Born into a Catholic family in Falnir at Mangalore as the youngest of the three sisters, Rita Olinda Periera embraced the religious order of the Daughters of the Heart of Mary (DHM). Dr. Olinda Periera pioneered social work education in the state of Karnataka by setting up the School of Social Work "Roshini Nilaya" in 1960 under the auspices of the Institute of Social Service which offers BSW, MSW, and PhD besides other courses affiliated to the Mangalore University. As its Founder-Principal, Dr.Periera was an outstanding mentor and a role model. She was not only a great social work teacher, but also a social work practitioner of eminence. She founded the Urban Community Development Centre, Home Science Institute, School for the Blind, Family Service Agency, and Working Women's Hostel. She is keen to promote education and empowerment of women. She has now been engaged in creating a Golden Age Eco Village for the comprehensive community-based care for the elderly as Director of Vishwas Trust. Dr.Periera says that "there should be a law which enables Right to Dignified Death on the lines of the Right to Education and Right to Information". Olinda Periera has been a tremendous source of inspiration to hundreds of young men and women. Olinda Periera is synonymous with selfless service to humanity, and has been a recipient of many awards in India and abroad. In her 90 th year, Olinda Periera's birthday falls on the Indian Independence Day : a befitting coincidence. ಒಲಿಂಡಾ ಪೆರೇರರವರು ಮಂಗಳೂರು ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಮೂವರು ಸಹೋದರಿಯರಲ್ಲಿ ಒಲಿಂಡಾ ಪೆರೇರರವರು ಕಿರಿಯರು. ಕರ್ನಾಟಕದಲ್ಲಿ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಪ್ರವರ್ತಕರಲ್ಲಿ ಪ್ರಮುಖರು. ರೋಶನಿ ನಿಲಯ (School of Social Work) ದ ಸ್ಥಾಪಕ ಪ್ರಾಂಶುಪಾಲರಾಗಿ Dr. OlindaPereira ಮಹೋನ್ನತ ಗುರು ಹಾಗೂ ಆದರ್ಶಪ್ರಾಯರಾಗಿ ಸಂಸ್ಥೆಯನ್ನುಕಟ್ಟುವಲ್ಲಿ ಶ್ರಮ ವಹಿಸಿದ್ದಾರೆ. ಇವರು ನಗರ ಸಮುದಾಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದರು (UCDC), ಹೋಂ ಸೈನ್ಸ್ ಇನ್ಸ್ಟಿಟ್ಯೂಟ್, ಅಂಧರ ಶಾಲೆ (Blind School), ಸೇವಾ ಏಜೆನ್ಸಿ, ಮಹಿಳೆಯರವಸತಿ ನಿಲಯ ಸ್ಥಾಪಿಸಿದರು. ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಪ್ರಶಸ್ತಿ ನೀಡಿದರು. ಪ್ರಸ್ತುತ ವಿಶ್ವಾಸ್ ಟ್ರಸ್ಟ್ ನಿರ್ದೇಶಕರಾಗಿ ವೃದ್ಧರಿಗೆ ಸಮಗ್ರ ಸಮುದಾಯ ಆಧಾರಿತ ಕಾಳಜಿ ನೀಡಿ ಪೋಷಿಸುತ್ತಿದ್ದಾರೆ. 15ನೇ ಆಗಸ್ಟ್ 2015ಕ್ಕೆ 90 ವರುಷಗಳನ್ನು ದಾಟುತ್ತಿರುವ ಡಾ. ಒಲಿಂಡಾ ಪೆರೇರಾ ತನ್ನ ತೊಂಬತ್ತನೇ ವಯಸ್ಸಿನಲ್ಲಿಯೂ ಇನ್ನೂ ಹದಿಹರೆಯದ ಜೀವನೋತ್ಸಾಹವನ್ನು ಇಟ್ಟುಕೊಂಡಿದ್ದಾರೆ. ಡಾ. ಒಲಿಂಡಾಪೆರೇರಾ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ನಕ್ಷತ್ರ ಎಂದರೆ ಅತಿಶಯೋಕ್ತಿಯಾಗಲಾರದು. ಇವರ ಸಂದರ್ಶನ ಮಾಡಿದ ಶ್ರೀ ಎಸ್.ಎನ್. ಗೋಪಿನಾಥ್ ಮತ್ತು ಶ್ರೀ ಭೀಮರಾವ್ ಡಾ. ಒಲಿಂಡಾ ಪೆರೇರಾ ಅವರ ವಿದ್ಯಾರ್ಥಿಗಳು. ಇವರಿಬ್ಬರಿಗೆ ನಾನು ಕೃತಜ್ಞ. - ಸಂಪಾದಕ ಸಮಾಜಕಾರ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಆಗಮನ ಹಾಗೂ ಪ್ರಾರಂಭ ಹೇಗಾಯಿತು? ಒ.ಪೆ : ನಾನು 1946 ರಲ್ಲಿ Mathematics ನಲ್ಲಿ B.A. ಪದವಿ ನಂತರ 1947-48ರಲ್ಲಿ B.Ed. ಪದವಿಯನ್ನು ಪಡೆದು St. Marys ನಲ್ಲಿ ಅಧ್ಯಾಪಕಿಯಾಗಿದ್ದೆ. 1958ರಲ್ಲಿ Bombay University ಯಿಂದ ಮನಶಾಸ್ತ್ರದಲ್ಲಿ MA ಪದವಿಯನ್ನು ಪಡೆದು, 1960ರಲ್ಲಿ ಬಾಂಬೆಯ ನಿರ್ಮಲಾ ನಿಕೇತನದಲ್ಲಿ Diploma in Social Work ಪದವಿಯನ್ನು ಸಂಪಾದಿಸಿದೆ. 1960ರಲ್ಲಿ ಆಗ ತಾನೇ ಮಂಗಳೂರಿನ St. Agnes College ಸಮಾಜಕಾರ್ಯದಲ್ಲಿನ ತಮ್ಮ Course ನ್ನು ನಿಲ್ಲಿಸಿತ್ತು. ಆಗ ನಿರ್ಮಲಾ ನಿಕೇತನ ಬೊಂಬಾಯಿನ ನೇತೃತ್ವದಲ್ಲಿ 1960ರಲ್ಲಿ ಸಮಾಜಕಾರ್ಯದಲ್ಲಿ Certificate Courseನ ಪ್ರಾರಂಭದೊಂದಿಗೆರೋಶನಿ ನಿಲಯ ಸ್ಥಾಪನೆಯಾಯಿತು. ನಿರ್ಮಲಾ ನಿಕೇತನ್‍ನ Dorothy Baker ಮತ್ತು USA ಯ ARLINE A-hearrne ಇವರ ನೇತೃತ್ವದಲ್ಲಿ 10 Months Course ನ ಪ್ರಾರಂಭವಾಯಿತು. ನಂತರ ನಾನು ಮೈಸೂರುವಿಶ್ವವಿದ್ಯಾಲಯದ ಸಹಯೋಗದೊಂದಿಗೆ 1964ರಲ್ಲಿ DSW ಪದವಿಯನ್ನು ಪ್ರಾರಂಭಿಸಿದೆ. ಅದಾದ ನಂತರ 1967ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಶೀಮಾಲಿ ಮತ್ತು ರಿಜಿಸ್ಟ್ರಾರ್ ಶ್ರೀ ಕೆ.ಸಿ. ರಾಮಚಂದ್ರನ್, ಶ್ರೀ ಕೆಎಸ್ಎನ್ ಅಡಿಗ, ಸಿಂಡಿಕೇಟ್ ಸದಸ್ಯ ಇವರನೆರವಿನೊಂದಿಗೆ MC ಗೆ affiliate ಆಗಿ 1969ರಲ್ಲಿ MSWನ ಮೊದಲನೇ Batch ನ್ನು ಹೊರ ತಂದೆ. 1970-72ರ ಸಾಲಿನ MSW ಗೆ Specialization ಗಳನ್ನು ಅಳವಡಿಸಿದೆ. ನಂತರ 1974-75ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಕೃಷ್ಣನ್ ಮಾರ್ಗದರ್ಶನದಲ್ಲಿ Clinical Psychology ಯಲ್ಲಿ Ph.D. ಯನ್ನು ಪಡೆದೆ. ಅಲ್ಲಿಂದ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ನಾನು ಹಂತಹಂತವಾಗಿ ಬೆಳೆದೆ ಎಂದರೆ ತಪ್ಪಾಗಲಾರದು. ರೋಶನಿ ನಿಲಯದ ಈ ಸುಂದರವಾದ ಕ್ಯಾಂಪಸ್‍ಗೆ ಸ್ಫೂರ್ತಿ ಯಾರು? ಒ.ಪೆ: ಪ್ರಾರಂಭದಲ್ಲಿ 1965ರಲ್ಲಿ ನಿರ್ಮಲಾ ನಿಕೇತನ್, ಬೊಂಬಾಯಿ ಇವರ ರೂ. 5 ಲಕ್ಷದ ಕೊಡುಗೆಯೊಂದಿಗೆ ಕಂಕನಾಡಿಯಲ್ಲಿ 6 ಎಕರೆ ಜಾಗವನ್ನು ತೆಗೆದುಕೊಂಡು ಅದರಲ್ಲಿ Family Service Agency ಯ ಸ್ಥಾಪನೆಯಾಗಿತ್ತು. ಅದರೊಂದಿಗೆ ಜೆಪ್ಪುನಲ್ಲಿ “ಜನತಾ ಕೇಂದ್ರ” ಮತ್ತು “ನವಜೀವನ್ ಮಾರ್ಗ” ಇವುಗಳ ಸ್ಥಾಪನೆಯೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಹಲವು ಹತ್ತು ಕಾರ್ಯಕ್ರಮಗಳನ್ನು ರೂಪಿಸಿದೆವು. ರೋಶನಿ ನಿಲಯದ ಸ್ಥಾಪನೆ ಈ ಸುಂದರವಾದ ಪರಿಸರ 6 ಎಕರೆ ಆಯಿತು. ಶ್ರೀ ರಬೀಂದ್ರನಾಥ ಟಾಗೂರ್ ಅವರ ಸ್ಫೂರ್ತಿ “Love is made fruitful in service” ನಮ್ಮ ಧ್ಯೇಯವಾಯಿತು. ಅಂದಿನಿಂದ ಇಂದಿನವರೆಗೆ ಇದನ್ನು ಅವಿರತವಾಗಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗಿದೆ. ರೋಶನಿ ನಿಲಯದ Principal ಆಗಿ ತಮ್ಮ ಸವಿನೆನಪುಗಳೇನು? ಒ.ಪೆ. : ನಾನು ಪ್ರಿನ್ಸಿಪಾಲಳಾಗಿದ್ದಾಗ ನಮ್ಮ MSW ನ ವಿದ್ಯಾರ್ಥಿ ಸಂಖ್ಯೆ ತುಂಬಾ ಚಿಕ್ಕದಿತ್ತು. ಅದರಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೊತೆ ವೈಯಕ್ತಿಕ ಹಾಗೂ ಭಾವನಾತ್ಮಕ ಸಂಬಂಧ ಬೆಳೆದು ನಮ್ಮ ಬಾಂಧವ್ಯ-ಒಡನಾಟ ತುಂಬಾ ಆಳವಾದ-ಶಕ್ತಿಯುತವಾದ ಸಂಬಂಧ ಆಯಿತು ಅಂದರೆ ತಪ್ಪಾಗಲಾರದು. HR Specialization ನ್ನು ಪ್ರತ್ಯೇಕವಾಗಿ ನಡೆಸಬೇಕೇ ಬೇಡವೇ ಎಂಬ ಬಗ್ಗೆ ನಿಮ್ಮ ಅಭಿಪ್ರಾಯ? ಒ.ಪೆ : ಸಮಾಜಕಾರ್ಯದ ತಳಹದಿಯ ಮೇಲೆ ಎಲ್ಲಾ Specialization ನಿಲ್ಲಬೇಕು. ಆ ಭದ್ರ ಬುನಾದಿ ಇದ್ದರೇನೇ ಅದಕ್ಕೊಂದು ಮಹತ್ವ. ಆ ಬುನಾದಿಯನ್ನಿಟ್ಟುಕೊಂಡು HR ನ್ನು ಪ್ರತ್ಯೇಕಿಸುವುದರಲ್ಲಿ ತಪ್ಪಿಲ್ಲ. ಇಂದಿನ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ವಿದ್ಯಾರ್ಥಿಗಳು ಶ್ರಮಿಸುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ? ಒ.ಪೆ.: ಸಮಾಜಕಾರ್ಯದ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ, ಎತ್ತುತ್ತಿವೆ, ಬೋಧನೆಯ ಗುಣಮಟ್ಟ ಕಡಿಮೆಯಾಗುತ್ತಿದೆ, Field Work ಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ, ಅನುಭವ ಮತ್ತು ಜ್ಞಾನ ಇರುವ ಬೋಧಕರ ಸಂಖ್ಯೆ ಕಡಿಮೆಯಾಗುತ್ತಿದೆ, UGC ಯನ್ನು NAAC ನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಹೆಚ್ಚಾಗುತ್ತಿದೆ. ಬೋಧಕ ವರ್ಗದ ಜ್ಞಾನವನ್ನು ಹೆಚ್ಚಿಸುವ, ಉನ್ನತ ಮಟ್ಟಕ್ಕೆ ಕರೆದೊಯ್ಯುವ ಪ್ರಯತ್ನ ಕಡಿಮೆಯಾಗುತ್ತಿದೆ. ಬೋಧಕವರ್ಗದಲ್ಲಿ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. Syllabus ನ ಶುದ್ಧೀಕರಣ ಪರಿಷ್ಕರಣೆಯತ್ತ ಗಮನ ಹರಿಸಬೇಕಾಗಿದೆ. ಸಮಾಜಕಾರ್ಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವಂತಹ ಪ್ರಯತ್ನ ಹೆಚ್ಚಾಗಬೇಕಿದೆ. ‘ಸಮಾಜಕಾರ್ಯ’ ಸಮಾಜ ವಿಜ್ಞಾನದ ಒಂದು ಅವಿಭಾಜ್ಯ ಅಂಗ, ಅದನ್ನು ಪ್ರತ್ಯೇಕಿಸುವ ಅಗತ್ಯ ಇಲ್ಲ. MSW ವಿದ್ಯಾರ್ಥಿಗಳಿಗೆ ಈಗ ನಿಗದಿಪಡಿಸಿರುವ Block Placement ಅವಧಿ ತುಂಬಾ ಕಡಿಮೆ. ಕನಿಷ್ಠ 3 ರಿಂದ 6 ತಿಂಗಳ ಅವಧಿಯನ್ನು ನಿಗದಿಪಡಿಸಬೇಕು. ಆ ಅವಧಿಯಲ್ಲಿ ವಿದ್ಯಾರ್ಥಿಗಳ Accountability ಕಡಿಮೆಯಾಗಿದೆ. ಆ ಅವಧಿಯಲ್ಲಿ ವಿದ್ಯಾರ್ಥಿಗಳ Accountability ಕಡಿಮೆಯಾಗಿದೆ, ಜ್ಞಾನ ದಾಹ ಕಡಿಮೆಯಾಗಿದೆ, ಅವರನ್ನು ಪ್ರೇರೇಪಿಸುವ ಪ್ರಯತ್ನಗಳು ಹೆಚ್ಚಾಗಬೇಕಿದೆ. ಪ್ರಸ್ತುತ ಸಮಾಜಕಾರ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ವ್ಯವಸ್ಥೆ ಬರಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಿಣಿಗಳ ಪ್ರವೇಶ ಕಡಿಮೆಯಾಗಬೇಕಾಗಿದೆ. ಈ ಹಲವು ಹತ್ತು ದಿಕ್ಕುಗಳಿಂದ ಸತತವಾದ ಪ್ರಯತ್ನಗಳನ್ನು ನಡೆಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣವನ್ನು ಕೊಡಲು ಸಾಧ್ಯ-ಒಳ್ಳೆಯ ವೃತ್ತಿಪರ ವಿದ್ಯಾರ್ಥಿಗಳನ್ನು ರೂಪುಗೊಳಿಸಲು ಸಾಧ್ಯ. ಸಮಾಜಕಾರ್ಯ ವೃತ್ತಿಗೆ ಸಮಾಜದ ಮುಖಂಡರುಗಳಿಂದ ತೊಂದರೆ ಆಗುತ್ತಿದೆ ಎಂದು ತಮಗೆ ಅನಿಸುತ್ತಿದೆಯೇ? ಸಮಾಜಸೇವೆಯ ಸೋಗಿನಲ್ಲಿ ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಿ ಅದನ್ನೇ ದೊಡ್ಡದಾಗಿ ತೋರಿಸಿ ತಮ್ಮ ಸ್ವಹಿತಾಸಕ್ತಿಯ ಬೇಳೆಯನ್ನು ಬೇಯಿಸಿಕೊಳ್ಳುವ So called ಸಮಾಜಸೇವಕರು ಹೆಚ್ಚಾಗುತ್ತಿದ್ದಾರೆಯೇ? ಒ.ಪೆ : ವೃತ್ತಿಪರ ಸಮಾಜಕಾರ್ಯ ಮತ್ತು ಸಮಾಜ ಸೇವೆ ಎರಡೂ ಭಿನ್ನವಾದವುಯಗಳು. ರಾಜಕಾರಣಿಗಳು ಇವೆರಡನ್ನೂ ಹಾಳು ಮಾಡಿದ್ದಾರೆ, ದುರುಪಯೋಗಪಡಿಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. CSR ಹೆಸರಲ್ಲಿ ಸುಮಾರು ಸಂಸ್ಥೆಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆಯೇ ಹೊರತು, ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಲೀ, ಸಂಬಂಧಿಸಿದ ವ್ಯಕ್ತಿಗಳಿಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಪರಿಹಾರ ಕಂಡುಕೊಳ್ಳಲು ಸಶಕ್ತೀಕರಣಗೊಳಿಸುವುದಾಗಲೀ ಮಾಡುತ್ತಿಲ್ಲ. Counselling ಎಂಬ ಪದದ ಅರ್ಥ ಗೊತ್ತಿಲ್ಲದೇ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳಿಗೆ ಕೊರತೆ ಇಲ್ಲ. ಸಮಾಜಕಾರ್ಯದಲ್ಲಿ ಈಗ ಹಲವು ಹತ್ತು ಕ್ಷೇತ್ರಗಳಿವೆ, ಉದಾ: ಸಾಂಸಾರಿಕ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು, ವಿಚ್ಛೇದನಾ ಸಮಸ್ಯೆ, ಅಪರಾಧಿ ಮತ್ತು ಬಾಲಾಪರಾಧಿಗಳ ಸಮಸ್ಯೆ, ಆತ್ಮಹತ್ಯೆ ಪ್ರಕರಣಗಳು, ಬಡತನ ಇತ್ಯಾದಿ-ಇಂದಿನ MSW ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆಯೇ? ಒ.ಪೆ : ಈ ನಿಟ್ಟಿನಲ್ಲಿ ನನ್ನದೇ ಆದ ಅನುಮಾನಗಳಿವೆ. ಬೇರೆ ವೃತ್ತಿಗಳಂತೆ ಸಮಾಜಕಾರ್ಯ ಇನ್ನು ಆಳವಾಗಿ ಬೇರೂರಿಲ್ಲ. ತಮ್ಮ ಸ್ವಇಚ್ಛೆಯಿಂದ ಪ್ರೇರಿತರಾಗಿ ಈ ಕೋರ್ಸ್‍ಗೆ ಬರುವವರು ಕಡಿಮೆ. MSW ಮಾಡಿದರೆ ಒಳ್ಳೆ ಸಂಬಳ ಸಿಗುವ ಕೆಲಸ ಸಿಗುತ್ತೆ ಎಂದು MSW ಗೆ ಸೇರಿಕೊಳ್ಳುವವರೇ ಹೆಚ್ಚು. ತಮ್ಮ “ವಿಶ್ವಾಸ್ ಟ್ರಸ್ಟ್” ಹೇಗೆ ರೂಪುಗೊಂಡಿತು, ಅದಕ್ಕೆ ಸ್ಫೂರ್ತಿ ಏನು? ಒ.ಪೆ. : ನಾನು 1984 ರಲ್ಲಿ ರೋಶನಿ ನಿಲಯದಿಂದ ನಿವೃತ್ತಳಾದ ನಂತರ ದೆಹಲಿಯಲ್ಲಿನ Women’s Centre Hostel ನ ಮೇಲ್ವಿಚಾರಣೆಯಲ್ಲಿ ತೊಡಗಿದೆ. ನಂತರ 1991 ರಲ್ಲಿ ನೈರೋಬಿಯಲ್ಲಿ Centre for Social Work ನ ಸ್ಥಾಪನೆಯಲ್ಲಿ ತಲ್ಲೀನಳಾದೆ. ಅದಾದ ನಂತರ 1995 ರಿಂದ 1998 ರವರೆಗೆ ಪುನಃ ದೆಹಲಿಯ ಕೆಲಸಕ್ಕೆ ಮರಳಿದೆ. 1999ರಲ್ಲಿ International year of Elderly ಯ ಸವಿನೆನಪಿನಲ್ಲಿ ಮಂಗಳೂರಿನ ಹಲವು ಸಾಮಾಜಿಕ ಧುರೀಣರ ನೆರವಿನೊಂದಿಗೆ-ವೃದ್ಧರ ನೆರವಿಗಾಗಿ “ವಿಶ್ವಾಸ್ ಟ್ರಸ್ಟ್” ಪ್ರಾರಂಭಿಸಿದೆ. ಇದನ್ನು ಪ್ರಾರಂಭಿಸುವಾಗ St. Agnes College ನವರ ಸಹಾಯದೊಂದಿಗೆ ಮಂಗಳೂರಿನಲ್ಲಿ Survey ಮಾಡಿಸಿ ಸುಮಾರು 3000 ಮನೆಗಳನ್ನು ಸಂದರ್ಶಿಸಿ Data ಸಂಗ್ರಹಿಸಿದೆವು. ಅದರಲ್ಲಿ ಸುಮಾರು ಕಾಲು ಭಾಗದಷ್ಟು ಸಂಸಾರಗಳಲ್ಲಿ ವೃದ್ಧರನ್ನು ತೀರಾ ಕಡೆಗಣಿಸಲಾಗಿತ್ತು. ಅದರಿಂದಾಗಿ ಈ ಕೆಳಗಿನ ಮೂರು ಧ್ಯೇಯಗಳನ್ನಿಟ್ಟುಕೊಂಡು “ವಿಶ್ವಾಸ್ ಟ್ರಸ್ಟ್” ಪ್ರಾರಂಭಿಸಿದೆವು.
ಸಮಾಜಕಾರ್ಯ ಕ್ಷೇತ್ರದಲ್ಲಿ ನಿರತರಾದವರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಸಂದೇಶ ಏನು? ಒ.ಪೆ.: ವೃತ್ತಿಪರತೆಯನ್ನು ಬೆಳೆಸಿಕೊಳ್ಳಿ, ವೃತ್ತಿಯ ಬಗ್ಗೆ ಹೆಮ್ಮೆ, ಆದರ, ಗೌರವ ಇಟ್ಟುಕೊಳ್ಳಿ, ನಿಮ್ಮ ಸ್ವಯಂ ಬೆಳವಣಿಗೆಯತ್ತ ಗಮನ ಹರಿಸಿ, ಮೌಲ್ಯಾಧಾರಿತ ಜೀವನವನ್ನು ನಡೆಸಿ, ಬೇರೆಯವರಿಗೆ ಮಾದರಿಯಾಗಿ ನಾವು ಸಮಾಜದಿಂದ ಜೀವನವನ್ನು ನಡೆಸಿ, ಬೇರೆಯವರಿಗೆ ಮಾದರಿಯಾಗಿ ನಾವು ಸಮಾಜದಿಂದ ಪಡೆದುದಕ್ಕಿಂತ ಹೆಚ್ಚಿನದನ್ನು ವಾಪಸು ನೀಡೋಣ ಎಂಬ ಮನೋಭಾವವನ್ನು ಬೆಳೆಸಿಕೊಂಡು ಆ ದಿಕ್ಕಿನಲ್ಲಿ ಮುನ್ನಡೆಯಿರಿ. Tribute to Olinda Pereira
Henry J. D'Souza* Set your heart on doing good. Do it over and over again, and you will be filled with joy." - Buddha If persons can be considered as musical instruments, then their contributions to society are the melodies that emerge. Dr. Olinda Pereira's life has been such a sweet melody that has brought joy and comfort not only to those around her but also to those who are touched by the organizations she founded and programmes she initiated. I first met Dr. Pereira when I started my master's degree in social work at the Roshni Nilaya School of Social Work in Mangalur (also spelled as Mangalore in the anglicized phonetics and Roshni Nilaya means house of light) in 1975. Unlike typical nuns with distinctive garments as a mark of their congregational identity, the Daughters of the Heart of Mary (DHM), an international religious society that was founded in France in 1790 during the French Revolution, the religious society that Dr. Pereira belonged to, wore sarees that blended with the traditional attire of the women in India. My first impressions of her were, that she was kind, friendly, full of joy, and easy to approach. She, instantaneously made one feel at ease. Dr. Pereira was a professor and the principal of the Roshni Nilaya School of Social Work, affiliated to the University of Mysore at that time. I was a student in her classes where she taught Abnormal Psychology. Dr. Pereira was the first one to introduce me to various types of mental illnesses and the symptoms that accompanied each, occasionally pondering whether I had those psychopathic symptoms myself, during her lectures. Born in Falnir, Mangalur, she turns 90 in 2015 on the day of India's independence. She made her First Profession, an expression for, becoming a DHM nun, in 1962 and was a pioneer to establish the DHM Society in India along with Paiva Couceiro. She is one of the founders of the Roshni Nilaya School of Social Work in 1960, one among the early schools of social work to be established in India. As a result of her tireless work—mobilizing the support of the helpful bureaucrats, academic and community leaders and her supporters in the DHM, she jumped through bureaucratic hurdles, raised funds, and set up a number of community outreach service agencies such as the Urban Community Development Centre, the Fibre Centre, School for the Blind, Home Science Institute, Family Service Agency, and Anganwadi Training Centre in and round Mangalur. Over the years, these agencies have served thousands of poor and needy people. Besides offering B.A. degrees in a number of disciplines, Roshni Nilaya offers Bachelor's in Social Work, Master's in Social Work, Counseling, Criminology and Forensic Science. The doctoral degree in social work was introduced in 1983. The National Assessment and Accreditation Council of India has accredited Roshni Nilaya with 'A' grade. The social workers who graduated from the School, are serving all over India and around the world. After 20 years as a principal, Dr. Pereira retired in 1984, but she did not stop working. The plight of the elderly in Mangalur drew her attention. With the changing family structure—two-child families, erosion of the traditional way of taking care of the elderly by children who stayed in the parental home, has exacerbated the problems elderly face. Marriage and jobs result in children moving away leaving the elderly parents to tend for themselves without any social support or assisted living facilities as in many developed countries. Recognizing the plight of the elderly, Dr. Pereira founded the Vishwas Trust in 1998, to train caregivers for the elderly and setting up a 24-hour helpline and developing comprehensive care giving facilities. This, indeed is an indispensable service to the people of Mangalur, a city that was ranked 13th in elder abuse based on a survey by Help age, India in 2013. The Mangalur community has expressed its appreciation to Dr. Pereira's long service, by conferring her the prestigious Abbakka award by the Veerarani Abbakka Utsava Samitiin January 2011. The International Institute for Public Policy (IIPP) recognized her as the Outstanding Community Leader for the 2013-1014 year. Dr. Pereira was alsohonoured with the privilege of inaugurating the International Day Against Drug Abuse on June 26, 2014. I have admired Dr. Pereira's work from far; I wish I could have observed it up close. Dr. Pereira wasn't pleased about my leaving India after getting married to my classmate, Eliza, who had immigrated to the U.S., and to pursue my doctoral studies. One ends up where the random events in our lives, which the Indian culture recognizes as, 'Adrishta' the unseen, invisible, and fate, take us. When I was a student, Dr. Pereira helped me far more than I realized at that time. I joined the School of Social Work after leaving the St. Joseph's Seminary in Jeppu;'jumping the wall' as such acts are reproachfully labeled, gave much anguish to my mother who wanted me to be a Catholic priest. Changes like these are distressingand turbulent at that young age. Dr. Pereira was a strong support during those difficult years. I would not have completed my Master's degree in social work, if she had not secured me a scholarship from the Indo-German Social Service Society. She counseled and guided me through my youthful injudiciousness when I was a student and during my first jobs at the Mukka Welfare Society and the Madras School of Social Work in Chennai. As anindebted recipient of her generosity and grace, I am, and will always remain, grateful to Dr. Olinda Pereira. She is, indeed a blessing—Punya Athma—not only to me, but also to the community of Mangalur and has exemplified the Roshni Nilaya motto adopted from Tagore: "Love is made fruitful in service" in her life that keeps on giving ever so joyful melodies. "Only a life lived for others is a life worthwhile." - Albert Einstein Dr Henry J. D'Souza Professor, Grace Abbott School of Social Work, University of Nebraska at Omaha, USA
5 Comments
Siddalingeshwar
5/30/2020 09:40:37 pm
To begin any institute is difficult, run and sustain the same is not posible to common people. The Special person can achieve
Reply
5/31/2020 03:56:11 am
Well composed ,well expressed and well deserved of Dr Prof. Olinda Pereira!
Reply
Reena Fernandes
5/31/2020 10:01:01 am
Dear Henry
Reply
Leave a Reply. |
ArchivesCategories
All
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |