|
ನಾಲ್ಕು ಜನ ಸ್ನೇಹಿತರಿರಬೇಕು
ಕೇಳಿದಾಗ ಕೇಳಿದಷ್ಟು ಹಣ ಕೊಡುವಂತಿರಬೇಕು ಸಿನಿಮಾಗೆ ಕರೆದರೆ ಬರುವಂತಿರಬೇಕು ತಪ್ಪು ಮಾಡಿದರೆ ಮುಖಕ್ಕೆ ಹೊಡೆದು ತಿದ್ದುವಂತಿರಬೇಕು ನಾಲಗೆಯ ಮಾತಿಗೂ, ಹೃದಯಕ್ಕೆ ಸಂಬಂಧ ಹೊಂದಿರಬೇಕು ಸ್ನೇಹಿತನಿಗೆ ಲಾಟರಿ ಹೊಡೆದರೆ ಹೊಟ್ಟೆಹುರಿದು ಸಾಯದಂತಿರಬೇಕು ಸ್ನೇಹಿತನ ಸಂಬಳ ಜಾಸ್ತಿಯಾದಾಗ ಕುಣಿದು ಕುಪ್ಪಳಿಸುವಂತಿರಬೇಕು ಯಾವುದಾದರೂ ಕೆಲಸಕ್ಕೆ ಕೈಹಾಕಿದರೆ ಸಹಕರಿಸುವಂತಿರಬೇಕು ಎಣ್ಣೆ ಹೊಡಿಯಲು ಕೂತರೆ ಬಲವಂತಪಡಿಸಿ ಕುಡಿಸದಂತಿರಬೇಕು ಎಲ್ಲದಕ್ಕೂ ಹೂ ಎನುತ ತಿಪ್ಪೆ ಸಾರಿಸದಂಗಿರಬೇಕು ನೋವನ್ನು ಹಂಚಿಕೊಳ್ಳುವಂತಿರಬೇಕು ತಪ್ಪನ್ನು ಕ್ಷಮಿಸುವಂತಿರಬೇಕು ಹಾಕಿದ ಗೆರೆಯನ್ನು ದಾಟದಂತಿರಬೇಕು ಮನದ ಮಾತುಗಳಿಗೆ ಬೆಲೆ ಕೊಡುವಂತಿರಬೇಕು ಕಣ್ಣ ಭಾಷೆ ಅರ್ಥ ಮಾಡಿಕೊಳ್ಳುವಂತಿರಬೇಕು ಸ್ನೇಹಿತರು ಕಚ್ಚಾಡಿದರೆ ಕೂಡಿಸಿ ಹೊಲಿಸುವಂತಿರಬೆಕು ನಾಚಿಕೆಯ ಬಿಟ್ಟು ಎಲ್ಲವನ್ನು ಮಾತನಾಡುವಂತಿರಬೇಕು ಈ ರೀತಿಯ ಪದ್ಯವನ್ನು ಬರೆದಾಗ ಮುಂದುವರಿಸುವಂತಿರಬೇಕು ಸಾಧ್ಯವಾದರೆ ಮುಂದುವರೆಸಿ ನಿಮ್ಮ ಸಲಹೆ ನೀಡಿ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ
0 Comments
Leave a Reply. |
HR BooksSocial Work Books |
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed