ಶೇಖರ್ ಗಣಗಲೂರು ರವರ ವ್ಯಕ್ತಿತ್ವ ವಿಕಾಸದ ಪುಸ್ತಕ “ಗೆಲುವು” ನಮ್ಮ ನಿರುತ ಪ್ರಕಾಶನದಿಂದ ಇನ್ನೂ ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗುತ್ತಿದೆ. ಶೇಖರ್ ರವರ ಮೊದಲನೆಯ ಪುಸ್ತಕ “ಬದುಕು ಬದಲಾಯಿಸಿದ ಕಥನಗಳು” ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 2000 ಪ್ರತಿಗಳು ಮಾರಾಟವಾಗಿ ಮೂರನೆಯ ಆವೃತ್ತಿಗೆ ಸಜ್ಜುಗೊಂಡಿದೆ.
ಶೇಖರ್ ರವರು ತಮ್ಮ ಎರಡನೆಯ ಪುಸ್ತಕದಲ್ಲಿ “ಗೆಲುವಿನ ವಲಯ” ಮತ್ತು “ಗೆಲುವಿನ ವಲಯದ ಸ್ವಯಂ-ಮೌಲ್ಯಮಾಪನದ ಸಾಧನ” ಎಂಬ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬಲ್ಲ ಪ್ರಭಲವಾದ 9 ಸಾಧನಗಳನ್ನು ನೀಡಿದ್ದಾರೆ. ಈ ರೀತಿಯ ಸಾಧನಗಳು ಕನ್ನಡದಲ್ಲಿ ಬಹಳ ವಿರಳ ಹಾಗೂ ಇವು ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತುಕೊಳ್ಳಲು ದಾರಿದೀಪವಾಗಬಲ್ಲವು. ಶೇಖರ್ ರವರ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವುದು ಶ್ರೀಯುತ ರವಿ ಡಿ. ಚನ್ನಣ್ಣನವರ್ ರವರು. ಇವರಿಗೆ ನಮ್ಮ ನಿರುತ ಪ್ರಕಾಶನದಿಂದ ಹಾಗೂ ಲೇಖಕರ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ರೀತಿಯ ಅಮೂಲ್ಯವಾದ ಕೃತಿಯನ್ನು ಗೆಳೆಯ ಶೇಖರ್ ನಮಗೆ ಪ್ರಕಾಶನ ಮಾಡಲು ನೀಡಿರುವುದಕ್ಕಾಗಿ ಗೆಳೆಯ ಶೇಖರ್ ರವರಿಗೆ ಋಣಿಯಾಗಿದ್ದೇನೆ. ಈ ಪುಸ್ತಕದ ಮುಖಪುಟವನ್ನು ಶ್ರೀಯುತ ಹಾದಿಮನಿ ಯವರು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ಸುಂದರವಾಗಿ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿರುತ ಪ್ರಕಾಶನದ ಪುಸ್ತಕಗಳನ್ನು ಕೊಂಡು ಓದಲು ನಮ್ಮ ವೆಬ್ ಸೈಟ್ ಗೆ ಭೇಟಿ ನೀಟಿ: www.nirutapublications.org ನಮ್ಮ ಪುಸ್ತಕದ FACEBOOK GROUP ಗೆ ಸದಸ್ಯರಾಗಿ ಎಲ್ಲ ರೀತಿಯ ಪುಸ್ತಕಗಳ ಕುರಿತು ಮಾಹಿತಿ ಪಡೆದುಕೊಳ್ಳಿ :- https://www.facebook.com/groups/socialworkbooks ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
RAMESHA NIRATANKA NATIONAL ASSOCIATION OF PROFESSIONAL SOCIAL WORKERS IN INDIA Ramesha for Ullal Ward |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |