Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ನೆನಪಿನಂಗಳದಲ್ಲಿ ಪ್ರೊ|| ಎಚ್.ಎಂ.ಮರುಳಸಿದ್ಧಯ್ಯನವರು…

10/28/2018

0 Comments

 
ಪ್ರೊ. ಎಚ್.ಎಂ.ಎಂ. ಇನ್ನು ನಮ್ಮೆಲ್ಲರಿಗೆ ನೆನಪು ಮಾತ್ರ. ನಮ್ಮೊಂದಿಗೆ ಈಗಿರುವುದು ಅವರು ನಮಗಿತ್ತಿರುವ ಚಿಂತನೆ ಕಲ್ಪನೆಗಳ ಪುಸ್ತಕಗಳು, ಲೇಖನಗಳು, ಪ್ರಯೋಗಗಳು, ಅವರೊಡನೆ ನಡೆಸಿದ ಮಾತುಕತೆ, ಓಡಾಟ ಒಡನಾಟ, ಇತ್ಯಾದಿ. ಎಚ್.ಎಂ.ಎಂ. ಅವರೊಡನೆ ನಮ್ಮೆಲ್ಲರದೂ ವೈವಿಧ್ಯಮಯವಾದ ಸಂಬಂಧ, ಸಂಪರ್ಕ, ಒಡನಾಟವಿತ್ತು. ಅದು ಸಮಾಜಕಾರ್ಯ ಶಿಕ್ಷಣ, ಚಿಂತನೆ, ಸಂಶೋಧನೆ, ಚರ್ಚೆ, ಪ್ರಯೋಗಗಳು, ಸಮುದಾಯ ಸಂಘಟನೆ, ಸಾಹಿತ್ಯ, ಸ್ವಯಂಸೇವಾ ಸಂಘಟನೆಗಳ ಒಕ್ಕೂಟ ಇತ್ಯಾದಿಯಾದರೆ, ಮತ್ತೊಂದಡೆ, ಶರಣ ಸಾಹಿತ್ಯ, ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ, ರಾಜಕೀಯ ಪ್ರಜ್ಞೆ ಬೆಳೆಸುವ ಕೆಲಸಗಳು. ಬೆಂಗಳೂರು ವಿವಿಯ ಸಮಾಜಕಾರ್ಯ ವಿಭಾಗದ ಕೆಲಸಗಳ ನಡುವೆಯೇ ಹಿರೇಕುಂಬಳಗುಂಟೆ ಮತ್ತು ಸ್ವಸ್ತಿಯೊಡನೆಯ ಕೆಲಸಗಳು, ‘ನಿರ್ಮಲ ಕರ್ನಾಟಕ’ದ ಸಾಕಾರಕ್ಕೆ ಎಚ್.ಎಂ.ಎಂ. ನಿರತರಾಗಿದ್ದರು. ಇವೆಲ್ಲದರ ಜೊತೆ ಎಚ್.ಎಂ.ಎಂ. ಮನುಷ್ಯ ಸಂಬಂಧಗಳಲ್ಲಿ ಅತಿಯಾದ ಪ್ರೀತಿ ವಿಶ್ವಾಸವಿಟ್ಟುಕೊಂಡಿದ್ದವರು. ಅವರ ಸಂಪರ್ಕಕ್ಕೆ ಬಂದವರೆಲ್ಲಾ ಮುಂದಿನ ದಿನಗಳಲ್ಲಿ ಅವರ ಮತ್ತು ಅವರ ಕುಟುಂಬದ ಬಂಧುಗಳೇ ಆಗಿಬಿಡುತ್ತಿದ್ದರು. ಇವನ್ನೂ ಎಚ್.ಎಂ.ಎಂ. ಸೊಗಸಾಗಿ ಕತೆಕಟ್ಟಿ ಹೇಳಿ ನಮ್ಮನ್ನೆಲ್ಲಾ ಬೆರಗಾಗಿಸಿದ್ದರು.

ಎಚ್.ಎಂ.ಮರುಳಸಿದ್ಧಯ್ಯನವರೊಡನೆ ನಮ್ಮೆಲ್ಲರ ವಿವಿಧ ಅನುಭವಗಳ ಬುತ್ತಿ ನಮನಮಗೆ ಅನುಪಮವಾದುದು. ಅವನ್ನು ನಮ್ಮಲ್ಲೇ ಬೆಚ್ಚಗೆ ಇಟ್ಟುಕೊಂಡಿರುವ ನಾವು ಇತರರೊಡನೆ ಹಂಚಿಕೊಂಡು ನಮ್ಮೆಲ್ಲರ ‘ನೆನಪಿನ ಬುತ್ತಿ’ಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೆ ಹೇಗೆ… ವಿಸ್ತರಿಸಿಕೊಂಡರೆ ಹೇಗೆ…ಅಷ್ಟೇ ಅಲ್ಲದೆ ಈ ಎಲ್ಲವನ್ನೂ ಮುಂದಿನ ತಲೆಮಾರಿಗೆ ಪ್ರೀತಿಯಿಂದ ಕೊಡಮಾಡಲೂ ಇದರಿಂದ ಸಾಧ್ಯವಾಗುತ್ತದೆ.

ನವೆಂಬರ್ 10ರಂದು ‘ಎಚ್.ಎಂ.ಎಂ. ಅವರಿಗೆ ಶ್ರದ್ಧಾಂಜಲಿ’ ಅರ್ಪಿಸುವ ಜೊತೆಯಲ್ಲೇ ಅಂತರ್ಜಾಲದಲ್ಲಿ ಎಚ್.ಎಂ.ಎಂ. ಅವರನ್ನು ಕುರಿತು ಒಂದು ಮಾಹಿತಿ ಅಂಕಣ ತೆರೆದುಕೊಳ್ಳಲಿದೆ. ಸದ್ಯ ಅದು ಸಮಾಜಕಾರ್ಯದ ಹೆಜ್ಜೆಗುರುತುಗಳ (Social Work Foot Prints) ವೆಬ್ ಪುಟದ ನೆರೆಯಲ್ಲಿ ಇರಲಿದೆ.

ಪ್ರೊ. ಎಚ್.ಎಂ.ಎಂ. ನೆನಪಿನಂಗಳ: ನೆನಪಿನಂಗಳದಲ್ಲಿ ಎಚ್.ಎಂ.ಎಂ. ಅವರನ್ನು ಕುರಿತು ಅವರೊಡನೆ ಒಡನಾಡಿರುವವರ ಬರಹಗಳು, ಎಚ್.ಎಂ.ಎಂ. ಅವರದ್ದೇ ಬರಹಗಳು, ಛಾಯಾಚಿತ್ರಗಳು, ಅವರ ಪುಸ್ತಕಗಳನ್ನು ಕುರಿತು ಮಾಹಿತಿ, ಅವರೊಡನೆ ನಡೆಸಿದ ಮಾತುಕತೆಯ ಧ್ವನಿ ಕರಂಡಿಕೆ, ವಿಡಿಯೋ ದೃಷ್ಯಗಳು, ಮೊದಲಾದವುಗಳನ್ನು ಅಳವಡಿಸಲಾಗುತ್ತದೆ. ಈ ಅಂಕಣ ಶ್ರೀಮಂತವಾಗಬೇಕಾದರೆ ನಿಮ್ಮ ಕೊಡುಗೆ ಅತ್ಯಮೂಲ್ಯ. ನಿಮ್ಮ ಬರಹ ಮತ್ತು ನಿಮ್ಮೊಡನಿರುವ ಮಾಹಿತಿ ಹಂಚಿಕೊಳ್ಳಲು ನಿಮ್ಮಲ್ಲಿ ಕೋರಿಕೆ. ಬರೆಯಲಾಗದಿದ್ದರೆ, ನಿಮ್ಮದೇ ಫೋನಿನಲ್ಲಿ ಧ್ವನಿ ಅಥವಾ ವಿಡಿಯೋ ಮುದ್ರಿಸಿ ರವಾನಿಸಿ. ಮುಂದೆ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಆಶೆಯೂ ನಮಗಿದೆ.

ನಿಮ್ಮ ಬರಹ, ಧ್ವನಿ/ದೃಶ್ಯ ಮುದ್ರಣಗಳು, ಛಾಯಾಚಿತ್ರಗಳೇ ಮೊದಲಾದವುಗಳನ್ನು ಕಳುಹಿಸಲು ಸಮಯದ ಮಿತಿ ಇಲ್ಲದಿದ್ದರೂ, 2018ರ ನವೆಂಬರ್ 10ರೊಳಗೆ ಕಳುಹಿಸಿದರೆ ಶೀಘ್ರವಾಗಿ ‘ಎಚ್.ಎಂ.ಎಂ. ನೆನಪಿನಂಗಳ’ಕ್ಕೆ ಮೌಲ್ಯಯುತವಾದ ಸಾಮಗ್ರಿ ಸಿಗುವಂತಾಗುತ್ತದೆ.

ನಿಮ್ಮ ಕೊಡುಗೆಗಳ ನಿರೀಕ್ಷೆಯಲ್ಲಿ
ವಾಸುದೇವ ಶರ್ಮಾ ಎನ್.ವಿ. ಮತ್ತು ರಮೇಶ್ ನಿರಾತಂಕ
0 Comments



Leave a Reply.

    Picture

    Categories

    All
    English
    Kannada

    Archives

    November 2018
    October 2018

    RSS Feed

    Prof. HMM Memoir: In this memoir page, there would be write ups by those who have interacted and worked with HMM, his own writings, photographs, about his books and articles, audio and video recordings done with him etc., will be uploaded. This memoir would be rich with information, if you contribute and share your writings and information that you have about Prof. HMM. If you can write and send it to us it would be great. If you cannot write, kindly use your mobile phone to make a short audio or even a video record and send it to us. We intend to publish select write ups in book form in the near future.

    Although there is no time limit to share these write ups, audio and video clips and photographs with us, if you could send them before 10th November 2018, we can have valuable information to the                  ‘Prof. HMM Memoir’ that would be launched on that day.


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com