ಲೇಖಕಿ : ರಜನಿ ರೂ. 150/- ಪರಿವಿಡಿ ಪೀಠಿಕೆ 1. ಮುನ್ನುಡಿ 2. ಈ ಪುಸ್ತಕವನ್ನು ನಿರ್ಮಿಸಿದ ತಂಡ 3. ಈ ಪುಸ್ತಕ-12 ವಸ್ತುಗಳ ಪಾರ್ಸೆಲ್ (Parcel) ಪತಿ-ಪತ್ನಿಯರಿಬ್ಬರೂ ಮಾಡಬೇಕಾದ ಕಾರ್ಯಗಳು 1. ಕುಟುಂಬದ ಧ್ಯೇಯ ಮತ್ತು ಮೌಲ್ಯಗಳು 2. ನಿಮ್ಮ ಕುಟುಂಬಕ್ಕೆ ಒಂದು ಲೋಗೋ (Logo) 3. ಮನೆಯಲ್ಲೊಂದು ಮೀಟಿಂಗ್ 4. ನಿಮ್ಮಿಂದ ನಿಮ್ಮ ಸಂಗಾತಿಯು ಕೇಳಬಯಸುವ 100 ವಾಕ್ಯಗಳು 5. ದಾಂಪತ್ಯ ಜೀವನದ ಬೆಳಕು-ನಗು 6. ಮಾತಿನಲ್ಲಿ ಸ್ಪಷ್ಟತೆಯಿರಲಿ 7. ಪ್ರಶಂಸೆ 8. ಪರಸ್ಪರ ಸಹಾಯ 9. ಕ್ಷಮೆ ಕೇಳಿ; ಕ್ಷಮಿಸಿ 10. ಗಂಡು-ಹೆಣ್ಣು (ಪ್ರಕೃತಿದತ್ತ ವ್ಯತ್ಯಾಸಗಳು) 11. ಸಂವೇದನೆಯ ಕಿರುನಾಟಕ (Empathy Role Play) 12. ಅನುಭವ-ಅಭಿವ್ಯಕ್ತಿ 13. ಒಪ್ಪ-ಓರಣ 14. ಸರಸ, ಸಲ್ಲಾಪ ಮತ್ತು ಶೃಂಗಾರ 15. ಪತಿ-ಪತ್ನಿಯರ ಪಂಚ ಮಿಲನಗಳು 16. ಸಂಗಾತಿಯಿಂದ ಮೌಲ್ಯಮಾಪನ 17. ಊಟದ ಪದ್ಧತಿ 18. ಕೋಪವೇಕೆ ಚಿನ್ನ! 19. ಸಂಶಯ ಬೇಡ 20. ನಿಮ್ಮ ಆದರ್ಶ ಸಂಗಾತಿ-ಎಲ್ಲಿ? 21. ಸೂಕ್ಷ್ಮಮತಿಯಾಗಬೇಡಿ 22. ನಿಮ್ಮ ಸಂಗಾತಿಯ ಬಗ್ಗೆ ಉದಾಸೀನ ಮನೋಭಾವ ಬೇಡ (Taken for granted) 23. ಹೋಲಿಕೆ ಬೇಡ 24. ಪತಿ-ಪತ್ನಿ : ಯಾರು ಮೇಲು? ಯಾರು ಕೀಳು? 25. ಸಂಗಾತಿಯ ಮೇಲೆ ಭದ್ರಬಿಗಿತ (Possessiveness) 26. ದಾಂಪತ್ಯ ಜೀವನ-ಮುಕ್ತ? ರಹಸ್ಯ? 27. ನಿಮಗೆ ವಯಸ್ಸಾಗುತ್ತಿದೆಯೇ? 28. ಇವರಿಷ್ಟೇ! ಇನ್ನಿಷ್ಟೇ! ಇನ್ನಿವರು ಬದಲಾಗುವುದಿಲ್ಲ!! 29. ಹಣಕಾಸು 30. ಸೌಂದರ್ಯವರ್ಧಕಗಳು ಎಷ್ಟು ಮುಖ್ಯ? 31. ಅತಿಯಾದ ಟಿ.ವಿ. ವೀಕ್ಷಣೆ 32. ಪೂಜೆ, ಪುನಸ್ಕಾರ, ವ್ರತಗಳು ಎಷ್ಟು ಮುಖ್ಯ? 33. ಆದರ್ಶ ದಾಂಪತ್ಯ - ಒಂದು ಮರೀಚಿಕೆ 34. ಮೂಡ್ಸ್ (Moods) ಮ್ಯಾಚಿಂಗ್ 35. ಪ್ರೀತಿ, ಪ್ರೇಮವಿರಲಿ; ಮೋಹ, ವ್ಯಾಮೋಹ ಬೇಡ 36. ನಿಮ್ಮ ಸಂಗಾತಿಯಲ್ಲಿನ ಸುಪ್ತ ಪ್ರತಿಭೆಯನ್ನು ಹೊರತನ್ನಿ 37. ನಮ್ಮ ಇತರೆ ಪ್ರಕಟಣೆಗಳು 38. `ಉತ್ತಮ ಕುಟುಂಬ ಜೀವನ'ದ ಬಗ್ಗೆ ನಮ್ಮ ತರಬೇತಿ ಕಾರ್ಯಗಳ ಬಗ್ಗೆ ಬಂದಿರುವ ಪ್ರಶಂಸೆಗಳು ಮುನ್ನುಡಿ ಪತಿ-ಪತ್ನಿಯರ ಸಂಬಂಧ ಬಹಳ ವಿಶಿಷ್ಟವಾದದ್ದು ಮತ್ತು ಸಂಕೀರ್ಣವಾದದ್ದು. ತಂದೆ, ತಾಯಿ, ಅಕ್ಕ, ತಂಗಿ, ಚಿಕ್ಕಮ್ಮ, ಚಿಕ್ಕಪ್ಪ - ಇವರಲ್ಲಿ ಯಾರನ್ನೂ ನಾವು ಆಯ್ಕೆ ಮಾಡಿಕೊಳ್ಳುವುದಿಲ್ಲ. ಈ ಸಂಬಂಧಗಳು ದೈವದತ್ತವಾಗಿ ಬಂದವುಗಳು. ಆದರೆ ನಮ್ಮ ಸಂಗಾತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಆದ್ದರಿಂದಲೇ ಈ ಸಂಬಂಧವು ಬಹಳ ಮಹತ್ತರವಾದದ್ದು.
ಹಾಗೆಯೇ, ನಮ್ಮ ಸಂಗಾತಿಯೊಡನೆ ನಾವು ಬೆಳೆಸಿಕೊಳ್ಳುವ ಸಂಬಂಧವನ್ನೂ ಸಹ ನಾವು ಆಯ್ಕೆ ಮಾಡಿಕೊಳ್ಳಬಹುದು. (ಪುಸ್ತಕದಲ್ಲಿ `ಸಂಗಾತಿ' ಎಂದರೆ ಪತಿ-ಪತ್ನಿಯರೆಂದರ್ಥ. ನೀವು ಪತಿಯಾಗಿದ್ದರೆ, ಈ ಪುಸ್ತಕದಲ್ಲಿ ಸಂಗಾತಿಯೆಂದು ಓದಿದಾಗ, ಅದು ನಿಮ್ಮ ಪತ್ನಿಗೆ ಅನ್ವಯವೆಂದು ಭಾವಿಸಿ; ಹಾಗೆಯೇ, ನೀವು ಪತ್ನಿಯಾಗಿದ್ದರೆ, ಈ ಪುಸ್ತಕದಲ್ಲಿ `ಸಂಗಾತಿ'ಯೆಂದು ಓದಿದಾಗ ಅದು ನಿಮ್ಮ ಪತಿಯನ್ನುದ್ದೇಶಿಸಲಾಗಿದೆಯೆಂದು ಭಾವಿಸಿ. ನಿಮಗಿನ್ನೂ ಮದುವೆಯಾಗದಿದ್ದರೆ, ಅದು ನಮ್ಮ ಭಾವೀ ಸಂಗಾತಿಗೆಂದು ಭಾವಿಸಿ!) ಕೆಲವರು ತಮ್ಮ ಸಂಗಾತಿಯನ್ನು ಗೆಳೆಯ/ಗೆಳತಿಯರಂತೆ ಭಾವಿಸುತ್ತಾರೆ. ಅವರ ಯೋಚನೆಗಳಿಗೆ ಮತ್ತು ಭಾವನೆಗಳಿಗೆ ಸ್ಪಂದಿಸುತ್ತಾರೆ. ಅವರಲ್ಲಿ ಪ್ರೀತಿ, ಪ್ರೇಮ, ಆದರ, ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಗಾತಿಯೊಡನೆ ಬೆರೆತು ಜೀವನದ ಕಷ್ಟ ಸುಖಗಳನ್ನು ಹಂಚಿಕೊಂಡು ಉತ್ತಮ ದಾಂಪತ್ಯ ಜೀವನವನ್ನು ನಡೆಸುತ್ತಾರೆ. ಪರಸ್ಪರ ಪ್ರೀತಿ, ಪ್ರೇಮಗಳಿಂದ ಕೂಡಿದ ಇಂತಹ ದಂಪತಿಗಳನ್ನು ನೋಡುವುದೇ ಒಂದು ಸೊಗಸು. ಉತ್ತಮ ದಾಂಪತ್ಯ ಜೀವನಕ್ಕೆ ಒಂದು ಮಾದರಿಯೇನೋ ಎಂಬಂತಹ ಸಾರ್ಥಕ ಜೀವನವನ್ನು ಅವರು ನಡೆಸುತ್ತಾರೆ. ಕೆಲವರು ಸಂಗಾತಿಯೊಂದಿಗೆ ಕೋಪ, ತಾಪ, ಅಸೂಯೆ, ಘರ್ಷಣೆ, ಸಂಶಯ, ಅಹಂತೆಗಳಿಂದ ತಮ್ಮ ದಾಂಪತ್ಯ ಜೀವನವನ್ನು ನರಕ ಸದೃಶವಾಗಿ ಮಾಡಿಕೊಳ್ಳುತ್ತಾರೆ. ಸಂಗಾತಿಯನ್ನು ಕಡೆಗಣಿಸುತ್ತಾರೆ. ಸಂಗಾತಿಯೊಡನೆ ಸರಿಯಾದ ಮಾತುಕತೆ ಇರುವುದಿಲ್ಲ. ಇಂತಹವರಿಗೆ ಸಂಗಾತಿಯ ಮೇಲೆ ಗೌರವವಾಗಲೀ, ಅಭಿಮಾನವಾಗಲೀ ಇರುವುದಿಲ್ಲ. ಇಂತಹ ಕುಟುಂಬದಲ್ಲಿ ಸದಾ ಇರಸು ಮುರಸು, ವಾದ ವಿವಾದಗಳು, ಟೀಕೆಗಳು ತುಂಬಿರುತ್ತವೆ. ನಾನು ಮತ್ತು ನನ್ನ ಪತಿ ಮಾಲ್ಡಿವ್ಸ್ ಗೆ (Maldives) ರಜೆಯಲ್ಲಿ ಹೋಗಿದ್ದೆವು. ಆ ಸುಂದರವಾದ ಪ್ರಕೃತಿಯ ಮಡಿಲಲ್ಲಿರುವಾಗ, ನನಗೆ ಪತಿ-ಪತ್ನಿಯರ ಸಂಬಂಧಗಳ ಬಗ್ಗೆ ಒಂದು ಪುಸ್ತಕವನ್ನು ಬರೆಯಬೇಕೆನಿಸಿತು. ನನ್ನ ಪತಿಯೊಡನೆ ಈ ಬಯಕೆಯನ್ನು ನಾನು ವ್ಯಕ್ತಪಡಿಸಿದಾಗ, ಅವರು ಅದಕ್ಕೆ ಒತ್ತಾಸೆ ನೀಡಿ, ಹುರಿದುಂಬಿಸಿದರು. ನನ್ನ ಆ ಬಯಕೆಯು ನನ್ನ ಪತಿ, ವಿ. ಅಶ್ವತ್ಥರಾಮಯ್ಯನವರ ಸಹಾಯ, ಮಾರ್ಗದರ್ಶನದಿಂದ ಚಿಗುರೊಡೆದು, ಸಾಕಾರವಾಗಿ ಈ ಪುಸ್ತಕದ ರೂಪದಲ್ಲಿ ನಿಮ್ಮ ಕೈ ಸೇರಿದೆ. ಸುಮಾರು ಮುನ್ನೂರು ಸಂಸ್ಥೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಭಾರತ ಮತ್ತು ವಿದೇಶಗಳಲ್ಲಿ ವಿಚಾರ ಪ್ರಚೋದಕ ಮತ್ತು ಜನಪ್ರಿಯ ತರಬೇತಿ ಕಾರ್ಯಕ್ರಮಗಳನ್ನು ನೀಡಿರುವ ಉದಾತ್ತ ಚಿಂತಕರೂ, ಸರಳ ಜೀವಿಗಳೂ ಆದ ನನ್ನ ಪತಿಯ ಸಹಾಯದಿಂದ ಈ ಪುಸ್ತಕವು ಹೊರಬಂದಿದೆ. ನನ್ನಲ್ಲಿ ಉದಯಿಸಿದ (ಈ ವಿಷಯಕ್ಕೆ ಸಂಬಂಧಪಟ್ಟ) ಅಂಶಗಳಿಗೆ ಅವರು ಒಂದು ರೂಪವನ್ನು ಕೊಟ್ಟು, ಯೂನಿಕ್ ಕನ್ಸಲ್ಟೆಂಟ್ಸ್ ವತಿಯಿಂದ ಈ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ಆದರ್ಶವಾದ ಪತಿ-ಪತ್ನಿಯರ ಚಿತ್ರಣ ಮಾಡಿರುವಾಕ್ಷಣ, ನಾನು ಮತ್ತು ನನ್ನ ಪತಿ ಆದರ್ಶ ದಂಪತಿಗಳಂದೇನಲ್ಲ. ಇಂತಹ ಒಂದು ಪುಸ್ತಕವನ್ನು ಬರೆಯಬೇಕೆಂದು ನಾನು ನನ್ನ ಪತಿಗೆ ಹೇಳಿದಾಗ, ಹಾಸ್ಯ ಪ್ರವೃತ್ತಿಯವರಾದ ಅವರು ಹೇಳಿದ್ದೂ ಅದನ್ನೇ. ``ನಮಗಿಬ್ಬರಿಗೂ ಈ ಪುಸ್ತಕ ಬರೆಯುವುದು ಬಹಳ ಸುಲಭ. ನಾವಿಬ್ಬರೂ ಏನನ್ನು ಮಾಡಿಲ್ಲವೋ ಅವುಗಳನ್ನು ದಂಪತಿಗಳು ಮಾಡಬೇಕೆಂದೂ, ನಾವಿಬ್ಬರೂ ಏನನ್ನು ಮಾಡಿದ್ದೇವೆಯೋ ಅವುಗಳನ್ನು ದಂಪತಿಗಳು ಮಾಡಬಾರದೆಂದು ಬರೆದರಾಯಿತು! ಪುಸ್ತಕ ಬಹಳ ಜನಪ್ರಿಯವಾಗುತ್ತದೆ.'' (ಇದನ್ನು ಹಾಸ್ಯಕ್ಕೆ ಮಾತ್ರ ಬರೆದಿದ್ದೇನೆ.) ಈ ಪುಸ್ತಕದಲ್ಲಿನ ಅನೇಕ ಅಂಶಗಳನ್ನು ನಾನು ಮತ್ತು ನನ್ನ ಪತಿ ಆದಷ್ಟೂ ಅನುಷ್ಠಾನಕ್ಕೆ ತಂದಿದ್ದೇವೆ, ತರುತ್ತಿದ್ದೇವೆ. ಕೆಲವು ಸಲ ಯಶಸ್ಸನ್ನು ಕಂಡಿದ್ದೇವೆ. ಹಲವಾರು ಬಾರಿ ವಿಫಲರೂ ಆಗಿದ್ದೇವೆ. ಬೇವು-ಬೆಲ್ಲಗಳಂತೆ, ಜೀವನದ ಸುಖ-ದುಃಖಗಳನ್ನು, ಪ್ರೀತಿ-ವೈಮನಸ್ಯಗಳನ್ನು, ರೋಚಕ-ನೀರಸಗಳನ್ನು, ಯಶಸ್ಸು-ವಿಫಲತೆಗಳನ್ನು ಸಮಾನ ದೃಷ್ಟಿಯಿಂದ, ವಿನಯಪೂರ್ವಕವಾಗಿ ಸ್ವೀಕರಿಸಿ, ದಾಂಪತ್ಯ ಜೀವನದ ಈ ಪ್ರಯೋಗ ಶಾಲೆಯಲ್ಲಿ ನಾವಿಬ್ಬರೂ ಅನೇಕ ಪ್ರಯೋಗಗಳನ್ನು ಮಾಡುತ್ತಾ, 43 ವರ್ಷಗಳನ್ನು ಒಟ್ಟಾಗಿ ಕಳೆದಿದ್ದೇವೆ. ಈ ಅನುಭವದ ಮೂಸೆಯಲ್ಲಿ ಮೂಡಿಬಂದ ವಿಚಾರಗಳಿಗೆ, ಗುರು, ಹಿರಿಯರು, ಚಿಂತಕರಿಂದ ಓದಿ, ಕೇಳಿದ ತತ್ವಗಳ ಇಂಬುಕೊಟ್ಟು, ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆ-ಶೈಲಿಯಲ್ಲಿ, ದೈನಂದಿನ ಜೀವನದಲ್ಲಿನ ದೃಷ್ಟಾಂತಗಳನ್ನು ಪೋಣಿಸಿ, ವಿಷಯಕ್ಕೆ ಪೂರಕವಾಗಿ ಸಣ್ಣಪುಟ್ಟ ಚಿತ್ರಗಳನ್ನು ಸೇರಿಸಿ, ಭಟ್ಟಿಯಿಳಿಸಿದ ಪ್ರಯತ್ನವೇ ಈ ಪುಸ್ತಕ. ಈ ಪುಸ್ತಕದಲ್ಲಿನ ಅಂಶಗಳು ಪತಿ-ಪತ್ನಿಯರಿಗೆ ದಾರಿದೀಪವಾಗಿ, ಉತ್ತಮ ದಾಂಪತ್ಯವನ್ನು ಈಗಾಗಲೇ ನಡೆಸುತ್ತಿರುವ ಬಾಂಧವ್ಯಗಳು ಈ ಅಂಶಗಳಿಂದ ಇನ್ನಷ್ಟು ಪುಷ್ಟಿಗೊಂಡು, ಅಷ್ಟೊಂದು ಉತ್ತಮ ಸಂಬಂಧವಿಲ್ಲದ ದಂಪತಿಯರ ಮನಸ್ಸು, ಹೃದಯಗಳು ಬೆಸೆಯುವಂತಾದರೆ ನಮ್ಮ ಈ ಪ್ರಯತ್ನ ಸಾರ್ಥಕ. ಇತಿ, ನಿಮ್ಮ ದಾಂಪತ್ಯ ಜೀವನದ ಹಿತಚಿಂತಕಿ ರಜನಿ
0 Comments
Leave a Reply. |
Categories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|