ಶ್ರೀ ವೆಂಕಟ್ ಪುಲ್ಲಾರವರು ನಾನು ಕಂಡ ವ್ಯಕ್ತಿಗಳಲ್ಲಿ ಅತ್ಯಂತ ಪ್ರಾಮಾಣಿಕರು, ಮೇಧಾವಿ. TISS Mumbai ನಿಂದ ಪದವಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿ ಹಲವು ಅನುಭವಗಳನ್ನು ತಮ್ಮದಾಗಿಸಿಕೊಂಡವರು. ಹಲವು ಸಮಾಜಕಾರ್ಯ ಕ್ಷೇತ್ರದಲ್ಲಿನ ಅವರ ವಿದ್ಯಾರ್ಥಿಗಳಾಗಿದ್ದವರು ಇಂದು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಇಂದು ಕೆಲಸ ನಿರ್ವಹಿಸುತ್ತಿದ್ದಾರೆ. ಹಲವು ಕಿರಿಯ ವೃತಿಪರರಿಗೆ ಮಾರ್ಗದರ್ಶನ ನೀಡಿ ಇಂದು ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಸಹಕಾರ ನೀಡಿದ್ದಾರೆ.
ಇದೆಲ್ಲವನ್ನು ಹೊರತುಪಡಿಸಿ ವೆಂಕಟ್ ರವರ ಬಳಿ ಒಂದು ಸಮಸ್ಯೆ ಹೇಳಿದರೆ ಅದನ್ನು ಅವರು ಬಗೆಹರಿಸುವ ವಿಧಾನ ಕಂಡು ನಾವು ಬೆರಗಾಗಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ನನಗೆ ಈ ಅನುಭವ ಆಗಿದೆ.
0 Comments
ರಮೇಶ ಎಂ.ಎಚ್. ನಿರಾತಂಕ ನಿರಾತಂಕ ಸಂಸ್ಥೆ 2007 ರಲ್ಲಿ ಆರಂಭಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕಾರ್ಯದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಆಯೋಜಿಸಿಕೊಂಡು ಬರುತ್ತಿದ್ದೇವೆ. “ಸಮಾಜಕಾರ್ಯದ ಹೆಜ್ಜೆಗಳು”ಪತ್ರಿಕೆ ಹಾಗೂ ಹಲವಾರು ಪುಸ್ತಕಗಳನ್ನು ಪ್ರಕಟಿಸಿ 100 ಕ್ಕೂ ಹೆಚ್ಚು ಸಾಹಿತ್ಯಲೋಕಕ್ಕೆ ಹಾಗೂ 10ಕ್ಕೂ ಹೆಚ್ಚು ಕೃತಿಗಳನ್ನು ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನಿರಾತಂಕವನ್ನು ಅತ್ಯಂತ ದೂರದೃಷ್ಟಿಯಿಂದ ಕಟ್ಟಿದ ಸಂಸ್ಥೆಯಾಗಿದೆ.
ಆತಂಕವನ್ನು ದೂರ ಸರಿಸಿ, ವಿಶ್ವಮಾನವ ಸಂದೇಶವ ಪಸರಿಸಿ, ನೆಮ್ಮದಿಯ ಬದುಕು ನಮ್ಮದಾಗಲಿ ಎನುತ, ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿ ಕಟ್ಟಿದ ಸಹೃದಯಿಗಳ ತಂಡ ನಿರಾತಂಕ. |
RAMESHA NIRATANKA NATIONAL ASSOCIATION OF PROFESSIONAL SOCIAL WORKERS IN INDIA |