ದಿನಾಂಕ : 03-08-2011 ರಂದು AIR ನಲ್ಲಿ ಪ್ರಸಾರವಾದ "ಕಾಕಂಬಿ" ಕಾರ್ಯಕ್ರಮದ ಡಾ. ಎಚ್.ಎಂ. ಮರುಳಸಿದ್ಧಯ್ಯರವರ ಸಂದರ್ಶನದ ಧ್ವನಿಮುದ್ರಿಕೆ. ಪ್ರತಿಯೊಬ್ಬ ಸಮಾಜಕಾರ್ಯಕರ್ತನು ಆಲಿಸಲೇಬೇಕಾದ ವಿಶಿಷ್ಟ ಮತ್ತು ಅನುಭವಪೂರ್ಣ ಸಂದರ್ಶನ. ಇದೇ ರೀತಿಯ ಧ್ವನಿಮುದ್ರಿಕೆಗಳನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ತಮ್ಮಲ್ಲಿರಬಹುದಾದ ವಿಶೇಷ ಧ್ವನಿಮುದ್ರಣಗಳನ್ನು ನಮ್ಮಲ್ಲಿಗೆ ಕಳುಹಿಸಿಕೊಡಿ. ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೇ ಆಸಕ್ತರು ವಿಶೇಷ ವ್ಯಕ್ತಿಗಳ ಸಂದರ್ಶನ ಮಾಡಿ ನಮ್ಮ ಸಂಸ್ಥೆಗೆ ಕಳುಹಿಸಿಕೊಡಬಹುದು. ಇಂತಹ ವಿಶೇಷ ಧ್ವನಿಮುದ್ರಣ ಹಾಗೂ ವೀಡಿಯೋಗಳನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಕೊನೆಯದಾಗಿ ನೀವು ಈ ಸಂದರ್ಶನ ಕೇಳಿದ ನಂತರ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ವೆಬ್ಸೈಟ್ನಲ್ಲಿ ದಾಖಲಿಸಿ ಹಾಗೂ ನಮ್ಮ ವೆಬ್ಸೈಟ್ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ. ಧ್ವನಿಮುದ್ರಣದ ಕೃಪೆ : AIR
0 Comments
ಪ್ರೊ. ಎಚ್.ಎಂ.ಎಂ. ಇನ್ನು ನಮ್ಮೆಲ್ಲರಿಗೆ ನೆನಪು ಮಾತ್ರ. ನಮ್ಮೊಂದಿಗೆ ಈಗಿರುವುದು ಅವರು ನಮಗಿತ್ತಿರುವ ಚಿಂತನೆ ಕಲ್ಪನೆಗಳ ಪುಸ್ತಕಗಳು, ಲೇಖನಗಳು, ಪ್ರಯೋಗಗಳು, ಅವರೊಡನೆ ನಡೆಸಿದ ಮಾತುಕತೆ, ಓಡಾಟ ಒಡನಾಟ, ಇತ್ಯಾದಿ. ಎಚ್.ಎಂ.ಎಂ. ಅವರೊಡನೆ ನಮ್ಮೆಲ್ಲರದೂ ವೈವಿಧ್ಯಮಯವಾದ ಸಂಬಂಧ, ಸಂಪರ್ಕ, ಒಡನಾಟವಿತ್ತು. ಅದು ಸಮಾಜಕಾರ್ಯ ಶಿಕ್ಷಣ, ಚಿಂತನೆ, ಸಂಶೋಧನೆ, ಚರ್ಚೆ, ಪ್ರಯೋಗಗಳು, ಸಮುದಾಯ ಸಂಘಟನೆ, ಸಾಹಿತ್ಯ, ಸ್ವಯಂಸೇವಾ ಸಂಘಟನೆಗಳ ಒಕ್ಕೂಟ ಇತ್ಯಾದಿಯಾದರೆ, ಮತ್ತೊಂದಡೆ, ಶರಣ ಸಾಹಿತ್ಯ, ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ, ರಾಜಕೀಯ ಪ್ರಜ್ಞೆ ಬೆಳೆಸುವ ಕೆಲಸಗಳು. ಬೆಂಗಳೂರು ವಿವಿಯ ಸಮಾಜಕಾರ್ಯ ವಿಭಾಗದ ಕೆಲಸಗಳ ನಡುವೆಯೇ ಹಿರೇಕುಂಬಳಗುಂಟೆ ಮತ್ತು ಸ್ವಸ್ತಿಯೊಡನೆಯ ಕೆಲಸಗಳು, ‘ನಿರ್ಮಲ ಕರ್ನಾಟಕ’ದ ಸಾಕಾರಕ್ಕೆ ಎಚ್.ಎಂ.ಎಂ. ನಿರತರಾಗಿದ್ದರು. ಇವೆಲ್ಲದರ ಜೊತೆ ಎಚ್.ಎಂ.ಎಂ. ಮನುಷ್ಯ ಸಂಬಂಧಗಳಲ್ಲಿ ಅತಿಯಾದ ಪ್ರೀತಿ ವಿಶ್ವಾಸವಿಟ್ಟುಕೊಂಡಿದ್ದವರು. ಅವರ ಸಂಪರ್ಕಕ್ಕೆ ಬಂದವರೆಲ್ಲಾ ಮುಂದಿನ ದಿನಗಳಲ್ಲಿ ಅವರ ಮತ್ತು ಅವರ ಕುಟುಂಬದ ಬಂಧುಗಳೇ ಆಗಿಬಿಡುತ್ತಿದ್ದರು. ಇವನ್ನೂ ಎಚ್.ಎಂ.ಎಂ. ಸೊಗಸಾಗಿ ಕತೆಕಟ್ಟಿ ಹೇಳಿ ನಮ್ಮನ್ನೆಲ್ಲಾ ಬೆರಗಾಗಿಸಿದ್ದರು.
ಎಚ್.ಎಂ.ಮರುಳಸಿದ್ಧಯ್ಯನವರೊಡನೆ ನಮ್ಮೆಲ್ಲರ ವಿವಿಧ ಅನುಭವಗಳ ಬುತ್ತಿ ನಮನಮಗೆ ಅನುಪಮವಾದುದು. ಅವನ್ನು ನಮ್ಮಲ್ಲೇ ಬೆಚ್ಚಗೆ ಇಟ್ಟುಕೊಂಡಿರುವ ನಾವು ಇತರರೊಡನೆ ಹಂಚಿಕೊಂಡು ನಮ್ಮೆಲ್ಲರ ‘ನೆನಪಿನ ಬುತ್ತಿ’ಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೆ ಹೇಗೆ… ವಿಸ್ತರಿಸಿಕೊಂಡರೆ ಹೇಗೆ…ಅಷ್ಟೇ ಅಲ್ಲದೆ ಈ ಎಲ್ಲವನ್ನೂ ಮುಂದಿನ ತಲೆಮಾರಿಗೆ ಪ್ರೀತಿಯಿಂದ ಕೊಡಮಾಡಲೂ ಇದರಿಂದ ಸಾಧ್ಯವಾಗುತ್ತದೆ. ನವೆಂಬರ್ 10ರಂದು ‘ಎಚ್.ಎಂ.ಎಂ. ಅವರಿಗೆ ಶ್ರದ್ಧಾಂಜಲಿ’ ಅರ್ಪಿಸುವ ಜೊತೆಯಲ್ಲೇ ಅಂತರ್ಜಾಲದಲ್ಲಿ ಎಚ್.ಎಂ.ಎಂ. ಅವರನ್ನು ಕುರಿತು ಒಂದು ಮಾಹಿತಿ ಅಂಕಣ ತೆರೆದುಕೊಳ್ಳಲಿದೆ. ಸದ್ಯ ಅದು ಸಮಾಜಕಾರ್ಯದ ಹೆಜ್ಜೆಗುರುತುಗಳ (Social Work Foot Prints) ವೆಬ್ ಪುಟದ ನೆರೆಯಲ್ಲಿ ಇರಲಿದೆ. ಪ್ರೊ. ಎಚ್.ಎಂ.ಎಂ. ನೆನಪಿನಂಗಳ: ನೆನಪಿನಂಗಳದಲ್ಲಿ ಎಚ್.ಎಂ.ಎಂ. ಅವರನ್ನು ಕುರಿತು ಅವರೊಡನೆ ಒಡನಾಡಿರುವವರ ಬರಹಗಳು, ಎಚ್.ಎಂ.ಎಂ. ಅವರದ್ದೇ ಬರಹಗಳು, ಛಾಯಾಚಿತ್ರಗಳು, ಅವರ ಪುಸ್ತಕಗಳನ್ನು ಕುರಿತು ಮಾಹಿತಿ, ಅವರೊಡನೆ ನಡೆಸಿದ ಮಾತುಕತೆಯ ಧ್ವನಿ ಕರಂಡಿಕೆ, ವಿಡಿಯೋ ದೃಷ್ಯಗಳು, ಮೊದಲಾದವುಗಳನ್ನು ಅಳವಡಿಸಲಾಗುತ್ತದೆ. ಈ ಅಂಕಣ ಶ್ರೀಮಂತವಾಗಬೇಕಾದರೆ ನಿಮ್ಮ ಕೊಡುಗೆ ಅತ್ಯಮೂಲ್ಯ. ನಿಮ್ಮ ಬರಹ ಮತ್ತು ನಿಮ್ಮೊಡನಿರುವ ಮಾಹಿತಿ ಹಂಚಿಕೊಳ್ಳಲು ನಿಮ್ಮಲ್ಲಿ ಕೋರಿಕೆ. ಬರೆಯಲಾಗದಿದ್ದರೆ, ನಿಮ್ಮದೇ ಫೋನಿನಲ್ಲಿ ಧ್ವನಿ ಅಥವಾ ವಿಡಿಯೋ ಮುದ್ರಿಸಿ ರವಾನಿಸಿ. ಮುಂದೆ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಆಶೆಯೂ ನಮಗಿದೆ. ನಿಮ್ಮ ಬರಹ, ಧ್ವನಿ/ದೃಶ್ಯ ಮುದ್ರಣಗಳು, ಛಾಯಾಚಿತ್ರಗಳೇ ಮೊದಲಾದವುಗಳನ್ನು ಕಳುಹಿಸಲು ಸಮಯದ ಮಿತಿ ಇಲ್ಲದಿದ್ದರೂ, 2018ರ ನವೆಂಬರ್ 10ರೊಳಗೆ ಕಳುಹಿಸಿದರೆ ಶೀಘ್ರವಾಗಿ ‘ಎಚ್.ಎಂ.ಎಂ. ನೆನಪಿನಂಗಳ’ಕ್ಕೆ ಮೌಲ್ಯಯುತವಾದ ಸಾಮಗ್ರಿ ಸಿಗುವಂತಾಗುತ್ತದೆ. ನಿಮ್ಮ ಕೊಡುಗೆಗಳ ನಿರೀಕ್ಷೆಯಲ್ಲಿ ವಾಸುದೇವ ಶರ್ಮಾ ಎನ್.ವಿ. ಮತ್ತು ರಮೇಶ್ ನಿರಾತಂಕ |
CategoriesArchivesProf. HMM Memoir: In this memoir page, there would be write ups by those who have interacted and worked with HMM, his own writings, photographs, about his books and articles, audio and video recordings done with him etc., will be uploaded. This memoir would be rich with information, if you contribute and share your writings and information that you have about Prof. HMM. If you can write and send it to us it would be great. If you cannot write, kindly use your mobile phone to make a short audio or even a video record and send it to us. We intend to publish select write ups in book form in the near future.
Although there is no time limit to share these write ups, audio and video clips and photographs with us, if you could send them before 10th November 2018, we can have valuable information to the ‘Prof. HMM Memoir’ that would be launched on that day. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |