Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

“Talk Like Ted” ಪುಸ್ತಕದಿಂದ ಕಲಿತ  ಪಾಠಗಳು

12/28/2022

0 Comments

 
Picture
Picture
“Talk Like Ted” ಈ ಪುಸ್ತಕದ ಬರಹಗಾರರು Carmine Gallo. ಇವರು ಒಬ್ಬ ಅಮೇರಿಕನ್ ಲೇಖಕ, ಮುಖ್ಯ ಭಾಷಣಕಾರ ಮತ್ತು ಮಾಜಿ ಪತ್ರಕರ್ತ ಮತ್ತು ಸುದ್ದಿ ನಿರೂಪಕ. ಇವರು ಬರೆದಿರುವ ಪುಸ್ತಕದಲ್ಲಿ ಹೆಚ್ಚು ಮಾರಾಟವಾದ ಪುಸ್ತಕ ಇದಾಗಿದೆ.

ಈ ಪುಸ್ತಕದಲ್ಲಿ ಭಾಷಣವನ್ನು ಪ್ರಸ್ತುತ ಮಾಡುವ ಕಲೆ, ನಿಮ್ಮ ಆಲೋಚನೆಗಳಿಂದ ಹೇಗೆ ಮನವೊಲಿಸುವುದು, ಹೇಗೆ ಸಾರ್ವಜನಿಕರ ಮುಂದೆ ಭಯಮುಕ್ತವಾಗಿ ಮಾತನಾಡಬೇಕು, ಹೀಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ಪುಸ್ತಕ ಓದಿ ನಾನು ತಿಳಿದುಕೊಂಡ ಕೆಲವು ಮುಖ್ಯ ಅಂಶಗಳನ್ನು ನಾನು ನಿಮ್ಮೊಡನೆ ಹಂಚಿಕೊಳ್ಳು ಇಚ್ಚಿಸುತ್ತೇನೆ.

  1. ಭಾಷಣಕಾರ ಪ್ರೇಕ್ಷಕರ ಮನಸ್ಸು ಮತ್ತು ವಿಚಾರಗಳನ್ನು ಓದಬೇಕು – ತುಂಬಾ ಜನರು ವಿಷಯವನ್ನು ಚೆನ್ನಾಗಿ ನಿರೂಪಣೆ ಮಾಡುತ್ತಾರೆ. ಆದರೆ ಅವರು ಓದುಗರ ಅಥವಾ ಪ್ರೇಕ್ಷಕರ ಮನಸನ್ನು ತಲುಪುವುದಿಲ್ಲ. ಹಾಗಾಗಿ ಪ್ರೇಕ್ಷಕರ ಅವಶ್ಯಕತೆ ಹಾಗೂ ಉತ್ಸಾಹವನ್ನು ತಿಳಿದುಕೊಂಡು ಕಥೆಗಳನ್ನು ಅಥವಾ ವಿಷಯಗಳನ್ನು ಹೇಳಬೇಕಾಗುತ್ತದೆ.
  2. ಭಾಷಣಕಾರನ ವಿಷಯದ ಆಯ್ಕೆ ಸ್ಪಷ್ಟವಾಗಿರಬೇಕು - ಭಾಷಣಕಾರನಿಗೆ ತಾನು ಮಾತನಾಡುವ ವಿಷಯದ ಬಗ್ಗೆ ಖಚಿತ ಮಾಹಿತಿ ಇರಬೇಕು ಹಾಗೂ ವಿಷಯದ ಬಗ್ಗೆ ಪ್ರೀತಿ ಮತ್ತು ಉತ್ಸಾಹವಿರಬೆಕು ಹಾಗೂ ಆ ವಿಷಯದಿಂದ ಅವನಿಗೆ ಸ್ಪೂರ್ತಿ ಸಿಕ್ಕಿರಬೇಕು ಇಲ್ಲವಾದರೆ ಅದನ್ನು ಕೇಳಿದವರಿಗೂ ಸ್ಪೂರ್ತಿ ನೀಡುವುದಿಲ್ಲ.
  3. ಭಾಷಣಕಾರನ ವಿಷಯವು ಹೊಸದಾಗಿರಬೇಕು - ಜನರು ಯಾವಾಗಲೂ ಹೊಸದನ್ನು ಬಯಸುತ್ತಾರೆ. ಬೇಸರ ತರುವ ಹಾಗೂ ಹಳೆಯ ಕೇಳಿರುವ ವಿಷಯವನ್ನೇ ಕೇಳಲು ಯಾರೂ ಕೂಡ ಇಚ್ಛೆ ಪಡುವುದಿಲ್ಲ. ಆದ್ದರಿಂದ ನಿಮ್ಮ ಪ್ರೇಕ್ಷಕರಿಗೆ ನೀವು ಹೊಸ ವಿಷಯದ ಬಗ್ಗೆ ಮಾಹಿತಿಯನ್ನು ನೀಡಬೇಕು. ಆಗ ಅವರು ನಿಮ್ಮ ಮಾತುಗಳನ್ನು ಶ್ರದ್ಧಾಪೂರ್ವಕವಾಗಿ ಕೇಳುತ್ತಾರೆ.
  4. ಭಾಷಣದ ಅವಧಿ ನಿಗದಿಪಡಿಸಿಕೊಳ್ಳಬೇಕು – ಲೇಖಕರ ಪ್ರಕಾರ ಭಾಷಣದ ಅವಧಿಯು 18 ನಿಮಿಷಗಳಾಗಿರಬೇಕು. ಏಕೆಂದರೆ ಆಗ ಆ ಅವಧಿಯಲ್ಲಿ ಮುಖ್ಯವಾದುದನ್ನು ಮಾತ್ರ ಹೇಳಲು ಅದು ನಿಮ್ಮನ್ನು ಒತ್ತಾಯಿಸುತ್ತದೆ ಹಾಗೂ ಪ್ರೇರೇಪಿಸುತ್ತದೆ. ಇದರಿಂದ ಕೇಳುಗರಿಗೆ ಬೇಸರ ಮೂಡುವುದಿಲ್ಲ. ಒಂದು ವೇಳೆ ಭಾಷಣವು ಚಿಕ್ಕದಾಗಿದ್ದರೆ ಅಲ್ಲಿಯೂ ಕೂಡ ನಿಮ್ಮ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಪ್ರೇಕ್ಷಕರು ವಿಫಲರಾಗುತ್ತಾರೆ.
  5. ಭಾಷಣದ ನಡುವೆ ಆಶ್ಚರ್ಯದಾಯಕ ವಿಷಯವನ್ನು ಹಂಚಿಕೊಳ್ಳಬೇಕು - ಭಾಷಣದ ನಡುವೆ ಆಶ್ಚರ್ಯದಾಯಕ ಮತ್ತು ಉತ್ಸಾಹದಾಯಕ ವಿಷಯಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವುದರಿಂದ ಅವರು ನಮ್ಮ ಕಡೆಗೆ ಹೆಚ್ಚು ಗಮನಹರಿಸುತ್ತಾರೆ ಹಾಗೂ ಇನ್ನೂ ಹೆಚ್ಚು ಉತ್ಸಾಹದಿಂದ ವಿಷಯವನ್ನು ಕೇಳುತ್ತಾರೆ.
  6. ಭಾಷಣದ ವಿಷಯವನ್ನು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಪ್ರಸ್ತಾಪ ಮಾಡಬೇಕು - ಯಾವುದೇ ವಿಷಯವನ್ನು ಬರಿ ಮಾತುಗಳಿಂದ ಹೇಳಿದಾಗ ಅದನ್ನು ನೆನಪಿಟ್ಟುಕೊಳ್ಳಲು ಹಾಗೂ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದ ಕಾರಣ ವಿಷಯಗಳನ್ನು ವಿಡಿಯೋ ಮುಖಾಂತರ ಅಥವಾ ಚಿತ್ರಗಳನ್ನು ತೋರಿಸಿ ಅರ್ಥ ಮಾಡಿಸುವುದರಿಂದ ಹೆಚ್ಚು ಕಾಲ ನೆನಪಿಟ್ಟುಕೊಳ್ಳಲು ಹಾಗೂ ಬೇಗ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  7. ಭಾಷಣಕಾರನಿಗೆ ತನ್ನ ಪ್ರಸ್ತಾವನೆಯ ಬಗ್ಗೆ ಆತ್ಮವಿಶ್ವಾಸವಿರಬೇಕು - ಭಾಷಣಕಾರನು ತನ್ನ ವಿಷಯದ ಬಗ್ಗೆ ಮತ್ತು ಪ್ರಸ್ತಾವನೆಯ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿರಬೇಕು. ಹೆಚ್ಚು ಹೊಸ ಆಲೋಚನೆಗಳನ್ನು ಮತ್ತು ಆ ವಿಷಯದ ಬಗ್ಗೆ ಆಳವಾಗಿ ತಿಳಿದುಕೊಂಡಿರಬೇಕು. ಇದರಿಂದ ಪ್ರೇಕ್ಷಕರ ಮುಂದೆ ನಿಸ್ಸಂಕೋಚವಾಗಿ ಮತ್ತು ಆತ್ಮವಿಶ್ವಾಸದಿಂದ ಮಾತನಾಡಲು ಅನುಕೂಲವಾಗುತ್ತದೆ.​
Picture
Picture
ಪುಸ್ತಕ ಪರಿಚಯದ WhatsApp ಗ್ರೂಪ್ ಗೆ ತಾವೂ ಸಹ ಸದಸ್ಯರಾಗಬಹುದು.
Book Review WhatsApp Group

NIRUTA'S READ & WRITE INITIATIVE

Join LinkedIn Page
ರಮೇಶ ಎಂ.ಎಚ್.
ಪ್ರಕಾಶಕರು - ನಿರುತ ಪಬ್ಲಿಕೇಷನ್ಸ್


Picture
Know More
0 Comments



Leave a Reply.

    Categories

    All
    Others
    Personality Developement
    Quotes
    YouTube ವಿಡಿಯೋಸ್
    ಕಥೆಗಳು
    ಕವನಗಳು
    ಪುಸ್ತಕ ಪರಿಚಯ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    HR Books


    Social Work Books


    Niruta Publications

    Social Workers- Karnataka

    Leaders Talk

    Ramesha Niratanka

    RSS Feed

Niruta Publications Books
File Size: 741 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com