸಂತಸ ತಂದಿತ್ತು 
ಶಾಲೆಯ ದಿನಗಳು ಬದುಕು ಕಲಿಸಲು ಹೊರಟಿತ್ತು

ಕಾಲೇಜಿನ ದಿನಗಳು ಕನಸ ಕಂಡಿತ್ತು
ಕೆಲಸದ ದಿನಗಳು ಪೈಪೋಟಿ ಕಲಿಸಿತ್ತು

ಓಡಲು ಹೊರಟೆವು ಯಾವುದನ್ನು ಹಿಂದಿಕ್ಕಲೋ  ಗೊತ್ತಿಲ್ಲ
ಅಪ್ಪ, ಅಮ್ಮ, ಮಕ್ಕಳಿಗೆ, ಸಂಬಂಧಿಕರಿಗೆ ಸಮಯವಿಲ್ಲ

ಸ್ನೇಹ, ಪ್ರೀತಿ, ಮಮತೆ ಎಲ್ಲವೂ ವ್ಯಾಪಾರ ವ್ಯವಹಾರಗಳಾಗಿ
ಸಂತಸ ಹುಡುಕುತ್ತಾ ವಿದೇಶಿ ಪ್ರಯಾಣಿಗರಾಗಿ

ಜಗದ ನಿಯಮ‌ ಮರೆತು ಮೆರೆದು 
ಸಾಧಿಸಿದ್ದೇವೆಂಬ ಭ್ರಮೆಯಲ್ಲಿ ಮಿಂದು
ಜಗದ ಪಯಣ ಮುಗಿಸುತ್ತಿರುವೆವು

ಅಪ್ಪಿ ಇನ್ನಾದರೂ ಪ್ರೀತಿ ಕೊಡಿ
ಮಮತೆಯಿಂದ ಮಾತನಾಡಿ
ಸಂಬಂಧಗಳ ಅರಿತು ನೋಡಿ
ಒಂಟಿಯಾಗಿ ಧ್ಯಾನ ಮಾಡಿ
ಇಂದೇ ಕೊನೆಯ ದಿನ ಎಂದು ಬದುಕಿನೋಡಿ
ಜೀವನದ ಸುಖವ ನೋಡಿ...

ರಮೇಶ ನಿರಾತಂಕ
#ನಿರಾತಂಕಕವನ
0 Comments

ಒಂದೇ  ಸಾವು

3/25/2020

0 Comments

 
ಬೀದಿಯಲ್ಲಿ ನೋಡಿದ್ದು ಒಂದೇ  ಸಾವು,
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು,                          
ಪ್ರಶ್ನೆಗಳು ಉದ್ಭವಿಸಿದವು ಹಲವು ಹಲವು,  
ಜ್ಞಾನೋದಯದೆಡೆಗೆ ನಡೆಸಿದವು.    
 
ಒಂದೇ ದಿನ ಸಾಕಾಯಿತು
ಜಗದ ಸಂಕಷ್ಠವನು ಅಳೆದು ನೋಡಲು
ಒಂದೇ ಸಾವು ಸಾಕಾಯಿತು
ಸಿದ್ದಾರ್ಥ ಬುದ್ಧನಾಗಲು

ದಿನವಿಡೀ ನೋಡುತ್ತಿದ್ದೇವೆ ನಾವು
ಸಾಲು ಸಾಲು ಸಾವು
ನಮ್ಮಲ್ಲಿ ಮಡುಗಟ್ಟಬಹುದೆ ನೋವು?     
ಪ್ರಶ್ನೆಗಳೇಳುತಿಹವೆ ಹಲವು ಹಲವು

ಜ್ಞಾನೋದಯ ಬುದ್ಧನಿಗೆ
ಜ್ಞಾನ ಜಗದಗಲಕೆ
ಸತ್ಯ ಅಹಿಂಸೆಗಳ ಕೊಡುಗೆ ಜಗಕೆ
ಹುಡುಕಿದರೆ ಸಿಗಬಹುದೆ ನಮ್ಮೊಳಗೆ 
 
ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ?
ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ
ಎಲ್ಲವನ್ನು ಮಾರಾಟ ಮಾಡುವ ವ್ಯವಹಾರಿಕತೆಯಲಿ
ಮಾನವೀಯತೆಯನ್ನು ಮುಚ್ಚಿಡುತ ಮನದಲ್ಲಿ
ಎಲ್ಲಿದ್ದೇವೆ ನಾವು? ಎಲ್ಲಿದ್ದೇವೆ ಎಲ್ಲಿದ್ದೇವೆ?

ರಮೇಶ ಎಂ.ಎಚ್.
​ನಿರಾತಂಕ
#ನಿರಾತಂಕಕವನ
0 Comments

ಕೊರೋನಾ ಕೊರೋನಾ

3/23/2020

0 Comments

 
Picture
0 Comments

ಸ್ನೇಹ

3/4/2020

0 Comments

 
ಸ್ನೇಹ ಎಂಬುದು ಕನ್ನಡಿಯಂತೆ
ನಕ್ಕರೆ ನಕ್ಕು, ಅತ್ತಾಗ ಅಳುವುದು
ನೆರಳಂತೆ ಹಿಂದೆ ಬರುವುದು
ನಗುವಾಗ ಅಳುತ, ಅಳುವಾಗ ನಗುತ
ನಟಿಸಿದರೆ ಆಪತ್ತು ತರುವುದು

ವಜ್ರದಂತೆ ಜೋಪಾನ ಮಾಡಿ ಕಾಪಾಡು
ಹಣದ ಆಸೆಗೂ ಮೀರಿ ಪ್ರೀತಿ ಕೊಡು
ನನ್ನಂತೆ ಅವನೆಂದು ಮಮತೆ ನೀಡು
ಗೊತ್ತಾಗದೆ ತಪ್ಪು ಮಾಡಿದರೆ ಕ್ಷಮಿಸಿಬಿಡು
ದುರಾಸೆ ಇರುವವನೆಂದು ತಿಳಿದರೆ ದೂರವಿಡು

ರಮೇಶ ಎಂ.ಎಚ್.
ನಿರಾತಂಕ
0 Comments

ಟೀಕೆ ಮಾಡಬೇಡ

3/4/2020

0 Comments

 
Picture
0 Comments

ಭಯ ಮತ್ತು ಹೆದರಿಕೆ

3/4/2020

0 Comments

 
ಎಲ್ಲವ ಓದಬಲ್ಲೆ, ಎಲ್ಲವ ಕೇಳಬಲ್ಲೆ
ಸಮಾಜಕ್ಕೆ ತಕ್ಕಂತೆ ನಟಿಸಬಲ್ಲೆ
ಅಂತರಂಗವ ನೋಡಲೊಲ್ಲೆ

ನಟಿಸು ನಿ ಅಂತರಂಗದ ತಾಳಕ್ಕೆ
ಭಯ, ಹೆದರಿಕೆ ಏತಕೆ

ರಮೇಶ ಎಂ.ಎಚ್.
​ನಿರಾತಂಕ
0 Comments

ನಾನಾಯಿತು ನನ್ನ ಪಾಡಾಯಿತು

3/4/2020

0 Comments

 
ಜಗಳವಾಡಲು ಕೆಣಕಿದರೆ ನಾನು ಮೌನಿಯಾಗುವೆ.
ಅವಮಾನಿಸಿದರೆ ನಾನು ಅವಮಾನವ ನನ್ನೆದೆಗೆ ತಾಕಿಸಿದೆ ಕಸದಬುಟ್ಟಿಗೆ ಎಸೆವೆ.
ದ್ವೇಷ ಎದೆಯಲ್ಲಿ ಇಣುಕಿದರೆ ನಾನು ವಿಷಕುಡಿದು ಬೇರೆಯವನ ಸಾವ ಬಯಸಿದಂತೆಂದು ದ್ವೇಷವ ನಂದಿಸುವೆ.
ಗುರಾಯಿಸಿದರೆ ಮುಗುಳು ನಗೆ ಬೀರಿ ಗುರಾಯಿಸಿದವನ ಮರೆತುಬಿಡುವೆ.
ಮೋಸಹೋದರೆ ನನ್ನ ಹಿಂದಿನ ಜನ್ಮದ ಕರ್ಮದ ಫಲವೆಂದುಕೊಳುವೆ.
ಕೆಣಕಿದ, ಅವಮಾನಿಸಿದ, ದ್ವೇಷಿಸಿದ ಹಾಗೂ ಗುರಾಯಿಸಿದವರಿಗಾಗಿ ನನ್ನಲ್ಲಿ ಸಮಯವಿಲ್ಲ.
ನಾನಾಯಿತು ನನ್ನ ಪಾಡಾಯಿತು ಎಂದು ನಲಿವೆ.

ರಮೇಶ ಎಂ.ಎಚ್.
​ನಿರಾತಂಕ
0 Comments

ಯೌವನ

3/4/2020

0 Comments

 
ಯೌವನದಲ್ಲಿ ಮತ್ತೆ ಮತ್ತೆ ನೆನಪಾಗುವುದು
ಹಳೆಯ ದ್ವೇಷ.

ಮೆತ್ತಗಾದ ಮೇಲೆ ಗೊತ್ತಾಗುವುದು
ದ್ವೇಷ ನನ್ನೆದೆಯಲ್ಲಿದ್ದು ನನ್ನನ್ನೆ ಸುಡುತ್ತಲಿರುವ ವಿಷ.

ಕೆಲವರು ಮೆತ್ತಗಾದರೂ
ವಿಷ ಹೊತ್ತು ತಿರುಗುವರು

ದ್ವೇಷ ಹಾಗೂ ವಿಷದ ನಡುವೆ ಅಂತರ ಅರಿಯದ ಮೂಢರು
ಸುಡುತ್ತಿದ್ದರೂ ಬೆಚ್ಚಗೆ ಮಜಕೊಡುತ್ತಿದೆ ಎಂದು ಮೈಮರೆಯುವರು
ಸುಟ್ಟು ಸಾವು ಹತ್ತಿರ ಬಂದರೂ
ಅರಿವಿನ ಮಟ್ಟ ಮುಟ್ಟದೆ ಕಣ್ಣು ಮುಚ್ಚುವರು.

ರಮೇಶ ಎಂ.ಎಚ್.
​ನಿರಾತಂಕ
0 Comments

ನಾನು ಸತ್ತಾಗ ಜನ ಕಂಬನಿ ಮಿಡಿಯಲಿ

3/4/2020

0 Comments

 
ನಾನು ಸತ್ತಾಗ ಜನ ಕಂಬನಿ ಮಿಡಿಯಲಿ ಎಂದು ಬದುಕುವುದಿಲ್ಲ.
ನಾನು ಗೆದ್ದಾಗ ಜನ ನನ್ನ ಹೊಗಳಲಿ ಎಂಬ ಆಸೆಯಿಲ್ಲ.
ನನ್ನ ಆಸ್ತಿ ನೋಡಿ ನನಗೆ ಮರ್ಯಾದೆ ಕೊಡಲಿ ಎಂಬ ಬಯಕೆಯಿಲ್ಲ.
ನಾನು ಪ್ರಾಮಾಣಿಕತೆಯ ದಾರಿಯಲ್ಲಿ ನಡೆದು ಸೋತರೆ ನನಗೆ ಭಯವಿಲ್ಲ.
ಎಲ್ಲರಿಗೂ ಒಳ್ಳೆಯವನಾಗಬೇಕು, ನನ್ನ ಕೆಟ್ಟವನೆಂದುಕೊಂಡಾರು ಎಂಬ ಸಂಕಟ ನನ್ನ ಮನದಲ್ಲಿಲ್ಲ.
ನಾನು ನಾನೆ, ನನಗೆ ನಾನೆ, ಬಂದದ್ದು ಹೋದದ್ದುರ ನಡುವೆ ಪ್ರೀತಿ, ವಿಶ್ವಾಸ,
ಮಮತೆ, ಕರುಣೆ ಬುದ್ಧನ ಮಾರ್ಗದ ನಡತೆ.

ರಮೇಶ ಎಂ.ಎಚ್.
​ನಿರಾತಂಕ
0 Comments

ಮೂರ್ಖನ ಪ್ರಶ್ನೆಗಳಿಗೆ ಮೌನವೆ ಉತ್ತರವಾಗಬೇಕು

3/4/2020

0 Comments

 
ಮೂರ್ಖನ ಪ್ರಶ್ನೆಗಳಿಗೆ ಮೌನವೆ ಉತ್ತರವಾಗಬೇಕು
ಜಾಣನ ಪ್ರಶ್ನೆಗೆ ಜ್ಞಾನದ ಬೆಳಕು ಸಾಕು
ಸ್ನೇಹಿತನ ಪ್ರಶ್ನೆಗಳಿಗೆ ಪ್ರೀತಿಯೆ ಸಾಕು
ಅಜ್ಞಾನಿಯ ಪ್ರಶ್ನೆಗೆ ಮರು ಪ್ರಶ್ನೆಯು ಬೇಕು
ನಿನ್ನ ಮನದ ಪ್ರಶ್ನೆಗಳಿಗೆ ಸದಾ ಉತ್ತರ ಹುಡುಕುತ್ತಿರಬೇಕು
ಗೊಂದಲದ ಪ್ರಶ್ನೆಗೆ ಸುಮ್ಮನಿರಬೇಕು
ಹುಡುಕುವಂತಿರಬೇಕು ಪ್ರಶ್ನೆ ಜ್ಞಾನವನು
ಕೆಣಕುವಂತಿರಬಾರದು ಎದುರಾಳಿಯ ಕೋಪವನು.

ರಮೇಶ ಎಂ.ಎಚ್.
​ನಿರಾತಂಕ
0 Comments

ನೇರ ನಡೆ-ನುಡಿ

3/4/2020

0 Comments

 
ಇಷ್ಟ ಇಲ್ಲದಿರುವುದನ್ನು ಇಲ್ಲಾ ಎನಲು ನಿನಗೆ ಗೊತ್ತಿರಬೇಕು
ಸರಿ ಇರುವುದನ್ನು ಸರಿ ಎನಲು ಗುಂಡಿಗೆ ಇರಬೇಕು
ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಎನಲು ನಾಚಿಕೆ ಬಿಡಬೇಕು
ಒಮ್ಮೊಮ್ಮೆ ಇಲ್ಲಾ, ಹೌದು ಎನದೆ ಮೌನವಾಗಿರಲು ಬರಬೇಕು
 
ವೈರಿಗಳನ್ನು ಕಣ್ಣಲ್ಲಿ ಕಣ್ಣನಿಟ್ಟು ಪ್ರೀತಿಯಿಂದಿರಲು ದ್ವೇಷ ಬಿಡಬೇಕು
ಅವನು ಇವನು ಅಂದುಕೊಳ್ಳುವನೆಂದುಕೊಳ್ಳದೆ ಸ್ವಂತಿಕೆ ಇರಬೇಕು
ಬೇಕೇಬೇಕು ಎನ್ನುವುದನು ಮಕ್ಕಳಂತೆ ಕೇಳಿ ಪಡೆಯಬೇಕು
ತಪ್ಪು ಮಾಡಿ ಸಿಕ್ಕಿಹಾಕಿಕೊಂಡರೆ ಒಪ್ಪಿಕೊಳ್ಳಬೇಕು
 
ಮುಂದುವರೆದು....

ರಮೇಶ ಎಂ.ಎಚ್.
​ನಿರಾತಂಕ
0 Comments

ಕತ್ತಲಲ್ಲಿ ಬಣ್ಣ ಹಚ್ಚಿ ಬಟ್ಟೆ ತೊಟ್ಟಂತೆ

3/4/2020

0 Comments

 
ಬದುಕಬೇಕು ಪರರು ತಮ್ಮ ಎದೆಯ ನೋವನ್ನು ನಮ್ಮಲ್ಲಿ ಹಂಚಿಕೊಳ್ಳುವಂತೆ
ಸ್ನೇಹ ಇರಬೇಕು ಮುಖದ ಮುಖವಾಡ ಸರಿಸುವಂತೆ
ಪ್ರೀತಿ ಇರಬೇಕು ಮನಸ್ಸಿನ ಕನ್ನಡಿಯಂತೆ
 
ಎರಡು ದಿನದ ಬದುಕಿನಲ್ಲಿ ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮೇಲು
ಎಲ್ಲವನ್ನು ತಿಳಿದು ನಟಿಸಿ ಮೋಸಮಾಡಿ ಬದುಕು ಸಾಗಿಸಿದರೆ ಏನು ಫಲ
ಇರುವುದ ಬರುವುದ ಒಪ್ಪಿ ನಡೆಯುವುದ ಕಲಿಯದಿದ್ದರೆ
ಕತ್ತಲಲ್ಲಿ ಬಣ್ಣ ಹಚ್ಚಿ ಬಟ್ಟೆ ತೊಟ್ಟಂತೆ

ರಮೇಶ ಎಂ.ಎಚ್.
​ನಿರಾತಂಕ
0 Comments

ಇಲ್ಲದಿರುವುದನ್ನು ಹುಡುಕುವುದು

3/4/2020

0 Comments

 
ಪ್ರತಿ ವ್ಯಕ್ತಿ ಹುಡುಕುವನು
ಮತ್ತೊಬ್ಬರಲಿ ಇಲ್ಲದಿರುವುದನು
ಸಂಬಂಧ ಹಾಳಾಗುವುದು
ಸಮಸ್ಯೆ ಉದ್ಭವಿಸುವುದು
 
ಇರುವುದನ್ನು ಹುಡುಕು ಸಾವಿರಾರು ಜನರಿಗೆ ಸಿಗಲು
ಇಲ್ಲದಿರುವುದು ಹುಡುಕಿದರೆ ಸಿಗುವುದೇನು
ಇರುವುದನ್ನು ಇರುವಂತೆಯೆ ಅಪ್ಪಿಕೊ
ಬರುವುದನ್ನು ಬರುವಂತೆಯೆ ಒಪ್ಪಿಕೊ
 
ಇಲ್ಲದ ದೇವರ ಹುಡುಕುವೆವು
ಪ್ರೀತಿ ಸ್ನೇಹಗಳ ಮರೆವೆವು
ಒಂದೆ ಕೋಣೆಯಲ್ಲಿ ಜೀವಿಸಿದರೂ ನಾವು
ಮನಸ್ಸಿನಲ್ಲಿ ಸಾವಿರಾರು ಮೈಲಿಗಳ ದೂರನಿಲ್ಲುವೆವು

ರಮೇಶ ಎಂ.ಎಚ್.
​ನಿರಾತಂಕ
0 Comments

ನರಿಯ ಬುದ್ಧಿಯ ಜನರು

3/4/2020

0 Comments

 
ಮುಂದೆ ಬಂದರೆ ಹಾಯದ
ಹಿಂದೆ ಬಂದರೆ ಒದೆಯದ
ಮುಖ ಮನಸ್ಸಿನ ಕನ್ನಡಿಯಂತಿರದ
ನರಿಯ ಬುದ್ಧಿಯ ಜನರು ಇರುವ ಜಗವಿದು
 
ಜೊತೆಯಲ್ಲಿ ಇದ್ದವರು
ಒಟ್ಟಿಗೆ ಉಂಡವರು
ಸಂತಸದಿಂದ ಜೊತೆಗೆ ನಲಿದವರು
 
ಕತ್ತಿ ಮಸೆವರು ಮನದಲ್ಲಿ
ಎಂದು ಚುಚ್ಚುವರೊ ಗೊತ್ತಾಗುವುದಿಲ್ಲ
ಸತ್ತ ಮೇಲೆ ಮೊಸಳೆ ಕಣ್ಣೀರ ಸುರಿಸುವರು
ನರಿಯ ಬುದ್ಧಿಯ ಜನರು

ರಮೇಶ ಎಂ.ಎಚ್.
​ನಿರಾತಂಕ
0 Comments
<<Previous

    Categories

    All
    Others
    Personality Developement
    Quotes
    YouTube ವಿಡಿಯೋಸ್
    ಕಥೆಗಳು
    ಕವನಗಳು
    ಪುಸ್ತಕ ಪರಿಚಯ

    CERTIFICATE COURSE ON 
    'DISCIPLINARY PROCEEDINGS AND DOMESTIC ENQUIRY'
    For More Details
    Picture

    RAMESHA NIRATANKA 
    NATIONAL ASSOCIATION OF PROFESSIONAL SOCIAL WORKERS IN INDIA 
    ( NAPSWI ) 
    YOUNG ACHIEVERS AWARDEE-2019
    ​

    Read More

    RSS Feed

    Ramesha Niratanka

    Picture
    M&HR Solutions Private Limited
    More details

    ​List Your Product on Our Website 

    Picture
    Kannada Conference
    More details

    Picture
    Translations
    More details


    Picture
    POSH
    More details

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com

Picture

MHR LEARNING ACADEMY

  • Build your HR & Labour Law skill set with video courses
  • Customize your experience with learning reminders
  • Learn anywhere with offline viewing
Picture
Download App Here
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com