ಲೇಖಕರು : ವಿ. ಅಶ್ವತ್ಥರಾಮಯ್ಯ ರೂ. 250/- ಪರಿವಿಡಿ
ಮುನ್ನುಡಿ ನಮ್ಮ ಅನುಭವಿಗಳ ಸಮ್ಮಿಶ್ರಣವೇ ನಮ್ಮ ಜೀವನ. ಪ್ರತಿಯೊಬ್ಬರ ಅನುಭವಗಳು ಬೇರೆ ಬೇರೆಯಾಗಿರುವುದರಿಂದಲೇ ಜೀವನದ ನೋಟ, ಅರ್ಥ, ಅಭಿವ್ಯಕ್ತಿಗಳು ವಿಭಿನ್ನವಾಗಿ ಕಾಣುತ್ತವೆ. ಸುಖೀ ಮತ್ತು ತೃಪ್ತಜೀವನವನ್ನು ನಡೆಸಲು ಹೊರಟ ನನ್ನ ಅನುಭವಗಳ ಸಾರವನ್ನು ಈ ಪುಸ್ತಕದ ಮೂಲಕ ಭಟ್ಟಿ ಇಳಿಸಿದ್ದೇನೆ.
ಒಂದು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ಸಾರ್ಥಕ ಜೀವನವನ್ನು ನಡೆಸಲು ಬೇಕಾಗುವ ಹಲವಾರು ವಿಷಯಗಳನ್ನು ಈ ಹೊತ್ತಿಗೆಯು ಒಳಗೊಂಡಿದೆ. ಸುಮಾರು ನಾಲ್ಕು ಲಕ್ಷ ಜನರಿಗೆ ತರಬೇತಿ ನೀಡುವಾಗ ನಾನು ಕೇಳುಗರಿಗೆ ಹೇಳಿಕೊಟ್ಟ ಮತ್ತು ಅವರಿಂದ ನಾನು ಕಲಿತುಕೊಂಡ ಅನೇಕ ಅಂಶಗಳು, ವಿಷಯಗಳು, ವಿಚಾರಧಾರೆಗಳು, ಅನುಭವಗಳು, ವಿಧಿ-ವಿಧಾನಗಳನ್ನು ಈ ಪುಸ್ತಕದ ಉದ್ದಗಲಗಳಲ್ಲಿ ನೀವು ಕಾಣಬಹುದಾಗಿದೆ. ಈ ಪುಸ್ತಕವು ಒಂದು ಸುಂದರ ಹೂವಾದರೆ, ಇದರಲ್ಲಿನ ಅಂಶಗಳು, ವಿಷಯಗಳು, ವಿಚಾರಧಾರೆಗಳು ಹೂವಿನ ಸುವಾಸನೆ. ಹೂ ಪಟಲಗಳ ಮೃದುತ್ವವೇ ಈ ಪುಸ್ತಕದ ಸರಳ ಭಾಷೆ ಮತ್ತು ಶೈಲಿ. ಅಲ್ಲಲ್ಲಿ ಬಂದಿರುವ ಸಣ್ಣಪುಟ್ಟ ಚಿತ್ರಗಳೇ ಹೂವಿನ ಮೋಹಕ ಬಣ್ಣ. ಈ ಪುಸ್ತಕದಲ್ಲಿನ ಅಂಶಗಳನ್ನು ನೀವು ಮೆಚ್ಚಿದರೆ, ಈ ಹೂವಿಗೆ ದೇವರ ಪಾದದ ನೆಲೆ, ಸಾರ್ಥಕತೆ. ನನ್ನ ಪತ್ನಿ ರಜನಿ ಈ ಪುಸ್ತಕದ ಬರವಣಿಗೆ ಮತ್ತು ಪ್ರಕಟಣೆಯಲ್ಲಿ ಬಹಳ ನೆರವನ್ನು ನೀಡಿದ್ದಾರೆ. ಆಕೆಗೆ ನಾನು ಋಣಿ. ಜನರಿಗೆ ಉತ್ತಮ ಜೀವನವನ್ನು ನಡೆಸಲು ಬೇಕಾಗುವ ಅಂಶಗಳನ್ನು ಹೇಳ ಹೊರಟ ನನ್ನ ಉದ್ದೇಶಕ್ಕೆ ದನಿಗೂಡಿಸಿ, ಆ ಉದ್ದೇಶವನ್ನು ಸಾಕಾರಗೊಳಿಸಲು ಕಂಕಣಬದ್ಧರಾಗಿ ನಿಂತವರು ಪದ್ಮಾ ಹೇಮಂತ್. ಉತ್ಸಾಹದ ಆಗರವಾಗಿರುವ ಆಕೆಯ ಹಸ್ತಾಕ್ಷರವನ್ನು ಬಹುಶಃ ನನ್ನೆಲ್ಲ ವೃತ್ತಿಪರ ಕಾರ್ಯಚಟುವಟಿಕೆಗಳಲ್ಲಿ ನೀವು ಕಾಣಬಹುದು. ಈ ಪುಸ್ತಕದ ಪ್ರತಿ ಹಂತದಲ್ಲೂ ಆಕೆಯ ಮಾನಸಿಕ ಸ್ಪಂದನೆಯಿದೆ, ಸಹಕಾರವಿದೆ, ಪರಿಶ್ರಮವಿದೆ. ಆಕೆಗೆ ನಾನು ಆಭಾರಿ. ಇನ್ನು ಚಿತ್ರಗಳನ್ನು ಬರೆದ ಕಲಾವಿದ ವಿ. ಗೋಪಾಲ್ ಹಾಗೂ ಮುದ್ರಕರಿಗೆ ನನ್ನ ಕೃತಜ್ಞತೆಗಳು. ವಿ. ಅಶ್ವತ್ಥರಾಮಯ್ಯ
0 Comments
Leave a Reply. |
Categories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |