ಮಾಗಿದವರು ಆಗಿದ್ದು ಆಗಲಿ ಎಲ್ಲವನು ಸಹಿಸಿಕೊಂಡು,
ಹೊಟ್ಟೆಗೆ ಹಾಕಿಕೊಂಡು ತಣ್ಣಗಾಗುತ್ತಾರೆ ಮಾಗುತ್ತಿರುವವರು ಆಗಿಹೋಗಿದ್ದರ ಬಗ್ಗೆ ಸಹಿಸದೆ ಗೊಣಗುತ್ತಾರೆ ಎಳೆಕಾಯಿಗಳು ಯಾವುದನ್ನು ಆಲೋಚಿಸದೆ ತಾವಾಯಿತು ತಮ್ಮ ಕೆಲಸವಾಯಿತೆಂದು ಹಾಗೂ ಏನಾಯಿತು ಎಂಬುದರ ಬಗ್ಗೆ ಅರಿವಿರದೆ ಬದುಕುತ್ತಾರೆ ಮಾಗಿದವರ, ಮಾಗುತ್ತಿರುವವರ ಮತ್ತು ಎಳೆಕಾಯಿಗಳಲ್ಲಿ ನಾನ್ಯಾರು ಎಂದು ಕಂಡುಕೊಳ್ಳಬೇಕು ಮಾಗಿದ ನಿಮ್ಮತನವ ನೋಡಿ ಅನಿಸಿದ್ದು ನಾನು ಎಳೆಕಾಯಿ ಎಂದು ರಮೇಶ ಎಂ.ಎಚ್. ನಿರಾತಂಕ
0 Comments
ನಡೆವ ದಾರಿಯಲ್ಲಿ
ಬರುವವರು ಬರಲಿ ದೂರ ಸರಿವವರು ಸರಿಯಲಿ ಬಿಟ್ಟು ಹೋದವರು ಮತ್ತೆ ಬಂದು ಸೇರಲಿ ಬಾಗಿಲು ಸದಾ ತೆರೆದಿದೆ ಅಪ್ಪಿ ಕಳುಹಿಸಲು ಮನವು ಸದಾ ತೆರೆದಿದೆ ಬರುವವರ ಅಪ್ಪಿಕೊಳ್ಳಲು ಸದಾ ಪ್ರೀತಿ, ಸ್ನೇಹ ಜೊತೆಯಿರಲಿ, ಅಗಲಲಿ ಗುರಿ ಒಂದೇ ನಮ್ಮ ಮುಂದೆ ನಮ್ಮ ಹೃದಯದಲ್ಲಿ ಸದಾ ನಾ ಹರಿವ ನದಿ ಹರಿದು ಹರಿದು ಸೇರುವೆ ಶರಧಿ ರಮೇಶ ಎಂ.ಎಚ್. ನಿರಾತಂಕ ಕೆಲವರಿಗೆ ಮನವ ಬಿಚ್ಚಿಡುತ್ತೇವೆ
ಕೆಲವರಿಂದ ಮನವ ಮುಚ್ಚಿಡುತ್ತೇವೆ ಅಪ್ಪ ಮಗನ ಮುಂದೆ ಆಸ್ತಿಯ ಬಿಚ್ಚಿಡುತ್ತಾನೆ ತನ್ನ ಮನವ ಬಚ್ಚಿಡುತ್ತಾನೆ ಪ್ರೇಯಸಿಗೆ ದೇಹವನ್ನು ಬಿಚ್ಚಿಡುತ್ತಾನೆ ಅವನ ಮನವ ಮುಚ್ಚಿಡುತ್ತಾನೆ ಮನವ ಬಿಚ್ಚಿಟ್ಟರೆ ಸಿಹಿ, ಬಚ್ಚಿಟ್ಟರೆ ಕಹಿ ನನಗೆ ಮನವ ಬಿಚ್ಚಿಡುವ ಎಷ್ಟು ಜನರಿದ್ದಾರೆ? ಎಷ್ಟು ಜನ ನನ್ನ ಮುಂದೆ ಮನವ ಮುಚ್ಚಿಡುತ್ತಾರೆ? ಜೀವನ ಮನವ ಬಿಚ್ಚಿಡುವ, ಮನವ ಬಚ್ಚಿಡುವ ಆಟ ಬಚ್ಚಿಟ್ಟ ಕಹಿಯ ಬಿಚ್ಚಿಟ್ಟು ಸಿಹಿಯಾಗಿಸಿ ಆಡಿ ಕೊನೆಗೆ ಎಲ್ಲವನು ಬಿಟ್ಟು ಓಡುವ ರಹಸ್ಯವಾದ ಓಟ ರಮೇಶ ಎಂ.ಎಚ್. ನಿರಾತಂಕ ಅವಳ ನೋವು ಮನವ ಕಾಡುವುದಿಲ್ಲ
ನಾನು ಕೊಡುವತನವ ತೋರುವುದಿಲ್ಲ ನನ್ನ ತಾಯಿಯಂತೆ ಅವಳು ಎನಿಸುವುದಿಲ್ಲ ಮಾನವೀಯತೆ ನನ್ನ ಕೆಣಕುವುದಿಲ್ಲ ಸತ್ತಂತೆ ಬದುಕುತಿರುವೆ ಅನಿಸುವುದಿಲ್ಲ ನನ್ನ ಸಂತಸ, ಜೀವನಕ್ಕೆ ಆಕೆಯ ನೋವು ಕಾಣುವುದಿಲ್ಲ ಕಣ್ಣಿದ್ದು ಕುರುಡರು ನಾವು ಅನಿಸುವುದಿಲ್ಲ ನಮ್ಮದೆ ವೇದಾಂತ, ನಮ್ಮದೆ ಸಿದ್ದಾಂತಗಳೆಲ್ಲ ರಮೇಶ ಎಂ.ಎಚ್. ನಿರಾತಂಕ ಗೆಳೆಯನ ಮುಂದೆ ಸೋಲು
ಗೆಳೆಯನ ಮನಸ್ಸನ್ನು ಗೆಲ್ಲು ಗೆಳೆಯನ ಮನಸ್ಸು ನೋಯಿಸಿ ಗೆದ್ದೆ ಎಂಬ ಗೆಲುವು ಸಾಧಿಸಿ ನಗುವ ನಗುವಿಗೆ ಅರ್ಥವಿಲ್ಲ ಕಂದ ಗೆಳೆಯನಿಗಾಗಿ ಸೋತೆ ಎಂಬ ಖುಷಿಯ ಮುಂದ ಗೆಲುವು, ಸೋಲು ಎರಡರಾಗು ಉಂಟು ಸುಖ ಮನಸ್ಸು ಮಾಗಿ, ವಯಸ್ಸು ಆದ ಮೇಲೆ ಮರೆಯಬೇಕು ದುಃಖ ಜಗದ ನಂಟು, ಕಳಚಿ ಬೀಳುವುದು ಕಣ್ಣ ಮುಂದೆ ಗೆಲುವು, ಸೋಲು ಎಲ್ಲಾ ಮರೆಯಾಗುವುವು ನಮ್ಮ ಮುಂದೆ ರಮೇಶ ಎಂ.ಎಚ್. ನಿರಾತಂಕ ಸ್ನೇಹಿತ ಬೆನ್ನಿಗೆ ಚೂರಿ ಹಾಕಲು ಬಂದ
ಗೊತ್ತಾದರೂ ನೋಡಿ ಸುಮ್ಮನಾದೆ ಚೂರಿ ಚುಚ್ಚಿ ಗಾಯವಾಯಿತು ಸಾಯಲಿಲ್ಲ ನಾನು ಚೂರಿ ಹಾಕಿದ್ದು ಗೆಳೆಯನಿಗೆ ಗೊತ್ತಾಗಲಿಲ್ಲ ಎಂದುಕೊಂಡ ಅವನು ಆಸ್ಪತ್ರೆಗೆ ಬಂದು ಬಂಧುವಿನಂತೆ ಮಾತನಾಡಿಸಿದ ಮಾತನಾಡಿಸಿದೆ ಚೂರಿ ಚುಚ್ಚಿದ ಎಂಬ ದ್ವೇಷವಿಲ್ಲದೆ ಆಕಾಶದೆತ್ತರಕ್ಕೆ ಹಾರಿ
ಪ್ರಶಸ್ತಿ ಪದಕ ಪಡೆದು ನಿನ್ನ ಮನವ ನೀ ನೋಡದಿದ್ದರೆ ಎಚ್ಚರಿಕೆ ನೀ ಕನಸ ಕಾಣುತಿರುವೆ ರಮೇಶ ಎಂ.ಎಚ್. ನಿರಾತಂಕ ಮುಖದಲ್ಲಿ ನಗುವ ತೋರುತ
ಮನದಲ್ಲಿ ಕತ್ತಿ ಮಸೆಯಬಲ್ಲವರು ಜಾಸ್ತಿಯಾಗುತ್ತಿದ್ದಾರೆ ಮನದಲ್ಲಿ ಪ್ರೀತಿ ಬೆಸೆಯುವರು ಮಾಯವಾಗುತ್ತಿದ್ದಾರೆ ಕತ್ತಿಮಸೆದು ಕಳ್ಳನಗೆ ಬೀರಿ ಮೋಸ ಮಾಡಲು ಶಕ್ತಿ ಬೇಕು ಸಾಧಿಸುವುದೆಂತು ದ್ವೇಷ ಬಿತ್ತಿ ಎದೆಯಲ್ಲಿ ಗುಂಪಿನಲ್ಲಿ ಪ್ರೀತಿಯ ಮಾತು ಮನದಲ್ಲಿ ದ್ವೇಷದ ಪಿಸುಮಾತು ಸತ್ಯಕ್ಕೆ ಸಾವಿರ ಮುಖಗಳು
ನನ್ನ ಪಾಲಿನ ಸತ್ಯ ಇನ್ನೊಬ್ಬನ ಪಾಲಿನ ಸುಳ್ಳು ಹಸಿದವ ರೊಟ್ಟಿ ಕದ್ದದ್ದು ಸತ್ಯ ಹಸಿದವನ ಹಸಿವು ನೋಡಲು ಸಿಗದಿರುವ ಸತ್ಯ ತಾಯಿ ರೊಟ್ಟಿ ಕದ್ದ ಹಸಿದ ಕಂದನನು ಕಳ್ಳ ಅನ್ನದಿರುವುದು ಸತ್ಯ ಜಗವು ರೊಟ್ಟಿ ಕದ್ದವನು ಸಿಕ್ಕಿ ಬಿದ್ದರೆ ಸಾಯುವಂತೆ ಬಡಿಯುವುದು ಸತ್ಯ ಲಂಚದ ಹಣವ ಲೂಟಿ ಮಾಡಿ ಸತ್ಯಸಂಧರಂತೆ ನಟಿಸುವುದು ಸತ್ಯ ಕಷ್ಟಪಟ್ಟು ದುಡಿದು ಒಪ್ಪೊತ್ತಿನ ಊಟ ಸಿಗದಿರುವುದು ಸತ್ಯ ಕಣ್ಣಿಗೆ ಕಾಣದಿರುವ ಹಲವಾರು ಸತ್ಯ ಸ್ನೇಹಿತ ಪರೀಕ್ಷೆಯಲ್ಲಿ ಫೇಲಾದದ್ದು ಜಗತ್ತಿಗೆ ಬೇಡದ ಸತ್ಯ ಬಡತನ, ಹೊಟ್ಟೆಗೆ ಇಟ್ಟಿಲ್ಲದೆ ಓದಲು ಕಷ್ಟವಾದದ್ದು ಸತ್ಯ ರಮೇಶ ಎಂ.ಎಚ್. ನಿರಾತಂಕ ನನಗೆ ನನ್ನದೆ ಮನಸ್ಸಿದೆ
ನನಗೆ ನನ್ನದೆ ಕನಸ್ಸಿದೆ ಮನಸ್ಸು ಕನಸ್ಸಿನ ನಡುವೆ ಅಡೆ ತಡೆ ಬಂದರೆ ನಾ ಕುರುಡನಾಗುವೆ ಸದಾ ಕೇಳುವ ಕಿವಿ, ತೆರೆದ ಮನದಿಂದಿರುವೆ ಕಸ, ಕೊಳೆ ಸದ್ದು ಗದ್ದಲಕ್ಕೆ ಕಿವುಡಾಗುವೆ ನಾ ನಡೆದದ್ದೆ ದಾರಿ ಕಲ್ಲು ಮುಳ್ಳಿದ್ದರೂ ಸರಿ ಅಡ್ಡ ದಾರಿ ಹಿಡಿಯದೆ ತಲುಪುವೆನು ಗುರಿ ರಮೇಶ ಎಂ.ಎಚ್. ನಿರಾತಂಕ ಕಾಣದ ಕೈಗಿರಲಿ ನಮ್ಮ ನಮನ
ಕಂಡಕಂಡ ಕಡೆ ಏಕೆ ಬೇಕು ಗುಡಿ ಗೋಪುರಗಳೆ ಪ್ರದರ್ಶನ ಗುಡಿಸಲುಗಳೂ ಇಲ್ಲದಿರುವಾಗ ಗುಡಿಗಳು ಏಕೆ ಬೇಕೀಗ ಹೊಟ್ಟೆಗಳಿಗೆ ಹಿಟ್ಟಿಲ್ಲದಿರುವಾಗ ದೇವರುಗಳಿಗೇಕೆ ನೈವೇದ್ಯ ತಪ್ಪು ಮಾಡದಿದ್ದಲ್ಲಿ ಪಶ್ಚಾತ್ತಾಪ ಏಕೆ? ಪಾಪ ಮಾಡದಿದ್ದರೆ ಗುಡಿ ಸುತ್ತ ತಿರಗಲೇಕೆ? ರಮೇಶ ಎಂ.ಎಚ್. ನಿರಾತಂಕ ನನ್ನ ಗುರು
ಜೀವನದ ಉದ್ದ-ಅಗಲ ಅಳೆದು ತೋರಿದವ ಜ್ಞಾನದ ಭಂಡಾರದ ದಾರಿ ತೋರಿದವ ಜೀವನ ಮೌಲ್ಯಗಳ ಮನಕ್ಕೆ ಮೆತ್ತಿದವ ನನ್ನ ವ್ಯಕ್ತಿತ್ವವ ರೂಪಿಸಿದವ ಈ ನನ್ನ ಗುರು ಕಲಿಸಿದವ ಹಲವು ತರಹದ ವಿದ್ಯೆ ಸಮಯಪಾಲನೆ, ಶಿಸ್ತು, ಇಂಗ್ಲೀಷ್, ಕವಿತೆ ಮಾತು, ಶಬ್ದ, ಪ್ರೀತಿ, ಪ್ರೇಮ, ಹೀಗೆ ಅನೇಕ ಪ್ರೀತಿ ಕಣದ ಅವರ ಸಾನಿಧ್ಯ ಬಲು ಮೋಹಕ ಮೊದಲು ನಾನು
ಆಮೇಲೆ ನೀನು ಮನಸ್ಸಲ್ಲಿ ಮೊದಲು ನೀನು ಆಮೇಲೆ ಮಾತಲ್ಲಿ ನಾನು ಮನಸ್ಸಲ್ಲಿ ಮಸೆವ ಕತ್ತಿ ಹೊರಗಡೆ ಹಲ್ಲುಗಿಂಜುವ ಪ್ರವೃತ್ತಿ ರಮೇಶ ಎಂ.ಎಚ್. ನಿರಾತಂಕ ಅವನು ಕಪ್ಪು
ಇವಳು ಬಿಳುಪು ಸೇರಿದರಾಗುವರು ಕಪ್ಪು ಬಿಳುಪು ಅವನಿಗೆ ಅಳಕು ಇವಳಿಗೆ ಬಿಳುಕು ಅವನನ್ನು ಮುಟ್ಟಿ ಕೈ ತೊಳೆಯಬೇಕು ಇವಳನ್ನು ಕೈ ತೊಳೆದು ಮುಟ್ಟಬೇಕು. ಹಣದ ಬಲ ಇವನ ಕಡೆ ಸೌಂದರ್ಯದ ರಾಶಿ ಇವಳೆಡೆ ಹಂಚಿಕೊಳ್ಳಲು ಇಬ್ಬರೂ ರೆಡಿ ಇದ ನೋಡಿ ಮನೆಯವರು ಸಿಡಿ ಮಿಡಿ ಕೊನೆಗೆ ಪ್ರೇಮಿಗಳ ಪಟ್ಟು ನೋಡಿ ಮನೆಯವರೆಂದರು ಹಾಳಾಗಿ ಹೋಗಲಿ ಬಿಟ್ಟು ಬಿಡಿ. ರಮೇಶ ಎಂ.ಎಚ್. ನಿರಾತಂಕ ಆಸ್ತಿಕನೂ ಅಲ್ಲ !
ನಾಸ್ತಿಕನೂ ಅಲ್ಲ ! ಆಸ್ತಿಕನೆನ್ನಲು ಆಸ್ತಿ ಇಲ್ಲ ಆಸ್ತಿಕರೆಂದವರು ಆಸ್ತಿಕರಲ್ಲ ನಾಸ್ತಿಕರೆಂದವರು ನಾಸ್ತಿಕರಲ್ಲ ಆಸ್ತಿಕನಲ್ಲಿ ಪುರಾವೆ ಇಲ್ಲ ಪುರಾಣವಿದೆ ನಾಸ್ತಿಕನೆನಲು ಈ ನನ್ನ ಜ್ಞಾನ ಸಾಲದೆ ? ಇಲ್ಲದ್ದನ್ನು ಇದೆ ಎಂದು ಹೇಳುವುದು ಹೇಗೆ ಇರಬಹುದು ಎಂದರೆ ಕಾಣರೆ ಕಂಡದ್ದು ನಂಬಿ ಇರುವತನಕ ರಮೇಶ ಎಂ.ಎಚ್. ನಿರಾತಂಕ ಅಲ್ಲಿ ಚಪ್ಪಾಳೆ ಸತ್ಯಕ್ಕೆ
ಇಲ್ಲಿ ಚಪ್ಪಾಳೆ ಸುಳ್ಳಿಗೆ ಅಲ್ಲಿ ಹೊಗಳುವೆವು ನ್ಯಾಯಕ್ಕೆ ಇಲ್ಲಿ ಮಾಡುತಿಹೆವು ಅನ್ಯಾಯ ಬ್ರಹ್ಮಚಾರಿಯನು ಹೊಗಳುತ ಸಂಸಾರಿಯಾಗುತಲಿಹೆವು ವರದಕ್ಷಿಣೆಗೆ ಪ್ರತಿಭಟನೆ ವಧುವಿನೆಡೆ ಶೋಷಣೆ ರಮೇಶ ಎಂ.ಎಚ್. ನಿರಾತಂಕ ನಗುತ ಹಲ್ಲು ಕಿರಿಯುವೆ, ಮನದಲ್ಲಿ ನಗುವಿರುವುದಿಲ್ಲ.
ದಯೆ ತೋರುವೆ, ಮನದಲ್ಲಿ ಕರುಣೆ ಇರುವುದಿಲ್ಲ. ಸಂತಸದಲ್ಲಿ ಸಂಭ್ರಮ ಆಚರಿಸುವೆ, ಮನದಲ್ಲಿ ಸಂತಸದ ಭಾವನೆ ಚಿಮ್ಮುವುದಿಲ್ಲ. ಅಳುವಂತೆ ನಟಿಸುವೆ, ಮರುಕ್ಷಣ ಸಂತಸದ ನಗು ಚೆಲ್ಲುವೆ. ಎಲ್ಲವೂ ಅನಿವಾರ್ಯ ಎನ್ನುವೆ, ತಲೆ ಹೋಗುವಂತಹದೇನಿರುವುದಿಲ್ಲ. ಭ್ರಮೆ, ನಶೆಯ ಬದುಕಿನಲ್ಲಿ ತೇಲುತ ಸಮಯ ಕಳೆಯುತಲಿರುವ ಹುಚ್ಚು ಬದುಕಿನ ಬೆನ್ನು ಹತ್ತಿ ಸವಾರಿ ಹೊರಟಿರುವೆ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ ನಾಲ್ಕು ಜನ ಸ್ನೇಹಿತರಿರಬೇಕು
ಕೇಳಿದಾಗ ಕೇಳಿದಷ್ಟು ಹಣ ಕೊಡುವಂತಿರಬೇಕು ಸಿನಿಮಾಗೆ ಕರೆದರೆ ಬರುವಂತಿರಬೇಕು ತಪ್ಪು ಮಾಡಿದರೆ ಮುಖಕ್ಕೆ ಹೊಡೆದು ತಿದ್ದುವಂತಿರಬೇಕು ನಾಲಗೆಯ ಮಾತಿಗೂ, ಹೃದಯಕ್ಕೆ ಸಂಬಂಧ ಹೊಂದಿರಬೇಕು ಸ್ನೇಹಿತನಿಗೆ ಲಾಟರಿ ಹೊಡೆದರೆ ಹೊಟ್ಟೆಹುರಿದು ಸಾಯದಂತಿರಬೇಕು ಸ್ನೇಹಿತನ ಸಂಬಳ ಜಾಸ್ತಿಯಾದಾಗ ಕುಣಿದು ಕುಪ್ಪಳಿಸುವಂತಿರಬೇಕು ಯಾವುದಾದರೂ ಕೆಲಸಕ್ಕೆ ಕೈಹಾಕಿದರೆ ಸಹಕರಿಸುವಂತಿರಬೇಕು ಎಣ್ಣೆ ಹೊಡಿಯಲು ಕೂತರೆ ಬಲವಂತಪಡಿಸಿ ಕುಡಿಸದಂತಿರಬೇಕು ಎಲ್ಲದಕ್ಕೂ ಹೂ ಎನುತ ತಿಪ್ಪೆ ಸಾರಿಸದಂಗಿರಬೇಕು ನೋವನ್ನು ಹಂಚಿಕೊಳ್ಳುವಂತಿರಬೇಕು ತಪ್ಪನ್ನು ಕ್ಷಮಿಸುವಂತಿರಬೇಕು ಹಾಕಿದ ಗೆರೆಯನ್ನು ದಾಟದಂತಿರಬೇಕು ಮನದ ಮಾತುಗಳಿಗೆ ಬೆಲೆ ಕೊಡುವಂತಿರಬೇಕು ಕಣ್ಣ ಭಾಷೆ ಅರ್ಥ ಮಾಡಿಕೊಳ್ಳುವಂತಿರಬೇಕು ಸ್ನೇಹಿತರು ಕಚ್ಚಾಡಿದರೆ ಕೂಡಿಸಿ ಹೊಲಿಸುವಂತಿರಬೆಕು ನಾಚಿಕೆಯ ಬಿಟ್ಟು ಎಲ್ಲವನ್ನು ಮಾತನಾಡುವಂತಿರಬೇಕು ಈ ರೀತಿಯ ಪದ್ಯವನ್ನು ಬರೆದಾಗ ಮುಂದುವರಿಸುವಂತಿರಬೇಕು ಸಾಧ್ಯವಾದರೆ ಮುಂದುವರೆಸಿ ನಿಮ್ಮ ಸಲಹೆ ನೀಡಿ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ |
RAMESHA NIRATANKA NATIONAL ASSOCIATION OF PROFESSIONAL SOCIAL WORKERS IN INDIA Ramesha for Ullal Ward |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |