Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
Niruta Publications

ರಮೇಶ ಎಂ.ಎಚ್. ರವರ ಭಾಷಣ (ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2020)

1/17/2022

0 Comments

 
Picture
ರಮೇಶ ಎಂ.ಎಚ್.
ನಿರಾತಂಕ
ನಿರಾತಂಕ ಸಂಸ್ಥೆ 2007 ರಲ್ಲಿ ಆರಂಭಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕಾರ್ಯದ ತತ್ವ ಸಿದ್ಧಾಂತಗಳ ಅಡಿಯಲ್ಲಿ  ಆಯೋಜಿಸಿಕೊಂಡು ಬರುತ್ತಿದ್ದೇವೆ. “ಸಮಾಜಕಾರ್ಯದ ಹೆಜ್ಜೆಗಳು”ಪತ್ರಿಕೆ ಹಾಗೂ ಹಲವಾರು ಪುಸ್ತಕಗಳನ್ನು ಪ್ರಕಟಿಸಿ 100 ಕ್ಕೂ ಹೆಚ್ಚು ಸಾಹಿತ್ಯಲೋಕಕ್ಕೆ ಹಾಗೂ 10ಕ್ಕೂ ಹೆಚ್ಚು ಕೃತಿಗಳನ್ನು ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನಿರಾತಂಕವನ್ನು ಅತ್ಯಂತ ದೂರದೃಷ್ಟಿಯಿಂದ ಕಟ್ಟಿದ ಸಂಸ್ಥೆಯಾಗಿದೆ.
​
ಆತಂಕವನ್ನು ದೂರ ಸರಿಸಿ, ವಿಶ್ವಮಾನವ ಸಂದೇಶವ ಪಸರಿಸಿ, ನೆಮ್ಮದಿಯ ಬದುಕು ನಮ್ಮದಾಗಲಿ ಎನುತ, ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿ ಕಟ್ಟಿದ ಸಹೃದಯಿಗಳ ತಂಡ ನಿರಾತಂಕ.
​

ಭಾಷೆ, ನೆಲ, ಕೈಗಾರಿಕೆ ಹಾಗೂ ಮಾನವ ಸಂಪನ್ಮೂಲಗಳು ಕೂಡಾ ಸಹ ಅವಿನಾಭಾವವಾಗಿ ಬೆಸೆದುಕೊಂಡಿವೆ. ಆಧುನಿಕವಾಗಿ ನಮಗೆ ದಿನನಿತ್ಯದ ಒಡನಾಟದಲ್ಲಿ ಆಂಗ್ಲ ಭಾಷೆ ಅನಿವಾರ್ಯ ಹಾಗೂ ಮಹತ್ವ ಎಂದು ಎನಿಸಿದರೂ ಕೂಡ ತಾಯಿ ಭಾಷೆ ನಮ್ಮ ಮನದಲ್ಲಿ ಅಗ್ರಸ್ಥಾನ ಪಡೆದಿರುತ್ತದೆ.
ಬದುಕಲು ಕಲಿಯಿರಿ ಸ್ವಾಮಿ ಜಗದಾತ್ಮಾನಂದ ತಮ್ಮ ಕೃತಿಯಲ್ಲಿ ಹೀಗೆ ಹೇಳಿದ್ದಾರೆ :-
“ನದಿ ಎಂದು ಹೇಳಿದಾಗ ನದಿಯ ಉಗಮ ಸ್ಥಾನ, ಅದರ ಪಾತ್ರ, ಅದರ ಇಕ್ಕೆಲಗಳಲ್ಲಿರುವ ಕಟ್ಟಡ, ಪಟ್ಟಣಗಳು ಅದು ಸೇರುವ ಸಮುದ್ರ ಇವು ನಮ್ಮ ಅರಿವಿಗೆ ನಿಲುಕುತ್ತವೆ. ಆದರೆ ಇದು ನದಿಯ ಪೂರ್ಣ ಸ್ವರೂಪವಲ್ಲ. ನದಿಯ ಸ್ವರೂಪದ ಇನ್ನೊಂದು ಮುಖವಿದೆ. ಅದು ಸೂಕ್ಷ್ಮವಾದುದು, ಸೂರ್ಯ ಕಿರಣಗಳು ಸಮುದ್ರದ ನೀರನ್ನು ಆವಿಯಾಗಿಸುತ್ತವೆ. ಗಾಳಿ ಅದನ್ನು ಪರ್ವತಾಗ್ರಹಕ್ಕೆ ಒಯ್ಯುತ್ತದೆ. ಅಲ್ಲಿ ಮಳೆಯಾಗಿ ಸುರಿದು ನೀರು ನದಿಯಲ್ಲಿ ಹರಿದು, ತಿರುಗಿ ಸಮುದ್ರವನ್ನು ಸೇರುತ್ತದೆ. ಅಂತೆಯೇ ನಮ್ಮ ಜೀವನ ಪ್ರವಾಹದಲ್ಲೂ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ಹಾಗೆಯೇ ಭಾಷೆಯೂ ಕೂಡ ಕೈಗಾರಿಕೆ ಹಾಗೂ ದೇಶದ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತದೆ.”
 
ಸಮ್ಮೇಳನದ ಉದ್ದೇಶಗಳು:
  1. ಮಾನವ ಸಂಪನ್ಮೂಲ ವೃತ್ತಿನಿರತರ ಮೂಲಕ ಕನ್ನಡದ ಬಳಕೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವುದು.
  2. ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಕನ್ನಡದಲ್ಲಿ ಸೃಷ್ಟಿಸುವುದು, ಪ್ರಕಟಿಸುವುದು ಮತ್ತು ಬೆಳೆಸುವುದು.
  3. ಯುವ ಮಾನವ ಸಂಪನ್ಮೂಲ ವೃತ್ತಿನಿರತರಿಗೆ, ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರ ಸಹಕಾರದೊಂದಿಗೆ, ಅವಕಾಶಗಳನ್ನು ಕಲ್ಪಿಸುವುದು ಮತ್ತು ಪ್ರೋತ್ಸಾಹಿಸುವುದು.
  4. ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿನಿರತರನ್ನು ಹಾಗೂ ಕನ್ನಡ ಬಳಕೆಯನ್ನು ಅನುಷ್ಟಾನ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದು.
  5. ಭವಿಷ್ಯದ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮರುರೂಪಿಸುವಿಕೆಯ ಬಗ್ಗೆ ಅರಿವು ಮೂಡಿಸುವುದು.  
 
ಈ ಮೂರು ವರ್ಷಗಳಲ್ಲಿ ಸಮ್ಮೇಳನ ನಡೆದು ಬಂದ ದಾರಿ:-
  1. ಸಣ್ಣ ಆಲೊಚನೆ 2017 ರಲ್ಲಿ ಆರಂಭವಾಗಿ ಪ್ರತಿ ವರ್ಷವೂ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
  2. ಈ ಮೂರೂ ವರ್ಷಗಳಲ್ಲಿ ಸಹ ಹತ್ತು ಹಲವು ಮಾನವ ಸಂಪನ್ಮೂಲ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ.
  3. ಕೈಗಾರಿಕೆ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ಕೃತಿಗಳನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಶ್ರೀ ರಾಮ್ ಕೆ. ನವರತ್ನ ರವರ ಕೃತಿ “ಮಾನವ ಸಂಪನ್ಮೂಲ ಮಾರ್ಗದರ್ಶಿ”, ಶ್ರೀ ಶೇಖರ್ ಜಿ.ಎನ್. ರವರ ಕೃತಿ “ಬದುಕು ಬದಲಾಯಿಸಿದ ಕಥನಗಳು”, ಶ್ರೀ ಗೋವಿಂದರಾಜು ಎನ್.ಎಸ್. ರವರ ಕೃತಿ “ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆ”, “Managing Labour Relations” ಪ್ರಮುಖವಾದವುಗಳು. ನಾರಾಯಣಪ್ಪನವರ “A Guide to Factories Act, 1948, The Factories Rules, 1969”, ಮುಂದಿನ ದಿನಗಳಲ್ಲಿ ಇನ್ನು ಹಲವು ಕೃತಿಗಳು ಪ್ರಕಟಿಸಲು ಸಿದ್ಧವಾಗಿವೆ, ಶ್ರೀ ಲಕ್ಷ್ಮಿಪ್ರಸಾದ್‌ರವರ “ಬದುಕಿನಾನಂದ ಕಲೆ” ಹಾಗೂ ಶ್ರೀ ಶೇಖರ್ ರವರ “ಗೆಲುವು.”
  4. ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಯಾರೇ ಕನ್ನಡದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡರೆ ಅವರ ಕೃತಿಗಳನ್ನು ಪ್ರಕಟಿಸಲು ನಿರಾತಂಕ ಸಂಸ್ಥೆಯು ಶ್ರಮಿಸುತ್ತಿದೆ. ಹಾಗಾಗಿ ಸಾಹಿತ್ಯ ನಿರ್ಮಿಸುವಲ್ಲಿ ಪ್ರಮುಖ ಕೊಡುಗೆಯನ್ನು ನೀಡಲಾಗಿದೆ.
  5. ಸಮ್ಮೇಳನದಲ್ಲಿ ಹಲವು ಪ್ರಮುಖ ಮಾನವ ಸಂಪನ್ಮೂಲ ಕ್ಷೇತ್ರದ ವಿಷಯಗಳನ್ನು ಕನ್ನಡದಲ್ಲಿ ಮಂಡಿಸಿ, YouTube ಚಾನೆಲ್‌ಗೆ ದಾಖಲಿಸಿ ಎಲ್ಲರಿಗೂ ಲಭಿಸುವಂತೆ ಮಾಡಲಾಗಿದೆ.
  6. ಕನ್ನಡ ಮಾನವ ಸಂಪನ್ಮೂಲ ಅಧಿಕಾರಿಗಳೆಲ್ಲರೂ ಒಂದೇ ವೇದಿಕೆಗೆ ಬರುವಂತೆ GOOGLE GROUP ರಚಿಸಿ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ.
 
ಈ ಸಮ್ಮೇಳನ ರೂಪುಗೊಳ್ಳಲು ಸಹಕಾರಿಯಾಗಿ ನಿಂತವರಲ್ಲಿ ನಮ್ಮ ಮಾರ್ಗದರ್ಶಕರಾದ
  1. ಶ್ರೀ ಬಿ.ಸಿ. ಪ್ರಭಾಕರ್, ಅಧ್ಯಕ್ಷರು, ಕರ್ನಾಟಕ ಮಾಲೀಕರ ಸಂಘ & ವಕೀಲರು, ಬಿಸಿಪಿ ಅಸೋಸಿಯೇಟ್ಸ್
  2. ಶ್ರೀ ಎಸ್.ಎನ್. ಮೂರ್ತಿ, ಹಿರಿಯ ವಕೀಲರು, ಕರ್ನಾಟಕ ಉಚ್ಚನ್ಯಾಯಾಲಯ
  3. ಶ್ರೀ ಹನುಮಂತರಾಯಪ್ಪ, ಮಾಜಿ ಅಧ್ಯಕ್ಷರು, ಬಿ.ಎಂ.ಐ.ಸಿ.ಎ.ಪಿ.ಎ., ಕರ್ನಾಟಕ ಸರ್ಕಾರ, ಸದಸ್ಯರು, ನಿರಾತಂಕ ಟ್ರಸ್ಟ್.
 
ಈ ಸಮ್ಮೇಳನ ಮೊದಲ ವರ್ಷ ಹುಟ್ಟುಹಾಕಿ ಇದುವರೆಗೂ ಹೆಗಲು ಕೊಟ್ಟು ನಿಂತವರು
  1. ಡಾ. ಬಿ.ಕೆ. ಕೆಂಪೇಗೌಡ, ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಮತ್ತು ಉದ್ಯೋಗಿಕ ಸಂಬಂಧಗಳು, (ಸದರ್ನ್ ರೀಜನ್), ಸಾಂಧಾರ್ ಟೆಕ್ನಾಲಜೀಸ್ ಲಿ.
  2. ಶ್ರೀ ಶೇಖರ್ ಜಿ.ಎನ್., ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಮತ್ತು ಉದ್ಯೋಗಿ ಸಂಬಂಧಗಳು, ಬಿಯೆಸ್ಸೆ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಪ್ರೈ. ಲಿ.
  3. ಶ್ರೀ ಪ್ರಕಾಶ ಆರ್.ಎಂ, ಅಸೋಸಿಯೇಟ್ ಜನರಲ್ ಮ್ಯಾನೇಜರ್, ಹೆಚ್‌ಆರ್, ಸ್ನೈಡರ್ ಎಲೆಕ್ಟ್ರಿಕ್ ಇಂಡಿಯಾ.
  4. ಶ್ರೀ ಜಯರಾಮ್ ಬಿ.ಆರ್, ಮುಖ್ಯಸ್ಥರು - ಹೆಚ್‌ಆರ್, ಎಸ್.ಕೆ.ಎಫ್ ಸೀಲಿಂಗ್ ಸಲ್ಯೂಷನ್ಸ್.
 
ನಂತರ ನಮ್ಮ ತಂಡದಲ್ಲಿ ಸಕ್ರಿಯವಾಗಿ ಪಾತ್ರವಹಿಸಿದ ಸದಸ್ಯರುಗಳು :-
  1. ಡಾ. ಜಿ.ಪಿ. ನಾಯಕ್, ನಿರ್ದೇಶಕರು, ಟ್ಯಾಲೆಂಟ್ ಅವಿನ್ಯೂಸ್, ಬೆಂಗಳೂರು.
  2. ಡಾ. ಸಿ.ಆರ್. ಗೋಪಾಲ್, ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ ಹಾಗೂ ಲೇಖಕರು, ಸಂಪಾದಕ ಮಂಡಳಿಯ ಮುಖ್ಯಸ್ಥರು, ಸಮಾಜಕಾರ್ಯದ ಹೆಜ್ಜೆಗಳು
  3. ಡಾ. ನಂದೀಶ್ ವಿ. ಹಿರೇಮಠ, ಪ್ರೊಫೆಸರ್-ಹೆಚ್‌ಆರ್ ಮತ್ತು ಎಂಟರ್‌ಪ್ರಿನಿಯರ್‌ಶಿಪ್, ಇಂಡಸ್ ಬಿಸಿನೆಸ್ ಅಕಾಡೆಮಿ (ಐಬಿಎ), ಬೆಂಗಳೂರು.
  4. ಶ್ರೀ ಗಂಗಾಧರ ರೆಡ್ಡಿ ಎನ್, ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.
  5. ಶ್ರೀ ಗೋವಿಂದರಾಜು ಎನ್.ಎಸ್., ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಕರ್ನ್ ಲೀಬರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್.
  6. ಶ್ರೀ ಜಗದೀಶ್ ಶೇಖರ್ ನಾಯಕ್, ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಟಾಲನ್‌ಟ್ರೀ.
  7. ಶ್ರೀ ಪಂಚಾಕ್ಷರಯ್ಯ ಹೆಚ್.ಕೆ, ಹಿರಿಯ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಹಿಟಾಚಿ ರೈಲ್ ಎಸ್‌ಟಿಎಸ್.
  8. ಶ್ರೀ ಸಿದ್ದಲಿಂಗ ನಾಯಕ್, ವ್ಯವಸ್ಥಾಪಕರು, ಹೆಚ್‌ಆರ್ & ಅಡ್ಮಿನ್, ಎಸೆಂಟ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್.
  9. ಶ್ರೀ ರವಿ ಸತ್ಯಕುಮಾರ್, ಮಾನವ ಸಂಪನ್ಮೂಲ ನಿರ್ದೇಶಕರು, ಆಸ್ಟ್ರಾಜೆ಼ನೆಕ ಫಾರ್ಮಾಸ್ಯುಟಿಕಲ್ಸ್.
  10. ಶ್ರೀ ಶಿವಕುಮಾರ್, ಹಿರಿಯ ವ್ಯವಸ್ಥಾಪಕರು - ಹೆಚ್‌ಆರ್ & ಅಡ್ಮಿನ್, ನ್ಯಾಷ್ ಇಂಡಸ್ಟ್ರೀಸ್ ಇಂಡಿಯಾ ಪ್ರೈ.ಲಿ.
  11. ಶ್ರೀ ಗುರುಪ್ರಸಾದ್ ಟಿ.ಸಿ, ಪ್ರಧಾನ ವ್ಯವಸ್ಥಾಪಕರು, ಲೋಟಸ್ ಮ್ಯಾನ್‌ಪವರ್ ಸರ್ವೀಸಸ್ ಪ್ರೈ.ಲಿ.
  12. ಶ್ರೀ ಪ್ರಭು ಹೆಚ್, ಪ್ರಧಾನ ವ್ಯವಸ್ಥಾಪಕರು, ಹೆಚ್‌ಆರ್, ಮೈಲಾನ್.
  13. ಶ್ರೀ ಕಿರಣ್‌ಕುಮಾರ್ ಕೆ.ಸಿ, ಸಹಾಯಕ ವ್ಯವಸ್ಥಾಪಕರು, ಫಸ್ಟ್ ಮ್ಯಾನ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈ.ಲಿ.
  14. ಶ್ರೀ ಭೀಮಾ ನಾಯಕ್, ವ್ಯವಸ್ಥಾಪಕರು, ತಾಜ್‌ಸ್ಯಾಟ್ಸ್ ಏರ್ ಕ್ಯಾಟರಿಂಗ್ ಲಿಮಿಟೆಡ್.
  15. ಶ್ರೀ ಮಧುಕುಮಾರ್ ಎಸ್., ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ರಾಮನಗರ, ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ.
  16. ಶ್ರೀ ನಾಗರಾಜ್ ನಾಯಕ್, ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.
 
ಈ ನಮ್ಮ ಸಮ್ಮೇಳನಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಸಂಘ ಸಂಸ್ಥೆಗಳು:
ಕೊನೆಯದಾಗಿ ದೇಣಿಗೆ ನೀಡಿ ಸಹಕರಿಸುತ್ತಿರುವ ಹಾಗೂ ಈ ಸಮ್ಮೇಳನ ಯಶಸ್ವಿಯಾಗಲು ಸಹಕರಿಸುತ್ತಿರುವ ಮಾಧ್ಯಮದವರು
, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
 
ರಮೇಶ ಎಂ.ಎಚ್.
ನಿರಾತಂಕ
0 Comments



Leave a Reply.

    Categories

    All
    Others
    Personality Developement
    Quotes
    YouTube ವಿಡಿಯೋಸ್
    ಕಥೆಗಳು
    ಕವನಗಳು
    ಪುಸ್ತಕ ಪರಿಚಯ

    Picture

    RAMESHA NIRATANKA ​

    NATIONAL ASSOCIATION OF PROFESSIONAL SOCIAL WORKERS IN INDIA 
    ( NAPSWI ) 
    YOUNG ACHIEVERS AWARDEE-2019​

    Read More

    Picture

    Ramesha for Ullal Ward

    Join WhatsApp Channel

    Niruta Publications

    Social Workers- Karnataka

    Leaders Talk

    Ramesha Niratanka

    Picture
    WhatsApp Group


    RSS Feed



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • ​TRAINING PROGRAMMES

nIRATHANKA CITIZENS CONNECT

  • NIRATHANKA CITIZENS CONNECT

JOB

  • JOB PORTAL​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For more details
Picture
For more details
Picture
For more details
Picture
For more details


30,000  HR AND SOCIAL WORK   PROFESSIONALS ARE CONNECTED THROUGH OUR NIRATHANKA HR GROUPS. 
​YOU CAN ALSO JOIN AND PARTICIPATE IN OUR GROUP DISCUSSIONS.
Picture
Follow Niruta Publications WhatsApp Channel
Follow Social Work Learning Academy WhatsApp Channel
Follow Social Work Books WhatsApp Channel



JOIN OUR ONLINE GROUPS


BOOKS / ONLINE STORE


Copyright Niruta Publications 2021,    Website Designing & Developed by: www.mhrspl.com